ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಅನ್ನು ಪರಿಚಯಿಸಲಿದೆ ಮಿನಿ

Written By:

ಸಣ್ಣ ಗಾತ್ರದ ಐಷಾರಾಮಿ ಕಾರುಗಳನ್ನು ಉತ್ಪಾದನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ಮಿನಿ ಸಂಸ್ಥೆಯು ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಕಾರು ಮಾದರಿಯನ್ನು ಪರಿಚಯಿಸಲು ಮುಂದಾಗಿದ್ದು, ಹ್ಯಾಚ್‍‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಳಿಸಿದೆ.

To Follow DriveSpark On Facebook, Click The Like Button
ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಅನ್ನು ಪರಿಚಯಿಸಲಿದೆ ಮಿನಿ

ಈ ಹಿಂದೆ 2006 ಮತ್ತು 2012ರಲ್ಲಿ ಇದೇ ಮಾದರಿಯನ್ನು ಅಭಿವೃದ್ಧಿ ಮಾಡಿ ಜನಪ್ರಿಯತೆ ಗಳಿಸಿದ್ದ ಮಿನಿ ಸಂಸ್ಥೆಯು ಇದೀಗ ಹೊಸ ತಂತ್ರಜ್ಞಾನಗಳೊಂದಿಗೆ ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ನಿರ್ಮಾಣ ಮಾಡಿದ್ದು, ಈ ವಾರ ಶುರುವಾಗಲಿರುವ ಫ್ರಾಂಕ್‌ಫರ್ಟ್ ಆಟೋ ಮೇಳದಲ್ಲಿ ಭಾಗಿಯಾಗಲಿವೆ.

ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಅನ್ನು ಪರಿಚಯಿಸಲಿದೆ ಮಿನಿ

ಇನ್ನೊಂದು ವಿಶೇಷ ಅಂದ್ರೆ 50 ವರ್ಷಗಳ ಹಿಂದೆ ಜನಪ್ರಿಯತೆ ಗಳಿಸಿದ್ದ ಮಾಂಟೆ ಕಾರ್ಲೋ ರ‍್ಯಾಲಿ ಸ್ಪೂರ್ತಿಯೊಂದಿಗೆ ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಅನ್ನು ಪರಿಚಯಿಸುತ್ತಿರುವ ಮಿನಿ, ಬೃಹತ್ ಏರ್ ಇಂಟೆಕ್ಸ್ ಮತ್ತು ಸ್ಪ್ಲಿಟರ್ ಅನ್ನು ಪರಿಚಯಿಸುತ್ತಿದೆ.

Recommended Video - Watch Now!
2017 Skoda Octavia RS Launched In India | In Kannada - DriveSpark ಕನ್ನಡ
ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಅನ್ನು ಪರಿಚಯಿಸಲಿದೆ ಮಿನಿ

ಜೊತೆಗೆ ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಮಾದರಿಗಳಿಗೆ ಸ್ಪೋರ್ಟ್ ಲುಕ್ ನೀಡಲಾಗಿದ್ದು, ಹಿಂಬದಿ ನೋಟದ ಕನ್ನಡಿಗಳನ್ನು ವಿಶೇಷವಾಗಿ ವಿನ್ಯಾಸಗಳೊಳಿಸಿರುವುದು ಕಾರಿನ ಅಂದವನ್ನು ಹೆಚ್ಚಿಸಿದೆ ಅಂದ್ರೆ ತಪ್ಪಾಗಲಾರದು.

ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಅನ್ನು ಪರಿಚಯಿಸಲಿದೆ ಮಿನಿ

ಹೀಗಾಗಿ ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಮಾದರಿಯು ಮಿನಿ ಕೂಪರ್ ಮಾದರಿಯನ್ನೇ ಹೋಲಿಕೆಯನ್ನೇ ಹೊಂದಿದ್ದು, ದೊಡ್ಡದಾದ ವಿಂಗ್, ಡಿಫ್ಯೂಸರ್, ಯೂನಿಯನ್ ಜ್ಯಾಕ್ ಟೈಲ್ ದೀಪಗಳು ಮತ್ತು 19 ಇಂಚಿನ ರೆಟ್ರಾಕ್ ಹಗುರ ಮಿಶ್ರಲೋಹದ ಚಕ್ರಗಳನ್ನು ಒಳಗೊಂಡಿದೆ.

ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಅನ್ನು ಪರಿಚಯಿಸಲಿದೆ ಮಿನಿ

ಅಲ್ಲೃದೇ ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಮಿನಿ ಆವೃತ್ತಿಯಲ್ಲಿ ಎರಡು ಆಸನಗಳ ವ್ಯವಸ್ಥೆಯಿದ್ದು, 2-ಲೀಟರ್ ಫೋರ್ ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಹಾಗೂ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲು ಹಲವು ಕ್ರಮಗಳ ಜೊತೆ ಕೆಲವು ಸಾಂಪ್ರದಾಯಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಅನ್ನು ಪರಿಚಯಿಸಲಿದೆ ಮಿನಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಮಿನಿ ಪರಿಚಯಿಸುತ್ತಿರುವ ಜಾನ್ ಕೂಪರ್ ಜಿಪಿ ಕಾನ್ಸೆಪ್ಟ್ ಮಾದರಿಯು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಟ್ರ್ಯಾಕ್ ಕೇಂದ್ರಿತ ಕಿಟ್‌ಗಳೊಂದಿಗೆ ಆಕ್ರಮಣಕಾರಿಯಾಗಿ ವಿನ್ಯಾಸಗೊಳಿಸಿರುವುದು ಹಲವು ವಿಶೇಷತೆ ಕಾರಣವಾಗಲಿವೆ.

Read more on ಮಿನಿ mini
English summary
Read in Kannada about MINI Reveals John Cooper Works GP Concept.
Story first published: Wednesday, September 6, 2017, 16:20 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark