ಭಾರೀ ಪ್ರಮಾಣದ ಭೂಮಿ ಖರೀದಿಸಿದ ಹೋಂಡಾ- ಮೂರನೇ ಉತ್ಪಾದನಾ ಘಟಕಕ್ಕಾಗಿ ಸಾವಿರ ಕೋಟಿ ಹೂಡಿಕೆ..!!

Written By:

ಜಪಾನ್ ಮೂಲದ ಬೃಹತ್ ಕಾರು ಉತ್ಪಾದನಾ ಸಂಸ್ಥೆ ಹೋಂಡಾ ಭಾರತದಲ್ಲಿ ತನ್ನ ಮತ್ತೊಂದು ಉತ್ಪಾದನಾ ಘಟಕ ತೆರೆಯಲು ಸಿದ್ಧಗೊಂಡಿದೆ. ಇದಕ್ಕಾಗಿ ಗುಜರಾತ್‌ನಲ್ಲಿ 1 ಸಾವಿರ ಕೋಟಿ ಹೂಡಿಕೆ ಮಾಡಿರುವ ಹೋಂಡಾ, 380 ಎಕರೆ ಭೂಮಿ ಖರೀದಿ ಮಾಡಿದ್ದು, ಸದ್ಯದಲ್ಲೇ ಹೊಸ ಘಟಕದಲ್ಲಿ ಉತ್ಪಾದನೆ ಶುರುವಾಗಲಿದೆ.

ಭಾರೀ ಪ್ರಮಾಣದ ಭೂಮಿ ಖರೀದಿಸಿದ ಹೋಂಡಾ- ಮೂರನೇ ಉತ್ಪಾದನಾ ಘಟಕಕ್ಕಾಗಿ ಸಾವಿರ ಕೋಟಿ ಹೂಡಿಕೆ..!!

ಗುಜರಾತ್‌ನ ಅಹಮದಾಬಾದ್ ಬಳಿಯಿರುವ ವಿತ್ಲಾಪುರ್‌ನಲ್ಲಿ 380 ಎಕರೆ ಭೂಮಿ ಖರೀದಿ ಮಾಡಿರುವ ಹೋಂಡಾ ಕಂಪನಿ, ಮೂರನೇ ಬೃಹತ್ ಉತ್ಪಾದನಾ ಘಟಕ ತೆರೆಯಲಿದೆ. ಕಳೆದ ವರ್ಷ ಅದೇ ಜಾಗದಲ್ಲಿ ದ್ವಿಚಕ್ರ ವಾಹನ ಉತ್ಪಾದನಾ ಘಟಕ ತೆರಿದಿದ್ದ ಹೋಂಡಾ, ಈ ಬಾರಿ ಕಾರು ಉತ್ಪಾದನಾ ಘಟಕ ತೆರೆಯುವ ಯೋಜನೆ ರೂಪಿಸಿ ಭೂಮಿ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ಭಾರೀ ಪ್ರಮಾಣದ ಭೂಮಿ ಖರೀದಿಸಿದ ಹೋಂಡಾ- ಮೂರನೇ ಉತ್ಪಾದನಾ ಘಟಕಕ್ಕಾಗಿ ಸಾವಿರ ಕೋಟಿ ಹೂಡಿಕೆ..!!

ಈಗಾಗಲೇ ಗ್ರೇಟರ್ ನೋಯ್ಡಾ ಮತ್ತು ರಾಜಸ್ತಾನದ ತಾಪುಕೂರಾ ಎಂಬಲ್ಲಿ ಎರಡು ಉತ್ಪಾದನಾ ಘಟಕಗಳನ್ನು ಹೊಂದಿರುವ ಹೋಂಡಾ, ಇದೀಗ ಅಹಮದಾಬಾದ್‌ನಲ್ಲಿ ಮೂರನೇ ಉತ್ಪಾದನಾ ಘಟಕ ತೆರೆಯಲು ಸಿದ್ಧಗೊಂಡಿದೆ. ಈ ಮೂಲಕ 2,40,000 ವಾಹನಗಳ ಉತ್ಪಾದನಾ ಗುರಿ ತಲುಪಲು ಹೋಂಡಾ ಬೃಹತ್ ಯೋಜನೆ ರೂಪಿಸಿದೆ.

