ಬೀದರ್-ಕಲ್ಬುರ್ಗಿ ನಡುವಿನ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಬೀದರ್- ಕಲ್ಬುರ್ಗಿ ನಡುವಿನ ನೂತನ ರೈಲ್ವೆ ಯೋಜನೆ ಇದೀಗ ಪೂರ್ಣಗೊಂಡಿದ್ದು, ಕರ್ನಾಟಕದ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಯೋಜನೆಗೆ ಹಸಿರುವ ನಿಶಾನೆ ತೋರಿದ್ದಾರೆ.

By Praveen

ಕಳೆದ 16 ವರ್ಷಗಳಿಂದ ಅನುದಾನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಬೀದರ್- ಕಲ್ಬುರ್ಗಿ ನಡುವಿನ ನೂತನ ರೈಲ್ವೆ ಯೋಜನೆ ಇದೀಗ ಪೂರ್ಣಗೊಂಡಿದ್ದು, ಕರ್ನಾಟಕದ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹೊಸ ಯೋಜನೆಗೆ ಹಸಿರುವ ನಿಶಾನೆ ತೋರಿದ್ದಾರೆ.

ಬೀದರ್-ಕಲ್ಬುರ್ಗಿ ನಡುವಿನ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಹೈದರಾಬಾದ್ ಕರ್ನಾಟಕ ಭಾಗದ ದಶಕಗಳ ಕನಸು ನನಸಾಗಿದ್ದು, ಭಾನುವಾರ ಸಂಜೆ ಬೀದರ್‌ನಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪ್ರಧಾನಿ ಮೋದಿಯವರು ಹೊಸ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಈ ಭಾಗದ ಹೊಸ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದ್ದಾರೆ.

ಬೀದರ್-ಕಲ್ಬುರ್ಗಿ ನಡುವಿನ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಟ್ವಿಟರ್ ಖಾತೆಯಲ್ಲೂ ಹೊಸ ರೈಲು ಯೋಜನೆಗೆ ಹಸಿರು ನಿಶಾನೆ ತೋರಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಬೀದರ್ ಕಲ್ಬುರ್ಗಿ ಜನತೆಗೆ ಶುಭಕೋರಿದ್ದಾರೆ.

Recommended Video

[Kannada] Mahindra KUV 100 NXT Launched In India - DriveSpark
ಬೀದರ್-ಕಲ್ಬುರ್ಗಿ ನಡುವಿನ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಇನ್ನು ಹೊಸ ರೈಲು ಯೋಜನೆಯಿಂದಾಗಿ ಬೀದರ್ ಕಲ್ಬುರ್ಗಿ ನಡುವಿನ ಸಂಚಾರ ವ್ಯವಸ್ಥೆ ಸುಲಭವಾಗಲಿದ್ದು, ಕಲ್ಬುರ್ಗಿಯಿಂದ 2 ಬಾರಿ ಬೀದರ್‌ನಿಂದ 2 ಬಾರಿ ಹೊಸ ರೈಲುಗಳು ಸಂಚಾರ ನಡೆಸಲಿವೆ. ಜೊತೆಗೆ 104 ಕಿಮಿ ಹೊಸ ರೈಲು ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳನ್ನು ಆರಂಭಿಸಲಾಗಿದೆ.

ಬೀದರ್-ಕಲ್ಬುರ್ಗಿ ನಡುವಿನ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಯೋಜನೆಯ ಹಿನ್ನೋಟ

ಮೊದ ಮೊದಲು ಕುಲ್ಬುರ್ಗಿ-ಬೀದರ್ ನಡುವಿನ ರೈಲ್ವೆ ಯೋಜನೆಯ ಕಾಮಗಾರಿಯನ್ನು ರೂ. 383 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ನಂತರ ಇದು 1,542 ಕೋಟಿ ಪರಿಷ್ಕೃತ ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ.

ಓದಿರಿ-ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

ಬೀದರ್-ಕಲ್ಬುರ್ಗಿ ನಡುವಿನ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ಇದಲ್ಲದೇ ರೈಲು ಮಾರ್ಗ ಯೋಜನೆಗೆ 1999ರಲ್ಲೇ ಚಾಲನೆ ಸಿಕ್ಕಿತ್ತು. ಬಳಿಕ 2000ದ ಇಸವಿಯಲ್ಲಿ ಅಂದಿನ ರೈಲ್ವೆ ಸಚಿವ ಬಂಗಾರು ಲಕ್ಷ್ಮಣ್ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಆದ್ರೆ ಅನುದಾನದ ಕೊರತೆಯಿಂದಾಗಿ ಯೋಜನೆಯು ನೆನೆಗುದಿಗೆ ಬಿದ್ದಿತ್ತು.

ಬೀದರ್-ಕಲ್ಬುರ್ಗಿ ನಡುವಿನ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

ತದನಂತರ ಸಂಸದರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಹಿಂದೆ ರೈಲ್ವೆ ಸಚಿವರಾಗಿದ್ದಲೂ ಅನುದಾನ ಬಿಡುಗಡೆ ಮಾಡಿದ್ದರು. ಇದರಿಂದಾಗಿ ಕಾಮಗಾರಿಗೆ ವೇಗ ಸಿಕ್ಕು ಇದೀಗ 16 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದೆ.

Treading On DriveSpark Kannada:

ಬರ್ತಿದೆ ಹೊಸ ರೂಲ್ಸ್ !! ಇನ್ಮುಂದೆ 80 ಕಿ.ಮೀಗೂ ಜೋರಾಗಿ ವಾಹನ ಓಡಿಸುವ ಹಾಗಿಲ್ಲ...

ಭಾರತ್‌ಮಾಲಾ ಯೋಜನೆಗೆ ಕೇಂದ್ರ ಸಚಿವ ಸಂಪುಟದಿಂದ ಒಪ್ಪಿಗೆ- ಆರ್ಥಿಕ ಅಭಿವೃದ್ಧಿಗೆ ಹೊಸ ಹೆಜ್ಜೆ

Most Read Articles

Kannada
Read more on train ರೈಲು
English summary
Read in Kannada about PM Narendra Modi Inaugurate the 110 km Bidar-Kalaburgi Railway Track in the Hyderabad-Karnataka Region.
Story first published: Monday, October 30, 2017, 13:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X