ಕಾರು ಖರೀದಿಗೆ ಇದು ಸುವರ್ಣಾವಕಾಶ-ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ರೂ.71 ಸಾವಿರ ಡಿಸ್ಕೌಂಟ್..!!

Written By:

ದಸರಾ ಹಾಗೂ ದೀಪಾವಳಿ ವಿಶೇಷವಾಗಿ ಕಾರು ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿರುವ ನಿಸ್ಸಾನ್ ಇಂಡಿಯಾ ಸಂಸ್ಥೆಯು ವಿವಿಧ ಕಾರು ಮಾದರಿಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದೆ.

To Follow DriveSpark On Facebook, Click The Like Button
ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ಇನ್ನೇನು ದಸರಾ ಹಾಗೂ ದೀಪಾವಳಿ ಹಬ್ಬಗಳ ಆಚರಣೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಹೊಸ ವಾಹನಗಳ ಖರೀದಿ ಪ್ರಕ್ರಿಯೆ ಜೋರಾಗಲಿದ್ದು, ವಾಹನ ಉತ್ಪಾದಕರು ಗ್ರಾಹಕರನ್ನು ಸೆಳೆಯಲು ಹತ್ತಾರು ಆಫರ್‌ಗಳನ್ನು ಘೋಷಣೆ ಮಾಡುತ್ತಿದ್ದಾರೆ. ಆದ್ರೆ ನಿನ್ಸಾಸ್ ನೀಡುತ್ತಿರುವ ಡಿಸ್ಕೌಂಟ್ ಬೆಲೆಗಳು ಮಾತ್ರ ಕಾರು ಖರೀದಿದಾರರನ್ನು ಸೆಳೆಯದೇ ಇರಲಾರದು.

ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ನೀವು ಕಾರು ಖರೀದಿ ಮಾಡುವ ಯೋಚನೆಯಲ್ಲಿದ್ರೆ ನಿನ್ಸಾಸ್ ಘೋಷಣೆ ಮಾಡಿರುವ ಬೆಲೆಗಳನ್ನು ಒಂದು ಬಾರಿ ನೋಡಲೇಬೇಕು. ಯಾಕೇಂದ್ರೆ ಹಾಟ್ ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಯ ಮೈಕ್ರಾ ಆವೃತ್ತಿಗಳ ಮೇಲೆ ಬರೋಬ್ಬರಿ ರೂ.71 ಸಾವಿರ ಡಿಸ್ಕೌಂಟ್ ದೊರೆಯಲಿದೆ.

ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ಇನ್ನು ನಿನ್ಸಾಸ್ ಒಡೆತನದ ದಟ್ಸನ್ ಕಾರುಗಳ ಮೇಲೂ ಅತ್ಯುತ್ತಮ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿರುವ ನಿಸ್ಸಾನ್ ಪ್ರತಿ ಕಾರು ಖರೀದಿ ಮೇಲೆ ರೂ.16 ಸಾವಿರ ಡಿಸ್ಕೌಂಟ್ ಒದಗಿಸುವ ಬಗ್ಗೆ ನಿಸ್ಸಾನ್ ಹೇಳಿಕೊಂಡಿದೆ.

ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಮೈಕ್ರಾ ಆವೃತ್ತಿಗಳ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿರುವ ನಿಸ್ಸಾನ್, ರೂ.71 ಸಾವಿರ ರಿಯಾಯ್ತಿಯೊಂದಿಗೆ ಉಚಿತವಾಗಿ ಇನ್ಸುರೆನ್ಸ್, ಎಕ್ಸ್‌ಚೆಂಜ್ ಆವೃತ್ತಿಯ ಮೇಲೆ ರೂ.20 ಸಾವಿರ ಆಫರ್ ನೀಡಿದೆ.

ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ಎಕ್ಸ್‌‌ಚೆಂಜ್ ಕಾರು ಆವೃತ್ತಿ ಮೇಲೆ ರೂ.20 ಸಾವಿರ ಆಫರ್ ಅಷ್ಟೇ ಅಲ್ಲದೇ ರೂ.6 ಸಾವಿರ ಕಾರ್ಪೊರೇಟ್ ಆಫರ್ ಕೂಡಾ ನೀಡಲಾಗುತ್ತಿದ್ದು, ಮೈಕ್ರಾ ಎಂಸಿ ಕಾರು ಆವೃತ್ತಿಯ ಮೇಲೆ ರೂ.39 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದೆ.

ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ಇದರ ಜೊತೆ ಮೈಕ್ರಾ ಆಕ್ಟಿವ್ ಕಾರು ಆವೃತ್ತಿಯ ಖರೀದಿ ಮೇಲೆ ರೂ. 34 ಸಾವಿರ ಡಿಸ್ಕೌಂಟ್ ದೊರೆಯಲಿದ್ದು, ಎಕ್ಸ್‌ಚೆಂಜ್ ಮಾದರಿಯ ಮೇಲೆ ರೂ.10ಸಾವಿರ ಆಫರ್ ಹಾಗೂ ರೂ.4 ಸಾವಿರ ಕಾರ್ಪೊರೇಟ್ ಆಫರ್ ನೀಡಲಾಗುತ್ತಿದೆ.

ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ಅಂತಯೇ ದಟ್ಸನ್ ಆವೃತ್ತಿಗಳ ಖರೀದಿ ಮೇಲೂ ಉತ್ತಮ ಡಿಸ್ಕೌಂಟ್‌ಗಳು ಲಭ್ಯವಿದ್ದು, ರೆಡಿ ಗೋ, ಗೋ ಪ್ಸಸ್, ರೆಡಿ ಗೊ(800ಸಿಸಿ) ಕಾರು ಆವೃತ್ತಿಗಳ ಮೇಲೆ ರೂ.16 ಸಾವಿರ ಡಿಸ್ಕೌಂಟ್ ಹಾಗೂ ಉಚಿತ ಇನ್ಸುರೆನ್ಸ್ ಒದಿಸಲಾಗುತ್ತಿದೆ.

ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ಕೇವಲ ಕಾರು ಖರೀದಿ ಮೇಲೆ ಡಿಸ್ಕೌಂಟ್ ಒದಿಸುವುದು ಅಷ್ಟೇ ಅಲ್ಲದೇ ಅಗತ್ಯ ಹಣಕಾಸಿನ ನೆರವು ನೀಡುತ್ತಿರುವ ನಿಸ್ಸಾನ್, ನಿನ್ಸಾಸ್ ರೆನಾಲ್ಟ್ ಫೈನಾಶಿಯಲ್ ವಿಭಾಗದಿಂದ ಶೇ.7.99 ಬಡ್ಡಿ ದರದಲ್ಲಿ ಕಾರು ಖರೀದಿಗೆ ಸಾಲ ನೀಡಲಿದೆ.

ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ಈ ಕುರಿತು ಮಾತನಾಡಿರುವ ನಿಸ್ಸಾನ್ ಕಾರು ಮರಾಟ ವಿಭಾಗದ ನಿರ್ದೇಶಕ ಸತೀಂದ್ರ್ ಸಿಂಗ್ ಬಾಜ್ವಾ, ದೀಪಾವಳಿ ವಿಶೇಷವಾಗಿ ಭಾರತೀಯ ಗ್ರಾಹಕರಿಗೆ ಅತ್ಯುತ್ತಮ ಡಿಸ್ಕೌಂಟ್ ಬೆಲೆಗಳ ಮೂಲಕ ಮೈಕ್ರಾ ಉತ್ಪನ್ನಗಳನ್ನು ಒದಗಿಸಲಾಗುತ್ತಿದ್ದು, ನಿಸ್ಸಾನ್ ನೀಡುತ್ತಿರುವ ಆಫರ್‌ಗಳ ನಿಮ್ಮ ಕನಸಿನ ಯೋಜನೆಗಳನ್ನು ಸಹಕಾರಗೊಳಿಸಿಕೊಳ್ಳಲು ಇದು ಉತ್ತಮ ಅವಕಾಶ' ಎಂದಿದ್ದಾರೆ.

ನಿಸ್ಸಾನ್ ಮೈಕ್ರಾ ಖರೀದಿ ಮೇಲೆ ಸಿಗಲಿದೆ ರೂ.71 ಸಾವಿರ ಡಿಸ್ಕೌಂಟ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ನಿಸ್ಸಾನ್ ಘೋಷಣೆ ಮಾಡಿರುವ ವಿಶೇಷ ಆಫರ್‌ಗಳು ಸೆಪ್ಟೆಂಬರ್ 5 ರಿಂದಲೇ ಚಾಲ್ತಿಯಲ್ಲಿದ್ದು, ಕಾರು ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು. ಇನ್ನೊಂದು ಪ್ರಮುಖ ಸೂಚನೆ ಏನೆಂದರೇ ನಿಸ್ಸಾನ್ ನೀಡುತ್ತಿರುವ ಡಿಸ್ಕೌಂಟ್ ಬೆಲೆಗಳು ಒಂದು ನಗರದಿಂದ ಮತ್ತೊಂದು ನಗರಕ್ಕೆ ವ್ಯತ್ಯಾಸವಾಗಿರಲಿದ್ದು, ಕಾರು ಖರೀರಿಗೂ ಮುಖ ಪೂರ್ವಾಪರ ಚರ್ಚೆ ನಡೆಸಿ ವ್ಯವಹಾರ ಕೈಗೊಳ್ಳುವುದು ಒಳಿತು.

English summary
Read in Kannada about Nissan And Datsun India Announce Festive Benefits.
Please Wait while comments are loading...

Latest Photos