ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ

Written By:

ಭಾರತದ ದೈತ್ಯ ಇಂಧನ ಚಿಲ್ಲರೆ ವ್ಯಾಪಾರಿ ಸಂಸ್ಥೆಯಾಗಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಒಂದು ವಾರದಿಂದೀಚೆಗೆ ನಗರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳ ಇಂಧನ ಬೆಲೆ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಲವು ಸುಲಭ ಪ್ರತಿ ದಿನ ಇಂಧನಗಳ ಮಾರಾಟ ಬೆಲೆಯನ್ನು ಪರಿಷ್ಕರಿಸಲು ಮುಂದಾಗಿತ್ತು. ಈ ನಿಯಮದಂತೆ ಮೇ.16ರಿಂದ ದೇಶದ ಪ್ರಮುಖ ನಗರಗಳಲ್ಲಿ ದಿನಂಪ್ರತಿ ತೈಲ ಬೆಲೆ ಪರಿಷ್ಕರಣೆ ಕಾರ್ಯರೂಪಕ್ಕೆ ಬಂದಿತ್ತು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ

ಆದರೆ, ಕಳೆದ ಒಂದು ವಾರದಿಂದ ಪೆಟ್ರೋಲ್, ಡಿಸೇಲ್ ಬೆಲೆಗಳು ಭಾರೀ ಮಟ್ಟದಲ್ಲಿ ಏರಿಕೆಯತ್ತ ಸಾಗಿದ್ದು, ಇಂದು ಸಹ ಅದೇ ಪರಿಸ್ಥಿತಿ ಮುಂದುವರೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ

ಕಳೆದ ವಾರ, ಬೆಂಗಳೂರಿನಲ್ಲಿ ಇರುವಂತಹ ಮೂರು ಸಂಸ್ಥೆಗಳ ಪೆಟ್ರೋಲ್‌ ಸರಾಸರಿ ಮಾರಾಟ ದರ ₹ 70.62 ಇತ್ತು. ಈ ಭಾನುವಾರ (ಸೆ. 10) ಈ ಸರಾಸರಿ ಬೆಲೆ ₹ 71.31ರಷ್ಟಾಗಿದೆ. ಅಂದರೆ ಪ್ರತಿ ಲೀಟರ್‌ಗೆ 69 ಪೈಸೆ ಹೆಚ್ಚಳಗೊಂಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ

ಅಂತಾರಾಷ್ಟ್ರೀಯ ಇಂಧನ ಬೆಲೆಗಳಲ್ಲಿ ಕೊಂಚ ಮಟ್ಟಿನ ಬದಲಾವಣೆ ಆದರೂ ಸಹ ಅದರ ಪ್ರಯೋಜನ ಕೂಡಲೆ ಗ್ರಾಹಕರಿಗೆ ತಲುಪಿಸುವುದು ಇದರ ಮುಖ್ಯ ಉದ್ದೇಶ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ

ಸೆಪ್ಟೆಂಬರ್ 4ರಂದು ಇಂಧನ ಬೆಲೆಗಳು 50.36 ಡಾರಲ್‌ನಷ್ಟಿದ್ದರೆ, ಈಗ ಕಚ್ಚಾತೈಲದ ಬೆಲೆ 52.53 ಡಾಲರ್‌ನಷ್ಟು ನಮೂದಾಗಿದೆ. ಈ ರೀತಿಯ ಬೆಲೆ ವ್ಯತ್ಯಾಸಗಳ ಬಗ್ಗೆ ಮತ್ತು ಗೊಂದಲ ನಿವಾರಣೆಗಾಗಿ ಎಸ್ಎಂಎಸ್, ಆ್ಯಪ್ ಮತ್ತು ವೈಬ್‌ಸೈಟ್ ಮೂಲಕ ಪ್ರಸ್ತುತ ಬೆಲೆಗಳ ಮಾಹಿತಿ ಸಂಸ್ಥೆಗಳು ನೀಡುತ್ತಿವೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆ

ಹೊಸ ನಿಯಮ ಕಾರ್ಯರೂಪಕ್ಕೆ ಬಂದ ನಂತರ ಈ ಯೋಜನೆಯಿಂದಾಗಿ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನಲಾಗಿತ್ತು, ಆದರೆ, ಸದ್ಯದ ಮಾಹಿತಿ ಪ್ರಕಾರ ಗ್ರಾಹಕನಿಗೆ ಹೆಚ್ಚು ಹೊರೆ ಬೀಳುತ್ತಿರುವುದಂತೂ ಸತ್ಯ.

Read more on ಇಂಧನ fuel
English summary
The Indian basket of imported crude oils gained nearly $3.50 a barrel during last week even as petrol prices in the country touched their highest levels since Prime Minister Narendra Modi assumed office three years ago, official data showed on Monday.
Story first published: Tuesday, September 12, 2017, 14:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark