ಬರಲಿದೆ ಫಾರ್ಚುನರ್ ಕಾರಿಗೆ ಠಕ್ಕರ್ ಕೊಡುವ ಸ್ಕೋಡಾ 'ಕೋಡಿಯಾಕ್'

Written By:

ಜೆಕ್ ತಯಾರಕ ಸ್ಕೋಡಾ ತನ್ನ ಪ್ರಮುಖ ಎಸ್‌ಯುವಿ ಕೋಡಿಯಾಕ್ ಕಾರನ್ನು ಅಕ್ಟೋಬರ್ 4, 2017ರಂದು ಭಾರತೀಯ ಮಾರುಕಟ್ಟೆಯಲ್ಲಿ ಪ್ರಾರಂಭಿಸಲು ಸಕಲ ಸಿದ್ಧತೆ ನೆಡೆಸಿದೆ.

To Follow DriveSpark On Facebook, Click The Like Button
ಬರಲಿದೆ ಫಾರ್ಚುನರ್ ಕಾರಿಗೆ ಠಕ್ಕರ್ ಕೊಡುವ ಸ್ಕೋಡಾ ಕೋಡಿಯಾಕ್

ಬಿಡುಗಡೆಗೂ ಮುಂಚೆಯೇ ಈ ಬಲಿಷ್ಠ ಎಸ್‌ಯುವಿ ಕಾರಿನ ತಾಂತ್ರಿಕ ವಿವರಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಕಾರಿನ ಎಂಜಿನ್ ವಿಶೇಷತೆಗಳು, ಚಿತ್ರಗಳು ಮತ್ತು ಸ್ಕೋಡಾ ಎಸ್‌ಯುವಿ ಕೋಡಿಯಾಕ್ caarin ಎಸ್‌ಯುವಿ ಕಾರಿನ ಇತರೆ ವಿವರಗಳು ಬಹಿರಂಗಗೊಂಡಿವೆ.

ಬರಲಿದೆ ಫಾರ್ಚುನರ್ ಕಾರಿಗೆ ಠಕ್ಕರ್ ಕೊಡುವ ಸ್ಕೋಡಾ ಕೋಡಿಯಾಕ್

ಭಾರತದ ಜನರಿಗೆ ಪ್ರತ್ಯೇಕವಾಗಿ ಅನಾವರಣಗೊಳ್ಳಲಿರುವ ಈ ಎಸ್‌ಯುವಿ, 2-ಲೀಟರ್ ಟರ್ಬೊಚಾರ್ಜ್ಡ್ ಡೀಸಲ್ ಎಂಜಿನ್ ಆಯ್ಕೆ ಪಡೆದುಕೊಂಡಿದ್ದು, 340 ಎನ್ಎಂ ತಿರುಗುಬಲದಲ್ಲಿ 148 ಬಿಎಚ್‌ಪಿ ಅಶ್ವಶಕ್ತಿ ಉತ್ಪಾದನೆ ಮಾಡಲಿದೆ.

ಬರಲಿದೆ ಫಾರ್ಚುನರ್ ಕಾರಿಗೆ ಠಕ್ಕರ್ ಕೊಡುವ ಸ್ಕೋಡಾ ಕೋಡಿಯಾಕ್

ಟಿಗ್ವಾನ್ ಕಾರಿನಲ್ಲಿ ಅಳವಡಿಕೆಯಾಗಿರುವ ಡೀಸೆಲ್ ಎಂಜಿನ್ ಘಟಕವನ್ನು ಈ ಕೋಡಿಯಾಕ್ ಎಸ್‌ಯುವಿ ಕಾರಿನಲ್ಲಿ ಅಳವಡಿಸಲಾಗಿದೆ. ಆದರೆ, ಈ ಟಿಗ್ವಾನ್ ಕಾರಿಗೆ ಹೋಲಿಸಿದರೆ 7 ಬಿಎಚ್‌ಪಿ ಹೆಚ್ಚಿನ ಪವರ್ ಈ ಕಾರು ಉತ್ಪಾದಿಸುತ್ತದೆ.

