ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

Written By:

ರಜಿನಿಕಾಂತ್' ಎನ್ನುವ ಹೆಸರಲ್ಲಿಯೇ ಏನೋ ಶಕ್ತಿ ಇದೆ, ಈ ಹೆಸರಿಗೆ ಯಾವುದೇ ರೀತಿಯ ಪೀಠಿಕೆ ಕೊಡೊ ಅವಶ್ಯಕತೆ ಇಲ್ಲ ಅನ್ಕೋತೀನಿ. ಸಿನೆಮಾದಿಂದ ಹಿಡಿದು ಟ್ರೊಲ್ಸ್ ಮತ್ತು ಮೆಮ್ಸ್ ಎಲ್ಲದರಲ್ಲಿಯೂ ದೋಳ್ ಎಬ್ಬಿಸಿರುವ ಈ ನಟ ಶ್ರೀಮಂತ ಕೂಡ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ಇಂತಹ ರಜಿನಿಕಾಂತ್ ಮತ್ತೆ ಸುದ್ದಿಯಲ್ಲಿದ್ದಾರೆ, ಹಲವು ಬಾರಿ ವಿವಾದ ಮತ್ತು ಸಿನೆಮಾ ವಿಚಾರವಾಗಿ ಸುದ್ದಿಯಲ್ಲಿರುತ್ತಿದ್ದ ರಜಿನಿಕಾಂತ್ ಸದ್ಯ ಕಾರಿನ ವಿಚಾರವಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಹೌದು, ರಜಿನಿ ಹೊಸ ಐಷಾರಾಮಿ ಕಾರು ಖರೀದಿಸಿದ್ದಾರೆ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ಅದ್ರಲ್ಲಿ ಏನ್ ವಿಶೇಷ ಇದೆ ಅಂತೀರಾ ? ಸರಳತೆಗೆ ಮತ್ತೊಂದು ಹೆಸರು ಎಂಬಂತೆ ಜೀವಿಸುತ್ತಿರುವ ತಲೈವ ಎಷ್ಟೇ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದರೂ ಸಹ ತಮ್ಮ ಹಳೆಯ ನೆಚ್ಚಿನ ಕಾರನ್ನು ಬದಲಾಯಿಸಿರಲಿಲ್ಲ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ಆದರೆ ತಮ್ಮ ನಿಲುವನ್ನು ಬದಲಾಯಿಸಿರುವ ರಜಿನಿಕಾಂತ್ ಹೊಚ್ಚ ಹೊಸ ಐಷಾರಾಮಿ ಬಿಎಂಡಬ್ಲ್ಯೂ ಎಕ್ಸ್5 ಎಸ್‌ಯುವಿ ಕಾರನ್ನು ಕಾರೀದಿಸಿದ್ದು, ಈ ವಿಚಾರ ಪ್ರತಿಯೊಬ್ಬರಿಗೂ ಆಶ್ಚರ್ಯ ಉಂಟು ಮಾಡಿದೆ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ಕಳೆದ ವಾರ, ರಜನಿಕಾಂತ್ ಅವರ ತಮ್ಮ ಹೊಚ್ಚ ಹೊಸ ಬಿಎಂಡಬ್ಲ್ಯೂ ಎಕ್ಸ್5 ಕಾರನ್ನು ಖರೀದಿಸಿದ್ದು, ಇತ್ತೀಚಿಗೆ ನೆಡೆದ ಸಮಾರಂಭದಲ್ಲಿ ತಮ್ಮ ಹೊಸ ಕಾರಿನೊಂದಿಗೆ ಕಾಣಿಸಿಕೊಂಡಿದ್ದಾರೆ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ಈ ಕಾರು 5 ಅಥವಾ 7 ಆಸನಗಳ ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಲಿದ್ದು, ಅತ್ಯಂತ ಹೆಚ್ಚು