ಭಾರೀ ಪ್ರಮಾಣದ ಭೂಮಿ ಖರೀದಿಸಿದ ಹೋಂಡಾ- ಮೂರನೇ ಉತ್ಪಾದನಾ ಘಟಕಕ್ಕಾಗಿ ಸಾವಿರ ಕೋಟಿ ಹೂಡಿಕೆ..!!

ಇನ್ನೂ ಮೂರನೇ ಉತ್ಪಾದನಾ ಘಟಕದ ಕುರಿತು ಮಾಹಿತಿ ನೀಡಿರುವ ಹೋಂಡಾ ಕಾರುಗಳ ಭಾರತೀಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯೋಇಚಿರೊ ಯೋನೆನೋ " ಭಾರತದಲ್ಲಿ ಬೃಹತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಗುಜರಾತ್‌ನಲ್ಲಿ ಭೂಮಿ ಖರೀದಿಸಿದ್ದೇವೆ. ಈ ಮೂಲಕ ಭಾರತದಲ್ಲಿ ಹೋಂಡಾ ಯೋಜಿತ ಗುರಿ ತಲುಪುವ ಗುರಿ ಹೊಂದಿದ್ದು, ಒಟ್ಟು ದೇಶೀಯ ಉತ್ಪನ್ನದಲ್ಲಿ ವಾರ್ಷಿಕವಾಗಿ ಶೇಕಡಾ 7ರಷ್ಟು ಗುರಿ ಸಾಧನೆ ಯೋಜಿಸಲಾಗಿದೆ" ಎಂದಿದ್ದಾರೆ.

ಭಾರೀ ಪ್ರಮಾಣದ ಭೂಮಿ ಖರೀದಿಸಿದ ಹೋಂಡಾ- ಮೂರನೇ ಉತ್ಪಾದನಾ ಘಟಕಕ್ಕಾಗಿ ಸಾವಿರ ಕೋಟಿ ಹೂಡಿಕೆ..!!

ಈ ಹಿಂದೆ ಅಲ್ಪಾವಧಿಯಲ್ಲೇ ಯೋಜಿತ ಗುರಿ ಹೊಂದಿದ್ದ ಹೋಂಡಾ, 60 ಸಾವಿರ ವಾಹನ ಉತ್ಪಾದನೆಯನ್ನು 2 ಲಕ್ಷಕ್ಕೆ ಹೆಚ್ಚಿಸಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ತನ್ನದೇ ಪಾತ್ರ ವಹಿಸುತ್ತಿರುವ ಹೋಂಡಾ 2017ರ ಆರ್ಥಿಕಾವಧಿಯಲ್ಲಿ ಶೇಕಡಾ 20ರಷ್ಟು ಕುಸಿತ ಕೂಡ ಕಂಡಿತ್ತು, ಆದ್ರೆ ಕೆಲವು ಸುಧಾರಣಾ ಕ್ರಮಗಳಿಂದ ಮತ್ತೆ ಶೇಕಡಾ 9 ರಷ್ಟು ಏರಿಕೆ ಕಂಡಿದ್ದು, 1.24 ಲಕ್ಷ ವಾಹನಗಳ ಉತ್ಪಾದನೆ ಮಾಡಿದೆ.

ಭಾರೀ ಪ್ರಮಾಣದ ಭೂಮಿ ಖರೀದಿಸಿದ ಹೋಂಡಾ- ಮೂರನೇ ಉತ್ಪಾದನಾ ಘಟಕಕ್ಕಾಗಿ ಸಾವಿರ ಕೋಟಿ ಹೂಡಿಕೆ..!!

ಯೋಇಚಿರೊ ಯೋನೆನೋ ಮತ್ತಷ್ಟು ಹೇಳಿಕೆ ಪ್ರಕಾರ "ಭಾರತದಲ್ಲಿ ತಲಾ ಆದಾಯ ಹೆಚ್ಚುತ್ತಿದ್ದು, ಮಧ್ಯಮ ವರ್ಗಗಳು ಕಾರು ಖರೀದಿಗೆ ಮುಂದಾಗುತ್ತಿದ್ದಾರೆ. ಈ ಕಾರಣಕ್ಕಾಗಿ ಮುಂಬರುವ ದಿನಗಳಲ್ಲಿ ಕಾರು ಖರೀದಿದಾರರಸಂಖ್ಯೆ ಹೆಚ್ಚಾಗಲಿದ್ದು, ಅವರ ಬೇಡಿಕೆ ಅನುಗುಣವಾಗಿ ಹೋಂಡಾ ಉತ್ಪನ್ನಗಳು ಸಿದ್ಧಗೊಳ್ಳಲಿವೆ" ಎಂದಿದ್ದಾರೆ.

ಭಾರೀ ಪ್ರಮಾಣದ ಭೂಮಿ ಖರೀದಿಸಿದ ಹೋಂಡಾ- ಮೂರನೇ ಉತ್ಪಾದನಾ ಘಟಕಕ್ಕಾಗಿ ಸಾವಿರ ಕೋಟಿ ಹೂಡಿಕೆ..!!

ಸದ್ಯ ಭಾರತದಲ್ಲಿ ಬಿಡುಗಡೆಯಾಗಿರುವ ಹೋಂಡಾ ಸಿಟಿ ಆವೃತ್ತಿಯ ಸೆಡಾನ್ ಮಾದರಿ ಕಾರು ಮಾರಾಟ ಭರ್ಜರಿಯಾಗಿ ಸಾಗಿದೆ. ಇದುವರೆಗೆ 7,500 ಕಾರುಗಳಿಗೆ ಮುಂಗಡ ಹೆಸರು ನೊಂದಾಯಿಸಲಾಗಿದ್ದು, ಉತ್ಪಾದನಾ ಕಾರ್ಯ ಕೂಡಾ ಭರದಿಂದ ಸಾಗಿದೆ.

ಭಾರೀ ಪ್ರಮಾಣದ ಭೂಮಿ ಖರೀದಿಸಿದ ಹೋಂಡಾ- ಮೂರನೇ ಉತ್ಪಾದನಾ ಘಟಕಕ್ಕಾಗಿ ಸಾವಿರ ಕೋಟಿ ಹೂಡಿಕೆ..!!

ಆದ್ರೆ ದುರಷ್ಟಕರ ವಿಚಾರವೇನೆಂದರೆ ಬೃಹತ್ ಯೋಜನೆ ರೂಪಿಸಿರುವ ಹೋಂಡಾ ಈ ಹಿಂದೆ ಹಲವು ಬಾರಿ ಯೋಜಿತ ಗುರಿ ತಲುಪದೇ ಮುಗ್ಗರಿಸಿದೆ. ಹೀಗಾಗಿ ಪ್ರಸಕ್ತ ವರ್ಷದಲ್ಲಿ 3 ಲಕ್ಷ ಕಾರು ಮಾರಾಟ ಗುರಿ ಕಷ್ಟಸಾಧ್ಯವೆಂದು ಹೇಳಲಾಗುತ್ತಿದ್ದು, ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ.

ಸದ್ಯ ಬಿಡುಗಡೆಗೊಂಡಿರುವ ಹೋಂಡಾ ಸಿಟಿ ಕಾರುಗಳ ಚಿತ್ರ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಹೋಂಡಾ honda
English summary
Honda invests Rs 1000 crore for their third manufacturing plant in Gujarat.
Please Wait while comments are loading...

Latest Photos