ಕಾರು ಮಾರಾಟದಲ್ಲಿ ಹೊಸ ಭಾಷ್ಯ ಬರೆದ ಮಾರುತಿ ಸುಜುಕಿ ಇಗ್ನಿಸ್

ಕೇವಲ 1 ತಿಂಗಳ ಅವಧಿಯಲ್ಲಿ 4,800 ಕಾರುಗಳ ಮಾರಾಟದೊಂದಿಗೆ ಹೊಸ ದಾಖಲೆ ಸೃಷ್ಛಿಸಿರುವ ಮಾರುತಿ ಸುಜುಕಿ ಇಗ್ನಿಸ್, ಪ್ರತಿಸ್ಪರ್ಧಿ ಮಹೀಂದ್ರಾ ಕೆಯುವಿ100 ಮಾರಾಟಕ್ಕೆ ತೀವ್ರ ಸ್ಪರ್ಧೆ ಒಡ್ಡಿದೆ.

By Praveen

ಸಂಪೂರ್ಣ ಹೊಸ ವೈಶಿಷ್ಠತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಸುಜುಕಿ ಇಗ್ನಿಸ್, 2016 ಆಟೋ ಎಕ್ಸ್‌ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು. ತದನಂತರ ಮಾರುಕಟ್ಟೆಯಲ್ಲಿ ಛಾಪು ಮೂಡಿಸುವ ಮೂಲಕ ಹೊಸ ದಾಖಲೆ ಸೃಷ್ಠಿಸಿದೆ.ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಮಾರುತಿ ಸುಜುಕಿ , ಗ್ರಾಹಕರಿಗೆ ಅನುಕೂಲಕರ ಸೇವೆಗಳನ್ನು ಒದಗಿಸಿದ್ದೇ ಮಾರಾಟದಲ್ಲಿ ಭರ್ಜರಿ ಏರಿಕೆ ಕಾಣಲು ಕಾರಣವಾಗಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಕಾರು ಮಾರಾಟದಲ್ಲಿ ಹೊಸ ಭಾಷ್ಯ ಬರೆದ ಮಾರುತಿ ಸುಜುಕಿ ಇಗ್ನಿಸ್

ಇನ್ನೂ ಮಾರಾಟ ಪ್ರಾರಂಭಗೊಂಡ ಕೇವಲ 3 ವಾರಗಳಲ್ಲಿ 4,800 ಕಾರುಗಳು ಮಾರಾಟಗೊಂಡಿವೆ. ಮಾರುಕಟ್ಟೆಯಲ್ಲಿ ರೆಟ್ರೋ- ಮಾಡ್ರನ್ ಜನಪ್ರಿಯತೆ ಪಡಿದಿದ್ದೆ ತಡ, ಮಾರುತಿ ಸುಜುಕಿ ಇಗ್ನಿಸ್ ಮಾರಾಟದಲ್ಲಿ ಬೃಹತ್ ಏರಿಕೆ ಕಂಡಿದೆ.

ಕಾರು ಮಾರಾಟದಲ್ಲಿ ಹೊಸ ಭಾಷ್ಯ ಬರೆದ ಮಾರುತಿ ಸುಜುಕಿ ಇಗ್ನಿಸ್

ಮಾರುತಿ ಸುಜುಕಿ ಇಗ್ನಿಸ್ ಮಾರಾಟದಲ್ಲಿ ಬೃಹತ್ ಏರಿಕೆ ಕಾಣಲು ಹಲವಾರು ಕಾರಣಗಳಿವೆ. ಏಕೆಂದರೆ ಪ್ರೀಮಿಯಂ ಔಟ್ಲೆಟ್ ನೆಕ್ಸಾ ಮೂಲಕ ಕಾರು ಚಾಲನೆಗೆ ಆರಾಮದಾಯಕವಾಗಿದ್ದು, ಔಟ್‌ಲುಕ್ ಕೂಡ ನೋಡಲು

ಆಕರ್ಷಣೀಯವಾಗಿದೆ.

ಕಾರು ಮಾರಾಟದಲ್ಲಿ ಹೊಸ ಭಾಷ್ಯ ಬರೆದ ಮಾರುತಿ ಸುಜುಕಿ ಇಗ್ನಿಸ್

ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಇಗ್ನಿಸ್ ದಿನದಿಂದ ದಿನಕ್ಕೆ ನೂತನ ದಾಖಲೆಗಳನ್ನ ಸೃಷ್ಠಿ ಮಾಡುತ್ತಲೇ ಇದೆ. ಅಲ್ಲದೇ ಮೊದ ಮೊದಲು ಸಣ್ಣ ಸಂಖ್ಯೆಯಲ್ಲಿ ಆರಂಭಗೊಂಡಿದ್ದ ಮಾರಾಟ ಸಂಖ್ಯೆ ಸದ್ಯ ಮಿಲಿಯನ್ ಲೆಕ್ಕದಲ್ಲಿ ಮಾರಾಟ ಮಾಡುವ ಗುರಿ ಹೊಂದಿದೆ.

ಕಾರು ಮಾರಾಟದಲ್ಲಿ ಹೊಸ ಭಾಷ್ಯ ಬರೆದ ಮಾರುತಿ ಸುಜುಕಿ ಇಗ್ನಿಸ್

ಮಾರುತಿ ಸುಜುಕಿ ಇಗ್ನಿಸ್ ಕಾರಿಗೆ ಹೊರ ಭಾಗದಲ್ಲಿ ಸಖತ್ ಔಟ್‌ಲುಕ್ ನೀಡಲಾಗಿದೆ. ಜೊತೆಗೆ ಸೊಗಸಾದ ಎಲ್ಇಡಿ ಪ್ರೊಜೆಕ್ಟರ್, ಹೆಡ್ ಲ್ಯಾಂಪ್, 7 ಇಂಚಿನ ಟಚ್ ಸ್ಕ್ರಿನ್ ಟಿವಿ ವ್ಯವಸ್ಥೆ ಇದ್ದು, ಆಂಡ್ರಾಯ್ಡ್ ಆಟೋ ಯುವಕರನ್ನ ಇಗ್ನಿಸ್ ತನ್ನ ಅತ್ತ ಸೆಳೆಯುತ್ತಿದೆ.

ಕಾರು ಮಾರಾಟದಲ್ಲಿ ಹೊಸ ಭಾಷ್ಯ ಬರೆದ ಮಾರುತಿ ಸುಜುಕಿ ಇಗ್ನಿಸ್

ಅಲ್ಲದೆ ಮಾರುತಿ ಸುಜುಕಿ ಇಗ್ನಿಸ್ ಕಾರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡೂ ಆಯ್ಕೆಗಳಿದ್ದು, ಖರೀದಿಗೆ ಇದು ಕೂಡಾ ಪ್ರಮುಖ ಕಾರಣವಾಗಿದೆ. ಜೊತೆಗೆ ಎಎಂಟಿ ಗೇರ್‌ ಬಾಕ್ಸ್ ಇದ್ದು, ಸುರಕ್ಷತೆಯತ್ತ ಹೆಚ್ಚು ಗಮನಹರಿಸಲಾಗಿದೆ.

ಕಾರು ಮಾರಾಟದಲ್ಲಿ ಹೊಸ ಭಾಷ್ಯ ಬರೆದ ಮಾರುತಿ ಸುಜುಕಿ ಇಗ್ನಿಸ್

ಸ್ಪರ್ಧಾತ್ಮಕ ಬೆಲೆಯಲ್ಲೇ ಮಾರಾಟಗೊಳ್ಳುತ್ತಿರುವ ಮಾರುತಿ ಸುಜಕಿ ಇಗ್ನಿಸ್ ಕಾರು ದೆಹಲಿ ಎಕ್ಸ್‌‌ಶೋರಂ ಪ್ರಕಾರ ರೂ. 4.59 ಲಕ್ಷಗಳಿಂದ ಆರಂಭಗೊಳ್ಳುತ್ತದೆ. ಇದರ ಜೊತೆಗೆ ಪ್ರತಿಸ್ಪರ್ಧಿ ಮಹೀಂದ್ರಾ ಕೆಯುವಿ100 ಮಾರಾಟಕ್ಕೆ ತೀವ್ರ ಪೈಪೋಟಿ ಒಡ್ಡುತ್ತಿದೆ.

ಮಾರುತಿ ಸುಜುಕಿ ಇಗ್ನಿಸ್ ಕಾರುಗಳ ಚಿತ್ರಗಳಿಗಾಗಿ ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
English summary
Maruti has sold more than 4,800 units of the Ignis within 3 weeks of its launch and has overtaken the Mahindra KUV100.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X