84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

Written By:

ಒಂದ್ ಐಷಾರಾಮಿ ಕಾರಿನ ಬೆಲೆ ಅಬ್ಬಬ್ಬಾ ಅಂದ್ರೆ ಎಷ್ಟು ಬೆಲೆ ಇರುತ್ತೆ, 5 ಕೋಟಿ ಅತ್ವ 10 ಕೋಟಿ ಇರುತ್ತೆ. ಆದ್ರೆ ಈ ಕಾರಿನ ಬೆಲೆ ಬರೋಬ್ಬರಿ ರೂ. 84 ಕೋಟಿ ಅಂದ್ರೆ ನಂಬಲೇ ಬೇಕು.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

ಹೌದು, ಐಷಾರಾಮಿ ಕಾರು ತಯಾರಕ ರೋಲ್ಸ್ ರಾಯ್ಸ್ ಸಂಸ್ಥೆಯ 'ಸ್ವೆಪ್‌ಟೈಲ್' ಕಾರು ಪ್ರಪಂಚದ ಅತ್ಯಂತ ದುಬಾರಿ ಕಾರು ಎಂಬ ಖ್ಯಾತಿಗೆ ಪಾತ್ರವಾಗಿದೆ. ದುಬಾರಿ ಬೆಸ್ಪೋಕ್ ಹೊಂದಿರುವ ರೋಲ್ಸ್ ರಾಯ್ಸ್ ಸ್ವೆಪ್‌ಟೈಲ್ ಕಾರಿನ ಒಡೆಯನ ಹೆಸರನ್ನು ಕಂಪನಿ ರಹಸ್ಯ ಇರಿಸಿದೆ.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

ಅತ್ಯಂತ ಶ್ರೀಮಂತ ಗ್ರಾಹಕರೊಬ್ಬರು ತಮ್ಮ ಕಲ್ಪನೆಗೆ ತಕ್ಕಂತೆ ಬೆಸ್ಪೋಕ್ ಕಾರನ್ನು ಉತ್ಪಾದನೆ ಮಾಡುವಂತೆ ರೋಲ್ಸ್ ರೊಯ್ಸ್‌ ಸಂಸ್ಥೆಗೆ ಕೇಳಿಕೊಂಡಿದ್ದರು ಎನ್ನಲಾಗಿದೆ.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

ಗ್ರಾಹಕರ ಅಭಿರುಚಿಗನುಗುಣವಾಗಿ ಕಾರು ತಯಾರು ಮಾಡುವುದರಲ್ಲಿ ಖ್ಯಾತಿ ಪಡೆದಿರುವ ರೋಲ್ಸ್ ರಾಯ್ಸ್ ಈ ವಿಶೇಷ ಗ್ರಾಹಕನ ಕೋರಿಕೆಯನ್ನು 2013ರಲ್ಲಿ ಒಪ್ಪಿಕೊಂಡಿತ್ತು.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

ಕಾರಿನ ಕಲ್ಪನೆಯನ್ನು ಗ್ರಾಹಕ 2013ರಲ್ಲಿ ಮೊದಲ ಬಾರಿಗೆ ಹಂಚಿಕೊಂಡಿದ್ದು, ರೋಲ್ಸ್-ರಾಯ್ಸ್‌ನ ಸ್ವೆಪ್‌ಟೈಲ್ ಕಾರನ್ನು ನಿರ್ಮಿಸಲು ಸುಮಾರು ನಾಲ್ಕು ವರ್ಷಗಳ ಕಾಲ ತೆಗೆದುಕೊಂಡಿತು.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

1920-30ರ ದಶಕದಲ್ಲಿ ಇದ್ದ ರೋಲರುಗಳ ಪ್ರಭಾವ ಇರುವ ಕಾರನ್ನು ನಿರ್ಮಿಸುವಂತೆ ರೋಲ್ಸ್ ರಾಯ್ಸ್ ಸಂಸ್ಥೆಗೆ ಶ್ರೀಮಂತ ಗ್ರಾಹಕ ಕೇಳಿಕೊಂಡಿದ್ದ ಎನ್ನಲಾಗಿದ್ದು, ಈತನ ಕೋರಿಕೆಯನ್ನು ಮನ್ನಿಸಿದ ಸಂಸ್ಥೆ ಎರಡು ಆಸನ ಹೊಂದಿರುವ ಕಾರನ್ನು ನಿರ್ಮಿಸಿದೆ.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

ನವೀನ ರೀತಿಯ ಕ್ರೋಮ್ ಗ್ರಿಲ್ ಹೊಂದಿರುವ ಈ ಕಾರು ಅತ್ಯಾಧುನಿಕ ರೋಲ್ಸ್ ರಾಯ್ಸ್ ಆಗಿದ್ದು, ತೆಳುವಾದ ಎಲ್ಇಡಿ ದೀಪಗಳನ್ನು ಹೊಂದಿದೆ.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

ಎರಡು ಬದಿಯಲ್ಲಿ ಇಳಿಜಾರಿನ ರೀತಿಯ ವಿನ್ಯಾಸ ಹೊಂದಿರುವ ಈ ಕಾರು, ಹಿಂಭಾಗ ಒಂದೇ ಕೇಂದ್ರ ಬಿಂದುವಿನಲ್ಲಿ ಸಂದಿಸಲಿದ್ದು, ಹೆಚ್ಚು ಸ್ಟೈಲಿಶ್ ಆಗಿದೆ.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

ಪ್ರತಿಯೊಂದು ವಿಚಾರದಲ್ಲಿ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದಿರುವ ಈ ಕಾರು ಸಂಸ್ಥೆಯ ಈ ಹಿಂದಿನ ಮಾದರಿಯ ಪ್ರೊಫೈಲ್ ಗಿಂತ ಸಾಕಷ್ಟು ಬದಲಾವಣೆ ಪಡೆದುಕೊಂಡಿದೆ.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

ಬೃಹತ್ ವೀಲ್ ಬೇಸ್ ಹೊಂದಿದ್ದರೂ ಸಹ, ಇಬ್ಬರು ವ್ಯಕ್ತಿಗಳಿಗೆ ಮಾತ್ರ ಪ್ರಯಾಣಿಸಲು ಸ್ಥಳಾವಕಾಶ ಮಾಡಿಕೊಡಲಾಗಿದ್ದು, ಒಳಭಾಗದಲ್ಲಿ ಸಾಕಷ್ಟು ಬೆಳಕಿನ ದೀಪಗಳನ್ನು ಅಳವಡಿಸಿ ಹೆಚ್ಚು ಆಕರ್ಷಣೀಯವಾಗಿ ಕಾಣುವಂತೆ ಮಾಡಲಾಗಿದೆ.

84 ಕೋಟಿ ಬೆಲೆಬಾಳುವ ಈ ರೋಲ್ಸ್ ರಾಯ್ಸ್ ಕಾರಿನಲ್ಲಿರುವ ಗಡಿಯಾರ ಕೂಡ ಹ್ಯಾಂಡ್ ಮೇಡ್ !!

ಇಲ್ಲಿಯವರೆಗೆ ನಾವು ತಯಾರಿಸಿದ ಅತ್ಯಂತ ಸ್ವಚ್ಛವಾದ ಡ್ಯಾಶ್‌ಬೋರ್ಡ್ ಎಂದು ರೋಲ್ಸ್ ರಾಯ್ಸ್ ಕಂಪನಿ ಹೇಳಿಕೊಂಡಿದ್ದು, ಹ್ಯಾಂಡ್ ಮೇಡ್ ಗಡಿಯಾರ ಇರಿಸಲಾಗಿದೆ.

English summary
Read in Kannada about Rolls-Royce Sweptail was revealed with a price tag of approx. Rs 84 crore. Know more about this expensive car...
Story first published: Monday, May 29, 2017, 20:18 [IST]
Please Wait while comments are loading...

Latest Photos