ಸಿಂಗಾಪುರನಲ್ಲಿ 2018ರ ತನಕ ಹೊಸ ಕಾರುಗಳ ನೋಂದಣಿ ಪ್ರಕ್ರಿಯೆಗೆ ಬ್ರೇಕ್

ವಿಶ್ವಾದ್ಯಂತ ಪ್ರತಿ ದಿನ ಸಾವಿರಾರು ಹೊಸ ಹೊಸ ಕಾರುಗಳು ರಸ್ತೆಗಿಳಿಯುತ್ತಿದ್ದು, ಈ ನಡುವೆ ಹೊಸ ಕಾರುಗಳ ನೋಂದಣಿ ಪ್ರಕ್ರಿಯೆಗೆ ಸಿಂಗಾಪುರ ಸರ್ಕಾರವು ಬ್ರೇಕ್ ಹಾಕುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದೆ.

By Praveen

2030ರ ವೇಳೆಗೆ ಡೀಸೆಲ್ ಮತ್ತು ಪೆಟ್ರೋಲ್ ಕಾರುಗಳನ್ನು ಸಂಪೂರ್ಣ ನಿಷೇಧಗೊಳಿಸುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಇದೀಗ ಕಾರುಗಳ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಸಿಂಗಾಪುರ ಸರ್ಕಾರವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

ಸಿಂಗಾಪುರನಲ್ಲಿ 2018ರ ತನಕ ಹೊಸ ಕಾರುಗಳ ನೋಂದಣಿ ಪ್ರಕ್ರಿಯೆಗೆ ಬ್ರೇಕ್

2018ರ ಮಾರ್ಚ್ ತನಕ ಒಂದೇ ಒಂದು ಕಾರಿನ ನೋಂದಣಿ ಪ್ರಕ್ರಿಯೆಯನ್ನು ನಡೆಸದಿರಲು ನಿರ್ಧರಿಸುವ ಸಿಂಗಾಪುರ ಸಾರಿಗೆ ಇಲಾಖೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬಳಕೆ ಮಾಡುವಂತೆ ಉತ್ತೇಜನ ನೀಡುತ್ತಿದೆ.

ಸಿಂಗಾಪುರನಲ್ಲಿ 2018ರ ತನಕ ಹೊಸ ಕಾರುಗಳ ನೋಂದಣಿ ಪ್ರಕ್ರಿಯೆಗೆ ಬ್ರೇಕ್

ಇನ್ನು ಸಿಂಗಾಪುರ ಸರ್ಕಾರವು ಹೊಸ ಕಾರು ನೋಂದಣಿ ಪ್ರಕ್ರಿಯೆಗೆ ಬ್ರೇಕ್ ಹಾಕುವುದಕ್ಕೂ ಹಲವು ಕಾರಣವಾಗಿವೆ. ಯಾಕೇಂದ್ರೆ ಅಂತರ್‌ರಾಷ್ಟ್ರಿಯ ಮಟ್ಟದ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿರುವ ಸಿಂಗಾಪುರನಲ್ಲಿ ದಿನಂಪ್ರತಿ ಸಾವಿರಾರು ಹೊಸ ರಸ್ತೆಗಿಳಿಯುತ್ತಿದ್ದು, ಟ್ರಾಫಿಕ್ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಿಮಿಸಿದೆ.

ಸಿಂಗಾಪುರನಲ್ಲಿ 2018ರ ತನಕ ಹೊಸ ಕಾರುಗಳ ನೋಂದಣಿ ಪ್ರಕ್ರಿಯೆಗೆ ಬ್ರೇಕ್

ಜೊತೆಗೆ ಕಾರ್ ಪಾರ್ಕಿಂಗ್ ಸಮಸ್ಯೆ ಕೂಡಾ ದಿನದಿಂದ ಹೆಚ್ಚುತ್ತಿದ್ದು, ಈ ಹಿನ್ನೆಲೆ ಹೆಚ್ಚುತ್ತಿರುವ ಕಾರುಗಳ ಸಂಖ್ಯೆಯನ್ನು ತಗ್ಗಿಸಲು ಸೂಕ್ತ ಕ್ರಮಕೈಗೊಳ್ಳುವ ಅನಿವಾರ್ಯತೆ ಎದುರಾಗಿತ್ತು. ಇದರಿಂದಾಗಿ ವಿರೋಧದ ನಡುವೆಯೂ ಇಂತದೊಂದು ಕ್ರಮವನ್ನು ಜಾರಿಗೊಳಿಸಲಾಗಿದೆ.

ಸಿಂಗಾಪುರನಲ್ಲಿ 2018ರ ತನಕ ಹೊಸ ಕಾರುಗಳ ನೋಂದಣಿ ಪ್ರಕ್ರಿಯೆಗೆ ಬ್ರೇಕ್

ಹೀಗಾಗಿ ಸರ್ಕಾರಿ ಬಸ್, ಮೆಟ್ರೋ, ರೈಲ್ವೆಗಳನ್ನು ಬಳಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದ್ದು, ಸಾರ್ವಜನಿಕರು ಕೂಡಾ ಸರ್ಕಾರ ಕ್ರಮಕ್ಕೆ ಪರ-ವಿರೋಧ ವ್ಯಕ್ತಪಡಿಸಿದ್ದಾರೆ.

ಓದಿರಿ-

ಸಿಂಗಾಪುರನಲ್ಲಿ 2018ರ ತನಕ ಹೊಸ ಕಾರುಗಳ ನೋಂದಣಿ ಪ್ರಕ್ರಿಯೆಗೆ ಬ್ರೇಕ್

ಆದರೂ ಟ್ರಾಫಿಕ್ ಸಮಸ್ಯೆ ಹಾಗೂ ಮಾಲಿನ್ಯ ಪ್ರಮಾಣ ತಗ್ಗಿಸುವ ದೃಷ್ಠಿಯಿಂದ ಇಂತದೊಂದು ಕಠಿಣ ಕ್ರಮ ಅವಶ್ಯಕತೆಯಿದ್ದು, ಸಿಂಗಾಪುರ ಸರ್ಕಾರ ಕ್ರಮದಿಂದ ಆಟೋ ಉತ್ಪಾದಕರು ಧರ್ಮಸಂಕಟದಲ್ಲಿ ಸಿಲುಕುವಂತಾಗಿದೆ.

ಸಿಂಗಾಪುರನಲ್ಲಿ 2018ರ ತನಕ ಹೊಸ ಕಾರುಗಳ ನೋಂದಣಿ ಪ್ರಕ್ರಿಯೆಗೆ ಬ್ರೇಕ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೆಚ್ಚುತ್ತಿರುವ ವಾಹನಗಳ ತಡೆಗೆ ಇಂತದೊಂದು ಕ್ರಮ ಎಲ್ಲಾ ರಾಷ್ಟ್ರಗಳಲ್ಲೂ ಅವಶ್ಯಕತೆಯಿದ್ದು, ಸಿಂಗಾಪುರ ಸರ್ಕಾರ ಜಾರಿಗೆ ತಂದಿರುವ ಕಠಿಣ ನಿರ್ಧಾರಕ್ಕೆ ಜಾಗತಿಕ ಮಟ್ಟದಲ್ಲೂ ಬೆಂಬಲ ವ್ಯಕ್ತವಾಗಿದೆ.

Trending in kannada Drivespark :

ಹಿಂಬದಿ ಬೈಕ್ ಸವಾರಿಯನ್ನು ಬ್ಯಾನ್ ಮಾಡಿದ ಕರ್ನಾಟಕ ಸರ್ಕಾರ

Most Read Articles

Kannada
English summary
To curb over-congestion in the tiny city-state of Singapore, the Land Transport Authority (LTA) will ban additional cars on its roads starting march 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X