ಇನ್ಮುಂದೆ ಬೆಂಗಳೂರಿನಲ್ಲಿ ಶುರುವಾಗಲಿದೆ ಪಾಡ್ ಟ್ಯಾಕ್ಸಿ‌ಗಳ ಸದ್ದು..!!

ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಮಹತ್ವದ ಹಜ್ಜ ಇರಿಸಿರುವ ಬಿಬಿಎಂಪಿಯು ಕನಸಿನ ಯೋಜನೆಯಾದ 'ಪಾಡ್‌ ಟ್ಯಾಕ್ಸಿ' ಅನುಷ್ಠಾನಕ್ಕೆ ಮುಂದಾಗಿದ್ದು, ಮಹತ್ವದ ಯೋಜನೆಗೆ ಸದ್ಯದಲ್ಲೇ ಹಸಿರು ನಿಶಾನೆ ತೊರಲಾಗುತ್ತಿದೆ.

By Praveen

ರಾಜಧಾನಿ ಬೆಂಗಳೂರಿಗೆ ಕುಖ್ಯಾತಿ ತಂದುಕೊಟ್ಟಿರುವ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಮಹತ್ವದ ಹಜ್ಜ ಇರಿಸಿರುವ ಬಿಬಿಎಂಪಿಯು ಕನಸಿನ ಯೋಜನೆಯಾದ 'ಪಾಡ್‌ ಟ್ಯಾಕ್ಸಿ' ಅನುಷ್ಠಾನಕ್ಕೆ ಮುಂದಾಗಿದ್ದು, ಮಹತ್ವದ ಯೋಜನೆಗೆ ಸದ್ಯದಲ್ಲೇ ಹಸಿರು ನಿಶಾನೆ ತೊರಲಾಗುತ್ತಿದೆ.

ಇನ್ಮುಂದೆ ಬೆಂಗಳೂರಿನಲ್ಲಿ ಶುರುವಾಗಲಿದೆ ಪಾಡ್ ಟ್ಯಾಕ್ಸಿ‌ಗಳ ಸದ್ದು..!!

ಇದಕ್ಕಾಗಿಯೇ ಈ ಹಿಂದೆ ಟೆಂಡರ್ ಕೂಡಾ ಕರೆದಿದ್ದ ಬಿಎಂಎಂಪಿಯು ಅಮೆರಿಕ ಮೂಲದ ಸಂಸ್ಥೆಯೊಂದರ ಜೊತೆ ಮಾತುಕತೆ ನಡೆಸಿತ್ತು. ಇದೀಗ ಅದೇ ಸಂಸ್ಥೆಯು ನಿಗದಿತ ವೆಚ್ಚದಲ್ಲಿ ಪೂರ್ಣಪ್ರಮಾಣದ ಪಾಡ್ ಟ್ಯಾಕ್ಸಿ ಸಂಚಾರವನ್ನು ತೆರೆಯಲು ಮುಂದಾಗಿದೆ ಎನ್ನಲಾಗಿದೆ.

ಇನ್ಮುಂದೆ ಬೆಂಗಳೂರಿನಲ್ಲಿ ಶುರುವಾಗಲಿದೆ ಪಾಡ್ ಟ್ಯಾಕ್ಸಿ‌ಗಳ ಸದ್ದು..!!

ಈ ಯೋಜನೆ ಜಾರಿಯಾದರೆ, ಭೂಮಿ ಮತ್ತು ಆಕಾಶದ ಮಧ್ಯೆ ಸಾಗುವ ಪಾಡ್‌ ಟ್ಯಾಕ್ಸಿಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಬಿಎಂಟಿಸಿ, ಮೆಟ್ರೊ, ಟ್ಯಾಕ್ಸಿ, ಆಟೊಗಳ ಜತೆಗೆ ಪಾಡ್‌ ಟ್ಯಾಕ್ಸಿಗಳು ಸಹ ನಗರಕ್ಕೆ ಲಗ್ಗೆ ಇಡುವ ಕಾಲ ಸನ್ನಿಹಿತವಾಗುತ್ತಿದೆ. ರಸ್ತೆ ವಿಭಜಕದ ಮಧ್ಯದಲ್ಲಿ ಅಳವಡಿಸುವ ಕಬ್ಬಿಣದ ಕಂಬಿಗಳ ಮೇಲೆ ಪಾಡ್‌ ಟ್ಯಾಕ್ಸಿಗಳು ಸಂಚರಿಸಲಿವೆ.

