ಒಂದು ಬಾರಿ ಚಾರ್ಜ್ ಮಾಡಿದ್ರೆ 346 ಕಿ.ಮಿ ಮೈಲೇಜ್ ನೀಡುತ್ತೆ ಟೆಸ್ಲಾ ಮಾಡೆಲ್ 3 ಕಾರು

Written By:

ಪೂರ್ಣ ಪ್ರಮಾಣದಲ್ಲಿ ಸುಧಾರಿತ ಎಲೆಕ್ಟ್ರಿಕ್ ಎಂಜಿನ್‌ನೊಂದಿದಗೆ ಸಿದ್ಧಗೊಂಡಿರುವ ಟೆಸ್ಲಾ ಮಾಡೆಲ್ 3 ಕಾರು ಸದ್ಯದಲ್ಲೇ ಬಿಡುಗಡೆಯಾಗುತ್ತಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 346 ಕಿ.ಮಿ ಮೈಲೇಜ್ ನೀಡುವ ಟೆಸ್ಲಾ ಕಾರು

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಮೂಲದ ಟೆಸ್ಲಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಮಾಡೆಲ್ 3 ಕಾರನ್ನು ಬಿಡುಗಡೆ ಮಾಡುತ್ತಿದ್ದು, ಇದೇ ತಿಂಗಳು 28ಕ್ಕೆ ಗ್ರಾಹಕರ ಕೈ ಸೇರಲಿವೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 346 ಕಿ.ಮಿ ಮೈಲೇಜ್ ನೀಡುವ ಟೆಸ್ಲಾ ಕಾರು

ಹಲವು ವಿಶೇಷತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಮಾಡೆಲ್ 3 ಕಾರು ಒಂದು ಬಾರಿ ಚಾರ್ಜ್ ಮಾಡಿದ್ದಲ್ಲಿ 346 ಕಿ.ಮಿ ಮೈಲೇಜ್ ನೀಡಲಿದ್ದು, ಕೇವಲ 6 ಸೇಕೆಂಡುಗಳಲ್ಲಿ 100 ಕಿ.ಮಿ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 346 ಕಿ.ಮಿ ಮೈಲೇಜ್ ನೀಡುವ ಟೆಸ್ಲಾ ಕಾರು

ಸದ್ಯ ಅಮೆರಿಕದಲ್ಲಿ ಮಾತ್ರ ಮಾಡೆಲ್ 3 ಕಾರುಗಳು ಬಿಡುಗಡೆಯಾಗುತ್ತಿದ್ದು, ಆರಂಭಿಕ ಕಾರಿನ ಬೆಲೆ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ 17 ಲಕ್ಷದಿಂದ 22 ಲಕ್ಷಕ್ಕೆ ಬಿಡುಗಡೆಯಾಗುತ್ತಿದೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 346 ಕಿ.ಮಿ ಮೈಲೇಜ್ ನೀಡುವ ಟೆಸ್ಲಾ ಕಾರು

ಹೊಸ ಮಾದರಿ ಕಾರಿನ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿರುವ ಟೆಸ್ಲಾ ಅಧ್ಯಕ್ಷ ಇಲಾನ್ ಮಸ್ಕ್ "ಇದೇ ತಿಂಗಳು 28ರಂದು ಮಾಡೆಲ್ 3 ಬಿಡುಗಡೆಯಾಗಲಿದ್ದು, ಮೊದಲ 30 ಗ್ರಾಹಕರಿಗೆ ವಿಶೇಷ ರಿಯಾಯ್ತಿ ಪಡೆದುಕೊಳ್ಳಲಿದ್ದಾರೆ" ಎಂದಿದ್ದಾರೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 346 ಕಿ.ಮಿ ಮೈಲೇಜ್ ನೀಡುವ ಟೆಸ್ಲಾ ಕಾರು

ಟ್ವಿಟರ್‌ನಲ್ಲಿ ಇಲಾನ್ ಮಸ್ಕ್ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಮಾಡೆಲ್ 3 ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಈ ವರ್ಷದ ಅಂತ್ಯಕ್ಕೆ 20 ಸಾವಿರ ಕಾರುಗಳ ಮಾರಾಟ ಗುರಿಹೊಂದಲಾಗಿದೆ.

ಒಂದು ಬಾರಿ ಚಾರ್ಜ್ ಮಾಡಿದ್ರೆ 346 ಕಿ.ಮಿ ಮೈಲೇಜ್ ನೀಡುವ ಟೆಸ್ಲಾ ಕಾರು

ಇನ್ನು ಟೆಸ್ಲಾ ಕಾರು ಮಾದರಿಗಳು ಅಮೆರಿಕ ಸಂಯುಕ್ತ ಸಂಸ್ಥಾನ ರಾಷ್ಟ್ರಗಳಲ್ಲಿ ಮಾತ್ರ ಕಾರ್ಯವ್ಯಾಪ್ತಿ ಹೊಂದಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೂ ಹೊಸ ಕಾರುಗಳ ಬಿಡುಗಡೆಗೆ ಸಾಧ್ಯತೆಗಳಿವೆ.

English summary
Read in Kannada about Elon Musk Finally Reveals Tesla Model 3.
Story first published: Monday, July 10, 2017, 17:06 [IST]
Please Wait while comments are loading...

Latest Photos