ಪವರ್ ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಸಿಯಾಜ್..!

Written By:

ಮಾರುತಿ ಸುಜುಕಿ ಸೆಡಾನ್ ವಿಭಾಗದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ ಸಿಯಾಜ್ ಆವೃತ್ತಿಯು ಸದ್ಯದಲ್ಲೇ ಹೊಸ ನಮೂನೆಯ ಡಿಸೇಲ್ ಎಂಜಿನ್ ಪಡೆದುಕೊಳ್ಳಲಿದ್ದು, ಟೆಸ್ಟಿಂಗ್‌ನಲ್ಲೂ ಇದೀಗ ಯಶಸ್ವಿಯಾಗಿದೆ.

To Follow DriveSpark On Facebook, Click The Like Button
ಪವರ್ ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಸಿಯಾಜ್

ಸದ್ಯ ಮಾರಾಟಕ್ಕೆ ಲಭ್ಯವಿರುವ ಮಾರುತಿ ಸುಜುಕಿ ಸಿಯಾಜ್ ಕಾರು ಆವೃತ್ತಿಯು 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಸದ್ಯದಲ್ಲೇ 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ಕಾರು ಆವೃತ್ತಿಯು ಬಿಡುಗಡೆಯಾಗಲಿದೆ.

ಪವರ್ ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಸಿಯಾಜ್

ಈಗಾಗಲೇ ಹೊಸ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿರುವ ಸಿಯಾಜ್ ಕಾರು ಆವೃತ್ತಿಯನ್ನು ಟೆಸ್ಟಿಂಗ್ ಕೂಡಾ ನಡೆಸಲಾಗಿದ್ದು, ಪರೀಕ್ಷಾರ್ಥ ಕಾರ್ಯಗಾರದಲ್ಲಿ ಯಶಸ್ವಿಯಾಗಿದೆ.

ಪವರ್ ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಸಿಯಾಜ್

ಹೀಗಾಗಿ ಸಿಯಾಜ್ ಆವೃತ್ತಿಯಲ್ಲಿ 1.5-ಲೀಟರ್ ಡೀಸೆಲ್ ಎಂಜಿನ್ ಅಳವಡಿಕೆಗೆ ಯೋಜನೆ ರೂಪಿಸಿರುವ ಮಾರುತಿ ಸುಜುಕಿ, 2018ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಸಿಯಾಜ್ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಗಳವೆ.

ಪವರ್ ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಸಿಯಾಜ್

ಸಿಯಾಜ್ 1.3-ಲೀಟರ್ ಡೀಸೆಲ್ ಎಂಜಿನ್ ಬಗ್ಗೆ ಗ್ರಾಹಕರ ದೂರು ಹಿನ್ನೆಲೆ ಈ ಕ್ರಮಕೈಗೊಂಡಿರುವ ಮಾರುತಿ ಸುಜುಕಿ, ಹೆಚ್ಚಿನ ಮಟ್ಟದ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿರುವ ಎಂಜಿನ್ ಪರಿಚಯಿಸುತ್ತಿದೆ.

ಪವರ್ ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಸಿಯಾಜ್

ಇನ್ನು ಹೊಸ ಕಾರಿನಲ್ಲಿ ಎಂಜಿನ್ ಹೊರತುಪಡಿಸಿ ಯಾವುದೇ ರೀತಿಯ ಬದಲಾವಣೆಗೆ ಮುಂದಾಗದ ಮಾರುತಿ ಸುಜುಕಿ, ಸದ್ಯ ಲಭ್ಯವಿರುವ ಸೌಲಭ್ಯಗಳನ್ನೇ ಮುಂದಿನ ಹೊಸ ಮಾದರಿಯಲ್ಲೂ ಮುಂದುವರಿಸಲಿದೆ.

ಪವರ್ ಫುಲ್ ಡೀಸೆಲ್ ಎಂಜಿನ್‌ನೊಂದಿಗೆ ಬರಲಿದೆ ಮಾರುತಿ ಸುಜುಕಿ ಸಿಯಾಜ್

ಆದ್ರೆ ಹೊಸ ಕಾರಿನ ಬೆಲೆಗಳ ಬಗೆಗೆ ಮಾರುತಿ ಸುಜುಕಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ, ಎಂಜಿನ್ ಬಲಿಷ್ಠತೆ ಹೆಚ್ಚಳ ಹಿನ್ನೆಲೆ 1 ರಿಂದ 1.50 ಲಕ್ಷ ಹೆಚ್ಚುವರಿ ದರ ನಿಗದಿಪಡಿಸುವ ಸಾಧ್ಯತೆಗಳು ಕೂಡಾ ಇವೆ ಎನ್ನಲಾಗಿದೆ.

English summary
Read in Kannada about Maruti Suzuki Ciaz Completes Successful Tests With New Engine.
Story first published: Tuesday, July 4, 2017, 13:11 [IST]
Please Wait while comments are loading...

Latest Photos