Recommended Video

Ferrari GTC4Lusso And GTC4Lusso T Launched In India - DriveSpark
ಇನ್ಮುಂದೆ ಬೆಂಗಳೂರಿನಲ್ಲಿ ಶುರುವಾಗಲಿದೆ ಪಾಡ್ ಟ್ಯಾಕ್ಸಿ‌ಗಳ ಸದ್ದು..!!

''ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರಿನಂತಹ ನಗರಕ್ಕೆ ಪಾಡ್‌ ಟ್ಯಾಕ್ಸಿ ಸೇವೆ ಅತ್ಯಗತ್ಯವೆನಿಸಿದೆ. ಮುಂಬರುವ ದಿನಗಳಲ್ಲಿ ನಗರದ ಕೇಂದ್ರ ಭಾಗವು ಕಿಷ್ಕಿಂಧೆಯಾಗಲಿದ್ದು, ಸುಗಮ ವಾಹನ ಸಂಚಾರಕ್ಕೆ ಸಮಸ್ಯೆಯಾಗಲಿದೆ. ಹಾಗಾಗಿ, ಪಾಡ್‌ ಟ್ಯಾಕ್ಸಿ ವ್ಯವಸ್ಥೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.

ಇನ್ಮುಂದೆ ಬೆಂಗಳೂರಿನಲ್ಲಿ ಶುರುವಾಗಲಿದೆ ಪಾಡ್ ಟ್ಯಾಕ್ಸಿ‌ಗಳ ಸದ್ದು..!!

ಇನ್ನು ವಿದೇಶಗಳಲ್ಲಿ ಪಾಡ್‌ ಟ್ಯಾಕ್ಸಿಯು ಸಾಕಷ್ಟು ಜನಪ್ರಿಯತೆ ಗಳಿಸಿದ್ದು, ಇದೇ ಉದ್ದೇಶದಿಂದ ನಮ್ಮ ಬೆಂಗಳೂರಿನಲ್ಲೂ ಪಾಡ್ ಟ್ಯಾಕ್ಸಿಗಳನ್ನು ಆರಂಭಿಸಲಾಗುತ್ತಿದೆ.

ಇನ್ಮುಂದೆ ಬೆಂಗಳೂರಿನಲ್ಲಿ ಶುರುವಾಗಲಿದೆ ಪಾಡ್ ಟ್ಯಾಕ್ಸಿ‌ಗಳ ಸದ್ದು..!!

ಮೆಟ್ರೋ ಫೀಡರ್‌ ಸೇವೆ:

''ಸದ್ಯ ಎಂ.ಜಿ.ರಸ್ತೆ, ಮಾರತ್‌ಹಳ್ಳಿ, ಜಯನಗರ 5ನೇ ಬ್ಲಾಕ್‌ ಸೇರಿದಂತೆ ಐದು ಕಡೆ ಪಾಡ್‌ ಟ್ಯಾಕ್ಸಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಆ ಬಳಿಕ ಜನದಟ್ಟಣೆ ಹೆಚ್ಚಿರುವ ಪ್ರದೇಶಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಟ್ಯಾಕ್ಸಿಗಳು ಮೆಟ್ರೊ ರೈಲುಗಳಿಗೆ ಫೀಡರ್‌ ಸಾರಿಗೆ ಸೇವೆಯಾಗಿ ಕಾರ್ಯ ನಿರ್ವಹಿಸಲಿವೆ ಎನ್ನಲಾಗಿದೆ.

ಇನ್ಮುಂದೆ ಬೆಂಗಳೂರಿನಲ್ಲಿ ಶುರುವಾಗಲಿದೆ ಪಾಡ್ ಟ್ಯಾಕ್ಸಿ‌ಗಳ ಸದ್ದು..!!

ಇದರಿಂದ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಪಾಡ್‌ ಟ್ಯಾಕ್ಸಿ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು, 100 ಕಿ.ಮೀ ವೇಗದಲ್ಲಿ ಸಂಚರಿಸುವ ಈ ಟ್ಯಾಕ್ಸಿಗಳಲ್ಲಿ ಗಂಟೆಗೆ 15 ಸಾವಿರ ಮಂದಿ ಪ್ರಯಾಣಿಸಬಹುದಾಗಿದೆ. ಹೀಗಾಗಿ ಒಂದು ಕಿ.ಮೀ ಮಾರ್ಗ ನಿರ್ಮಾಣಕ್ಕೆ 50 ಕೋಟಿ ರೂ. ವೆಚ್ಚವಾಗಲಿದೆ.

ಇನ್ಮುಂದೆ ಬೆಂಗಳೂರಿನಲ್ಲಿ ಶುರುವಾಗಲಿದೆ ಪಾಡ್ ಟ್ಯಾಕ್ಸಿ‌ಗಳ ಸದ್ದು..!!

ಪಾಡ್‌ ಟ್ಯಾಕ್ಸಿ ಮಾರ್ಗಗಳು:

ಎಲ್ಲಿಂದ ಎಲ್ಲಿಗೆ ಉದ್ದ - (ಕಿ.ಮೀ ಗಳಲ್ಲಿ)

ಎಂ.ಜಿ.ರಸ್ತೆಯ ಟ್ರಿನಿಟಿ ವೃತ್ತ ಲೀಲಾ ಪ್ಯಾಲೇಸ್‌ -4 ಕಿ.ಮಿ

ಲೀಲಾ ಪ್ಯಾಲೇಸ್‌ ಮಾರತ್‌ಹಳ್ಳಿ ಜಂಕ್ಷನ್‌ -6 ಕಿ.ಮಿ

ಮಾರತ್‌ಹಳ್ಳಿ ಜಂಕ್ಷನ್‌ ಇಪಿಐಪಿ ಗ್ರಾಫೈಟ್‌ ಇಂಡಿಯಾ ರಸ್ತೆ -6.50 ಕಿಮಿ

ಟ್ರಿನಿಟಿ ಮೆಟ್ರೊ ನಿಲ್ದಾಣ ಕೋರಮಂಗಲ ಎಚ್‌ಎಸ್‌ಆರ್‌ ಲೇಔಟ್‌ - 7.10 ಕಿಮಿ

ಜಯನಗರ 5ನೇ ಬ್ಲಾಕ್‌ ಜೆ.ಪಿ.ನಗರ 6ನೇ ಹಂತ -5.30 ಕಿಮಿ

ಇನ್ಮುಂದೆ ಹೊಸ ಕಾರು ಖರೀದಿಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಅತಿವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಹೊಸ ಹೊಸ ಸಾರಿಗೆ ವ್ಯವಸ್ಥೆಗಳು ಬರುತ್ತಿರುವುದು ಸ್ವಾಗತಾರ್ಹ. ಆದ್ರೆ ಸದ್ಯ ಚಾಲ್ತಿಯಲ್ಲಿ ಸಂಚಾರ ವ್ಯವಸ್ಥೆಗಳನ್ನು ಉನ್ನತಿಕರಣ ಮಾಡುವ ಅವಶ್ಯಕತೆ ಇದೆ. ಜೊತೆಗೆ ನಮ್ಮ ಮೆಟ್ರೋ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಅವಶ್ಯಕತೆ ಕೂಡಾ ಇದೆ.

Trending On DriveSpark Kannada:

Most Read Articles

Kannada
English summary
Read in Kannada about Urban experts and civic activists might be skeptical about the proposed pod taxi project for five city stretches, but a confident BBMP is going ahead with it.
Story first published: Tuesday, October 17, 2017, 19:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X