ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್. ಯಾರು ಹಿತವರು ಈ ಇಬ್ಬರೊಳಗೆ ?

Written By:

ಈಗಲೂ ಸಹ ಬಹಳಷ್ಟು ಮಂದಿಗೆ ಕಾರಿನಲ್ಲಿ ಯಾವ ರೀತಿಯ ಗೇರ್ ಬಾಕ್ಸ್ ಹೊಂದಿದ್ದರೆ ಹೆಚ್ಚು ಅನುಕೂಲ ಎಂಬುದರ ಬಗ್ಗೆ ಹೆಚ್ಚಿನ ಗೊಂದಲಗಳಿವೆ. ಎರಡೂ ರೀತಿಯ ಗೇರ್ ಬಾಕ್ಸ್‌ಗಳಲ್ಲಿ ತಮ್ಮದೇ ರೀತಿಯ ಅನುಕೂಲಗಳಿದ್ದು, ಯಾವ ಗೇರ್ ಬಾಕ್ಸ್‌ನಿಂದ ಯಾವೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಸುವ ಪುಟ್ಟ ಪ್ರಯತ್ನ ಇಲ್ಲಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಸ್ವಯಂಚಾಲಿತ ಗೇರ್ ಬಾಕ್ಸ್ :

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಹೆಸರು ಎನ್ನಬಹುದು. ಕಾರು ಖರೀದಿಸುವ ಹೆಚ್ಚಿನ ಗ್ರಾಹಕರು ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿರುವ ಕಾರುಗಳ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ. ಮಾನ್ಯುಯಲ್ ಗೇರ್ ಬಾಕ್ಸ್‌ನಲ್ಲಿ ಇಲ್ಲದೆ ಇರುವಂತಹ ಬಹಳಷ್ಟು ಪ್ರಯೋಜನಗಳನ್ನು ಸ್ವಯಂಚಾಲಿತ ಗೇರ್ ಬಾಕ್ಸ್ ಪಡೆದುಕೊಂಡಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

1. ಬಳಕೆಗೆ ಸುಲಭವಾಗಿದೆ

ಗೇರ್ ಮತ್ತು ಕ್ಲಚ್ ಉಪಯೋಗಿಸಿ ಕಾರು ಓಡಿಸುವುದು ಹೆಚ್ಚಿನ ಜನಕ್ಕೆ ಸುಲಭದ ಕೆಲಸವಾಗಿದ್ದರೂ ಸಹ ಈ ಸ್ವಯಂಚಾಲಿತ ಗೇರ್ ಬಾಕ್ಸ್ ಹೆಚ್ಚು ಆರಾಮದಾಯಕವೆನ್ನಿಸುತ್ತದೆ. ಇನ್ನು ಕಾರಿನ ಬಗ್ಗೆ ಎಳ್ಳಷ್ಟೂ ಜ್ಞಾನ ಇಲ್ಲದೆ ಇರುವವರು ಕಡಿಮೆ ಸಮಯದಲ್ಲಿ ಕ್ಯಾರಿನ್ನು ಕಲಿತು ಓಡಿಸಬಹುದಾಗಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಕಲಿಕೆಯ ನಂತರ ಸ್ವತಂತ್ರವಾಗಿ ಮತ್ತು ಆರಾಮದಾಯಕ ಪ್ರಯಾಣ ನೆಡೆಸಬಹುದಾಗಿದ್ದು, ವಾಹನ ನಿಯಂತ್ರಿಸುವ ಕ್ರಮ ಹೆಚ್ಚು ಸುಲಭ ಎನ್ನಿಸಲಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

2. ಹೆಚ್ಚು ಸುರಕ್ಷಿತ

ಕಾರು ಓಡಿಸುವ ಸಂದರ್ಭದಲ್ಲಿ ಎರಡೂ ಕೈಗಳು ಸ್ಟೇರಿಂಗ್ ಹಿಡಿದುಕೊಂಡರೆ ಹೆಚ್ಚು ಸುರಕ್ಷಿ ಎನ್ನುವುದು ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಬಹಳಷ್ಟು ಸಂದರ್ಭಗಳಲ್ಲಿ ಇದೆ ಕಾರಣಕ್ಕೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಸ್ವಯಂಚಾಲಿತ ಕಾರುಗಳಲ್ಲಿ ಗೇರ್ ಕಡೆ ಗಮನ ಕೊಡಬೇಕಾದ ಅನಿವಾರ್ಯತೆ ಇಲ್ಲದೆ ಇರುವುದರಿಂದ, ಒಂದು ಕೈಯಲ್ಲಿ ಗೇರ್ ಹಿಡಿದುಕೊಳ್ಳುವುದನ್ನು ನಿಲ್ಲಿಸಿ ಎರಡೂ ಕೈಗಳಿಂದ ಕಾರು ಓಡಿಸಬಹುದಾಗಿದ್ದು, ಇದರಿಂದಾಗಿ ಚಾಲಕ ಕಾರಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಬಹುದಾಗಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

3. ಗುಡ್ಡಗಾಡಿನ ಪ್ರದೇಶಗಳಿಗೆ ಸೂಕ್ತ

ಕಾರು ಚಾಲನೆಯಲ್ಲಿ ನೀವು ಕಡಿಮೆ ಅನುಭವ ಹೊಂದಿದ್ದರೆ ಖಂಡಿತ ಈ ಸ್ವಯಂ ಚಾಲಿತ ಗೇರ್ ಬಾಕ್ಸ್ ಸೂಕ್ತ ಎನ್ನಬಹುದು. ಅದರಲ್ಲಿಯೂ ನೀವು ಅತ್ಯಂತ ಕಠಿಣ ರಸ್ತೆಗಳಲ್ಲಿ ಸಂಚರಿಸುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಸ್ವಯಂಚಾಲಿತ ಗೇರ್ ಬಾಕ್ಸ್ ಕಾರು ಉಪಯೋಗಿಸುವುದು ಒಳಿತು.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ಗೇರ್ ಬಾಕ್ಸ್ ಇಂತಹ ಗುಡ್ಡಗಾಡು ಪ್ರದೇಶದಲ್ಲಿಯೂ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡಲಿದ್ದು, ಹ್ಯಾಂಡ್ ಬ್ರೇಕ್ ಕೈ ಕೊಟ್ಟುತದೆ ಎನ್ನುವ ಚಿಂತೆ ಇರುವುದಿಲ್ಲ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

4. ಹಠಾತ್ ನಿಲ್ಲುವಿಕೆ

ಹೆಚ್ಚಿನ ಜನಕ್ಕೆ ಮೊದಲ ಗೇರ್‌ನಲ್ಲಿ ಎಷ್ಟೋ ಬಾರಿ ಕಾರನ್ನು ಚಾಲನೆ ಮಾಡಲು ತಡವರಿಸುತ್ತಾರೆ. ಇಂತಹ ತೊಂದರೆಗಳು ಸ್ವಯಂ ಚಾಲಿತ ಗೇರ್ ಬಾಕ್ಸ್ ಹೊಂದಿರುವ ಕಾರುಗಳಲ್ಲಿ ಇರುವುದಿಲ್ಲ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಆಕಸ್ಮಿಕವಾಗಿ ಟ್ರಾಫಿಕ್ ಸಿಗ್ನಲಿನಲ್ಲಿ ಕಾರು ಓಡಿಸುತ್ತಿರುವ ವ್ಯಕ್ತಿ ಕಾರನ್ನು ಹಠಾತ್ ನಿಲ್ಲಿಸಿದರೆ ಇಂತಹ ಮುಜುಗರಕ್ಕೆ ಒಳಗಾಗುತ್ತಾರೆ ಎಂದು ಒಮ್ಮೆ ಊಹಿಸಿ. ಸ್ವಯಂಚಾಲಿತ ಗೇರ್ ಬಾಕ್ಸ್‌ನಲ್ಲಿ ಇಂತಹ ತೊಂದರೆ ಖಂಡಿತ ಕಾಣಿಸುವುದಿಲ್ಲ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

5. ಟ್ರಾಫಿಕ್ ದಟ್ಟಣೆಯಲ್ಲಿ ಹೆಚ್ಚು ಉಪಯುಕ್ತ

ಅತಿ ಹೆಚ್ಚು ಟ್ರಾಫಿಕ್‌ನಲ್ಲಿ ಪ್ರತಿಯೊಬ್ಬ ಕಾರು ಚಾಲಕನ್ನು ದೇವರೇ ಕಾಪಾಡಬೇಕು. ಟ್ರಾಫಿಕ್ ದಟ್ಟಣೆ ಹೆಚ್ಚಿಗೆ ಇರುವ ಸಂದರ್ಭದಲ್ಲಿ ಕಾರನ್ನು ಸ್ಟಾರ್ಟ್ ಮಾಡುವುದು, ಆಕ್ಸಿಲರೇಟರ್ ಒತ್ತುವುದು, ಕಡಿಮೆ ಮಾಡುವುದು ಮತ್ತು ಗೇರ್ ಬದಲಾವಣೆ ಮಾಡುವುದು ಎಲ್ಲವು ದುಸ್ಥಿರ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಆದರೆ, ಇಂತಹ ಟ್ರಾಫಿಕ್ ದಟ್ಟಣೆ ಇದ್ದರೂ ಸಹ ಸ್ವಯಂಚಾಲಿತ ಗೇರ್ ಬಾಕ್ಸ್ ಇದ್ದರೆ ಒಂದೇ ಪೆಡಲ್ ಒತ್ತುವ ಮೂಲಕ ಪ್ರತಿಯೊಂದನ್ನು ನಾವು ನಿರ್ವಹಿಸಬಹುದಾಗಿದ್ದು, ಇದರಿಂದಾಗಿ ಹೆಚ್ಚಿನ ಶ್ರಮ ತಗ್ಗಲಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಮಾನ್ಯುಯಲ್ ಗೇರ್ ಬಾಕ್ಸ್.

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಕಾರಿನ ಆಂತರಿಕ ಕಾರ್ಯದ ಬಗ್ಗೆ ಯಾರು ಅತಿ ಹೆಚ್ಚು ಒಲವು ಒಂದಿರುತ್ತಾರೋ ಅವರು ಮಾನ್ಯುಯಲ್ ಕಾರನ್ನು ಹೆಚ್ಚು ಇಷ್ಟಪಡುತ್ತಾರೆ. ಹೌದು, ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿರುವ ಕಾರನ್ನು ಹೆಚ್ಚು ಅನುಭವ ಇರುವ ಕಾರು ಮಾಲೀಕರು ಇಷ್ಟ ಪಡುವ ಸಂಖ್ಯೆ ಕಡಿಮೆ ಎನ್ನಬಹುದು.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

1. ದುಬಾರಿ ಅಲ್ಲವೇ ಅಲ್ಲ

ನೀವೇನಾದರೂ ಕಡಿಮೆ ಹಣದಲ್ಲಿ ಕಾರು ಖರೀದಿಗೆ ಮುಂದಾಗಿದ್ದಾರೆ ನಿಮಗೆ ಖಂಡಿತ ಗೊಂದಲ ಉಂಟಾಗುವುದೇ ಇಲ್ಲ, ಏಕೆಂದರೆ ಮಾನ್ಯುಯಲ್ ಗೇರ್ ಬಾಕ್ಸ್ ಹೊಂದಿರವ ಕಾರು ಅತ್ಯಂತ ಕಡಿಮೆ ದರ ಹೊಂದಿದ್ದು, ಸಾಮಾನ್ಯ ನಾಗರಿಕ ಯಾವುದೇ ತೊಂದರೆ ಇಲ್ಲದೆ ಕೊಂಡುಕೊಳ್ಳಬಹುದಾಗಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಸಾಮಾನ್ಯವಾಗಿ ಸ್ವಯಂಚಾಲಿತ ಗೇರ್ ಬಾಕ್ಸ್ ಹೊಂದಿರುವ ಕಾರುಗಳಿಗೆ ಹೋಲಿಸಿದರೆ ಮಾನ್ಯುಯಲ್ ಕಾರಿನ ಬೆಲೆ ಅಂದಾಜು ಲೆಕ್ಕ ಕನಿಷ್ಠ 1 ಲಕ್ಷ ದರ ಕಮ್ಮಿ ಇರಲಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

2. ಅಗ್ಗದ ನಿರ್ವಹಣೆ

ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನಲ್ಲಿ ಅತ್ಯಂತ ಹೆಚ್ಚಿನ ತಂತ್ರಜ್ಞಾನ ಒಳಗೊಂಡಿದ್ದು, ಇದರಿಂದಾಗಿ ಹೆಚ್ಚಿನ ಮಟ್ಟದ ನಿರ್ವಹಣಾ ವೆಚ್ಚ ಇರಲಿದೆ. ಆದರೆ ಮಾನ್ಯುಯಲ್ ಗೇರ್ ಬಾಕ್ಸ್ ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚ ಬೇಡಲಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಸಾಮಾನ್ಯವಾಗಿ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಕಾರುಗಳು ಅತಿ ಕಡಿಮೆ ನಿರ್ವಹಣೆ ಅಗತ್ಯವಿರುವ ಕಾರಣ, ದುರಸ್ತಿ ಮಾಡಬೇಕಾದ ಸಮಯದಲ್ಲಿ ಹೆಚ್ಚು ಖರ್ಚು ತಗುಲುವುದಿಲ್ಲ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

