ಹೊಚ್ಚ ಹೊಸ ಎಂಜಿನ್‌ನೊಂದಿಗೆ ಬರ್ತಿದೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು

Written By:

ಈಗಾಗಲೇ ಮಾರಾಟಗೊಳ್ಳುತ್ತಿರುವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು ಕಂಪನಿ ಅಭಿವೃದ್ಧಿಪಡಿಸಿರುವ ಹೊಸ 2.0-ಲೀಟರ್ ಡೀಸೆಲ್ ಇಗ್ನೇನಿಯಂ ಎಂಜಿನ್ ಪಡೆದುಕೊಳ್ಳಲಿದೆ.

ಹೊಚ್ಚ ಹೊಸ ಎಂಜಿನ್‌ನೊಂದಿಗೆ ಬರ್ತಿದೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು

ಜಾಗ್ವಾರ್ ಲ್ಯಾಂಡ್ ರೋವರಿನ ಈ ನೂತನ 2.0-ಲೀಟರ್ ಡೀಸೆಲ್ ಇಗ್ನೇನಿಯಂ ಎಂಜಿನ್ ಪಡೆದುಕೊಳ್ಳುತ್ತಿರುವ ಎರಡನೇ ವಾಹನ ಎಂಬ ಹೆಗ್ಗಳಿಕೆಗೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು ಪಾತ್ರವಾಗಿದೆ. ಈ ಹೊಸ ಎಂಜಿನ್ ನೊಂದಿಗೆ ಈ ಕಾರು ಅಂತಾರಾಷ್ಟ್ರೀಯ ಮಟ್ಟದ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.

ಹೊಚ್ಚ ಹೊಸ ಎಂಜಿನ್‌ನೊಂದಿಗೆ ಬರ್ತಿದೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು

2.2-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ ಈ ನವೀನ ಮಾದರಿಯ 2.0-ಲೀಟರ್ ಡೀಸೆಲ್ ಇಗ್ನೇನಿಯಂ ಎಂಜಿನ್ ಅಳವಡಿಸಲಾಗಿದ್ದು, ಉತ್ಕೃಷ್ಟ ಮಟ್ಟದ ಸೇವೆ ನೀಡಲಿದೆ.

ಹೊಚ್ಚ ಹೊಸ ಎಂಜಿನ್‌ನೊಂದಿಗೆ ಬರ್ತಿದೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು

ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿ ಸ್ವತಃ ಅಭಿವೃದ್ಧಿಪಡಿಸಿರುವ 2.0-ಲೀಟರ್ ಡೀಸೆಲ್ ಇಗ್ನೇನಿಯಂ ಎಂಜಿನ್ ನೂತನ ತಂತ್ರಜ್ಞಾನ ಹೊಂದಿದ್ದು, ಹೆಚ್ಚಿನ ಕಾರ್ಯಕ್ಷಮತೆಗೆ ಒತ್ತು ನೀಡಲಾಗಿದೆ.

ಹೊಚ್ಚ ಹೊಸ ಎಂಜಿನ್‌ನೊಂದಿಗೆ ಬರ್ತಿದೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು

ಅಶ್ವಶಕ್ತಿಯ ಆದರದ ಮೇಲೆ ಹೊಸ 2.0-ಲೀಟರ್ ಡೀಸೆಲ್ ಇಗ್ನೇನಿಯಂ ಎಂಜಿನ್ ಬಿಡುಗಡೆಗೊಳ್ಳುತ್ತಿದ್ದು, 149 ಬಿಎಚ್ ಪಿ ಮತ್ತು 179 ಬಿಎಚ್ ಪಿ ಎಂಬ ಎರಡು ರೀತಿಯಲ್ಲಿ ಈ ಕಾರು ಬಿಡುಗಡೆಗೊಳ್ಳಲಿದೆ.

ಹೊಚ್ಚ ಹೊಸ ಎಂಜಿನ್‌ನೊಂದಿಗೆ ಬರ್ತಿದೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು

179 ಬಿಎಚ್ ಪಿ 2.0-ಲೀಟರ್ ಡೀಸೆಲ್ ಇಗ್ನೇನಿಯಂ ಎಂಜಿನ್ ಹೊಂದಿರುವ ಕಾರು ಹೆಚ್ಚು ಬಲಿಷ್ಠವಾಗಿದ್ದು, ಮೇಲ್ಮಟ್ಟದ ಆವೃತ್ತಿ ಎಂದು ಗುರುತಿಸಿಕೊಂಡಿದೆ. ಎಂಜಿನ್ ಬದಲಾವಣೆಯೊಂದಿಗೆ ಬಂದಿರುವ ಈ ಹೊಸ ಲ್ಯಾಂಡ್ ರೋವರ್ 9-ಸ್ಪೀಡ್ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿರಲಿದೆ.

ಹೊಚ್ಚ ಹೊಸ ಎಂಜಿನ್‌ನೊಂದಿಗೆ ಬರ್ತಿದೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು

ಬಲ್ಲ ಮೂಲಗಳ ಪ್ರಕಾರ ಈ 2.0-ಲೀಟರ್ ಡೀಸೆಲ್ ಇಗ್ನೇನಿಯಂ ಎಂಜಿನ್ ಅಳವಡಿಸಿರುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಆವೃತಿ ಇದೇ ವರ್ಷದ ಏಪ್ರಿಲ್ ಅಂತ್ಯಕ್ಕೆ ಬಿಡುಗಡೆಗೊಳ್ಳಲಿದೆ.

ಹೊಚ್ಚ ಹೊಸ ಎಂಜಿನ್‌ನೊಂದಿಗೆ ಬರ್ತಿದೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು

ಈ ಹೊಸ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಆವೃತಿ ತನ್ನ ಪ್ರತಿಸ್ಪರ್ದಿಗಳಾದ ಮರ್ಸಿಡೀಸ್ ಬೆಂಜ್ ಕಂಪನಿಯ ಜಿಎಲ್ ಸಿ ಮತ್ತು ಬಿಎಂಡಬ್ಲ್ಯೂ ಎಕ್ಸ್3 ಕಾರುಗಳೊಂದಿಗೆ ಪೈಪೋಟಿ ನೆಡೆಸಿ ಗ್ರಾಹಕರನ್ನು ಮೆಚ್ಚಿಸಲು ಹಣಿಯಾಗಿದೆ.

ಹೊಚ್ಚ ಹೊಸ ರೇಂಜ್ ರೋವರ್ ವೇಲರ್ ಕಾರಿನ ಚಿತ್ರಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ...

English summary
The Land Rover Discovery Sport will be powered by the new in-house developed 2.0-litre Ingenium diesel engine and will come in two different states of tune - 149bhp and 179bhp.
Story first published: Friday, March 3, 2017, 12:39 [IST]
Please Wait while comments are loading...

Latest Photos