ಕಾರುಗಳಲ್ಲಿ ಬರಲಿವೆ ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನಗಳು

Written By:

ಆಟೋ ಉದ್ಯಮದಲ್ಲಿ ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದ್ದು, ಇದೀಗ ಸಂಜ್ಞೆಯ ಮೂಲಕ ಕಾರಿನ ಕ್ಯಾಬಿನ್ ವಿಭಾಗವನ್ನು ನಿಯಂತ್ರಿಸಬಹುದಾದ ಸೌಲಭ್ಯಗಳನ್ನು ಪರಿಚಯಿಸಲಾಗುತ್ತಿದೆ.

ಕಾರುಗಳಲ್ಲಿ ಬರಲಿವೆ ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನಗಳು

ನಿಮೆಗೆಲ್ಲಾ ತಿಳಿದಿರುವಂತೆ ಈಗಾಗಲೇ ಮೊಬೈಲ್ ಮತ್ತು ಇತರೆ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಧ್ವನಿ ಗ್ರಹಣ ನಿಯಂತ್ರಣ ತಂತ್ರಜ್ಞಾನ, ಮುಖ ಗುರುತು ಹಿಡಿಯುವ ತಂತ್ರಜ್ಞಾನ ಹಾಗು ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನಗಳೂ ಚಾಲ್ತಿಯಲ್ಲಿದ್ದು, ಇದೀಗ ಕಾರುಗಳಲ್ಲೂ ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ.

ಕಾರುಗಳಲ್ಲಿ ಬರಲಿವೆ ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನಗಳು

ಆಟೋಮೋಟಿವ್ ಟೆಕ್ನಾಲಜಿ ಅಭಿವೃದ್ಧಿ ಸಂಸ್ಥೆಯಾದ ಡೆಲ್ಫಿ ಇಂತದೊಂದು ಪರಿಕಲ್ಪನೆಯನ್ನು ಹೊರಹಾಕಿದ್ದು, ಮುಂಬರುವ ಐಷಾರಾಮಿ ಕಾರುಗಳಲ್ಲಿ ಹೊಸ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿದೆ.

Recommended Video - Watch Now!
2017 Skoda Octavia RS Launched In India | In Kannada - DriveSpark ಕನ್ನಡ
ಕಾರುಗಳಲ್ಲಿ ಬರಲಿವೆ ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನಗಳು

ಹೊಸ ತಂತ್ರಜ್ಞಾನದ ಮೂಲಲ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರು ಕೂಡಾ ಕಾರುಗಳ ಮುಂಭಾಗದ ಕ್ಯಾಬಿನ್ ಅನ್ನು ಸಂಜ್ಞೆ ಯ ಮೂಲಕ ಮೇಲ್ವಿಚಾರಣೆ ಮಾಡಬಹುದಾಗಿದ್ದು, ಹೊಸ ವ್ಯವಸ್ಥೆಯಿಂದ ಕ್ಷಣಾರ್ಧದಲ್ಲೇ ನಿಮಗೆ ಬೇಕಾದ ಹಾಗೆ ಕಾರಿನ ಒಳಭಾಗ ನಿಯಂತ್ರಣಕ್ಕೆ ತರಬಹುದಾಗಿದೆ.

ಕಾರುಗಳಲ್ಲಿ ಬರಲಿವೆ ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನಗಳು

ಇನ್ನು ಡೆಲ್ಫಿ ಸಂಸ್ಥೆಯು ಹೊರತರಲು ಉದ್ದೇಶಿಸಿರುವ ಹೊಸ ತಂತ್ರಜ್ಞಾನವು ಪ್ರಸ್ತುತ ಆಡಿ 8 ಮಾದರಿಗಳಲ್ಲಿ ಕಾಣಬಹುದಾಗಿದ್ದು, ಇವುಗಳಲ್ಲಿ ಕಾರು ಚಾಲಕನಿಗೆ ಮಾತ್ರ ಸಂಜ್ಞೆ ಮೂಲಕ ಕ್ಯಾಬಿನ್ ನಿಯಂತ್ರಣ ಅವಕಾಶ ನೀಡಲಾಗಿದೆ.

ಕಾರುಗಳಲ್ಲಿ ಬರಲಿವೆ ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನಗಳು

ಆದ್ರೆ ಡೆಲ್ಫಿ ಸಂಸ್ಥೆಯ ಪರಿಚಯಿಸುತ್ತಿರುವ ಹೊಸ ತಂತ್ರಜ್ಞಾವು ಚಾಲಕ ಸೇರಿದಂತೆ ಎಲ್ಲ ಪ್ರಯಾಣಿಕರಿಗೂ ನಿಯಂತ್ರಣ ಮಾಡುವ ಅವಕಾಶವಿದ್ದು, ಭವಿಷ್ಯದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆ ಕೂಡಾ ಇದೆ ಎನ್ನಬಹುದು.

ಕಾರುಗಳಲ್ಲಿ ಬರಲಿವೆ ಸಂಜ್ಞೆಯ ಮೂಲಕ ನಿಯಂತ್ರಿಸಬಹುದಾದ ತಂತ್ರಜ್ಞಾನಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಆಟೋ ಉದ್ಯಮದಲ್ಲಿ ಸಂಜ್ಞೆಗಳ ಮೂಲಕ ಕಾರು ನಿಯಂತ್ರಣದಂತಹ ಹೊಸ ಪರಿಕಲ್ಪನೆಗಳಿಗೆ ಮಾನ್ಯತೆ ದೊರೆಯುತ್ತಿದ್ದು, ಭವಿಷ್ಯದಲ್ಲಿ ಕಾರು ಚಾಲನೆ ಮತ್ತಷ್ಟು ಸ್ಮಾರ್ಟ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

English summary
Read in Kannada Delphi Develops Next Gen Front Cabin Gesture Control Systems For Cars.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark