ಆಂಡ್ರಾಯ್ಡ್ ಚಾಲಿತ ಸ್ಮಾರ್ಟಫೋನ್ ಬಿಡುಗಡೆಗೊಳಿಸಿದ ಲಂಬೋರ್ಗಿನಿ
ಲಂಬೋರ್ಗಿನಿ ಆಲ್ಫಾ-ಒನ್ ಆಂಡ್ರಾಯ್ಡ್ ಚಾಲಿತ ಸ್ಮಾರ್ಟಫೋನ್ ಪ್ರಾರಂಭಿಸಿದ್ದು, ಟ್ಯಾಕ್ಸ್ ಹೊರತುಪಡಿಸಿ ರೂ.1.5 ಲಕ್ಷ ಎಕ್ಸ್ ಶೋ ರೂಂ ಬೆಲೆ ಪಡೆದುಕೊಂಡಿದೆ.
ಲಂಬೋರ್ಗಿನಿ ಆಲ್ಫಾ-ಒನ್ ಆಂಡ್ರಾಯ್ಡ್ ಚಾಲಿತ ಸ್ಮಾರ್ಟಫೋನ್ ಪ್ರಾರಂಭಿಸಿದ್ದು, ಟ್ಯಾಕ್ಸ್ ಹೊರತುಪಡಿಸಿ ರೂ.1.5 ಲಕ್ಷ ಎಕ್ಸ್ ಶೋ ರೂಂ ಬೆಲೆ ಪಡೆದುಕೊಂಡಿದೆ.

ಲಂಬೋರ್ಗಿನಿ ಆಲ್ಫಾ-ಒನ್ ಆಂಡ್ರಾಯ್ಡ್ ಚಾಲಿತ ಸ್ಮಾರ್ಟಫೋನ್ ಖರೀದಿಸಲು ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ಸದ್ಯ ಎನ್ನುವ ವಿಚಾರ ತಿಳಿದುಬಂದಿದ್ದು, ಅಂತರರಾಷ್ಟ್ರೀಯ ವಿತರಣೆಯೊಂದಿಗೆ ಈ ಫೋನ್ ಲಭ್ಯವಿರುವ ಕಾರಣ ಗ್ರಾಹಕರೇ ಖುದ್ದಾಗಿ ಕಸ್ಟಮ್ಸ್ ಟ್ಯಾಕ್ಸ್ ಪಾವತಿಸಬೇಕಾದ ಅವಶ್ಯಕತೆ ಇದೆ ಎಂದು ಕಂಪನಿ ತಿಳಿಸಿದೆ.

ಕಾರು ತಯಾರಕರ ಪ್ರಕಾರ, ಕಾರನ್ನು ತಯಾರಿಸಲು ಬಳಸಲಾಗುವ ಲಿಕ್ವಿಡ್ ಮೆಟಲ್ ಉಪಯೋಗಿಸಿ ಈ ಲಂಬೋರ್ಗಿನಿ ಆಲ್ಫಾ-ಒನ್ ಆಂಡ್ರಾಯ್ಡ್ ಚಾಲಿತ ಸ್ಮಾರ್ಟಫೋನ್ ತಯಾರಿಸಲಾಗಿದ್ದು, ಹೆಚ್ಚು ಬಲಿಷ್ಠವಾಗಿದೆ.

ಈ ಫೋನ್ 5.5-ಇಂಚಿನ WQHD ಪರದೆ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 820 ಜೊತೆ ಆಡ್ರಿನೊ 530 ಜಿಪಿಯು, 4ಜಿಬಿ ಆರ್‌ಎಎಂ ಮತ್ತು 64 ಜಿಬಿ ಆಂತರಿಕ ಸಂಗ್ರಹದೊಂದಿಗೆ ಈ ಕಾರು ಬಿಡುಗಡೆಗೊಂಡಿದೆ.

ಲಂಬೋರ್ಗಿನಿ ಕಾರು ತಯಾರಕ ಸಂಸ್ಥೆಯು ಈ ಆಲ್ಫಾ-ಒನ್ ಸ್ಮಾರ್ಟಫೋನ್, 20ಎಂಪಿ ಹಿಂಬದಿಯ ಕ್ಯಾಮೆರಾ ಮತ್ತು 8ಎಂಪಿ ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

ಡ್ಯುಯಲ್ ಸಿಮ್ ಸೌಲಭ್ಯ, ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸೌಕರ್ಯ ನೀಡಲಾಗಿದೆ ಹಾಗು ಲಂಬೋರ್ಗಿನಿ ಆಲ್ಫಾ-ಒನ್ ಆಂಡ್ರಾಯ್ಡ್ ಚಾಲಿತ ಸ್ಮಾರ್ಟಫೋನ್‌ನಲ್ಲಿ ನೌಗಟ್ ಮತ್ತು 3250 mAh ಬ್ಯಾಟರಿ ಇರಿಸಲಾಗಿದೆ.

ಆಸ್ಟನ್ ಮಾರ್ಟಿನ್, ಬೆಂಟ್ಲೆ, ಮತ್ತು ಲಂಬೋರ್ಗಿನಿ ಕೂಡ ಈ ಮೊದಲು ಈ ರೀತಿಯ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಪರಿಚಯ ಮಾಡಿದ್ದನ್ನು ನಾವೆಲ್ಲರೂ ನೋಡಬಹುದಾಗಿದ್ದು, ಈ ಸ್ಮಾರ್ಟ್ ಫೋನ್ ಮುಖಾಂತರ ಗ್ರಾಹಕ ಹೆಚ್ಚು ಕಂಫರ್ಟ್ ಅನುಭವಿಸಬಹುದಾಗಿದೆ.


Click it and Unblock the Notifications