ಪ್ರಾಯೋಗಿಕ ಎಸ್‌ಯುವಿ ಎನ್ನಿಸಿಕೊಂಡಿದೆ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ಸ್ಯಾನ್ ರೂಫ್ ಒಳಗೊಂಡಿರುವ ಈ ಕಾರು, ಆರು ಸಿಲಿಂಡರ್ 3.08 ಲೀಟರ್ ಇನ್‌ಲೈನ್ ಎಂಜಿನ್ ಹೊಂದಿದ್ದು, 580 ಎನ್ಎಂ ತಿರುಗುಬಲದಲ್ಲಿ 258ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ಈ ಐಷಾರಾಮಿ ಕಾರಿನ ಬೆಲೆ ರೂ. 67.90 ಲಕ್ಷದಿಂದ ರೂ. 79.90 ಲಕ್ಷದವರೆಗೂ ಇದ್ದು, ಮೇಲ್ವರ್ಗದ ಆವೃತಿ ಎಂಸ್ಪೋರ್ಟ್ ಹೆಚ್ಚು ಬೆಲೆ ಪಡೆದುಕೊಂಡಿದೆ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ಅವರು ಬಯಸಿದ ಯಾವುದೇ ಕಾರು ಹೊಂದಬಹುದಾದ ವ್ಯಕ್ತಿಯಾಗಿದ್ದರೂ ಸಹ ತಮ್ಮ ಇನ್ನೋವಾ ಕಾರಿನಲ್ಲಿ ತಿರುಗಾಡುತ್ತಿದ್ದ ರಜಿನಿಕಾಂತ್ ಮನಸ್ಸು ಬದಲಾಯಿಸಲು ಕಾರಣ ಏನು ಎಂಬುದು ಇಲ್ಲಿಯವರೆಗೂ ತಿಳಿದುಬಂದಿಲ್ಲ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ರಾ-ಒನ್ ಸಿನಿಮಾ ಯಶಸ್ವಿಯಾದ ಕಾರಣಕ್ಕೆ ಶಾರುಖ್ ಖಾನ್ ರಜಿನಿಕಾಂತ್ ಅವರಿಗೆ ಬಿಎಂಡಬ್ಲ್ಯೂ 7ನೇ ಸರಣಿಯ ಕಾರನ್ನು ಉಡುಗೊರೆಯಾಗಿ ನೀಡಲು ಉದ್ದೇಶಿಸಿದ್ದರು, ಆದರೆ ಈ ಉಡುಗೊರೆಯನ್ನು ರಜಿನಿ ನಯವಾಗಿ ತಿರಸ್ಕರಿಸಿದ್ದಾರೆ.

ಕೊನೆಗೂ ಐಷಾರಾಮಿ ಕಾರು ಖರೀದಿಸಿದ ತಮಿಳು ನಟ ರಜಿನಿಕಾಂತ್...

ಇನ್ನು ಇನ್ನೊವಾ ಕಾರಿನ ಜೊತೆ ಹೋಂಡಾ ಸಿವಿಕ್ ಮತ್ತು ಟವೆರಾ ಕಾರನ್ನು ಕೂಡಾ ಹೊಂದಿರುವ ರಜಿನಿ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಖರೀದಿಸಿದ್ದ ಫಿಯಟ್ ಕಾರನ್ನು ಈಗಲೂ ತಮ್ಮ ಗ್ಯಾರೇಜ್‌ನಲ್ಲಿ ಇರಿಸಿಕೊಡಿದ್ದು, ಅವರಿಗೆ ಆ ಕಾರಿನ ಮೇಲಿರುವ ಪ್ರೀತಿ ಎಷ್ಟು ಎಂಬುದನ್ನು ತೋರಿಸುತ್ತದೆ.

English summary
Read in Kannada about Superstar Rajnikanth buys BMW X5 luxury car. Know about this actor new car's specification, old cars and more
Please Wait while comments are loading...

Latest Photos