ದೇಶದ ಅಗ್ರ ಆಟೋಮ್ಯಾಟಿಕ್ ಹ್ಯಾಚ್‌ಬ್ಯಾಕ್ ಕಾರುಗಳು

Written By:

ನಾವು ಈಗಾಗಲೇ ಬಜೆಟ್ ಡೀಸೆಲ್ ಹಾಗೂ ಸೆಡಾನ್ ಕಾರುಗಳ ಬಗ್ಗೆ ವಿಸೃತವಾದ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಇದೀಗ ದೇಶದಲ್ಲಿ ಲಭ್ಯವಿರುವ ಪ್ರಮುಖ ಆಟೋಮ್ಯಾಟಿಕ್ ಹ್ಯಾಚ್‌ಬ್ಯಾಕ್ ಕಾರುಗಳ ಬಗ್ಗೆ ಚರ್ಚಿಸಲಿದ್ದೇವೆ.

ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ದೇಶದ ವಾಹನ ಮಾರುಕಟ್ಟೆ ವೃದ್ಧಿಯಲ್ಲಿ ಆಟೋಮ್ಯಾಟಿಕ್ ಕಾರುಗಳ ಪಾತ್ರ ಪ್ರಮುಖವಾಗಿದೆ. ಅಷ್ಟಕ್ಕೂ ಆಟೋಮ್ಯಾಟಿಕ್ ಕಾರುಗಳೆಂದರೇನು? ಇಲ್ಲಿದೆ ನೋಡಿ...

ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅಥವಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದ ಕಾರುಗಳು ಮುಂದಕ್ಕೆ ಚಲಿಸುವುದಕ್ಕೆ ಅನುಸಾರವಾಗಿ ಅದರಲ್ಲಿರುವ ಗೇರ್ ನಿಷ್ಫತ್ತಿ ಸ್ವಯಂಚಾಲಿತವಾಗಿ ಬದಲಾವಣೆಯಾಗುತ್ತದೆ. ಈ ಮೂಲಕ ಮ್ಯಾನುವಲ್ ಆಗಿ ಗೇರ್ ಬದಲಾಯಿಸುವ ಸಂದರ್ಭದಲ್ಲಿ ಎದುರಾಗುವ ತೊಂದರೆಗಳನ್ನು ಚಾಲಕರು ತಪ್ಪಿಸಬಹುದು.

ಅಂದ ಹಾಗೆ ಬಹುತೇಕ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಒಂದು ನಿರ್ದಿಷ್ಟ ಗೇರ್ ನಿಷ್ಫತ್ತಿ ಹೊಂದಿರುತ್ತದೆ. ಸಾಮಾನ್ಯವಾಗಿ ಆಟೋಮ್ಯಾಟಿಕ್ ಗೇರ್‌ಗಳಲ್ಲಿ ಐದು ವಿಧಗಳಿರುತ್ತದೆ. ಅವುಗಳೆಂದರೆ -

 • ಪಾರ್ಕ್ (P),
 • ರಿವರ್ಸ್ (R),
 • ನ್ಯೂಟ್ರಲ್ ಅಥವಾ ನೊ ಗೇರ್ (N),
 • ಡ್ರೈವ್ (D) ಮತ್ತು
 • ಲೊ (L)

ಪ್ರಮುಖವಾಗಿಯೂ ನಗರ ಪ್ರದೇಶದ ವಾಹನ ದಟ್ಟಣೆಯಿಂದ ಪಾರಾಗಲು ಹಾಗೆಯೇ ಯಾವುದೇ ಒತ್ತಡ ರಹಿತ ಪಯಣಕ್ಕಾಗಿ ಆಟೋಮ್ಯಾಟಿಕ್ ಕಾರುಗಳು ಉತ್ತಮ ಆಯ್ಕೆಯಾಗಿರಲಿದೆ. ಹಾಗಿದ್ದರೆ ಬನ್ನಿ ದೇಶದಲ್ಲಿ ಲಭ್ಯವಾಗುವ ಪ್ರಮುಖ ಹ್ಯಾಚ್‌ಬ್ಯಾಕ್ ಆಟೋಮ್ಯಾಟಿಕ್ ಕಾರುಗಳ ಬಗ್ಗೆ ಮಾತಡೋಣವೇ...

ದೇಶದ ಅಗ್ರ ಆಟೋಮ್ಯಾಟಿಕ್ ಹ್ಯಾಚ್‌ಬ್ಯಾಕ್ ಕಾರುಗಳು

ಇಲ್ಲಿ ಕೊಡಲಾಗಿರುವ ಹ್ಯಾಚ್‌ಬ್ಯಾಕ್ ಆಟೋಮ್ಯಾಟಿಕ್ ಕಾರುಗಳ ದರಗಳನ್ನು ದೆಹಲಿ ಎಕ್ಸ್ ಶೋ ರೂಂ ಆಧಾರದಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಭಾರತ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆ ಪ್ರಕಾರ ಮೈಲೇಜ್ ದಾಖಲಿಸಲಾಗಿದೆ.

ಮಾರುತಿ ಸುಜುಕಿ ರಿಟ್ಜ್

ಮಾರುತಿ ಸುಜುಕಿ ರಿಟ್ಜ್

ಮಾರುತಿ ಸುಜುಕಿ ರಿಟ್ಜ್ ವಿಎಕ್ಸ್‌ಐ ವೆರಿಯಂಟ್‌ನಲ್ಲಿ ಮಾತ್ರ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸೌಲಭ್ಯವಿರುತ್ತದೆ. ಇದರ 1.2 ಲೀಟರ್ ಎಂಜಿನ್ ಮೃದುವಾದ ಚಾಲನೆ ಒದಗಿಸುತ್ತದೆ. ಹಾಗೆಯೇ ಎಬಿಎಸ್, ಇಬಿಡಿ, ಪವರ್ ವಿಂಡೋ, ಟಿಲ್ಟ್ ಸ್ಟೀರಿಂಗ್‌ಗಳಂತ ಸೌಲಭ್ಯಗಳು ಲಭ್ಯವಿರುತ್ತದೆ.

ಮಾರುತಿ ಸುಜುಕಿ ರಿಟ್ಜ್

ಮಾರುತಿ ಸುಜುಕಿ ರಿಟ್ಜ್

 • ದರ: 6.19 ಲಕ್ಷ ರು.
 • ಟ್ರಾನ್ಸ್‌ಮಿಷನ್: 4 ಸ್ಪೀಡ್
 • ಮೈಲೇಜ್: 17.16 kmpl
ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಹ್ಯುಂಡೈ ಗ್ರಾಂಡ್ ಐ10 ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸ್ಟೈಲಿಷ್ ವಿನ್ಯಾಸ ಹಾಗೂ ಹೆಚ್ಚಿನ ಸ್ಥಳಾವಕಾಶ ಪಡೆದಿರುವುದು ಗ್ರಾಂಡ್ ಐ10 ಯಶಸ್ಸಿಗೆ ಕಾರಣವಾಗಿದೆ. ಹಾಗಿದ್ದರೂ ಗ್ರಾಂಡ್ ಐ10 ಆಟೋಮ್ಯಾಟಿಕ್ ಕಾರಿನಲ್ಲಿ ಎಬಿಎಸ್ ಹಾಗೂ ಇಬಿಡಿಗಳಂತಹ ಫೀಚರ್‌ಗಳ ಕೊರತೆ ಕಾಡುತ್ತಿದೆ. ಹೀಗಾಗಿ ರಿಟ್ಜ್‌ಗೆ ಹೋಲಿಸಿದಾಗ ಸ್ವಲ್ಪ ಹಿನ್ನಡೆ ಪಡೆದಿದೆ.

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

 • ದರ: 5.95 ಲಕ್ಷ ರು. (ಸ್ಪೋರ್ಟ್ಜ್), 6.23 ಲಕ್ಷ ರು. (ಆಸ್ಟಾ)
 • ಟ್ರಾನ್ಸ್‌ಮಿಷನ್: 4 ಸ್ಪೀಡ್
 • ಮೈಲೇಜ್: 18.9 kmpl
ಹೋಂಡಾ ಬ್ರಿಯೊ

ಹೋಂಡಾ ಬ್ರಿಯೊ

ನಗರ ಪ್ರದೇಶದ ಆಟೋಮ್ಯಾಟಿಕ್ ಕಾರುಗಳಿಗೆ ಬೇಕಾದ ಎಲ್ಲ ಅಗತ್ಯಗಳನ್ನು ಪೂರೈಸುವಲ್ಲಿ ಹೋಂಡಾ ಬ್ರಿಯೊ ಯಶಸ್ಸನ್ನು ಕಂಡಿದೆ. ಈ ಚೊಕ್ಕದಾದ ಕಾರು ಉತ್ತಮ ಹ್ಯಾಂಡ್ಲಿಂಗ್ ಒದಗಿಸುತ್ತಿದೆ. ಹ್ಯುಂಡೈ ಹಾಗೂ ಮಾರುತಿ ಆಟೋಮ್ಯಾಟಿಕ್ ಕಾರುಗಳಿಗೆ ಹೋಲಿಸಿದರೆ ಇದರಲ್ಲಿ ಐದು ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ. ಅಂದರೆ ಹೆದ್ದಾರಿಯಲ್ಲಿ ಉತ್ತಮ ನಿರ್ವಹಣೆ ನೀಡಲಿದೆ. ಹಾಗೆಯೇ ಎಬಿಎಸ್, ಇಬಿಡಿ ಮತ್ತು ಫ್ರಂಟ್ ಏರ್ ಬ್ಯಾಗ್‌ಗಳಂತಹ ಫೀಚರುಗಳನ್ನು ಪಡೆದಿದೆ.

ಹೋಂಡಾ ಬ್ರಿಯೊ

ಹೋಂಡಾ ಬ್ರಿಯೊ

 • ದರ: 6.12 ಲಕ್ಷ ರು.
 • ಟ್ರಾನ್ಸ್‌ಮಿಷನ್: 5 ಸ್ಪೀಡ್
 • ಮೈಲೇಜ್: 18.9 kmpl
ಹ್ಯುಂಡೈ ಐ20

ಹ್ಯುಂಡೈ ಐ20

ಹ್ಯುಂಡೈನಿಂದ ಆಗಮನವಾಗಿರುವ ಇನ್ನೊಂದು ಆಟೋಮ್ಯಾಟಿಕ್ ಕಾರೆಂದರೆ ಐ20 ಆಗಿದೆ. ಇದು ಟಾಪ್ ಎಂಡ್ ಸ್ಪೋರ್ಟ್ಜ್ ವೆರಿಯಂಟ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಹಾಗಿದ್ದರೂ ದರ ಸ್ವಲ್ಪ ದುಬಾರಿಯಾಗಿರಲಿದೆ. ನಗರ ಪ್ರದೇಶದ ವಾಹನ ದಟ್ಟಣೆಯ ಪ್ರದೇಶದಲ್ಲಿ ಚಾಲಕರ ಆರಾಮದಾಯಕ ಪಯಣಕ್ಕೆ ಹೆಚ್ಚು ಒತ್ತು ಕೊಡುತ್ತದೆ. ಇದು ಕೂಡಾ 4 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಲ್ಲಿ ಆಗಮನವಾಗುತ್ತದೆ.

ಹ್ಯುಂಡೈ ಐ20

ಹ್ಯುಂಡೈ ಐ20

 • ದರ: 7.88 ಲಕ್ಷ ರು.
 • ಟ್ರಾನ್ಸ್‌ಮಿಷನ್: 5 ಸ್ಪೀಡ್
 • ಮೈಲೇಜ್: 15.04 kmpl
ನಿಸ್ಸಾನ್ ಮೈಕ್ರಾ

ನಿಸ್ಸಾನ್ ಮೈಕ್ರಾ

ಚಾಲನೆ, ಹ್ಯಾಂಡ್ಲಿಂಗ್ ಹಾಗೂ ನಗರ ಹಾಗೂ ಹೆದ್ದಾರಿಗಳ ಡ್ರೈವಿಂಗ್ ವಿಚಾರಕ್ಕೆ ಬಂದಾಗ ಹೋಂಡಾ ಬ್ರಿಯೊಗೆ ನಿಕಟ ಪೈಪೋಟಿ ಒಡ್ಡುವಲ್ಲಿ ನಿಸ್ಸಾನ್ ಮೈಕ್ರಾ ಯಶಸ್ಸನ್ನು ಕಂಡಿದೆ. ಅಲ್ಲದೆ ಬ್ರಿಯೊಗಿಂತಲೂ ಹೆಚ್ಚಿನ ಸೌಲಭ್ಯಗಳನ್ನು ಮೈಕ್ರಾ ಒದಗಿಸಲಿದೆ. ಹಾಗೆಯೇ ಬ್ರಿಯೊಗಿಂತಲೂ ಹೆಚ್ಚು ಇಂಟಿರಿಯರ್ ಹಾಗೂ ಲಗ್ಗೇಜ್ ಸ್ಪೇಸ್ ಹೊಂದಿದೆ. ಅಂದ ಹಾಗೆ ನಿಸ್ಸಾನ್ ಮೈಕ್ರಾದಲ್ಲಿ ಸಿವಿಟಿ ಟ್ರಾನ್ಸ್‌ಮಿಷನ್ ಲಗತ್ತಿಸಲಾಗಿರುತ್ತದೆ.

ನಿಸ್ಸಾನ್ ಮೈಕ್ರಾ

ನಿಸ್ಸಾನ್ ಮೈಕ್ರಾ

 • ದರ: 6.49 ಲಕ್ಷ ರು.
 • ಟ್ರಾನ್ಸ್‌ಮಿಷನ್: ಸಿವಿಟಿ (Continuously variable transmission)
 • ಮೈಲೇಜ್: 19.34 kmpl
ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಟಿಎಸ್‌ಐ

ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಟಿಎಸ್‌ಐ

ಪ್ರಶಸ್ತಿ ವಿಜೇತ 1.2 ಲೀಟರ್ ಟರ್ಬೊ ಎಂಜಿನ್‌ನೊಂದಿಗೆ ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ತನ್ನದೇ ಆದ ಸ್ಥಾನಮಾನ ಕಾಪಡಿಕೊಂಡಿದೆ. ಇದು 7 ಸ್ಪೀಡ್ ಡಿಎಸ್‌ಜಿ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ. ಇದು ಹೆದ್ದಾರಿಯಲ್ಲಿ ಪರಿಪೂರ್ಣ ರೈಡಿಂಗ್ ಅನುಭವ ನೀಡಲಿದೆ. ಹಾಗಿದ್ದರೂ ವಾಹನ ದಟ್ಟಣೆಗಳಿಗೆ ಹೇಳಿ ಮಾಡಿಸಿದ ಕಾರಲ್ಲ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಟಿಎಸ್‌ಐ

ಫೋಕ್ಸ್‌ವ್ಯಾಗನ್ ಪೊಲೊ ಜಿಟಿ ಟಿಎಸ್‌ಐ

 • ದರ: 7.99 ಲಕ್ಷ ರು.
 • ಟ್ರಾನ್ಸ್‌ಮಿಷನ್: 7 ಸ್ಪೀಡ್ ಡಿಎಸ್‌ಜಿ
 • ಮೈಲೇಜ್: 17.2 kmpl
ಮಹೀಂದ್ರ ಇ2ಒ

ಮಹೀಂದ್ರ ಇ2ಒ

ನಿಮಗಿದು ತಿಳಿದಿದೆಯೇ? ಪರಿಸರ ಸ್ನೇಹಿ ಮಹೀಂದ್ರ ರೇವಾ ಇ2ಒ ವಿದ್ಯುತ್ ಚಾಲಿತ ಕಾರು ಕೂಡಾ ಆಟೋಮ್ಯಾಟಿಕ್ ವೆರಿಯಂಟ್‌ನಲ್ಲಿ ಲಭ್ಯವಿರುತ್ತದೆ. ದರ ಸ್ವಲ್ಪ ದುಬಾರಿಯಾದರೂ ನಾಲ್ಕು ಜನರಿಗೆ ಆರಾಮವಾಗಿ ಚಲಿಸಬಲ್ಲ ಮಹೀಂದ್ರ ಇ2ಒಗಿಂತ ಉತ್ತಮವಾದ ಇನ್ನೊಂದು ಸಿಟಿ ಕಾರು ನಿಮಗೆ ಸಿಗಲ್ಲ. ಇದರಲ್ಲಿ ಬೂಸ್ಟ್‌ಗಳಂತಹ ಟ್ರಾನ್ಸ್‌ಮಿಷನ್‌ಗಳಿವೆ.

ಮಹೀಂದ್ರ ಇ2ಒ

ಮಹೀಂದ್ರ ಇ2ಒ

 • ದರ: 6.44 ಲಕ್ಷ ರು.
 • ಟ್ರಾನ್ಸ್‌ಮಿಷನ್: ಆಟೋಮ್ಯಾಟಿಕ್
 • ಮೈಲೇಜ್: ಸಂಪೂರ್ಣ ಚಾರ್ಜ್ ಮಾಡಿದ್ದಲ್ಲಿ 100 ಕೀ.ಮೀ. ತನಕ ಚಲಿಸಬಹುದು.
ಅಂತಿಮ ತೀರ್ಪು

ಅಂತಿಮ ತೀರ್ಪು

ಹೋಂಡಾ ಬ್ರಿಯೊ ಅತ್ಯುತ್ತಮ ಆಟೋಮ್ಯಾಟಿಕ್ ಕಾರಾಗಿದೆ. ಇದು ತನ್ನ ಇತರ ಸ್ಪರ್ಧಿಗಳನ್ನು ಮೀರಿಸುವಲ್ಲಿ ಯಶಸ್ಸನ್ನು ಕಂಡಿದೆ. ಹಾಗಿದ್ದರೂ ಪ್ರೀಮಿಯಂ ಸೌಲಭ್ಯವನ್ನು ಪರಿಗಣಿಸಿದಾಗ ಮೈಕ್ರಾ ಎದ್ದು ಕಾಣಿಸುತ್ತದೆ. ನಿಮ್ಮ ಬಜೆಟ್ ಇನ್ನು ಹೆಚ್ಚಿಸಲು ಬಯಸುವಾದ್ದಲ್ಲಿ ಪೊಲೊ ಜಿಟಿ ಮತ್ತು ಹ್ಯುಂಡೈ ಐ20 ಉತ್ತಮ ಆಯ್ಕೆಯಾಗಿರಲಿದೆ. ಅಂತಿಮವಾಗಿ ನಗರ ಪ್ರದೇಶದಲ್ಲಿ ಮಹೀಂದ್ರ ಇ2ಒ ಪರಿಪೂರ್ಣ ಡ್ರೈವಿಂಗ್ ಅನುಭವ ಒದಗಿಸಲಿದೆ.

English summary
Majority of the demand for automatic hatchbacks comes from metropolitan cities for obvious reasons. No clutch means they are hassle free and offer peace of mind in slow moving traffic, not to mention, less strain on your legs.
Story first published: Wednesday, November 20, 2013, 10:42 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more