ಭಾರತದಲ್ಲಿ ಒಂದು ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ತಲುಪಿದ ಡಾಟ್ಸನ್ ಕಾರು

Written By:

ನಿಸ್ಸಾನ್ ರೆನಾಲ್ಟ್ ಸಂಸ್ಥೆಯ ಡಾಟ್ಸನ್ ಕಾರು ಮರುನಾಮಕರಣದ ಬಜೆಟ್ ಬ್ರ್ಯಾಂಡ್ ಆಗಿದೆ. ಈಗಾಗಲೇ ಈ ಕಾರು ಸಾಕಷ್ಟು ಜನರನ್ನು ಆಕರ್ಷಿಸುತ್ತಿದ್ದು, ಸದ್ಯ ಹೊಸ ಮೈಲಿಗಲ್ಲುನ್ನು ಸಾಧಿಸಲು ಯಶಸ್ವಿಯಾಗಿದೆ.

ಭಾರತದಲ್ಲಿ ಒಂದು ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ತಲುಪಿದ ಡಾಟ್ಸನ್ ಕಾರು

ಹೌದು, ಕಳೆದ 2014ರ ಫೆಬ್ರವರಿಯಲ್ಲಿ ಉತ್ಪಾದನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕಂಪೆನಿಯು 100,000 ಲಕ್ಷ ಡಾಟ್ಸನ್ ಮತ್ತು ರೆಡಿ-ಗೊ 1.0 ಕಾರು ಸೇರಿದಂತೆ ಭಾರತದಲ್ಲಿರುವ ಉತ್ಪಾದನಾ ಘಟಕದಿಂದ ತಯಾರು ಮಾಡಿರುವ ಶ್ರೇಯಸ್ಸನ್ನು ಪಡೆದುಕೊಂಡಿದೆ.

ಭಾರತದಲ್ಲಿ ಒಂದು ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ತಲುಪಿದ ಡಾಟ್ಸನ್ ಕಾರು

ನಿಸ್ಸಾನ್ ಮೋಟಾರ್ ಇಂಡಿಯಾ ಸಂಸ್ಥೆಯ ಎಂ.ಡಿ ಆಗಿರುವಂತಹ ಕಾಲಿನ್ ಮ್ಯಾಕ್‌ಡೊನಾಲ್ಡ್ ಮತ್ತು ರೆನಾಲ್ಟ್ ನಿಸ್ಸಾನ್ ಆಟೊಮೋಟಿವ್ ಇಂಡಿಯಾ ಪ್ರೈವೇಟ್ ಸಂಸ್ಥೆಯ ಎಂ.ಡಿ ಮತ್ತು ಸಿಇಓ ಆಗಿರುವಂತಹ ಜೆರೋಮ್ ಸೈಗೋಟ್ ಅವರು ಒಂದು ಲಕ್ಷ ಮೈಲಿಗಲ್ಲಿನ ಕಾರನ್ನು ಅನಾವರಣಗೊಳಿಸಿದರು.

ಭಾರತದಲ್ಲಿ ಒಂದು ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ತಲುಪಿದ ಡಾಟ್ಸನ್ ಕಾರು

ಡಾಟ್ಸನ್ ಸಂಸ್ಥೆಯು, ಪ್ರಸ್ತುತ ರಿಡಿ-ಗೊ ಹ್ಯಾಚ್‌ಬ್ಯಾಕ್, ಗೊ ಹ್ಯಾಚ್‌ಬ್ಯಾಕ್ ಮತ್ತು ಗೋ+ ಕಾಂಪ್ಯಾಕ್ಟ್-ಎಂಪಿವಿಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಈ ಕಂಪನಿಯು ಭಾರತದಲ್ಲಿ ಉತ್ಪಾದಿಸುವ ಬಹುಪಾಲು ಕಾರುಗಳು ದಕ್ಷಿಣ ಆಫ್ರಿಕಾ, ನೇಪಾಳ ಮತ್ತು ಶ್ರೀಲಂಕಾ ದೇಶಗಳಿಗೆ ರಫ್ತಾಗುತ್ತವೆ.

ಭಾರತದಲ್ಲಿ ಒಂದು ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ತಲುಪಿದ ಡಾಟ್ಸನ್ ಕಾರು

ಸಂಖ್ಯೆಯ ಆಧಾರದ ಮೇಲೆ ಡಾಟ್ಸನ್ ಬ್ರಾಂಡ್ ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಪ್ರಭಾವ ಬೀರಿಲ್ಲ ಎನ್ನಬಹುದು. ಹೀಗಿದ್ದರೂ ಸಹ ಇದು ದೇಶದಲ್ಲಿ ತನ್ನ ಸ್ಪರ್ಧಿಗಳಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ ಎನ್ನಬಹುದು.

ಭಾರತದಲ್ಲಿ ಒಂದು ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ತಲುಪಿದ ಡಾಟ್ಸನ್ ಕಾರು

ರೆಡಿ-ಗೊ 1.0 ಲೀಟರ್ ಡಾಟ್ಸನ್ ಕಾರು ಸ್ಥಿರತೆಯ ವಿಚಾರದಲ್ಲಿ ಹೆಚ್ಚು ವಿಶ್ವಾಸವನ್ನು ಕಾಯ್ದುಕೊಂಡಿರುವ ಕಾರಾಗಿದ್ದು, ಜನಪ್ರಿಯವಾದ ರೆನಾಲ್ಟ್ ಕ್ವಿಡ್ 1.0-ಲೀಟರ್ ಕಾರಿನಲ್ಲಿ ಇರುವಂತಹ 3-ಸಿಲಿಂಡರ್ 68 ಬಿಎಚ್‌ಪಿ ಮತ್ತು 91 ಎನ್ಎಂ ಪೆಟ್ರೋಲ್ ಇಂಜಿನ್ ಹೊಂದಿದೆ.

ಭಾರತದಲ್ಲಿ ಒಂದು ಲಕ್ಷ ಉತ್ಪಾದನಾ ಮೈಲಿಗಲ್ಲನ್ನು ತಲುಪಿದ ಡಾಟ್ಸನ್ ಕಾರು

ಭಾರತದಲ್ಲಿ ಶೇಕಡಾ 5 ಪ್ರತಿಶತದಷ್ಟು ಮಾರುಕಟ್ಟೆ ಪಾಲನ್ನು ಸಾಧಿಸಲು ಡಟ್ಸನ್/ನಿಸ್ಸಾನ್ ಕಂಪನಿಗಳ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಕಂಪೆನಿಯ ಗೊ ಕ್ರಾಸ್ ಕಾರಿನೊಂದಿಗೆ ಈ ಗುರಿಯನ್ನು ಮುಟ್ಟುವ ಯೋಜನೆ ಹಾಕಿಕೊಂಡಿದೆ.

English summary
Datsun Rolls Out 100,000th Car. The milestone was achieved at the Renault-Nissan plant at Oragadam near Chennai.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark