ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

Written By:

ದೇಶಾದ್ಯಂತ ಮಾರುತಿ ಸುಜುಕಿ ಕಾರು ವಿತಕರು ಗ್ರಾಹಕರಿಗೆ ಬಂಪರ್ ಆಫರ್ ನೀಡಿದ್ದಾರೆ. ಮಾರುತಿ ಸುಜುಕಿ ನೆಕ್ಸಾ ಹೊರತುಪಡಿಸಿ ಪೆಟ್ರೋಲ್ ಕಾರುಗಳ ಖರೀದಿ ಮೇಲೆ ಅತ್ಯತ್ತಮ ರಿಯಾಯ್ತಿ ನೀಡಲಾಗಿದ್ದು, ಈ ತಿಂಗಳು ಕೊನೆಯವರೆಗೂ ಆಫರ್ ಲಭ್ಯವಿರಲಿದೆ. ಹಾಗಿದ್ದರೆ ಏಕೆ ತಡ ಈಗಲೇ ನಿಮ್ಮಿಷ್ಟದ ಕಾರನ್ನು ಮನೆಗೆ ತನ್ನಿ.

To Follow DriveSpark On Facebook, Click The Like Button
ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ಮಾರುತಿ ಆಲ್ಟೋ 800/ ಕೆ10

ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಹೊಂದಿರುವ ಆಲ್ಟೋ 800 ಕಾರಿನ ಮೇಲೆ ಮಾರುತಿ ಸುಜುಕಿ ವಿತರಕರು ಬಂಪರ್ ಆಫರ್ ನೀಡುತ್ತಿದ್ದಾರೆ. ಖರೀದಿಯ ಮೇಲೆ 45 ಸಾವಿರ ರೂಪಾಯಿ ನಗದು ರಿಯಾಯ್ತಿ ನೀಡಲಾಗುತ್ತಿದೆ. ಜೊತೆಗೆ LXI ಮತ್ತು LXI(CNG) ಮಾದರಿಗಳ ಮೇಲೆ ರೂ.20 ಸಾವಿರ ನಗದು ರಿಯಾಯ್ತಿ ಮತ್ತು ರೂ.20 ಸಾವಿರ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ.

ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ಇನ್ನು ಮಾರುತಿ ಸುಜುಕಿ ಕೆ10 ಖರೀದಿ ಮೇಲೂ ಬಂಪರ್ ಆಫರ್ ನೀಡಲಾಗುತ್ತಿದ್ದು, 40 ಸಾವಿರ ರೂಪಾಯಿ (ರೂ. 20 ಸಾವಿರ ನಗದು ರಿಯಾಯ್ತಿ ಮತ್ತು ರೂ.20 ಸಾವಿರ ಎಕ್ಸ್‌ಚೇಂಜ್ ಬೋನಸ್) ಆಫರ್ ಒದಗಿಸಲಾಗುತ್ತಿದೆ. ಒಂದು ವೇಳೆ ಕೆ10 ಆವೃತ್ತಿಯಲ್ಲಿ AMT ಮಾದರಿಯನ್ನು ಖರೀದಿ ಮಾಡುವುದಾದರೆ ಹೆಚ್ಚುವರಿಯಾಗಿ 5 ಸಾವಿರ ರೂಪಾಯಿ ಡಿಸ್ಕೌಂಟ್ ದೊರೆಯಲಿದೆ.

ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ಮಾರುತಿ ಸೆಲೆರಿಯೊ

ಮಾರುತಿ ಸುಜುಕಿ ವಿತರಕರು ಸೆಲೆರಿರೋ ಖರೀದಿ ಮೇಲೆ 45 ಸಾವಿರ ರೂಪಾಯಿ ಬಂಪರ್ ಆಫ್ ಒದಗಿಸಿದ್ದಾರೆ. LXi, VXi, ZXi ಮ್ಯಾನುವಲ್ ಆವೃತ್ತಿಗಳ ಮೇಲಿನ ಖರೀದಿಗೆ ರೂ.20 ಸಾವಿರ ನಗದು ರಿಯಾಯ್ತಿ ಹಾಗೂ ರೂ. 25 ಸಾವಿರ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ. ಇದರ ಜೊತೆಗೆ CNG ಮಾದರಿಯ ಮೇಲೂ ರೂ.15 ಸಾವಿರ ನಗದು ರಿಯಾಯ್ತಿ ಹಾಗೂ ರೂ. 25 ಸಾವಿರ ಎಕ್ಸ್‌ಚೇಂಜ್ ಆಫರ್ ನೀಡಲಾಗಿದೆ.

ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ಮಾರುತಿ ವ್ಯಾಗನರ್

ಪೆಟ್ರೋಲ್ ಚಾಲಿತ ಮ್ಯಾನುವಲ್ ವ್ಯಾಗನರ್ ಆವೃತ್ತಿಗಳ ಖರೀದಿ ಮೇಲೆ 40 ಸಾವಿರ ರಿಯಾಯ್ತಿ ದೊರೆಯಲಿದೆ. ಇದರಲ್ಲಿ ರೂ.25 ಸಾವಿರ ನಗದು ಹಾಗೂ ರೂ. 15 ಸಾವಿರ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ. AMT ಆವೃತ್ತಿಯಲ್ಲಿ

ಮೇಲೆ ಹೆಚ್ಚುವರಿ 5 ಸಾವಿರ ರೂಪಾಯಿ ಬೋನಸ್ ಸಿಗಲಿದ್ದು, CNG ಆವೃತ್ತಿ ಮೇಲೆ 35 ಸಾವಿರ ರೂಪಾಯಿ ಬಂಪರ್ ಆಫರ್ ನೀಡಲಾಗುತ್ತಿದೆ.

ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ಮಾರುತಿ ಸುಜುಕಿ ಸ್ವಿಫ್ಟ್

ನೂತನವಾಗಿ ಬಿಡುಗಡೆಯಾಗಿರುವ 2017ರ ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ಮೇಲೆ ರೂ.10 ಸಾವಿರ ನಗದು ರಿಯಾಯ್ತಿ ನೀಡಲಾಗುತ್ತಿದೆ. ಒಂದು ವೇಳೆ ಎಕ್ಸ್‌ಚೇಂಜ್ ಮಾಡುವುದಾದರೇ 10 ಸಾವಿರ ನಗದು ರಿಯಾಯ್ತಿ ಜೊತೆ 15 ಸಾವಿರ ರೂಪಾಯಿ ಬೋನಸ್ ಕೂಡ ದೊರೆಯಲಿದೆ.

ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಸ್ವಿಫ್ಟ್ ಡಿಜೈರ್ ಖರೀದಿಯ ಸಂಭಾವ್ಯ ಗ್ರಾಹಕರಿಗೂ ಅತ್ಯುತ್ತಮ ಬಂಪರ್ ನೀಡಲಾಗುತ್ತಿದೆ. ಖರೀದಿ ಮೇಲೆ 10 ಸಾವಿರ ರೂಪಾಯಿ ನಗದು ರಿಯಾಯ್ತಿ ಹಾಗೂ ಎಕ್ಸ್‌ಚೇಂಜ್‌ಗಳ ಮೇಲೆ 15 ಸಾವಿರ ರೂಪಾಯಿ ಆಫರ್ ದೊರೆಯಲಿದೆ.

ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ಮಾರುತಿ ಎರ್ಟಿಗಾ

ಕುಟುಂಬಸ್ಥರಿಗಾಗಿ ಕಾರು ಖರೀದಿ ಮಾಡುವುದಾರೇ ಮಾರುತಿ ಎರ್ಟಿಗಾ ಅತ್ಯುತ್ತಮವಾದ ಆಯ್ಕೆ ಎಂದೇ ಹೇಳಬಹುದು. ಯಾಕೇಂದ್ರೆ ಸುಮಾರು 7 ಜನ ಕುಳಿತುಕೊಳ್ಳುಬಹುದಾದಷ್ಟು ಅವಕಾಶವಿದ್ದು, ಖರೀದಿ ಮೇಲೆ 10 ಸಾವಿರ ರೂಪಾಯಿ ನಗದು ರಿಯಾಯ್ತಿ ನೀಡಲಾಗುತ್ತಿದೆ. ಒಂದು ವೇಳೆ ನಿಮ್ಮ ಹಳೆಯ ಎರ್ಟಿಗಾ ಎಕ್ಸ್‌ಚೇಂಜ್ ಮಾಡುವುದಾದರೇ ಹೆಚ್ಚುವರಿ 10 ಸಾವಿರ ರೂಪಾಯಿ ಬೋನಸ್ ದೊರೆಯಲಿದೆ.

ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ಮಾರುತಿ ಸಿಯಾಜ್

ಮಾರುತಿ ಸುಜುಕಿ ಆವೃತ್ತಿಗಳಲ್ಲೇ ಮುಂಚೂಣಿಯಲ್ಲಿರುವ ಸಿಯಾಜ್ ಮಾದರಿ ಮೇಲೂ ಭರ್ಜರಿ ಆಫರ್ ನೀಡಲಾಗುತ್ತಿದೆ. ಸಿಯಾಜ್ ಖರೀದಿ ಮೇಲೆ 30 ಸಾವಿರ ರೂಪಾಯಿ ನಗದು ಹಾಗೂ 15 ಸಾವಿರ ರೂಪಾಯಿ ಎಕ್ಸ್‌ಚೇಂಜ್ ಬೋನಸ್ ನೀಡಲಾಗುತ್ತಿದೆ.

ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ಮಾರುತಿ ಇಕೊ

ಮಾರುತಿ ಇಕೊ ವ್ಯಾನ್ ಖರೀದಿಯ ಮೇಲೂ 10 ಸಾವಿರ ರೂಪಾಯಿ ನಗದು ರಿಯಾಯ್ತಿ ನೀಡಲಾಗುತ್ತಿದೆ. ಜೊತೆಗೆ ಎಕ್ಸ್‌ಚೇಂಜ್‌ಗಳ ಮೇಲೆ ಹೆಚ್ಚುವರಿ 10 ಸಾವಿರ ರೂಪಾಯಿ ಬೋನಸ್ ಸಿಗಲಿದ್ದು, ಕಾರು ಖರೀದಿಗೆ ಇದೊಂದು ಉತ್ತಮ ಅವಕಾಶವೆಂದು ಹೇಳಬಹುದು.

ಕಾರು ಖರೀದಿಯ ಯೋಚನೆಯಲ್ಲಿದ್ದೀರಾ? ಮಾರುತಿ ಸುಜುಕಿ ಕಾರುಗಳ ಖರೀದಿ ಮೇಲೆ ಬಂಪರ್ ಆಫರ್..!!

ವಿ.ಸೂಚನೆ- ಈ ಮೇಲಿನ ಆಫರ್‌ಗಳು ವಿತರಕರು ನಿಗದಿ ಮಾಡಿರುವ ಬೆಲೆಗಳಾಗಿದ್ದು, ಅವುಗಳು ಬೇರೆ ಬೇರೆ ನಗರಗಳಿಗೆ ಹೆಚ್ಚು ಕಡಿಮೆ ಆಗುವ ಸಾಧ್ಯತೆಗಳಿರುತ್ತವೆ. ಆದ ಕಾರಣ ಬೆಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಖರೀದಿ ಮಾಡುವುದು ಒಳಿತು.

ಹೊಚ್ಚ ಹೊಸ ಮಾರುತಿ ಸ್ವಿಫ್ಟ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Maruti Suzuki dealers across the country are offering discounts on many of the company's popular petrol cars this month. Read on before you head out for your new car.
Story first published: Saturday, February 25, 2017, 18:52 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark