3ನೇ ಅತಿದೊಡ್ಡ ಕಾರು ಬ್ರ್ಯಾಂಡ್ ಆಗಿ ಹೊರಹೊಮ್ಮಿದ ಮಾರುತಿ ಸುಜುಕಿ ವ್ಯಾಗನರ್..!!

Written By:

1999ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯ ಪ್ರವೇಶ ಪಡೆದಿದ್ದ ಮಾರುತಿ ಸುಜುಕಿ ವ್ಯಾಗನರ್ ಕಾರು ಆವೃತ್ತಿಯು ಕಾಲಕ್ರಮೇಣ ನಾಲ್ಕು ಹೊಸ ಆವೃತ್ತಿಗಳೊಂದಿಗೆ ಮರುಬಿಡುಗಡೆಗೊಂಡಿತ್ತು. ಜೊತೆಗೆ ಉತ್ತಮ ಕಾರ್ಯಕ್ಷಮತೆಯ ಮೂಲಕ ಗ್ರಾಹಕನ್ನು ಸೆಳೆಯುಲ್ಲಿ ಯಶಸ್ವಿಯಾಗಿದ್ದು, ಇದೀಗ ಕಾರು ಮಾರಾಟದಲ್ಲಿ 3ನೇ ಅತಿ ದೊಡ್ಡ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಕಾರು ಮಾರಾಟದಲ್ಲಿ 3ನೇ ಸ್ಥಾನಕ್ಕೇರಿದ ಮಾರುತಿ ಸುಜುಕಿ ವ್ಯಾಗನರ್

ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಭಾರತೀಯ ಗ್ರಾಹಕರನ್ನು ಸೆಳೆಯುವ ಮೂಲಕ ದೇಶದ 3ನೇ ಅತಿದೊಡ್ದ ಕಾರು ಬ್ರ್ಯಾಂಡ್ ಸ್ಥಾನ ಗಿಟ್ಟಿಸಿಕೊಂಡಿರುವ ವ್ಯಾಗನರ್, ಸದ್ಯ ಆಲ್ಟೋ ಮತ್ತು ನಿರ್ಗಮಿತ ಮಾರುತಿ 800ರ ನಂತರ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕಾರು ಮಾದರಿಯಾಗಿದೆ.

ಕಾರು ಮಾರಾಟದಲ್ಲಿ 3ನೇ ಸ್ಥಾನಕ್ಕೇರಿದ ಮಾರುತಿ ಸುಜುಕಿ ವ್ಯಾಗನರ್

ಪ್ರತಿಷ್ಠಿತ ಸುದ್ಧಿಮಾಧ್ಯಮ ಫೈನಾಷಿಯಲ್ ಎಕ್ಸ್‌ಪ್ರೆಸ್ ಬಹಿರಂಗಗೊಳಿಸಿರುವ ಮಾಹಿತಿ ಪ್ರಕಾರ 1999ರಿಂದ 2017ರ ಮಾರ್ಚ್ ವರೆಗೆ ವ್ಯಾಗನರ್ ಕಾರು ಉತ್ಪಾದನಾ ಪ್ರಮಾಣವು 2 ಮಿಲಿಯನ್ ತಲುಪಿದ್ದು, ಪ್ರಸ್ತುತ ವ್ಯಾಗನರ್ ಬೇಡಿಕೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

Recommended Video - Watch Now!
Tata Nexon Price And Features Variant-wise - DriveSpark
ಕಾರು ಮಾರಾಟದಲ್ಲಿ 3ನೇ ಸ್ಥಾನಕ್ಕೇರಿದ ಮಾರುತಿ ಸುಜುಕಿ ವ್ಯಾಗನರ್

ಮಾರುತಿ ಸುಜುಕಿ ಉತ್ಪಾದನೆ ಮಾಡಿರುವ 2 ಮಿಲಿಯನ್ ವ್ಯಾಗನರ್ ಕಾರು ಮಾರಾಟದಲ್ಲಿ ದೇಶಿಯ ಮಾರುಕಟ್ಟೆ ಮತ್ತು ರಫ್ತು ಪ್ರಮಾಣ ಒಳಗೊಂಡಿದ್ದು, ಮುಂಬರುವ ದಿನಗಳಲ್ಲಿ ಮಾರುತಿ 800 ಮಾರಾಟ ಪ್ರಮಾಣವನ್ನು ಹಿಂದಿಕ್ಕಲಿದೆ.

ಕಾರು ಮಾರಾಟದಲ್ಲಿ 3ನೇ ಸ್ಥಾನಕ್ಕೇರಿದ ಮಾರುತಿ ಸುಜುಕಿ ವ್ಯಾಗನರ್

ಸದ್ಯ ಮಾರುಕಟ್ಟೆಯಲ್ಲಿ ಹೊಸ ನಮೂನೆಯ ಹ್ಯಾಚ್‌ಬ್ಯಾಕ್ ಮಾದರಿಗಳು ಪರಿಚಯಿಸಲಾಗುತ್ತಿದ್ದರು ವ್ಯಾಗನರ್ ಮಾರಾಟ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದಕ್ಕೆ ಕಾರಣ ಮಾರುತಿ ಸುಜುಕಿ ಉತ್ಪನ್ನಗಳಿರುವ ಜನಪ್ರಿಯತೆ ಎನ್ನಬಹುದು.

ಕಾರು ಮಾರಾಟದಲ್ಲಿ 3ನೇ ಸ್ಥಾನಕ್ಕೇರಿದ ಮಾರುತಿ ಸುಜುಕಿ ವ್ಯಾಗನರ್

ಆದರೂ ವ್ಯಾಗನರ್ ಮಾರಾಟಕ್ಕೆ ತೀವ್ರ ಪೈಪೋಟಿ ನೀಡಿದ್ದ ಹ್ಯುಂಡೈ ಸ್ಯಾಂಟ್ರೊ ಕೂಡಾ ಸಾಕಷ್ಟು ಜನಪ್ರಿಯತೆ ಸಾಧಿಸಿದರೂ ವ್ಯಾಗನರ್ ಉತ್ತಮ ಕಾರ್ಯಕ್ಷಮತೆಯ ಮುಂದೆ ಗ್ರಾಹಕರನ್ನು ಸೆಳೆಯುವಲ್ಲಿ ಸ್ಯಾಂಟ್ರೊ ತೀವ್ರ ಹಿನ್ನಡೆ ಅನುಭವಿಸಿದ್ದು ಸುಳ್ಳಲ್ಲ.

ಕಾರು ಮಾರಾಟದಲ್ಲಿ 3ನೇ ಸ್ಥಾನಕ್ಕೇರಿದ ಮಾರುತಿ ಸುಜುಕಿ ವ್ಯಾಗನರ್

ಇದೇ ಕಾರಣದಿಂದ 2014-15ರ ಅವಧಿಯಲ್ಲಿ ಶೇ.45 ರಷ್ಟು ಕಾರು ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿದ್ದ ಮಾರುತಿ ಸುಜುಕಿ, ವ್ಯಾಗನರ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸಾಧಿಸಿತ್ತು. ಜೊತೆಗೆ ಗ್ರಾಹಕರ ಪರ ಸೌಲಭ್ಯಗಳನ್ನು ಒದಗಿಸಿದ್ದು, ಸುರಕ್ಷಾ ವಿಚಾರದಲ್ಲೂ ಆಯ್ಕೆಗೆ ಉತ್ತಮ ಕಾರು ಆವೃತ್ತಿಯಾಗಿದೆ.

ಕಾರು ಮಾರಾಟದಲ್ಲಿ 3ನೇ ಸ್ಥಾನಕ್ಕೇರಿದ ಮಾರುತಿ ಸುಜುಕಿ ವ್ಯಾಗನರ್

ಇದೇ ಉದ್ದೇಶದಿಂದ ಮತ್ತೊಂದು ಹೊಸ ಯೋಜನೆ ರೂಪಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಮತ್ತಷ್ಟು ಬೇಡಿಕೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ 2018ರ ವ್ಯಾಗನರ್ ಮಾದರಿಯನ್ನು ಸದ್ಯದಲ್ಲೇ ಹೊರತರುತ್ತಿದ್ದು, ಸುಧಾರಿತ ತಂತ್ರಜ್ಞಾನದೊಂದಿಗೆ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಖಚಿತವಾಗಿದೆ.

ಕಾರು ಮಾರಾಟದಲ್ಲಿ 3ನೇ ಸ್ಥಾನಕ್ಕೇರಿದ ಮಾರುತಿ ಸುಜುಕಿ ವ್ಯಾಗನರ್

ಡ್ರೈವ್ ಸ್ಪಾಕ್ ಅಭಿಪ್ರಾಯ

ಇಂಧನ ಕಾರ್ಯಕ್ಷಮತೆಯಲ್ಲಿ ಗ್ರಾಹಕರ ಪರ ಉತ್ಪನ್ನಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದಿನಂತೆಯೇ ಈಗಲೂ ಕೂಡಾ ತನ್ನ ಜನಪ್ರಿಯತೆ ಉಳಿಸಿಕೊಂಡಿದ್ದು, ವ್ಯಾಗನರ್ ಮಾರಾಟದಲ್ಲಿ ಹೊಸ ನೀರಿಕ್ಷೆಯೊಂದಿಗೆ ಮತ್ತೊಂದು ಹೊಸ ಆವೃತ್ತಿಯನ್ನು ಪರಿಚಯಿಸುತ್ತಿರುವುದು ಮತ್ತೊಂದು ವಿಶೇಷ ಎನ್ನಬಹುದು.

English summary
Read in Kannada about Maruti Suzuki's Third Vehicle Reaches A Significant Milestone After Alto And 800.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark