ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಭಾರತದಲ್ಲಿ ಬಿಡುಗಡೆ

Written By:

ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಭಾರತದಲ್ಲಿ ಬಿಡುಗಡೆಯಾಗಿದೆ. ಪೆಟ್ರೋಲ್ ಚಾಲಿತ ಮಹೀಂದ್ರಾ ಎಕ್ಸ್‌ಯುವಿ 500 ಎಸ್‌ಯುವಿ ಕಾರು ಭಾರತದಲ್ಲಿ ರೂ.15.49 ಲಕ್ಷ ಎಕ್ಸ್ ಶೋರೂಂ(ದೆಹಲಿ) ಬೆಲೆ ಪಡೆದುಕೊಂಡಿದೆ.

ಬಹುನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಭಾರತದಲ್ಲಿ ಬಿಡುಗಡೆ

ಹೊಚ್ಚ ಹೊಸ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಮಾದರಿಯು ಏಕೈಕ ರೂಪಾಂತರದಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಜಪಾನ್ ಎಐಎಸ್ಐಎನ್ ನಿರ್ಮಾಣದ 6-ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ ಹಾಗು ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತ್ತಿಯನ್ನು 'ಜಿ ಎಟಿ' ಮಾದರಿ ಎಂದು ಹೆಸರಿಸಲಾಗಿದೆ.

ಬಹುನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಭಾರತದಲ್ಲಿ ಬಿಡುಗಡೆ

ಪೆಟ್ರೋಲ್ ಎಂಜಿನ್ ಪಡೆದಿರುವ ಈ ಬಲಿಷ್ಠ ಎಸ್‌ಯುವಿ ಕಾರು 138 ಬಿಎಚ್‌ಪಿ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸುವ ಮತ್ತು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ 2.2-ಲೀಟರ್ ಎಂಹಾಕ್ ಪೆಟ್ರೋಲ್ ಎಂಜಿನ್ ಆಧರಿಸಿದೆ.

ಬಹುನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಭಾರತದಲ್ಲಿ ಬಿಡುಗಡೆ

ಈ ಕಾರಿನಲ್ಲಿ 6 ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಾಗಿದೆ. ಈ ಗೇರ್‌ಬಾಕ್ಸ್ ಕ್ರೀಪ್ ಫಂಕ್ಷನ್ ಮತ್ತು ಮ್ಯಾನ್ಯುವಲ್ ಮೋಡ್ ಆಯ್ಕೆಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಬಹುನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಭಾರತದಲ್ಲಿ ಬಿಡುಗಡೆ

ಮಾರುಕಟ್ಟೆಯಲ್ಲಿ ಪ್ರಸ್ತುತ ಲಭ್ಯವಿರುವ ಡೀಸೆಲ್ ಮಾದರಿಯಂತೆಯೇ ಎಕ್ಸ್‌ಯುವಿ 500 ಪೆಟ್ರೋಲ್ ಮಾದರಿಯು ಕಾಣಲಿದೆ. ಒಳಭಾಗದಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಒಆರ್‌ವಿಎಂ ಮೇಲೆ ಲೋಗೊ ಪ್ರೊಜೆಕ್ಷನ್ ಜೊತೆ ಪೆಡಲ್ ಲ್ಯಾಂಪ್‌ಗಳು , ಸ್ಥಿರ ಬೆಂಡಿಂಗ್ ದೀಪಗಳು, ಆಂಡ್ರಾಯ್ಡ್ ಆಟೋನಂತಹ ಸಂಪರ್ಕ ವೈಶಿಷ್ಟ್ಯಗಳನ್ನು ಪಡೆದಿದೆ.

ಬಹುನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಭಾರತದಲ್ಲಿ ಬಿಡುಗಡೆ

ಹೆಚ್ಚುವರಿಯಾಗಿ, ಸಂಪೂರ್ಣವಾಗಿ ಸ್ವಯಂಚಾಲಿತ ತಾಪಮಾನ ನಿಯಂತ್ರಣ, ಕ್ರೂಸ್ ನಿಯಂತ್ರಣ, ಮಳೆ ಸಂವೇದಕ ವೈಪರ್‌ಗಳು, ಬೆಳಕಿನ ಸಂವೇದಕ ಹೆಡ್‌ಲ್ಯಾಂಪ್‌ಗಳು, ಕೀಲಿಕೈ ಇಲ್ಲದ ಒಳಗೆ ಪ್ರವೇಶ, 8 ರೀತಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟು ಹಾಗು ಮುಂತಾದ ಸೌಲಭ್ಯ ಅಳವಡಿಸಲಾಗಿದೆ.

ಬಹುನಿರೀಕ್ಷಿತ ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತಿ ಭಾರತದಲ್ಲಿ ಬಿಡುಗಡೆ

ಸುರಕ್ಷತೆ ವೈಶಿಷ್ಟ್ಯಗಳನ್ನು ಕುರಿತಂತೆ, ಮಹೀಂದ್ರಾ ಎಕ್ಸ್‌ಯುವಿ 500 ಪೆಟ್ರೋಲ್ ಆವೃತ್ತಿಯು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಇಎಸ್‌ಪಿ ರೋಲ್ಓವರ್ ತಗ್ಗಿಸುವಿಕೆ, ಎಬಿಎಸ್ ಇಬಿಡಿ ಮತ್ತು ಎಮರ್ಜೆನ್ಸಿ ಕರೆಗಳಂತಹ ಆಯ್ಕೆಗಳನ್ನು ನೀಡಲಾಗಿದೆ.

English summary
Read in Kannada about Mahindra XUV500 Petrol Launched In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark