ಚಿತ್ರೀಕರಣದ ವೇಳೆ ಹೊಸ ಮಾರುತಿ ಸೆಲೆರಿಯೊ ಕ್ರಾಸ್ ಕಾರಿನ ಚಿತ್ರಗಳು ಸೋರಿಕೆ

ಮಾರುತಿ ಸುಜುಕಿ ಈ ವರ್ಷದ ಉತ್ಸವ ಋತುವಿನಲ್ಲಿ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಉತ್ಪನ್ನವನ್ನು ಸಿದ್ಧಪಡಿಸುತ್ತಿದ್ದು, ಜಾಹೀರಾತಿಗಾಗಿ ಈ ಹ್ಯಾಚ್‌ಬ್ಯಾಕ್ ಕಾರಿನ ಚಿತ್ರೀಕರಣ ನೆಡೆಯುತ್ತಿರುವ ವೇಳೆಯಲ್ಲಿ ಕಾರಿನ ಸ್ಪೈ ಚಿತ್ರ ಸೋರಿಕೆಯಾಗಿದೆ.

By Girish

ಸೆಲೆರಿಯೊದ ಹೊಸ ರೂಪಾಂತರವು 2016ರ ಆಟೋ ಎಕ್ಸ್‌ಪೋದಲ್ಲಿ ಪರಿಕಲ್ಪನೆಯ ಮಾದರಿಯಾಗಿ ಪ್ರದರ್ಶಿಸಲ್ಪಟ್ಟಿದ್ದು, ಸೋರಿಕೆಯಾದ ಸೆಲೆರಿಯೊ ಕ್ರಾಸ್ ಕಾರಿನ ಚಿತ್ರಗಳಲ್ಲಿ ಹಿಂಭಾಗದ ತುದಿಯನ್ನು ನೀವು ಗಮನಿಸಬಹುದಾಗಿದೆ. ಹಿಂಬದಿಯ ಬಂಪರ್ ಮತ್ತು ಚಕ್ರದ ಕಮಾನುಗಳ ಮೇಲೆ ಕಪ್ಪು ಪ್ಲಾಸ್ಟಿಕ್ ಕ್ಲಾಡಿಂಗ್ ಪಡೆದುಕೊಂಡಿರುವುದನ್ನು ನೋಡಬಹುದಾಗಿದೆ.

ಚಿತ್ರೀಕರಣದ ವೇಳೆ ಹೊಸ ಮಾರುತಿ ಸೆಲೆರಿಯೊ ಕ್ರಾಸ್ ಕಾರಿನ ಚಿತ್ರಗಳು ಸೋರಿಕೆ

ಪ್ರಸ್ತುತ, ಮಾರುತಿ ಸುಜುಕಿ ಟಾಟಾ ಟಿಯಾಗೊ ಕಾರಿನಿಂದ ಸೆಲೆರಿಯೊ ವಾಹನ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಈ ಕಾರಣದಿಂದಾಗಿ ಸೆಲೆರಿಯೊ ಕಾರನ್ನು ರಿಫ್ರೆಶ್ ಮಾಡಲು ಮಾರುತಿ ಸುಜುಕಿ ಬಯಸಿದೆ ಎನ್ನಲಾಗಿದೆ.

ಚಿತ್ರೀಕರಣದ ವೇಳೆ ಹೊಸ ಮಾರುತಿ ಸೆಲೆರಿಯೊ ಕ್ರಾಸ್ ಕಾರಿನ ಚಿತ್ರಗಳು ಸೋರಿಕೆ

ಸೆಲೆರಿಯೊ ಕ್ರಾಸ್ ಕಾರು ಹ್ಯಾಚ್‌ಬ್ಯಾಕ್ ಬುಚ್ ರೂಪಾಂತರವಾಗಿದ್ದು, ಸ್ನಾಯುವಿನ ನೋಟದಿಂದ ದೇಹವನ್ನು ಮುಚ್ಚುವಿಕೆಯನ್ನು ಕಾಣಬಹುದಾಗಿದೆ ಹಾಗು ಕಪ್ಪು ಬಣ್ಣದ ಮಿಶ್ರಲೋಹದ ಚಕ್ರಗಳನ್ನು ಪಡೆದುಕೊಂಡಿದೆ.

ಚಿತ್ರೀಕರಣದ ವೇಳೆ ಹೊಸ ಮಾರುತಿ ಸೆಲೆರಿಯೊ ಕ್ರಾಸ್ ಕಾರಿನ ಚಿತ್ರಗಳು ಸೋರಿಕೆ

ಸೆಲೆರಿಯೊ ಕ್ರಾಸ್ ಕಾರಿನ ಗ್ರೌಂಡ್ ಕ್ಲಿಯರೆನ್ಸ್ ಬಗ್ಗೆ ಯಾವುದೇ ಮಾಹಿತಿಗಳನ್ನು ಸಹ ಕಂಪನಿ ಬಹಿರಂಗಪಡಿಸಿಲ್ಲ ಎನ್ನಬಹುದು. ಭಾರತೀಯ ರಸ್ತೆ ಪರಿಸ್ಥಿತಿಗಳಿಗೆ ಸೂಕ್ತವಾದ ಎತ್ತರವನ್ನು ಮಾರುತಿ ಸುಜುಕಿಯ ಈ ಕಾರು ಒಳಗೊಂಡಿರಲಿದೆ.

ಚಿತ್ರೀಕರಣದ ವೇಳೆ ಹೊಸ ಮಾರುತಿ ಸೆಲೆರಿಯೊ ಕ್ರಾಸ್ ಕಾರಿನ ಚಿತ್ರಗಳು ಸೋರಿಕೆ

ಸೆಲೆರಿಯೊ ಕ್ರಾಸ್ ಕಾರು ಪಡೆದುಕೊಂಡಿದ್ದು, 90 ಎನ್‌ಎಂ ತಿರುಗುಬಲದಲ್ಲಿ 67 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 5 ಸ್ಪೀಡ್ ಮ್ಯಾನ್ಯುವಲ್ ಅಥವಾ ಸ್ವಯಂಚಾಲಿತ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಆಯ್ಕೆ ಹೊಂದಿರಲಿದೆ.

ಚಿತ್ರೀಕರಣದ ವೇಳೆ ಹೊಸ ಮಾರುತಿ ಸೆಲೆರಿಯೊ ಕ್ರಾಸ್ ಕಾರಿನ ಚಿತ್ರಗಳು ಸೋರಿಕೆ

ಈ ವರ್ಷದ ಉತ್ಸವ ಋತುವಿನಲ್ಲಿ ಮಾರುತಿ ಸುಜುಕಿ ಸೆಲೆರಿಯೊ ಕ್ರಾಸ್ ಕಾರನ್ನು ಪ್ರಾರಂಭಿಸಲಿದೆ. ಟಾಟಾ ಟಿಯಾಗೊ ಮತ್ತು ಹೊಸ ಸೆಲೆರಿಯೊ ನಡುವಿನ ಹ್ಯಾಚ್ ಬ್ಯಾಕ್ ಕಾರುಗಳ ಯುದ್ಧ ಸದ್ಯದರಲ್ಲೇ ಪ್ರಾರಂಭವಾಗಲಿರುವುದಂತೂ ಖಂಡಿತ.

Most Read Articles

Kannada
English summary
Maruti Suzuki is readying another product for the Indian market for this year's festive season. This car has spotted the Celerio Cross during an ad shoot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X