3. ಉತ್ತಮ ಇಂಧನ ದಕ್ಷತೆಯನ್ನು

ಆಟೋಮ್ಯಾಟಿಕ್ ಗೇರ್ ಬಾಕ್ಸ್‌ ಕಾರುಗಳಿಗೆ ಹೋಲಿಸಿದರೆ, ಮ್ಯಾನ್ಯುವಲ್ ಗೇರ್ ಬಾಕ್ಸ್ ಎಂಜಿನ್ ಹೊಂದಿರುವ ಕಾರುಗಳು ಕಡಿಮೆ ಕ್ಲಿಷ್ಟತೆ ಹೊಂದಿದ್ದು, ಇದರಿಂದಾಗಿ ಕಡಿಮೆ ತೂಕ ಹೊಂದಿರಲಿವೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಇದರಿಂದಾಗಿ ಮಾನ್ಯುಯಲ್ ಗೇರ್ ಬಾಕ್ಸ್‌ಗಳು ಹೆಚ್ಚಿನ ಇಂಧನ ಕ್ಷಮತೆ ಹೊಂದಿದ್ದು, ಪ್ರತಿ ಲೀಟರ್ ಪೆಟ್ರೋಲಿಗೆ ಸರಿ ಸುಮಾರು 5% ಇಂದ 15% ರಷ್ಟು ಇಂಧನ ವೆಚ್ಚ ಉಳಿಸಬಹುದಾಗಿದೆ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

4. ಕಳ್ಳರ ಕಾಟ ಇರುವುದಿಲ್ಲ

ವಿದೇಶಗಳಲ್ಲಿ ಈಗಾಗಲೇ ಸಂಪೂರ್ಣವಾಗಿ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿರುವ ಕಾರುಗಳು ರಸ್ತೆಗಿಳಿದಿದ್ದು, ಹೆಚ್ಚಿನ ಜನತೆಗೆ ಮಾನ್ಯುಯಲ್ ಗೇರ್ ಬಾಕ್ಸ್ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ ಎನ್ನುವುದು ಸತ್ಯ ಸಂಗತಿ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಇದರಿಂದಾಗಿ ಕಳ್ಳರ ಗುಂಪು ಹೆಚ್ಚಿನ ಒಲವನ್ನು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಕಾರುಗಳ ಕಡೆ ತೋರಿಸುವುದರಿಂದ ಮಾನ್ಯುಯಲ್ ಕಾರಿನ ಕಳ್ಳತನ ಕಡಿಮೆ ಅಗಲಿರುವುದನ್ನು ನಾವು ಒಪ್ಪಲೇ ಬೇಕು.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

5. ಉತ್ತಮ ನಿಯಂತ್ರಣ

ಸ್ವಯಂಚಾಲಿತ ಕಾರುಗಳು ಯಾವುದೇ ಪರಿಸ್ಥಿತಿಯಲ್ಲಿ ಉತ್ತಮ ರೀತಿಯಲ್ಲಿ ನಿರ್ವಹಣೆ ತಂತ್ರಜ್ಞಾನ ಹೊಂದಿದ್ದು, ಆದರೂ ಸಹ ಕೆಲವು ಸಮಯದಲ್ಲಿ ತಾಂತ್ರಿಕ ತೊಂದರೆ ಉಂಟಾದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಮಾನ್ಯುಯಲ್ V/S ಆಟೋಮ್ಯಾಟಿಕ್ ಗೇರ್ ಬಾಕ್ಸ್... ಯಾವುದು ಉತ್ತಮ ?

ಮಾನ್ಯುಯಲ್ ಗೇರ್ ಬಾಕ್ಸ್ ಕಾರು ಚಾಲಕರು ವಾಹನದ ಮೇಲೆ ಹೆಚ್ಚಿನ ಹಿಡಿತವನ್ನು ಹೊಂದಿರಲಿದ್ದು, ಎಂಜಿನ್ ಶಕ್ತಿ ಕ್ಷೀಣಿಸಿ ತಮಗೆ ಬೇಕಾದ ರೀತಿಯಲ್ಲಿ ಕಾರು ನಿರ್ವಹಣೆ ಮಾಡಬಹುದಾಗಿದೆ.

Read more on ಗೇರ್ gear
English summary
Read in Kannada about manual v/s automatic transmission gearbox advantages and disadvantages. Get more details about manual v/s automatic transmission difference and more.
Story first published: Tuesday, April 18, 2017, 20:48 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more