ಬಿಎಸ್4 ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾದ ಫೋರ್ಸ್ ಗೂರ್ಖಾ..!!

Written By:

ಎಸ್‌ಯುವಿ ಮಾದರಿಗಳಲ್ಲೇ ಉತ್ತಮ ಆಯ್ಕೆಯಾಗಿರುವ ಫೋರ್ಸ್ ಗೂರ್ಖಾ ಉತ್ಪನ್ನಗಳು ಸದ್ಯ ಬಿಎಸ್4 ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆದಿದ್ದು, ಹೊಸ ಮಾದರಿಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

To Follow DriveSpark On Facebook, Click The Like Button
ಬಿಎಸ್4 ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾದ ಫೋರ್ಸ್ ಗೂರ್ಖಾ..!!

ಬಿಎಸ್3 ನಿಷೇಧದ ನಂತರ ನವೀಕೃತ ಮಾದರಿಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದ್ದ ಫೋರ್ಸ್ ಇಂಡಿಯಾ ಸಂಸ್ಥೆಯು ಇದೀಗ ಬಿಎಸ್4 ವೈಶಿಷ್ಟ್ಯತೆಗಳನ್ನು ಹೊಂದಿರುವ ಗೂರ್ಖಾ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.

ಬಿಎಸ್4 ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾದ ಫೋರ್ಸ್ ಗೂರ್ಖಾ..!!

ಫೋರ್ಸ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿರುವ ಪ್ರಮುಖ ಮೂರು ಗೂರ್ಖಾ ಮಾದರಿಗಳಲ್ಲಿ ಆರಂಭಿಕ ಬೆಲೆಯು ರೂ.8.45 ಲಕ್ಷಕ್ಕೆ ಲಭ್ಯವಿದ್ದು, ಉನ್ನತ ಮಾದರಿಯ ಬೆಲೆಗಳು ರೂ.11.48 ಲಕ್ಷಕ್ಕೆ ಖರೀದಿಸಬಹುದಾಗಿದೆ.

ಬಿಎಸ್4 ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾದ ಫೋರ್ಸ್ ಗೂರ್ಖಾ..!!

ಗೂರ್ಖಾ ಮಾದರಿಗಳು - ಬೆಲೆಗಳು

ಎಕ್ಸ್‌ಪೆಡಿಶನ್ 4x2 (5 ಬಾಗಿಲು ಸೌಲಭ್ಯವುಳ್ಳ ಮಾದರಿ) - ರೂ. 8.45 ಲಕ್ಷ

ಎಕ್ಸ್‌ಪ್ಲೋರರ್ 4x4 (3 ಬಾಗಿಲು ಸೌಲಭ್ಯವುಳ್ಳ ಮಾದರಿ) - ರೂ. 9.39 ಲಕ್ಷ

ಎಕ್ಸ್‌ಪ್ಲೋರರ್ 4x4 (5 ಬಾಗಿಲು ಸೌಲಭ್ಯವುಳ್ಳ ಮಾದರಿ) - ರೂ. 11.48 ಲಕ್ಷ

Recommended Video
2017 Mercedes New GLA India Launch Kannada - DriveSpark ಕನ್ನಡ
ಬಿಎಸ್4 ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾದ ಫೋರ್ಸ್ ಗೂರ್ಖಾ..!!

ಇನ್ನು ಗೂರ್ಖಾ ಹೊಸ ಮಾದರಿಗಳ ಎಂಜಿನ್ ವಿಭಾಗದಲ್ಲಿ ಈ ಹಿಂದಿನ 2. 6-ಲೀಟರ್ ಡೀಸೆಲ್ ಎಂಜಿನ್ ಅನ್ನೇ ಮುಂದುವರಿಸಲಾಗಿದ್ದು, ಹೊರ ಮತ್ತು ಒಳವಿನ್ಯಾಸದಲ್ಲಿ ಭಾರೀ ಪ್ರಮಾಣದ ಬದಲಾವಣೆ ತರಲಾಗಿದೆ.

ಬಿಎಸ್4 ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾದ ಫೋರ್ಸ್ ಗೂರ್ಖಾ..!!

ಹೀಗಾಗಿ ಈ ಹಿಂದಿನಂತೆಯೇ 85-ಬಿಎಚ್‌ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿರುವ ಗೂರ್ಖಾ ಮಾದರಿಗಳು ಬಿಎಸ್4 ವೈಶಿಷ್ಟ್ಯತೆಗಳೊಂದಿಗೆ 5-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಪಡೆದುಕೊಂಡಿವೆ.

ಬಿಎಸ್4 ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾದ ಫೋರ್ಸ್ ಗೂರ್ಖಾ..!!

ಗ್ರಾಹಕರ ಬೇಡಿಕೆ ಅನುಗುಣವಾಗಿ ಪ್ರಮುಖ ಮೂರು ಮಾದರಿಗಳಲ್ಲಿ ಗೂರ್ಖಾ ಪರಿಚಯಿಸಿರುವ ಫೋರ್ಸ್, 3 ಬಾಗಿಲು ಸೌಲಭ್ಯವುಳ್ಳ ಮಾದರಿಯಾದ ಎಕ್ಸ್‌ಪ್ಲೋರರ್ 4x4 ಮಾದರಿಯನ್ನು ಆಪ್ ರೋಡಿಂಗ್ ಕೌಶಲ್ಯಕ್ಕೂ ಹಾಗೂ ಎಕ್ಸ್‌ಪೆಡಿಶನ್ 4x2, 5 ಬಾಗಿಲು ಸೌಲಭ್ಯವುಳ್ಳ ಎಕ್ಸ್‌ಪ್ಲೋರರ್ 4x4 ಮಾದರಿಗಳನ್ನು ವಾಣಿಜ್ಯ ಬಳಕೆಗೂ ಬರುವಂತೆ ಒಳವಿನ್ಯಾಸ ಮಾಡಿದೆ.

ಬಿಎಸ್4 ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾದ ಫೋರ್ಸ್ ಗೂರ್ಖಾ..!!

ಇದಲ್ಲದೇ ಗೂರ್ಖಾ ಹೊರ ನೋಟದಲ್ಲೂ ಭಾರೀ ಬದಲಾವಣೆ ತಂದಿರುವ ಫೋರ್ಸ್, ಮುಂಭಾದಲ್ಲಿ ಸ್ಟೀಲ್ ಬಂಪರ್, ಹೊಸ ಗ್ರಾಫಿಕ್ಸ್, ಕ್ಲಿಯರ್ ಲೆನ್ಸ್ ಹೆಡ್‌ಲ್ಯಾಂಪ್‌ಗಳು ಮತ್ತು ಸುಪ್ರೀಂ ವೈಟ್, ಮ್ಯಾಟ್ ಬ್ಲಾಕ್, ಕಾಪರ್ ರೆಡ್, ಮತ್ತು ಮೂನ್ಬೀಮ್ ಸಿಲ್ವರ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

ಬಿಎಸ್4 ಸೌಲಭ್ಯಗಳೊಂದಿಗೆ ಮರು ಬಿಡುಗಡೆಯಾದ ಫೋರ್ಸ್ ಗೂರ್ಖಾ..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ಹೊಸ ಹೊಸ ಉತ್ಪನ್ನಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಬೇಡಿಕೆ ಸಾಧಿಸಿರುವ ಫೋರ್ಸ್ ಇಂಡಿಯಾ ಸಂಸ್ಥೆಯು ಇದೀಗ ಬಿಎಸ್4 ಹೊಂದಿರುವ ಗೂರ್ಖಾ ಮಾದರಿಗಳನ್ನು ಪರಿಚಯಿಸುತ್ತಿದೆ.

Read more on ಫೋರ್ಸ್ force
English summary
Read in Kannada about Force Gurkha BS4 Model Launched In India.
Please Wait while comments are loading...

Latest Photos