ಜೂನ್ ಅಂತ್ಯಕ್ಕೆ ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ ಹ್ಯುಂಡೈ

Written By:

ಜೂನ್ ಅವಧಿಯಲ್ಲಿ ಹ್ಯುಂಡೈ ಇಂಡಿಯಾ ಸಂಸ್ಥೆಯು ಕಾರು ಮಾರಾಟದಲ್ಲಿ ಹಿನ್ನಡೆ ಅನುಭವಿಸಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಹ್ಯುಂಡೈ ಇಂಡಿಯಾ ಮತ್ತೊಮ್ಮೆ ಮುಗ್ಗರಿಸಿದೆ.

2016ರ ಜೂನ್ ಅವಧಿಯಲ್ಲಿ 39,807 ಕಾರುಗಳನ್ನು ಮಾರಾಟ ಮಾಡಲು ಶಕ್ತವಾಗಿದ್ದ ಹ್ಯುಂಡೈ ಇಂಡಿಯಾ, ಕಳೆದ ಜೂನ್ ತಿಂಗಳಲ್ಲಿ 37,562 ಕಾರುಗಳನ್ನು ಮಾರಾಟ ಮಾಡಲು ಮಾತ್ರ ಸಾಧ್ಯವಾಗಿದೆ.

ಅಲ್ಲದೇ ಕಳೆದ ವರ್ಷಕ್ಕೆ ಹೊಲಿಕೆ ಮಾಡಿದಲ್ಲಿ ಶೇ.5.6ರಷ್ಟು ಹಿನ್ನಡೆ ಅನುಭವಿಸಿರುವ ಹ್ಯುಂಡೈ, 2016ರ ಮೇ ಅವಧಿಯಲ್ಲಿನ ಕಾರು ಮಾರಾಟ ಪ್ರಮಾಣಕ್ಕೆ ಹೊಲಿಕೆ ಮಾಡದ್ದಲ್ಲಿ ಶೇ.10.58ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ.

ಇನ್ನು ಕಳೆದು ತಿಂಗಳು ಕೇಂದ್ರ ಸರ್ಕಾರವು ಜಿಎಸ್‌ಟಿಗೆ ಜಾರಿಗೆ ಮಾಡಲು ಸಜ್ಜುಗೊಂಡಿದ್ದರ ಹಿನ್ನೆಲೆ ಕಾರುಗಳ ಮಾರಾಟ ಪ್ರಮಾಣದಲ್ಲಿ ಇಳಿಕೆಯಾಗಿರಬಹುದು ಎನ್ನಲಾಗಿದೆ. ಇದಕ್ಕೆ ಕಾರಣ ಜಿಎಸ್‌ಟಿ ಜಾರಿ ನಂತರ ಕಾರುಗಳ ಬೆಲೆಗಳು ತಗ್ಗುವ ಭರವಸೆ ಹಿನ್ನೆಲೆ ಕಾರು ಖರೀದಿ ಪ್ರಕ್ರಿಯೆಗೆ ಗ್ರಾಹಕರು ಹಿಂದೇಟು ಹಾಕಿದ್ದರು.

ಇದೀಗ ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಯಾಗಿದ್ದು, ಹ್ಯುಂಡೈ ಕಾರುಗಳ ಬೆಲೆಗಳು ಕೂಡಾ ಕಡಿಮೆಯಾಗಿರುವುದು ಕಾರು ಖರೀದಿದಾರಿಗೆ ವರವಾಗಿ ಪರಿಣಮಿಸಿದೆ.

ಹೀಗಾಗಿ ಮುಂಬರುವ ದಿನಗಳಲ್ಲಿ ಹ್ಯುಂಡೈ ಕಾರುಗಳ ಮಾರಾಟ ಪ್ರಕ್ರಿಯೆಯಲ್ಲಿ ಸುಧಾರಣೆ ಕಂಡುಬರುವ ಸಾಧ್ಯತೆಗಳಿದ್ದು, ಗ್ರ್ಯಾಂಡ್ ಐ10, ಎಕ್ಸೆಂಟ್ ಡೀಸೆಲ್, ಐ20 ಡೀಸೆಲ್ ಮತ್ತು ಐ20 ಆಕ್ಟಿವ್ ಡೀಸೆಲ್ ಕಾರುಗಳ ಮೇಲೆ ಶೇ.2.25ರಷ್ಟು ಬೆಲೆ ಕಡಿತಗೊಂಡಿವೆ.

English summary
Read in Kannada about Hyundai India Sales Decline In June.
Story first published: Monday, July 3, 2017, 11:43 [IST]
Please Wait while comments are loading...

Latest Photos