ಬಿಡುಗಡೆಗೊಂಡ ಟೊಯೊಟಾ ಕ್ಯಾಮ್ರಿ ವಿನೂತನ ಹೈಬ್ರಿಡ್ ಕಾರು

Written By:

ಜಪಾನ್ ಮೂಲದ ಕಾರು ಉತ್ಪಾದನಾ ಸಂಸ್ಥೆ ಟೊಯೊಟಾ ತನ್ನ ಬಹುನೀರಿಕ್ಷಿತ ಹೈಬ್ರಿಡ್ ಕಾರು ಕ್ಯಾಮ್ರಿಯನ್ನು ಬಿಡುಗಡೆಗೊಳಿಸಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ಹೈಬ್ರಿಡ್ ಕಾರಿನ ಬೆಲೆ ರೂ. 31.98 ಲಕ್ಷಕ್ಕೆ ಲಭ್ಯವಿದ್ದು, ಹಿಂದಿನ ಆವೃತ್ತಿಗಳಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನಗಳೊಂದಿಗೆ ಕ್ಯಾಮ್ರಿ ಅಭಿವೃದ್ಧಿಗೊಂಡಿದೆ.

To Follow DriveSpark On Facebook, Click The Like Button
ಬಿಡುಗಡೆಗೊಂಡ ಟೊಯೊಟಾ ಕ್ಯಾಮ್ರಿ ವಿನೂತನ ಹೈಬ್ರಿಡ್ ಕಾರು

ಕ್ಯಾಮ್ರಿ ಹೈಬ್ರಿಡ್ ಕಾರಿನ ಬಾಹ್ಯ ವಿನ್ಯಾಸ ಕುರಿತು ಹೇಳುವುದಾದರೆ, ಸೆಡಾನ್ ಮಾದರಿ ಹೊಂದಿರುವ ವಿನೂತನ ಕಾರಿನಲ್ಲಿ ಮರುವಿನ್ಯಾಸ ಹೊಂದಿರುವ ಫಾಗ್ ಲ್ಯಾಂಪ್ ಅಳವಡಿಸಲಾಗಿದೆ. 15-ಇಂಚಿನ ಸ್ಪೋಕ್ ಅಲಾಯ್ ವೀಲ್ಹ್‌ಗಳಿವೆ. ಜೊತೆಗೆ ಇಂಟೀರಿಯರ್ ವಿನ್ಯಾಸಕ್ಕೂ ಹೆಚ್ಚಿನ ಗಮನಹರಿಸಲಾಗಿದ್ದು, ಜೆಬಿಎಲ್ 12 ಸ್ಪೀಕರ್ ಆಡಿಯೋ ವ್ಯವಸ್ಥೆ ಜೋಡಿಸಲಾಗಿದೆ. ಕಾರಿನಲ್ಲಿ ಎಲ್ಲ ಮಾಹಿತಿ ನೀಡಬಲ್ಲ ಇಂಟರ್‌ಪೇಸ್ ನ್ಯಾವಿಗೆಶನ್ ವ್ಯವಸ್ಥೆ ಕೂಡಾ ಲಭ್ಯವಿದೆ.

ಬಿಡುಗಡೆಗೊಂಡ ಟೊಯೊಟಾ ಕ್ಯಾಮ್ರಿ ವಿನೂತನ ಹೈಬ್ರಿಡ್ ಕಾರು

ಕ್ಯಾಮ್ರಿ ಹೈಬ್ರಿಡ್ ಕಾರನ್ನು ಪ್ರಸ್ತುತ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾಗಿದೆ. ಕಾರಿನಲ್ಲಿ ವೈಯರ್‌ಲೆಸ್ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯಿದ್ದು , ಮಾನಿಟರ್ ಒಳಗೊಂಡ ರಿವರ್ಸ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಬಿಡುಗಡೆಗೊಂಡ ಟೊಯೊಟಾ ಕ್ಯಾಮ್ರಿ ವಿನೂತನ ಹೈಬ್ರಿಡ್ ಕಾರು

ಕಾರಿನಲ್ಲಿ ಒಟ್ಟು 9 ಏರ್‌ಬ್ಯಾಗ್‌ಗಳಿದ್ದು ಕಾರು ಸವಾರರಿಗೆ ಸಂಪೂರ್ಣ ಸುರಕ್ಷೆತೆ ಒದಗಿಸಲಾಗಿದೆ. ಜೊತೆಗೆ ಟೈರ್‌ಗಳ ಒತ್ತಡ ನಿಯಂತ್ರಿಸಬಲ್ಲ ಮಾನಿಟರಿಂಗ್ ವ್ಯವಸ್ಥೆ ಮತ್ತು ತುರ್ತು ಬ್ರೇಕ್ ಸಿಗ್ನಲ್ ಹೊಂದಿದೆ.

ಬಿಡುಗಡೆಗೊಂಡ ಟೊಯೊಟಾ ಕ್ಯಾಮ್ರಿ ವಿನೂತನ ಹೈಬ್ರಿಡ್ ಕಾರು

ಶಕ್ತಿಶಾಲಿ ಎಂಜಿನ್ ಹೊಂದಿರುವ ಹೈಬ್ರಿಡ್ ಕ್ಯಾಮ್ರಿ 2.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಎಲೆಕ್ಟ್ರೀಲ್ ಮೋಟಾರ್ ಜೊತೆ ಸಂಪರ್ಕ ಹೊಂದಿದ್ದು, 202 ಬಿಎಚ್‌ಪಿ ಉತ್ಪಾದಿಸುತ್ತದೆ. ಮುಂಭಾಗದ ವೀಲ್ಹ್‌ಗಳಿಗೆ ಉತ್ಪಾದಿತ ಶಕ್ತಿ ಒದಗಿಸುವ ಸಿವಿಟಿ ಗೇರ್‌ಬಾಕ್ಸ್ ವ್ಯವಸ್ಥೆಯಿದೆ.

ಬಿಡುಗಡೆಗೊಂಡ ಟೊಯೊಟಾ ಕ್ಯಾಮ್ರಿ ವಿನೂತನ ಹೈಬ್ರಿಡ್ ಕಾರು

ನೂತನ ಕ್ಯಾಮ್ರಿ ಹೈಬ್ರಿಡ್ ಕಾರು, ನಿಧಾನಗತಿಯ ಚಾಲನೆಯಲ್ಲಿ ಸಂಪೂರ್ಣ ಎಲೆಕ್ಟ್ರಿಕಲ್ ಮೋಡ್‌ನಲ್ಲೇ ಚಲಿಸುತ್ತದೆ. ಒಂದು ವೇಳೆ ವೇಗದ ಪ್ರಯಾಣ ಬೇಕಾದಲ್ಲಿ ಎಲೆಕ್ಟ್ರಿಕಲ್ ಮತ್ತು ಎಂಜಿನ್ ಎರಡನ್ನು ಉಪಯೋಗಿಸುವ ಅನುಕೂಲತೆಯಿದೆ. ಟೊಯೊಟಾ ಕಂಪನಿ ಹೇಳಿಕೆ ಪ್ರಕಾರ ನೂತನ ಕಾರು ಪ್ರತಿ ಲೀಟರ್‌ಗೆ 19.16 ಕಿಲೋ ಮೀಟರ್ ಮೈಲೇಜ್ ನೀಡಲಿದೆಯಂತೆ.

ಬಿಡುಗಡೆಗೊಂಡ ಟೊಯೊಟಾ ಕ್ಯಾಮ್ರಿ ವಿನೂತನ ಹೈಬ್ರಿಡ್ ಕಾರು

ಇನ್ನೊಂದು ಪ್ರಮುಖ ವಿಚಾರವೇನೆಂದರೆ ನೂತನ ಕ್ಯಾಮ್ರಿ ಕೇವಲ 9.2 ಸೆಕೆಂಡುಗಳಲ್ಲಿ 0-100ಕಿಮಿ/ಪ್ರತಿ ಗಂಟೆಗೆ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ ಮತ್ತು ಪ್ರತಿಷ್ಠಿತ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಬಿಡುಗಡೆಗೊಂಡ ಟೊಯೊಟಾ ಕ್ಯಾಮ್ರಿ ವಿನೂತನ ಹೈಬ್ರಿಡ್ ಕಾರು

ಸದ್ಯ ಬಿಡುಗಡೆಯಾಗಿ ಮಾರಾಟಗೊಳ್ಳುತ್ತಿರುವ ಹೈಬ್ರಿಡ್ ಕ್ಯಾಮ್ರಿ ಕಾರು, ಪ್ರತಿಸ್ಪರ್ಧಿಗಳ ಬೆಲೆಗಳಿಂತ ಕಡಿಮೆಯೇ ಇದೆ. ಇದು ಗ್ರಾಹಕರಿಗೆ ಅನುಕೂಲಕರವಾಗಲಿದ್ದು, ಮತ್ತೊಮ್ಮೆ ಮಾರಾಟದಲ್ಲಿ ಹೊಸ ದಾಖಲೆ ಸೃಷ್ಠಿಸುವ ಸಾಧ್ಯತೆಗಳಿವೆ.

ನೂತನವಾಗಿ ಬಿಡುಗಡೆಗೊಂಡಿರುವ 2017 ಹೋಂಡಾ ಸಿಟಿ ಕಾರಿನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಟೊಯೊಟಾ toyota
English summary
Toyota has launched the facelifted Camry in India with added interior features and a slight design change.
Please Wait while comments are loading...

Latest Photos