ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

Written By:

ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆಗೊಂಡಿದೆ. ಸ್ಕೋಡಾ ಕೊಡಿಯಾಕ್ ಕಾರು ರೂ. 34,49,501 ಎಕ್ಸ್ ಶೋರೂಂ (ಇಂಡಿಯಾ) ದರದಲ್ಲಿ ಲಭ್ಯವಿದೆ ಮತ್ತು ಈ ಎಸ್‌ಯುವಿ ಕಾರು ಭಾರತದಲ್ಲಿ ಸ್ಟೈಲ್ 4ಎಕ್ಸ್4 ಎಟಿ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ.

ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

ಕೊಡಿಯಾಕ್ ಕಾರಿನ ವಿತರಣೆ ಪ್ರಕ್ರಿಯೆಯನ್ನು ಕಂಪನಿಯು ಮುಂದಿನ ನವೆಂಬರ್ ಮೊದಲ ವಾರದಿಂದ ಪ್ರಾರಂಭಿಸಲು ನಿರ್ಧರಿಸಿದ್ದು, ಈ ಸ್ಕೋಡಾ ಕಾರು 4 ವರ್ಷಗಳ ಖಾತರಿ, ರಸ್ತೆಬದಿಯ ನೆರವು ಮತ್ತು ಹೆಚ್ಚುವರಿ ರೂ.59,999ರ ವರೆಗೆ ನಿರ್ವಹಣೆ ನೆರವಿನ ಸೌಕರ್ಯವನ್ನು ನೀಡಲಿದೆ.

ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

ಸ್ಕೋಡಾ ಕೊಡಿಯಾಕ್ ವಾಹನವು ಬಲಿಷ್ಠ 2.0-ಲೀಟರ್ ಟರ್ಬೊಚಾರ್ಜ್ಡ್ ನಾಲ್ಕು ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು ಏಳು-ವೇಗ ಡಿಎಸ್‌ಜಿ ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

ಈ ಸ್ಕೋಡಾ ಕೊಡಿಯಾಕ್ ಡೀಸಲ್ ಎಂಜಿನ್, 148 ಬಿಎಚ್‌ಪಿಯಲ್ಲಿ 3,500 ರಿಂದ 4,000 ಆರ್‌ಪಿಎಂ ಮತ್ತು 340 ಎನ್ಎಂ ಟಾರ್ಕ್‌ನಲ್ಲಿ 1,405 ರಿಂದ 3,000 ಆರ್‌ಪಿಎಂ ಉತ್ಪಾದಿಸುತ್ತದೆ.

ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

7-ಸ್ಪೀಡ್ ಆಟೊಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಬೋರ್ಗ್ ವಾರ್ನರ್ 4x4 ಸಿಸ್ಟಮ್ ಸಹಾಯದ ಮೂಲಕ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ಕಳುಹಿಸಲಾಗುತ್ತದೆ ಹಾಗು ಸ್ಕೋಡಾ ಕೊಡಿಯಾಕ್ ಲಿಟರಿಗೆ 16.25 ಕಿ.ಮೀ ಮೈಲೇಜ್ ನೀಡಲಿದೆ. ಕೊಡಿಯಾಕ್ ಕಾರು 4,697 ಮಿ.ಮೀ ಉದ್ದವಾಗಿದೆ, 1,882 ಮಿ.ಮೀ ಅಗಲವಿದೆ ಮತ್ತು 1,665 ಮಿ.ಮೀ ಎತ್ತರವಿದೆ ಮತ್ತು 188 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ.

ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

ಸ್ಕೋಡಾ ಕೊಡಿಯಾಕ್ ಕಾರು ಆಧುನಿಕ ಯುರೋಪಿಯನ್ ವಿನ್ಯಾಸದೊಂದಿಗೆ ಚೂಪಾದ ಮತ್ತು ಬಲವಾದ ಅಕ್ಷರಗಳ ರೇಖೆಗಳೊಂದಿಗೆ ಹೊಂದಿದ್ದು, ಮುಂಭಾಗದಲ್ಲಿ ಚಿಟ್ಟೆ ಆಕೃತಿಯ ಗ್ರಿಲ್ ಉಳಿಸಿಕೊಳ್ಳುತ್ತದೆ.

ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

ಹೊಸ ಕೊಡಿಯಾಕ್ ಕಾರಿನ ಗ್ರಿಲ್ ದೊಡ್ಡದಾಗಿದೆ ಮತ್ತು ಪೂರ್ಣ ಎಲ್ಇಡಿ ಹೆಡ್ ಲೈಟ್‌ಗಳಿಂದ ಸುತ್ತುವರಿದಿದೆ. ಹೆಡ್ ಲೈಟ್‌‌ಗಳ ಕೆಳಗೆ, ಮುಂಭಾಗದ ಬಂಪರ್ನಲ್ಲಿ ಎಲ್ಇಡಿ ಫಾಗ್ ದೀಪಗಳನ್ನು ಅಳವಡಿಸಲಾಗಿದೆ.

ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

ಹಿಂಭಾಗದ ಬೂಟ್ ವಿಭಾಗವು 270 ಲೀಟರ್‌ಗಳಷ್ಟು ಶೇಖರಣಾ ಪ್ರಮಾಣವನ್ನು ಹೊಂದಿದೆ, ಎರಡನೇ ಮತ್ತು ಮೂರನೇ ಸಾಲುಗಳ ಸೀಟುಗಳನ್ನು ಮುಚ್ಚುವ ಮೂಲಕ 2,005 ಲೀಟರ್‌ಗಳವರೆಗೆ ಈ ಶೇಖರಣಾ ಪ್ರಮಾಣವನ್ನು ವಿಸ್ತರಿಸಬಹುದಾಗಿದೆ.

ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

ಕೊಡಿಯಾಕ್ ಕಾರಿನ ಒಳಭಾಗದಲ್ಲಿ 8.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ. ಇದು 12-ಸ್ಪೀಕರ್ 750 ವ್ಯಾಟ್ ಕ್ಯಾಂಟನ್ ಆಡಿಯೊ ಸಿಸ್ಟಮ್ ಸಂಪರ್ಕ ಹೊಂದಿದೆ. ಈ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಆಕ್ಸ್, ಬ್ಲೂಟೂತ್ ಮತ್ತು , ಮಲ್ಟಿ ಎಸ್‌ಡಿ ಕಾರ್ಡ್ ಬೆಂಬಲ ಪಡೆದುಕೊಂಡಿದೆ.

ಬಹುನಿರೀಕ್ಷಿತ ಸ್ಕೋಡಾ ಕೊಡಿಯಾಕ್ ಭಾರತದಲ್ಲಿ ಬಿಡುಗಡೆ : ಬೆಲೆ ರೂ. 34.49 ಲಕ್ಷ

ಸುರಕ್ಷಿತ ವೈಶಿಷ್ಟ್ಯಗ ಬಗ್ಗೆ ಹೇಳುವುದಾದರೆ ಸ್ಕೋಡಾ ಕೊಡಿಯಾಕ್ ಕಾರಿನಲ್ಲಿ 9 ಏರ್ ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್, ಎಳೆತ ನಿಯಂತ್ರಣ ಮತ್ತು ಆಟೋ ಹಿಡಿತ ಕಾರ್ಯದೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೌಲಭ್ಯ ಪಡೆದುಕೊಂಡಿದೆ.

English summary
Skoda Kodiaq launched in India. The Skoda Kodiaq is priced at Rs 34,49,501 ex-showroom (India) and the SUV is avaialble only in the Style 4x4 AT variant in India.
Story first published: Wednesday, October 4, 2017, 13:40 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark