ಸ್ವಾತಂತ್ರ್ಯ ದಿನದಂದು ಭಾರತದ ಪ್ರಥಮ ಜೈವಿಕ ಇಂಧನ ಬಸ್ ಬಿಡುಗಡೆ ಮಾಡಿದ ಗೋವಾ

ಸ್ವಾತಂತ್ರ್ಯ ದಿನ ಪ್ರಯುಕ್ತ ದೇಶದೆಲ್ಲೆಡೆ ವಿವಿಧ ರೀತಿಗಳಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು. ಆದರೆ, ಗೊವಾ ರಾಜ್ಯ ಮಾತ್ರ ವಿಶಿಷ್ಟ ರೀತಿಯಲ್ಲಿ ಸ್ವತಂತ್ರ ದಿನವನ್ನು ಆಚರಿಸಿತು ಎನ್ನಬಹುದು.

By Girish

ಹೌದು, ಟೂರಿಸಂ ವಿಚಾರದಲ್ಲಿ ತನ್ನ ಪ್ರಾಬಲ್ಯವನ್ನು ಮೆರೆದಿರುವ ಗೋವಾ ರಾಜ್ಯ ಸದ್ಯ ಮತ್ತೊಂದು ಪರಿಸರ ಸ್ನೇಹಿ ಸಾಹಸಕ್ಕೆ ಕೈಹಾಕಿದ್ದು, ಸ್ಕ್ಯಾನಿಯಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಜೈವಿಕ ಇಂಧನ ಬಸ್ ಪ್ರಾರಂಭಿಸಿದೆ. ಈ ವಾಹನ ಒಂದು ಪೈಲಟ್ ಯೋಜನೆಯ ಭಾಗವಾಗಿ ಕಾರ್ಯ ನಿರ್ವಹಿಸಲಿದೆ.

ಸ್ವಾತಂತ್ರ್ಯ ದಿನದಂದು ಭಾರತದ ಪ್ರಥಮ ಜೈವಿಕ ಇಂಧನ ಬಸ್ ಬಿಡುಗಡೆ ಮಾಡಿದ ಗೋವಾ

ಗೊವಾ ರಾಜ್ಯದ ಗವರ್ನರ್ ಆದಂತಹ ಮೃದುಲಾ ಸಿನ್ಹಾ ಪಣಜಿಯಲ್ಲಿನ ಆದಿಲ್ ಷಾ ಅರಮನೆಯಿಂದ ಹಸಿರು ನಿಶಾನೆ ತೋರಿಸುವ ಮೂಲಕ 36 ಆಸನ ಹೊಂದಿರುವ ಈ ಬಸ್ಸನ್ನು ಪ್ರಾರಂಭಿಸಿದರು.

ಸ್ವಾತಂತ್ರ್ಯ ದಿನದಂದು ಭಾರತದ ಪ್ರಥಮ ಜೈವಿಕ ಇಂಧನ ಬಸ್ ಬಿಡುಗಡೆ ಮಾಡಿದ ಗೋವಾ

ಅಲ್ಲದೆ, ಎಥನಾಲ್ ಆಧಾರದ ಮೇಲೆ ಚಲಿಸುವ ಮತ್ತೆರಡು ಮಾದರಿಯ ಬಸ್ಸುಗಳನ್ನೂ ಸಹ ಈ ಸಂದರ್ಭದಲ್ಲಿ ಪ್ರಾರಂಬಿಸಲಾಗಿದ್ದು, ಒಟ್ಟು ಮೂರು ರೀತಿಯ ಮಾದರಿಗಳು ಬಿಡುಗಡೆ ಭಾಗ್ಯ ಕಂಡಿವೆ.

ಸ್ವಾತಂತ್ರ್ಯ ದಿನದಂದು ಭಾರತದ ಪ್ರಥಮ ಜೈವಿಕ ಇಂಧನ ಬಸ್ ಬಿಡುಗಡೆ ಮಾಡಿದ ಗೋವಾ

ಈ ಮೂರೂ ಮಾದರಿಯ ಬಸ್ಸುಗಳೂ ಸಹ ಗೋವಾದ ರಾಜ್ಯ ಸಾರಿಗೆ ವ್ಯವಸ್ಥೆ ಅಡಿಯಲ್ಲಿ ಇರುವಂತಹ ಕದಂಬ ಸಾರಿಗೆ ನಿಗಮ ಲಿಮಿಟೆಡ್ (ಕೆಟಿಸಿಎಲ್) ಭಾಗವಾಗಿ ಕಾರ್ಯ ನಿರ್ವಹಿಸಲಿವೆ ಎಂದು ಸರ್ಕಾರ ತಿಳಿಸಿದೆ.

ಸ್ವಾತಂತ್ರ್ಯ ದಿನದಂದು ಭಾರತದ ಪ್ರಥಮ ಜೈವಿಕ ಇಂಧನ ಬಸ್ ಬಿಡುಗಡೆ ಮಾಡಿದ ಗೋವಾ

ಮುಂಬರುವ ವರ್ಷದ ಫೆಬ್ರವರಿ ವೇಳೆಗೆ 40ಕ್ಕೂ ಹೆಚ್ಚು ಪರಿಸರ ಸ್ನೇಹಿ ಇಂಧನ ಬಳಸಿ ಚಲಿಸುವ ಬಸ್‍ಗಳನ್ನು ಸಾರಿಗೆ ಇಲಾಖೆಗೆ ಅಸ್ತಾಂತರಿಸುವ ಯೋಜನೆಯನ್ನು ಗೋವಾ ಸರ್ಕಾರ ಹೊಂದಿದೆ. ಸಾಲಿಗಾವ್ ಪ್ರದೇಶದಲ್ಲಿ ಇರಿಸಲಾಗಿರುವ ಘನ ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಉತ್ಪಾದನೆಗೊಳ್ಳುವ ಜೈವಿಕ ಅನಿಲದ ಮೂಲಕ ಇಂಧನ ಒದಗಿಸುವ ಕೆಲಸಕ್ಕೆ ಸರ್ಕಾರ ಕೈಹಾಕಲಿದೆ.

ಸ್ವಾತಂತ್ರ್ಯ ದಿನದಂದು ಭಾರತದ ಪ್ರಥಮ ಜೈವಿಕ ಇಂಧನ ಬಸ್ ಬಿಡುಗಡೆ ಮಾಡಿದ ಗೋವಾ

ರಾಜ್ಯ ಸಾರಿಗೆ ಬಸ್ ಮತ್ತು ಭಾರೀ ವಾಹನಗಳು ಸಾಮಾನ್ಯವಾಗಿ ವಾಯುಮಾಲಿನ್ಯ ಹೆಚ್ಚಿಸುವ ಕಡೆಗೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿರುವುದನ್ನು ನಾವೆಲ್ಲರೂ ಗಮನಿಸಬಹುದಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಈ ರೀತಿಯ ಪರಿಸರ ಸ್ನೇಹಿ ವಾಹನಗಳತ್ತ ಮುಖ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

Most Read Articles

Kannada
Read more on ಗೋವಾ goa
English summary
Independence Day was celebrated throughout the country in different manners, but Goa had something special to offer - launching India's first bio-fuel bus. The bus, made by Scania, was introduced as part of a pilot project.
Story first published: Wednesday, August 16, 2017, 15:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X