6 ಲಕ್ಷದೊಳಗೆ ಲಭ್ಯವಾಗುವ ಡೀಸೆಲ್ ಬಜೆಟ್ ಕಾರುಗಳು

ಒಂದೆರಡು ವರ್ಷಗಳ ಹಿಂದಿನ ವರೆಗೂ ಡೀಸೆಲ್ ಕಾರುಗಳ ಮೇಲಿನ ಬೇಡಿಕೆ ಬಹಳಷ್ಟಿತ್ತು. ಡೀಸೆಲ್‌ಗೆ ಸಬ್ಸಿಡಿ ನೀಡುತ್ತಿರುವುದೇ ಇದಕ್ಕಿರುವ ಪ್ರಮುಖ ಕಾರಣವಾಗಿತ್ತು. ಇದರಿಂದಾಗಿ ಬಹುತೇಕ ಎಲ್ಲ ಕಂಪನಿಗಳು ಡೀಸೆಲ್ ಕಾರುಗಳ ಉತ್ಪಾದನೆಗಳಲ್ಲಿ ಗಮನ ಕೇಂದ್ರಿತವಾಗಿತ್ತು. ಆದರೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಡೀಸೆಲ್ ಕಾರುಗಳ ಬೆಲೆ ಪದೇ ಪದೇ ಏರಿಕೆಗೊಳ್ಳುತ್ತಿರುವುದು ಹಿನ್ನಡೆಗೆ ಕಾರಣವಾಗಿದೆ.

ಡೀಸೆಲ್ ಕಾರುಗಳ ಸ್ಪೆಷಾಲಿಟಿ ಏನು..?
ಪೆಟ್ರೋಲ್ ಕಾರುಗಳನ್ನು ಹೋಲಿಸಿದರೆ ಡೀಸೆಲ್ ಕಾರುಗಳು ಹೆಚ್ಚು ಮೈಲೇಜ್ ಹಾಗೂ ನಿರ್ವಹಣೆಯನ್ನು (ಟಾರ್ಕ್) ನೀಡುವಲ್ಲಿ ಸಕ್ಷಮವಾಗಿದೆ. ಆದರೆ ಸರ್ವೀಸ್ ವೆಚ್ಚ ಸ್ವಲ್ಪ ಜಾಸ್ತಿ ಕೂಡಾ ಆಗಿರುತ್ತದೆ. ಸಾಮಾನ್ಯವಾಗಿ ಪೆಟ್ರೋಲ್ ವೆರಿಯಂಟ್‌ಗೆ ಹೋಲಿಸಿದರೆ ಡೀಸೆಲ್ ಕಾರುಗಳು ಸರಿ ಸುಮಾರು ಒಂದು ಲಕ್ಷ ರು.ಗಳಷ್ಟು ದುಬಾರಿಯಾಗಿರುತ್ತದೆ. ಇನ್ನು ಕಡಿಮೆ ಹೊಗೆ ಹೊರಸೂಸುವ ಹೆಚ್ಚು ನಿರ್ವಹಣೆ ನೀಡಬಲ್ಲ ಟರ್ಬೊಚಾರ್ಜರ್ ಹೊಂದಿರುವ ಟರ್ಬೊ ಡೀಸೆಲ್ ಎಂಜಿನ್‌ಗಳು ಹೆಚ್ಚು ಜನಪ್ರಿಯವೆನಿಸಿದೆ.

ಇನ್ನು ಭಾರತೀಯ ಗ್ರಾಹಕರನ್ನು ಪರಿಗಣಿಸಿದಾಗ 4ರಿಂದ 6 ಲಕ್ಷ ರು.ಗಳೊಳಗಿನ ಬಜೆಟ್ ಅತಿ ಪ್ರಾಮುಖ್ಯವೆನಿಸುತ್ತದೆ. ಯಾಕೆಂದರೆ ನೂತನ ಕಾರು ಖರೀದಿಗಾರರು ಸೇರಿದಂತೆ ಮಧ್ಯ ವರ್ಗದ ಕುಟುಂಬದವರು ಇದೇ ರೇಂಜ್‌ನಲ್ಲಿ ನೂತನ ಕಾರು ಖರೀದಿಸಲು ಬಯಸುತ್ತಾರೆ. ಇದನ್ನೇ ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಆರು ಲಕ್ಷ ರು.ಗಳೊಳಗಿನ ಶ್ರೇಷ್ಠ ಡೀಸೆಲ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಪಟ್ಟಿ ಮಾಡಿದ್ದೇವೆ. ನೂತನ ಕಾರು ಖರೀದಿಸಲು ಬಯಸುವ ನಿಮಗೆಲ್ಲರಿಗೂ ಇದು ನೆರವಿಗೆ ಬರುವ ವಿಶ್ವಾಸ ನಮ್ಮದು.

6 ಲಕ್ಷದೊಳಗೆ ಲಭ್ಯವಾಗುವ ಡೀಸೆಲ್ ಬಜೆಟ್ ಕಾರುಗಳು

ನಿಮ್ಮ ಗಮನಕ್ಕೆ, ಇಲ್ಲಿ 6 ಲಕ್ಷ ರು.ಗಳ ಬಜೆಟ್‌ನೊಳಗೆ ಲಭ್ಯವಾಗುವ ಡೀಸೆಲ್ ಹ್ಯಾಚ್‌ಬ್ಯಾಕ್ ಕಾರುಗಳನ್ನು ಪಟ್ಟಿ ಮಾಡಿ ಕೊಡಲಾಗಿದೆ. ಹಾಗೆಯೇ ಮೈಲೇಜ್, ಬೆಲೆ, ವೈಶಿಷ್ಟ್ಯಗಳ ಬಗ್ಗೆ ವಿಶೇಷ ಗಮನ ಕೇಂದ್ರಿಕರಿಸಲಾಗಿದೆ. ಅದೇ ರೀತಿ ಅಂತಹ ನಿರ್ದಿಷ್ಟ ಕಾರುಗಳ ಬಗೆಗಿನ ಧನಾತ್ಮಕ ಹಾಗೂ ಋಣಾತ್ಮಕ ವಿಚಾರಗಳನ್ನು ಪಟ್ಟಿ ಮಾಡುವ ಪ್ರಯತ್ನ ಮಾಡಲಿದೆ. ಭಾರತದ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ಮಾನ್ಯತೆ ನೀಡಿರುವ ಪ್ರಕಾರ ಮೈಲೇಜ್ ಉಲ್ಲೇಖಿಸಲಾಗಿದ್ದು, ಹಾಗೆಯೇ ಬೆಲೆಯನ್ನು ದೆಹಲಿ ಎಕ್ಸ್ ಶೋ ರೂಂಗಳಲ್ಲಿ ಕೊಡಲಾಗಿದೆ.

ಟಾಟಾ ಇಂಡಿಕಾ ವಿ2

ಟಾಟಾ ಇಂಡಿಕಾ ವಿ2

ನಾವು ಬಜೆಟ್ ಡೀಸೆಲ್ ಕಾರುಗಳ ಬಗ್ಗೆ ಚರ್ಚೆ ಮಾಡುವಾಗ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಮಾಡೆಲ್‌ಗಳು ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ರೀತಿಯಲ್ಲಿ ದೇಶದ ಬಜೆಟ್ ಡೀಸೆಲ್ ಕಾರುಗಳ ಅಧಿಪತಿ ಎಂದೇ ಟಾಟಾ ಮೋಟಾರ್ಸ್ ಕಾರುಗಳನ್ನು ಬಣ್ಣಿಸಬಹುದು. ಅಂದ ಹಾಗೆ ನೀವು ಖರೀದಿಸಬಹುದಾದ ಅತಿ ಅಗ್ಗದ ಡೀಸೆಲ್ ಕಾರೆಂದರೆ ಅದುವೇ 'ಟಾಟಾ ಇಂಡಿಕಾ ವಿ2'. ಈ ಎಂಟ್ರಿ ಲೆವೆಲ್ ಕಾರು ಕಡಿಮೆ ನಿರ್ವಹಣಾ ವೆಚ್ಚ ಹೊಂದಿದೆ. ಅಲ್ಲದೆ ಟ್ಯಾಕ್ಸಿ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಯಾಕೆ ಬೇಕು: ಕಡಿಮೆ ನಿರ್ವಹಣಾ ವೆಚ್ಚ, ಹೆಚ್ಚು ಸ್ಥಳಾವಕಾಶ

ಯಾಕೆ ಬೇಡ: ವಿನ್ಯಾಸ ಮತ್ತು ಕಳಪೆ ಗುಣಮಟ್ಟ.

ಟಾಟಾ ಇಂಡಿಕಾ ವಿ2

ಟಾಟಾ ಇಂಡಿಕಾ ವಿ2

ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಟಾಟಾ ಇಂಡಿಕಾ ವಿ2 ಲಭ್ಯವಿರುತ್ತದೆ.

ದರ ಮಾಹಿತಿ: 4.19 ಲಕ್ಷ ರು.ಗಳಿಂದ ಆರಂಭ

ಮೈಲೇಜ್: 18 kmpl

ಟಾಟಾ ಇಂಡಿಕಾ ವಿ2 ವಿಸೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಂಡಿಕಾ ಇವಿ2 (eV2)

ಇಂಡಿಕಾ ಇವಿ2 (eV2)

ವಿನ್ಯಾಸವನ್ನು ಪರಿಗಣಿಸಿದರೆ ವಿ2 ಆವೃತ್ತಿಗೆ ಇವಿ2 ಸಾಮತ್ಯೆ ಪಡೆದುಕೊಂಡಿದೆ. ಹಾಗಿದ್ದರೂ ಇದರ ಬಿಎಸ್4 ಎಂಜಿನ್ ಹೆಚ್ಚು ಶಕ್ತಿ ಉತ್ಪಾದಿಸುವಷ್ಟು ಸಕ್ಷಮವಾಗಿದೆ. ಅಷ್ಟೇ ಅಲ್ಲದೆ ಅತ್ಯಂತ ಹೆಚ್ಚು ಇಂಧನ ದಕ್ಷತೆಯ ಕಾರುಗಳ ಪಟ್ಟಿಯಲ್ಲಿ ಇದು ಕಾಣಿಸಿಕೊಂಡಿದೆ.

ಯಾಕೆ ಬೇಕು: ಕಡಿಮೆ ನಿರ್ವಹಣಾ ವೆಚ್ಚ, ಇಂಧನ ಕ್ಷಮತೆ, ಹೆಚ್ಚು ಸ್ಥಳಾವಕಾಶ

ಯಾಕೆ ಬೇಡ: ಕಳಪೆ ಗುಣಮಟ್ಟ

ಇಂಡಿಕಾ ಇವಿ2

ಇಂಡಿಕಾ ಇವಿ2

ಒಟ್ಟು ಎರಡು ವೆರಿಯಂಟ್‌ಗಳಲ್ಲಿ ಟಾಟಾ ಇಂಡಿಕಾ ಇವಿ2 ಲಭ್ಯ

ದರ ಮಾಹಿತಿ: 4.46 ಲಕ್ಷ ರು.ಗಳಿಂದ ಆರಂಭ

ಮೈಲೇಜ್: 25 kmpl

ಟಾಟಾ ಇಂಡಿಕಾ ಇವಿ2 ವಿಸೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..

ಟಾಟಾ ಇಂಡಿಕಾ ವಿಸ್ಟಾ

ಟಾಟಾ ಇಂಡಿಕಾ ವಿಸ್ಟಾ

ಟಾಟಾ ಮೋಟಾರ್ಸ್ ಪಾಲಿಗೆ ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಕಾಣಿಸಿಕೊಂಡಿರುವ ಟಾಟಾ ವಿಸ್ಟಾ ಹ್ಯಾಚ್‌ಬ್ಯಾಕ್ ಕಾರು, ಇತರೆರಡು ಹ್ಯಾಚ್‌ಬ್ಯಾಕ್ ಆವೃತ್ತಿಗಿಂತ ಭಿನ್ನವಾಗಿದೆ. ಇದು ಹೆಚ್ಚು ಕ್ರೀಡಾತ್ಮಕ ಲುಕ್ ಹೊಂದಿದ್ದು, ಪವರ್‌ಫುಲ್ ಎನಿಸಿಕೊಂಡಿದೆ. ಅಂದ ಹಾಗೆ ಟಾಟಾ ವಿಸ್ಟಾ ಡಿ90, 6 ಲಕ್ಷ ರು.ಗಿಂತಲೂ ದುಬಾರಿಯೆನಿಸುತ್ತಿದ್ದು, ಹಾಗಿದ್ದರೂ ಎಬಿಎಸ್, ಇಬಿಡಿ ಮತ್ತು ಫ್ರಂಟ್ ಏರ್‌ಬ್ಯಾಗ್‌‌ಗಳಂತಹ ಸೌಲಭ್ಯವನ್ನು ಒಳಗೊಂಡಿರುತ್ತದೆ.

ಯಾಕೆ ಬೇಕು: ನಿರ್ವಹಣೆ ಮತ್ತು ಸೌಲಭ್ಯಗಳು, ಸ್ಥಳಾವಕಾಶ

ಯಾಕೆ ಬೇಡ: ಕಳಪೆ ಫಿನಿಶಿಂಗ್, ಟ್ರಾನ್ಸ್‌ಮಿಷನ್ ಮೃದುವಾಗಿಲ್ಲ.

ಟಾಟಾ ಇಂಡಿಕಾ ವಿಸ್ಟಾ

ಟಾಟಾ ಇಂಡಿಕಾ ವಿಸ್ಟಾ

ಆರು ವೆರಿಯಂಟ್‌ಗಳಲ್ಲಿ ಲಭ್ಯ

ದರ ಮಾಹಿತಿ: 4.61 ಲಕ್ಷ ರು.ಗಳಿಂದ ಆರಂಭ.

ಮೈಲೇಜ್: 19.1 kmpl

ಟಾಟಾ ಇಂಡಿಕಾ ವಿಸ್ಟಾ ವಿಸೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

ಷೆವರ್ಲೆ ಬೀಟ್

ಷೆವರ್ಲೆ ಬೀಟ್

ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಬ್ರಾಂಡ್ ಆಗಿರುವ ಷೆವರ್ಲೆ ಬೀಟ್, 936ಸಿಸಿ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತಿದ್ದು, ದೇಶದಲ್ಲಿ ಲಭ್ಯವಾಗುತ್ತಿರುವ ಪೈಕಿ ಅತಿ ಸಣ್ಣ ಡೀಸೆಲ್ ಕಾರೆಂಬ ಮನ್ನಣೆಗೆ ಪಾತ್ರವಾಗಿದೆ. ನಗರ ಪ್ರದೇಶದ ಚಾಲನೆಗೆ ಇಂದೊಂದು ಉತ್ತಮ ಆಯ್ಕೆಯಾಗಿರಲಿದೆ. ಇದರ ಆಕರ್ಷಣೀಯ ವಿನ್ಯಾಸ ಹೆಚ್ಚು ವಿಶಿಷ್ಟವೆನಿಸಿಕೊಂಡಿದೆ.

ಯಾಕೆ ಬೇಕು: ಮೈಲೇಜ್, ವಿನ್ಯಾಸ, ನಗರ ಪ್ರದೇಶಕ್ಕೆ ಹೆಚ್ಚು ಹೊಂದಿಕೆ, ಹೈ ಎಂಡ್ ವೆರಿಯಂಟ್‌ಗಳಲ್ಲಿ ಹೆಚ್ಚಿನ ವೈಶಿಷ್ಟ್ಯಗಳು ಲಭ್ಯ.

ಯಾಕೆ ಬೇಡ: ಒಳಗಡೆ ಕಡಿಮೆ ಸ್ಥಳಾವಕಾಶ, ಸಣ್ಣದಾದ ರಿಯರ್ ವಿಂಡೋ, ಸಣ್ಣ ಎಂಜಿನ್‌ ಹೆದ್ದಾರಿ ಪಯಣಕ್ಕೆ ಹೆಚ್ಚು ಸೂಕ್ತವಲ್ಲ.

ಷೆವರ್ಲೆ ಬೀಟ್

ಷೆವರ್ಲೆ ಬೀಟ್

ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯ

ದರ ಮಾಹಿತಿ: 4.74 ಲಕ್ಷ ರು.

ಮೈಲೇಜ್: 25.44 kmpl

ಷೆವರ್ಲೆ ಬೀಟ್ ವಿಸೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಫೋರ್ಡ್ ಫಿಗೊ

ಫೋರ್ಡ್ ಫಿಗೊ

ಫೋರ್ಡ್‌ನಿಂದ ಭಾರತದಲ್ಲಿ ಮಾರಾಟವಾಗುತ್ತಿರುವ ಕಾರುಗಳ ಪೈಕಿ ಅತ್ಯಂತ ಜನಪ್ರಿಯ ಕಾರೆಂಬ ಹೆಗ್ಗಳಿಕೆಗೆ ಫಿಗೊ ಪಾತ್ರವಾಗಿದೆ. ಈ ವಿಭಾಗದಲ್ಲಿ ಅತಿ ಹೆಚ್ಚು ಸ್ಥಳಾವಕಾಶ ಹೊಂದಿರುವ ಫೋರ್ಡ್ ಫಿಗೊ ಮೊದಲ ನೋಟದಲ್ಲೇ ಜನಮನ ಸಳೆಯುವ ವಿನ್ಯಾಸ ಪಡೆದುಕೊಂಡಿದೆ.

ಯಾಕೆ ಬೇಕು: 5 ಜನರಿಗೆ ಪಯಣಿಸಬಹುದು, ಸ್ಟೀರಿಂಗ್, ಅತ್ಯುತ್ತಮ ಎಸಿ.

ಯಾಕೆ ಬೇಡ: ಏರಿಳಿತ ಹೊಂದಿರುವ ರಸ್ತೆಗಳಲ್ಲಿ ಇದರ ಸಸ್ಫೆಷನ್ ಮೃದುವಾಗಿರಲ್ಲ.

ಫೋರ್ಡ್ ಫಿಗೊ

ಫೋರ್ಡ್ ಫಿಗೊ

ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ

ದರ ಮಾಹಿತಿ: 4.88 ಲಕ್ಷ ರು.

ಮೈಲೇಜ್: 20 kmpl

ಫೋರ್ಡ್ ಫಿಗೊ ವಿಸೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಮಾರುತಿ ಸುಜುಕಿ ರಿಟ್ಜ್

ಮಾರುತಿ ಸುಜುಕಿ ರಿಟ್ಜ್

ಮಾರುತಿ ಕಾರುಗಳ ಪೈಕಿ ಎತ್ತರದ ಹುಡುಗ ಎಂಬ ಖ್ಯಾತಿ ಪಡೆದಿರುವ ರಿಟ್ಜ್, ಪ್ರಾಯೋಗಿಕವಾಗಿ ಸ್ವಿಫ್ಟ್ ವಿನ್ಯಾಸವನ್ನು ಪಡೆದುಕೊಂಡಿದೆ. ಇದರ ಡೀಸೆಲ್ ಎಂಜಿನ್ ಹೆಚ್ಚು ವಿಶ್ವಾಸಾರ್ಹ ಹಾಗೂ ಮೃದುವಾಗಿದೆ.

ಯಾಕೆ ಬೇಕು: ಹೆಚ್ಚು ಹೆಡ್ ರೂಂ, ಎಂಜಿನ್

ಯಾಕೆ ಬೇಡ: ಮಗದೊಮ್ಮೆ ವಿನ್ಯಾಸ (ಎಲ್ಲರಿಗೂ ಇಷ್ಟವಾಗಲ್ಲ.), ಇಂಟಿರಿಯರ್ ಗುಣಮಟ್ಟತೆ

ಮಾರುತಿ ಸುಜುಕಿ ರಿಟ್ಜ್

ಮಾರುತಿ ಸುಜುಕಿ ರಿಟ್ಜ್

ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯ

ದರ ಮಾಹಿತಿ: 5.42 ಲಕ್ಷ ರು.

ಮೈಲೇಜ್: 23.2 kmpl

ಮಾರುತಿ ಸುಜುಕಿ ರಿಟ್ಜ್ ವಿಸೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮುಂದಿನ ಜನಾಂಗದ ಐ10 'ಗ್ರಾಂಡ್ ಐ10' ಉತ್ತಮ ಆಯ್ಕೆಯಾಗಿರಲಿದೆ. ನಗರ ಸೇರಿದಂತೆ ಹೆದ್ದಾರಿಯಲ್ಲೂ ಉತ್ತಮ ಚಾಲನಾ ಅನುಭವ ನೀಡಲಿರುವ ಗ್ರಾಂಡ್ ಐ10 ಕಾರಿನಲ್ಲಿ ತನ್ನ ಹಿಂದಿನ ಆವೃತ್ತಿಯ ಲೋಪದೋಷಗಳನ್ನು ಪರಿಹಾರ ಮಾಡುವತ್ತ ಹ್ಯುಂಡೈ ಗಮನ ವಹಿಸಿತ್ತು. 1.1 ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಈ ಕಾರು ಹೆಚ್ಚು ಸ್ಥಳಾವಕಾಶವನ್ನು ಪಡೆದಿದೆ.

ಯಾಕೆ ಬೇಕು: ಅತ್ಯುತ್ತಮ ವಿನ್ಯಾಸ ಹಾಗೂ ಫಿನಿಶಿಂಗ್, ಎಂಜಿನ್, ವೈಶಿಷ್ಟ್ಯ.

ಯಾಕೆ ಬೇಡ: ಯಾವುದನ್ನು ಬೊಟ್ಟು ಮಾಡುವಂತಿಲ್ಲ. ಹಾಗಿದ್ದರೆ ಹೆಚ್ಚು ಕ್ರೀಡಾತ್ಮಕ ಎನಿಸಿಕೊಂಡಿಲ್ಲ.

ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ಐದು ವೆರಿಯಂಟ್‌ಗಳಲ್ಲಿ ಲಭ್ಯ

ದರ ಮಾಹಿತಿ: 5.25 ಲಕ್ಷ ರು.

ಮೈಲೇಜ್: 24 kmpl

ಹ್ಯುಂಡೈ ಗ್ರಾಂಡ್ ಐ10 ವಿಸೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ನಿಸ್ಸಾನ್ ಮೈಕ್ರಾ

ನಿಸ್ಸಾನ್ ಮೈಕ್ರಾ

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್‌ನ ಜನಪ್ರಿಯ ಮೈಕ್ರಾ, ವಿಭಿನ್ನ ಕಾರು ಬಯಸುವ ಭಾರತೀಯರಿಗೆ ಉತ್ತಮ ಆಯ್ಕೆಯಾಗಿರಲಿದೆ. ಇದೀಗಷ್ಟೇ ಫೇಸ್‌ಲಿಫ್ಟ್ ವರ್ಷನ್ ಪಡೆದುಕೊಂಡಿರುವ ಮೈಕ್ರಾದ 'ವಿ' ಆಕಾರ ಪಡೆದಿರುವ ಫ್ರಂಟ್ ಗ್ರಿಲ್ ಹೆಚ್ಚು ಆಕರ್ಷಣೀಯವಾಗಿದೆ. ಹೆದ್ದಾರಿಗಳ ನಿರ್ವಹಣೆ ಅಷ್ಟೊಂದು ಚೆನ್ನಾಗಿರಲ್ಲ. ಹಾಗಿದ್ದರೂ ಹಗುರವಾದ ಸ್ಟೀರಿಂಗ್ ಸಿಟಿ ರೈಡಿಂಗ್‌ಗೆ ಹೆಚ್ಚು ಹೊಂದಿಕೆಯಾಗಲಿದೆ.

ಯಾಕೆ ಬೇಕು: ಅತ್ಯುತ್ತಮ ಫೀಚರ್ (ಎಂಜಿನ್ ಸ್ಟಾರ್ಟ್/ಸ್ಟಾಪ್), ಕಿಲೇಸ್ ಎಂಟ್ರಿ, ಎಲ್ಲ ವೆರಿಯಂಟ್‌ಗಳಿಗೂ ಫ್ರಂಟ್ ಏರ್ ಬ್ಯಾಗ್ ಸೌಲಭ್ಯ, ವಿನ್ಯಾಸ, ಗುಟಮಟ್ಟತೆ ಮತ್ತು ಹಗುರವಾದ ಸ್ಟೀರಿಂಗ್)

ಯಾಕೆ ಬೇಡ: ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದಿದ್ದರೂ ದರ ಸ್ವಲ್ಪ ದುಬಾರಿಯೆನಿಸುತ್ತಿದೆ.

ನಿಸ್ಸಾನ್ ಮೈಕ್ರಾ

ನಿಸ್ಸಾನ್ ಮೈಕ್ರಾ

ಐದು ವೆರಿಯಂಟ್‌ಗಳಲ್ಲಿ ಲಭ್ಯ

ದರ ಮಾಹಿತಿ: 5.57 ಲಕ್ಷ ರು.

ಮೈಲೇಜ್: 23 kmpl

ನಿಸ್ಸಾನ್ ಮೈಕ್ರಾ ವಿಸೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್

ಇನ್ನು ದೇಶದ ಅತ್ಯಂತ ಜನಪ್ರಿಯ ಕಾರಾದ ಮಾರುತಿ ಸುಜುಕಿ ಸ್ವಿಫ್ಟ್ ಡೀಸೆಲ್ ಕಾರು ಎಲ್ಲ ಹಂತದಲ್ಲಿಯೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿ ನಿಂತಿದೆ. ಇದರ ಆಕ್ರಮಣಕಾರಿ ವಿನ್ಯಾಸ, ಕ್ರೀಡಾತ್ಮಕ ಲುಕ್ ಹಾಗೂ ಗರಿಷ್ಠ ನಿರ್ವಹಣೆಯ ಎಂಜಿನ್ ಹೆಚ್ಚಿನ ಇಂಧನ ಕ್ಷಮತೆ ನೀಡುವಲ್ಲಿ ಯಶಸ್ವಿಯಾಗಿದೆ. ಇದು ನಗರ ಸೇರಿದಂತೆ ಹೆದ್ದಾರಿಯಲ್ಲಿ ಉತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡುತ್ತಿದೆ. ಇದರಲ್ಲಿ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಸೌಲಭ್ಯಗಳು ಲಭ್ಯವಿರಲಿದೆ.

ಯಾಕೆ ಬೇಕು: ಎಂಜಿನ್, ಮೈಲೇಜ್, ನಿರ್ವಹಣೆ ಮತ್ತು ಹ್ಯಾಂಡ್ಲಿಂಗ್

ಯಾಕೆ ಬೇಡ: ಕಡಿಮೆ ಬೂಟ್ ಸ್ಪೇಸ್, ದರ, ಬ್ರೇಕ್ ಸಮಸ್ಯೆ, ಹಳೆಯ ವಿನ್ಯಾಸ

ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸುಜುಕಿ ಸ್ವಿಫ್ಟ್

ಮೂರು ವೆರಿಯಂಟ್‌ಗಳಲ್ಲಿ ಲಭ್ಯ

ದರ ಮಾಹಿತಿ: 5.58 ಲಕ್ಷ ರು.

ಮೈಲೇಜ್: 22.9 kmpl

ಮಾರುತಿ ಸುಜುಕಿ ಸ್ವಿಫ್ಟ್ ವಿಸೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

6 ಲಕ್ಷದೊಳಗೆ ಲಭ್ಯವಾಗುವ ಡೀಸೆಲ್ ಬಜೆಟ್ ಕಾರುಗಳು

ಅಂತಿಮವಾಗಿ ಹೇಳಬೇಕೆಂದರೆ ಮೇಲೆ ಕೊಡಲಾದ ಪಟ್ಟಿಯಿಂದ ಶ್ರೇಷ್ಠ ಬಜೆಟ್ ಡೀಸೆಲ್ ಕಾರು ಆಯ್ಕೆ ಮಾಡುವುದು ಕಷ್ಟಕರ. ಯಾಕೆಂದರೆ ಪ್ರತಿಯೊಂದು ಕಾರು ತನ್ನದೇ ಆದ ವೈಶಿಷ್ಟ್ಯಗಳಿಂದ ವಿಶಿಷ್ಟವೆನಿಸಿಕೊಂಡಿದೆ. ಹಾಗಿದ್ದರೂ ಇದು ನಿಮ್ಮ ವ್ಯಯಕ್ತಿಕ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಒಟ್ಟಾರೆಯಾಗಿ ಡ್ರೈವ್ ಸ್ಪಾರ್ಕ್ ತೀರ್ಪು ಪ್ರಕಾರ ಎಲ್ಲ ವಿಭಾಗದಲ್ಲೂ ಹ್ಯುಂಡೈ ಗ್ರಾಂಡ್ ಐ10 ಸ್ವಲ್ಪ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Most Read Articles

Kannada
English summary
The price range between Rs 4 lakhs and Rs 6 lakhs is the most competitive among diesel hatchbacks in India. The best mileage compared to cars from any segment is offered by diesel hatchbacks in India, which makes them most popular cars. Naturally, competition among car manufacturers is intense, which makes it tough to choose the right diesel hatch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X