ಬರಲಿದೆ ಫಾರ್ಚುನರ್ ಕಾರಿಗೆ ಠಕ್ಕರ್ ಕೊಡುವ ಸ್ಕೋಡಾ ಕೋಡಿಯಾಕ್

ಸೋರಿಕೆಯಾದ ಚಿತ್ರಗಳು ಕೋಡಿಯಾಕ್ ಕಾರಿನ ಆಯಾಮಗಳನ್ನು ಸಹ ತಿಳಿಸಲಿದ್ದು, ಈ ಕಾರು 4,697 ಮಿ.ಮೀ ಉದ್ದ, 1,882 ಮಿ.ಮೀ ಅಗಲ, 1,676 ಮಿ.ಮೀ ಎತ್ತರವನ್ನು ಹೊಂದಿದೆ ಮತ್ತು 2,791 ಮಿ.ಮೀ ವೀಲ್ ಬೇಸ್ ಪಡೆದುಕೊಂಡಿದೆ.

ಬರಲಿದೆ ಫಾರ್ಚುನರ್ ಕಾರಿಗೆ ಠಕ್ಕರ್ ಕೊಡುವ ಸ್ಕೋಡಾ ಕೋಡಿಯಾಕ್

ಕೊಡಿಯಾಕ್ ಕಾರಿನ ಗ್ರೌಂಡ್ ಕ್ಲಿಯರೆನ್ಸ್ 140 ಮಿ.ಮೀ ಇದ್ದು, ಇದು ಟಿಗ್ವಾನ್ ಕಾರಿಗೆ ಹೋಲಿಸಿದರೆ 9 ಮಿ.ಮೀ ಕಡಿಮೆಯಾಗಿದೆ. ಇನ್ನು ಖ್ಯಾತ ಟಿಗ್ವಾನ್ ಕಾರು 71-ಲೀಟರ್ ಇಂಧನ ಟ್ಯಾಂಕ್ ಪಡೆದುಕೊಂಡಿದ್ದರೆ, ಈ ಕಾರು ಸಣ್ಣದಾದ 63 ಲೀಟರ್ ಇಂಧನ ಟ್ಯಾಂಕ್ ಹೊಂದಿದೆ.

ಬರಲಿದೆ ಫಾರ್ಚುನರ್ ಕಾರಿಗೆ ಠಕ್ಕರ್ ಕೊಡುವ ಸ್ಕೋಡಾ ಕೋಡಿಯಾಕ್

ಭಾರತೀಯ ಮಾರುಕಟ್ಟೆಯಲ್ಲಿ ಸ್ಕೋಡಾ ಕಂಪನಿಯ ಸ್ಥಿರವಾದ ಮೊದಲ ಪೂರ್ಣ ಪ್ರಮಾಣದ ಎಸ್‌ಯುವಿ ಕಾರು ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ಕೊಡಿಯಾಕ್ ಕಾರು ಫೋಕ್ಸ್‌ವ್ಯಾಗೆನ್ ಟಿಗ್ವಾನ್, ಫೋರ್ಡ್ ಎಂಡೇವರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳೊಂದಿಗೆ ಸ್ಪರ್ಧೆ ಎದುರಿಸುತ್ತದೆ. ಈ ಕೊಡಿಯಾಕ್ ರೂ. 27 ಲಕ್ಷದಿಂದ 32 ಲಕ್ಷ ಎಕ್ಸ್ ಶೋ ರೂಂ ವ್ಯಾಪ್ತಿಯಲ್ಲಿ ಬೆಲೆ ಪಡೆದುಕೊಳ್ಳಬಹುದು ಎನ್ನಲಾಗಿದೆ.

English summary
Czech automaker Skoda is all set to launch its flagship SUV, the Kodiaq in the Indian market on October 4, 2017.
Story first published: Saturday, September 23, 2017, 12:37 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark