ಉನ್ನತ ಮಾದರಿಯ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿ ಭಾರತದಲ್ಲಿ ಪ್ರಾರಂಭ

Written By:

ಲ್ಯಾಂಡ್ ರೋವರ್ ಭಾರತದಲ್ಲಿ ತನ್ನ ಪ್ರಮುಖ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿ ಕಾರಿನ ಉನ್ನತ-ಶ್ರೇಣಿಯ ಕಾರನ್ನು ಪ್ರಾರಂಭಿಸಿದೆ. ಈ ರೇಂಜ್ ರೋವರ್ ಆಟೋಬಯಾಗ್ರಫಿ ಕಾರು ರೂ.2.80 ಕೋಟಿ ಬೆಲೆ ಪಡೆದುಕೊಂಡಿದೆ.

ಉನ್ನತ ಮಾದರಿಯ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿ ಭಾರತದಲ್ಲಿ ಪ್ರಾರಂಭ

ಜಗ್ವಾರ್ ಲ್ಯಾಂಡ್ ರೋವರ್ ಕಂಪನಿಯ ಸ್ಪೆಷಲ್ ವೆಹಿಕಲ್ ಆಪರೇಷನ್ಸ್ (ಎಸ್‌ವಿಓ)ನಿಂದ ಉನ್ನತ ಮಾದರಿಯ ರೇಂಜ್ ರೋವರ್ ಆಟೋಬಯಾಗ್ರಫಿ ಕಾರು ವಿನ್ಯಾಸಗೊಂಡಿದೆ. ಎಸ್.ವಿ.ಓ ಬೆಸ್ಪೋಕ್ ಮಾದರಿಯು 2017ರ ಲಾಂಗ್ ವೀಲ್ ಬೇಸ್ ರೇಂಜ್ ರೋವರ್ ಕಾರನ್ನು ಆಧರಿಸಿದೆ.

ಉನ್ನತ ಮಾದರಿಯ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿ ಭಾರತದಲ್ಲಿ ಪ್ರಾರಂಭ

ಈ ಬೆಸ್ಪೋಕ್ ಮಾದರಿಯನ್ನು ಗ್ರಾಹಕರಿಗೆ ವಿಶೇಷವಾದ ವೈಯಕ್ತೀಕರಣ ಆಯ್ಕೆಗಳೊಂದಿಗೆ ಅನಾವರಣಗೊಳಿಸಲಾಗಿದೆ. ಎಸ್.ವಿ.ಓ ವಿಭಾಗ ನಿರ್ಮಾಣ ಮಾಡಿರುವ ಐದು ರೇಂಜ್ ರೋವರ್ ಆಟೋಬಯಾಗ್ರಫಿ ಕಾರುಗಳನ್ನು ಲ್ಯಾಂಡ್ ರೋವರ್ ಚಿಲ್ಲರೆ ಮಾರಾಟ ಮಾಡುತ್ತಿದೆ.

ಉನ್ನತ ಮಾದರಿಯ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿ ಭಾರತದಲ್ಲಿ ಪ್ರಾರಂಭ

ಬಾಹ್ಯಭಾಗದಲ್ಲಿ, ರೇಂಜ್ ರೋವರ್ ಆಟೋಬಯಾಗ್ರಫಿ ಕಾರು ಬೆಸ್ಪೋಕ್ ಸ್ಯಾಟಿನ್ ಬ್ಲೂ ಮತ್ತು ಬೆಸ್ಪೋಕ್ ಗ್ಲಾಸ್ ಬ್ಲ್ಯಾಕ್ ಜೊತೆಗೆ ಕಾಪರ್ ಫ್ಲೇಕ್ ಎಂಬ ಎರಡು ಬಣ್ಣದ ಯೋಜನೆಗಳನ್ನು ಪಡೆದು ಅನಾವರಣಗೊಂಡಿದೆ.

ಉನ್ನತ ಮಾದರಿಯ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿ ಭಾರತದಲ್ಲಿ ಪ್ರಾರಂಭ

ಇದಲ್ಲದೆ, ಈ ಎಸ್‌ಯುವಿ ಕಾರು ದೇಹದ ಬಣ್ಣಕ್ಕೆ ಸರಿ ಹೊಂದುವ ಮಿರರ್ ಕ್ಯಾಪ್‌ಗಳನ್ನು ಮತ್ತು ಹೊರಗಿನ ಉಚ್ಚಾರಣೆ ಪ್ಯಾಕ್‌ಗಳನ್ನು ಪಡೆಯುತ್ತದೆ ಹಾಗು 21 ಇಂಚು ಅಥವಾ 22 ಇಂಚಿನ ಆಯ್ಕೆಯಲ್ಲಿ ಮಿಶ್ರಲೋಹದ ಚಕ್ರಗಳು ಬಿಡುಗಡೆಯಾಗಿದ್ದು, ತಮಗೆ ಬೇಕಾದ ಗಾತ್ರವನ್ನು ಆಯ್ಕೆ ಮಾಡಬಹುದು.

ಉನ್ನತ ಮಾದರಿಯ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿ ಭಾರತದಲ್ಲಿ ಪ್ರಾರಂಭ

ಸದ್ಯ ಇರುವಂತಹ 4.4-ಲೀಟರ್ ವಿ8 ಡೀಸೆಲ್ ಮತ್ತು 5-ಲೀಟರ್ ಸೂಪರ್ ಚಾರ್ಜ್ಡ್ ವಿ8 ಪೆಟ್ರೋಲ್ ಎಂಜಿನ್ ಆಯ್ಕೆಯೆಯೊಂದಿಗೆ ಈ ಕಾರು ಬಿಡುಗಡೆಗೊಳ್ಳಲಿದ್ದು, ಈ 5-ಲೀಟರ್ ಎಂಜಿನ್ 535 ಬಿಎಚ್‌ಪಿ ಟಾರ್ಕ್ ಮತ್ತು 4.4-ಲೀಟರ್ ಎಂಜಿನ್ 330 ಬಿಎಚ್‌ಪಿ ಟಾರ್ಕ್ ಉತ್ಪಾದಿಸುತ್ತದೆ.

ಉನ್ನತ ಮಾದರಿಯ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿ ಭಾರತದಲ್ಲಿ ಪ್ರಾರಂಭ

ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ಪಡೆದುಕೊಂಡಿರುವ ಈ ಮಾದರಿಯು ಕೇವಲ 5.4 ಸೆಕೆಂಡುಗಳಲ್ಲಿ 100 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವಷ್ಟು ಬಲಿಷ್ಠವಾಗಿದೆ.

ಉನ್ನತ ಮಾದರಿಯ ರೇಂಜ್ ರೋವರ್ ಆಟೋಬಯಾಗ್ರಫಿ ಎಸ್‌ಯುವಿ ಭಾರತದಲ್ಲಿ ಪ್ರಾರಂಭ

ಎಸ್‌ವಿಓ ರೇಂಜ್ ರೋವರ್ ಆಟೋಬಯಾಗ್ರಫಿ ಕಾರನ್ನು ದೇಶದಾದ್ಯಂತ ಇರುವಂತಹ ಯಾವುದೇ ಜಗ್ವಾರ್ ಲ್ಯಾಂಡ್ ರೋವರ್ ಮಾರಾಟಗಾರರ ಮೂಲಕ ಬುಕ್ ಮಾಡಬಹುದಾಗಿದೆ ಅಥವಾ ಗ್ರಾಹಕರು ನೇರವಾಗಿ ಯು.ಕೆ ಯಲ್ಲಿರುವ Warwickshire ಕೊವೆಂಟ್ರಿ ಬಳಿ ಇರುವಂತಹ ಬೆಸ್ಪೋಕ್ ಕಾರ್ಯಾಚರಣಾ ಸೌಲಭ್ಯವನ್ನು ಭೇಟಿ ಮಾಡುವ ಮೂಲಕ ಕಾರನ್ನು ಬುಕ್ ಮಾಡಬಹುದು.

English summary
Range Rover Autobiography By SVO Bespoke Launched In India; Priced At Rs 2.80 Crore

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark