ಹೊಸ ಮಾದರಿಯ ಟ್ರ್ಯಾಕ್ ಸ್ಟಾರ್ ಟ್ರಾಕ್ಟರ್ ಬಿಡುಗಡೆ ಮಾಡಿದ ಮಹೀಂದ್ರಾ

Written By:

ಸುಧಾರಿತ ಕೃಷಿ ಸಲಕರಣೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿರುವ ಮಹೀಂದ್ರಾ ಸಂಸ್ಥೆಯು ಹೊಸ ಮಾದರಿಯ ಟ್ರ್ಯಾಕ್ ಸ್ಟಾರ್ ಎಂಬ ಟ್ರಾಕ್ಟರ್ ಅನ್ನು ಬಿಡುಗಡೆಗೊಳಿಸಿದ್ದು, ಹೊಸ ಮಾದರಿಯ ತಾಂತ್ರಿಕ ಅಂಶಗಳು ಇಲ್ಲಿವೆ.

ಹೊಸ ಮಾದರಿಯ ಟ್ರ್ಯಾಕ್ ಸ್ಟಾರ್ ಟ್ರಾಕ್ಟರ್ ಬಿಡುಗಡೆ ಮಾಡಿದ ಮಹೀಂದ್ರಾ

ಕೃಷಿ ಮತ್ತು ವಾಣಿಜ್ಯ ಚಟುವಟಿಕೆಗಳಿಗಾಗಿ ಟ್ರಾಕ್ಟರ್ ಖರೀದಿ ಪ್ರತಿಕ್ರಿಯೆ ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆ ಟ್ರಾಕ್ಟರ್ ನಿರ್ಮಾಣದ ಮೇಲೆ ವಿಶೇಷ ಗಮನಹರಿಸಿರುವ ಮಹೀಂದ್ರಾ ಟ್ರಾಕ್ಟರ್ ಲಿಮಿಟೆಡ್ ವಿಭಾಗವು ಟ್ರ್ಯಾಕ್ ಸ್ಟಾರ್ ಅನ್ನುವ ಹೊಸ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ.

ಹೊಸ ಮಾದರಿಯ ಟ್ರ್ಯಾಕ್ ಸ್ಟಾರ್ ಟ್ರಾಕ್ಟರ್ ಬಿಡುಗಡೆ ಮಾಡಿದ ಮಹೀಂದ್ರಾ

ದೇಶಾದ್ಯಂತ ಕೃಷಿ ಯಂತ್ರಗಳ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಗ್ರಾಹಕರ ವಿಶಿಷ್ಟವಾದ ಮೌಲ್ಯ ಪ್ರತಿಪಾದನೆಯನ್ನು ಒದಗಿಸುವುದು ದೃಷ್ಠಿಯಿಂದ ಹೊಸ ಬ್ರ್ಯಾಂಡ್ ಅನ್ನು ಪರಿಚಯಿಸಲಾಗಿದೆ.

ಹೊಸ ಮಾದರಿಯ ಟ್ರ್ಯಾಕ್ ಸ್ಟಾರ್ ಟ್ರಾಕ್ಟರ್ ಬಿಡುಗಡೆ ಮಾಡಿದ ಮಹೀಂದ್ರಾ

ಇದೇ ಕಾರಣಕ್ಕೆ ಟ್ರ್ಯಾಕ್ ಸ್ಟಾರ್ ಟ್ರಾಕ್ಟರ್ ಮಾದರಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಹಿ 30 ಹೆಚ್‌ಪಿ ಇಂದ 50 ಹೆಚ್‌ಪಿ ಸಾಮರ್ಥ್ಯ ಎಂಜಿನ್ ಆವೃತ್ತಿಗಳನ್ನು ಅಭಿವೃದ್ಧಿಗೊಳಿಸಲಾಗಿದ್ದು, ಪ್ರತಿಷ್ಠಿತ ಗ್ರೋ ಮ್ಯಾಕ್ಸ್ ಅಗ್ರಿ ಇಕ್ಯುಪ್‌ಮೆಂಟ್ ಲಿಮಿಟೆಡ್ ಸಹಯೋಗದಲ್ಲಿ ಹೊಸ ಟ್ರಾಕ್ಟರ್‌ಗಳು ಮಾರಾಟಗೊಳ್ಳಲಿವೆ.

ಹೊಸ ಮಾದರಿಯ ಟ್ರ್ಯಾಕ್ ಸ್ಟಾರ್ ಟ್ರಾಕ್ಟರ್ ಬಿಡುಗಡೆ ಮಾಡಿದ ಮಹೀಂದ್ರಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಗ್ರೋ ಮ್ಯಾಕ್ಸ್ ಅಗ್ರಿ ಇಕ್ಯುಪ್‌ಮೆಂಟ್ ಲಿಮಿಟೆಡ್ ಸಂಸ್ಥೆಯು ಕೃಷಿ ಉತ್ಪನ್ನ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಹೊಸ ಬ್ರಾಂಡ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಮಹೀಂದ್ರಾ ಜೊತೆ ಕೈ ಜೋಡಿಸಿದೆ.

ಹೊಸ ಮಾದರಿಯ ಟ್ರ್ಯಾಕ್ ಸ್ಟಾರ್ ಟ್ರಾಕ್ಟರ್ ಬಿಡುಗಡೆ ಮಾಡಿದ ಮಹೀಂದ್ರಾ

ಈ ಬಗ್ಗೆ ಮಾತನಾಡಿರುವ ಫಾರ್ಮ್ ಎಂಪ್ಲಾಯ್ಮೆಂಟ್ ಸೆಕ್ಟರ್, ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ರಾಜೇಶ್ ಜೆಜುರಿಕರ್, "ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸುವಂತೆ ಅನುವು ಮಾಡಿಕೊಡುವ ನಮ್ಮ ಹೊಸ ಉತ್ಪನ್ನಗಳು ಸಹಕಾರಿಯಾಗಲಿದ್ದು, ಹೆಚ್ಚಿನ ಕಾರ್ಯಕ್ಷಮತೆಯಿಂದಾಗಿ ಹೆಚ್ಚಿನ ವಿಶ್ವಾಸ ಹೊಂದಲಿವೆ' ಎಂದಿದ್ದಾರೆ.

ಹೊಸ ಮಾದರಿಯ ಟ್ರ್ಯಾಕ್ ಸ್ಟಾರ್ ಟ್ರಾಕ್ಟರ್ ಬಿಡುಗಡೆ ಮಾಡಿದ ಮಹೀಂದ್ರಾ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ಸಣ್ಣ ಗಾತ್ರದ ಜಿವೊ ಟ್ರಾಕ್ಟರ್ ಮಾದರಿಗಳನ್ನು ಬಿಡುಗಡೆ ಮಾಡಿದ್ದ ಮಹೀಂದ್ರಾ ಸಂಸ್ಥೆಯು ಇದೀಗ ಟ್ರ್ಯಾಕ್ಟ್ ಸ್ಟಾರ್ ಬಿಡುಗಡೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಟ್ರ್ಯಾಕ್ಟ್ ಸ್ಟಾರ್‌ಗಳು ನಿಮ್ಮ ಹತ್ತಿರದ ಗ್ರೋಮಾಕ್ಸ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

English summary
Read in Kannada about Mahindra To Launch Third Tractor Brand, Trackstar.
Story first published: Wednesday, August 30, 2017, 11:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark