ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

112 ವರ್ಷಗಳಷ್ಟು ಹಳೆಯದಾದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ರೋಲ್ಸ್ ರಾಯ್ಸ್ 14 ವರ್ಷಗಳ ನಂತರ ಮೊದಲ ಬಾರಿಗೆ ಫ್ಯಾಂಟಮ್ ಆವೃತ್ತಿಯನ್ನು ಎಂಟನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದೆ.

By Praveen

112 ವರ್ಷಗಳಷ್ಟು ಹಳೆಯದಾದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ರೋಲ್ಸ್ ರಾಯ್ಸ್ 14 ವರ್ಷಗಳ ನಂತರ ಮೊದಲ ಬಾರಿಗೆ ಫ್ಯಾಂಟಮ್ ಆವೃತ್ತಿಯನ್ನು ಎಂಟನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

8ನೇ ತಲೆಮಾರಿನ ಕಾರು ಮಾದರಿಯಲ್ಲಿ ವಿಶ್ವದರ್ಜೆಯ ಸೌಲಭ್ಯಗಳು ಲಭ್ಯವಿರಲಿದ್ದು, ಸುಧಾರಿತ ತಂತ್ರಜ್ಞಾನಗಳು ಮತ್ತು ಅಲ್ಯೂಮಿನಿಯಂ ಫ್ರೇಮ್‌ಗಳೊಂದಿಗೆ ಹೊರ ಮತ್ತು ಒಳ ವಿನ್ಯಾಸಗಳೊಂದಿಗೆ ಫ್ಯಾಂಟಮ್ ಆವೃತ್ತಿ ಅಭಿವೃದ್ಧಿಗೊಳ್ಳಲಿದೆ.

ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

ಅರಾಮದಾಯಕ ಸವಾರಿಗೆ ಅನುಕೂಲಕರವಾಗುವಂತೆ ಹೊಸ ಕಾರು ಆವೃತ್ತಿಯನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು, ಪ್ರಸುತ್ತ ಮಾದರಿಗಳಿಂತ ಶೇ.30ರಷ್ಟು ಸುಧಾರಿತ ತಂತ್ರಜ್ಞಾನ ಮತ್ತು ಹೊರ ಮತ್ತು ಒಳ ವಿನ್ಯಾಸಗಳು ಬದಲಾವಣೆಗೊಳ್ಳಲಿವೆ.

ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

ರೋಲ್ಸ್ ರಾಯ್ಸ್ ಇನ್ನೊಂದು ವಿಶೇಷ ಅಂದ್ರೆ ಕಾರಿನ ಪ್ರತಿಯೊಬ್ಬ ಭಾಗವು ಹ್ಯಾಂಡ್ ಮೆಡ್ ಕೌಶಲ್ಯತೆಗಳೊಂದಿಗೆ ಸಿದ್ಧಗೊಳ್ಳಲಿದ್ದು, ಸುಪ್ರಸಿದ್ಧ ವಿನ್ಯಾಸ ಪರಂಪರೆಯನ್ನು ಮುಂದುವರಿಸುವ ಬಗ್ಗೆ ಸುಳಿವು ನೀಡಿದೆ.

ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

ಇನ್ನು ಫ್ಯಾಂಟಮ್ ಆವೃತ್ತಿಯಲ್ಲಿ ಪ್ಯಾಂಥಿಯಾನಾ ಗ್ರಿಲ್ ಮರುನಿರ್ಮಾಣ ಮಾಡಲಾಗಿದ್ದು, ಸ್ಪಿರಿಟ್ ಆಫ್ ಎಕ್ಸ್ಟ್ಯಾಸಿಯ ಸ್ಥಾನವನ್ನು ಅರ್ಧ ಇಂಚು ಎತ್ತರಿಸಲಾಗಿದೆ. ಜೊತೆ ಹೊಸ ಹೆಡ್‌ಲ್ಯಾಂಡ್ ಗ್ರಾಫಿಕ್ ಕೂಡಾ ಅದ್ಭುತ ವಾಗಿದೆ.

ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

ಇದಲ್ಲದೇ ಫ್ರಾಸ್ಟೆಡ್ ಮತ್ತು ಹಗಲಿನ ಚಾಲನೆಯ ದೀಪಗಳು ಲೇಸರ್ ಬೆಳಕಿನ ವ್ಯವಸ್ಥೆಯೊಂದಿಗೆ ಉರಿಯುವ ವ್ಯವಸ್ಥೆ ಹೊಂದಿದ್ದು. ಇವು ರಾತ್ರಿ ವೇಳೆ 600 ಮೀಟರ್‌ಗಳಷ್ಟು ಬೆಳಕನ್ನು ಹೊರಸೂಸುತ್ತೆವೆ.

ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

ರೋಲ್ಸ್ ರಾಯ್ಸ್ ಹೊಸ ಆವೃತ್ತಿಯು ಫ್ಯಾಂಟಮ್‌ನಲ್ಲಿ 22 ಇಂಚಿನ ಅಲಾಯ್ ಚಕ್ರಗಳೊಂದಿಗೆ ಮಿಶ್ರಲೋಹಗಳನ್ನು ಬಳಸಿಕೊಂಡಿದ್ದು, ಸುರಕ್ಷತೆಗಾಗಿ ಪನೋರಮಿಕ್ ವೀಕ್ಷಣೆಯ 4 ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿಯೇ ಹೊಸ ಕಾರಿನ ಐಷಾರಾಮಿ ವೈಶಿಷ್ಟ್ಯತೆಗಳನ್ನು "ದ ಗ್ಯಾಲರಿ" ಎಂದು ಉಲ್ಲೇಖಿಸಲಾಗಿದೆ.

ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

ಹೆಚ್ಚುವರಿಯಾಗಿ 7x3 ಹೈ ರೆಜೆಲ್ಯೂಶನ್ ಹೆಚ್‌ಡಿ ಡಿಸ್ ಫೈ, ಕ್ರಾಸ್ ಟ್ರಾಫಿಕ್ ವಾರ್ನಿಂಗ್, ಆಕ್ಟಿವ್ ಕ್ರೂಸ್ ಕಂಟ್ರೋಲರ್ ಮತ್ತು ಪ್ರತಿಹಂತದಲ್ಲೂ ಸೆನ್ಸಾರ್ ಮಾದರಿಗಳನ್ನು ಫ್ಯಾಂಟಮ್ ಹೊಸ ಕಾರಿನಲ್ಲಿ ಪರಿಚಯಿಸಲಾಗಿದೆ.

ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

ಎಂಜಿನ್

6.75-ಲೀಟರ ವಿ12 ಪವರ್ ಟ್ರೈನ್ ಎಂಜಿನ್ ಹೊಂದಿರುವ ಫ್ಯಾಂಟಮ್ ಆವೃತ್ತಿಯು 563ಬಿಎಚ್‌ಪಿ ಮತ್ತು 900ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯೊಂದಿಗೆ ಝಡ್ಎಫ್ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದ್ದು, ಇದರ ಬೆಲೆ 80 ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ.

ಎಂಟನೇ ತಲೆಮಾರಿನ ರೋಲ್ಸ್ ರಾಯ್ಸ್ ಫ್ಯಾಂಟಮ್ ಹೇಗಿರಲಿದೆ ಗೊತ್ತಾ?

ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ದುಬಾರಿ ಕಾರುಗಳು ಲಭ್ಯವಿದ್ದರು 1925ರಲ್ಲಿ ಸರ್ ಹೆನ್ರಿ ರಾಯ್ಸ್ ನಿರ್ಮಿಸಿದ ಫ್ಯಾಂಟಮ್ ಆವೃತ್ತಿಯೂ ವಿಶ್ವದ ಅತ್ಯಂತ ಪ್ರಭಾವಿ ಕಾರು ಎಂದರೇ ತಪ್ಪಾಗಲಾರದು. ಈ ನಡುವೆ 8ನೇ ತಲೆ ಮಾರಿನ ರೋಲ್ಸ್ ರಾಯ್ಸ್ ಆವೃತ್ತಿ ಉತ್ಪಾದನೆಯಾಗುತ್ತಿರುವುದು ಮತ್ತಷ್ಟು ವಿಶೇಷತೆಗಳಿಗೆ ಕಾರಣವಾಗಲಿದೆ.

Most Read Articles

Kannada
English summary
Read in Kannada about Eighth-Generation Rolls Royce Phantom Revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X