10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಒದಿಸುವ ಟೆಂಡರ್ ಪಡೆದ ಟಾಟಾ ಮೋಟಾರ್ಸ್

ಇಇಎಸ್ಎಲ್ ಸಂಸ್ಥೆಯು ಸರ್ಕಾರಿ ಅಧಿಕಾರಿಗಳಿಗಾಗಿ 10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಮುಂದಾಗಿದ್ದು, ಎಲೆಕ್ಟ್ರಿಕ್ ಕಾರುಗಳ ಒದಗಿಸುವ ಟೆಂಡರ್ ಅನ್ನು ಟಾಟಾ ಮೋಟಾರ್ಸ್ ತನ್ನದಾಗಿಸಿಕೊಂಡಿದೆ.

By Praveen

ಪರಿಸರ ಮಾಲಿನ್ಯ ತಡೆ ಉದ್ದೇಶದಿಂದಾಗಿ ಎಲೆಕ್ಟ್ರಿಕ್ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಹೊಸ ಯೋಜನೆಯೊಂದನ್ನು ರೂಪಿಸಿರುವ ಇಇಎಸ್ಎಲ್ ಸಂಸ್ಥೆಯು ಸರ್ಕಾರಿ ಅಧಿಕಾರಿಗಳಿಗಾಗಿ 10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಲು ಮುಂದಾಗಿದ್ದು, ಎಲೆಕ್ಟ್ರಿಕ್ ಕಾರುಗಳ ಒದಗಿಸುವ ಟೆಂಡರ್ ಅನ್ನು ಟಾಟಾ ಮೋಟಾರ್ಸ್ ತನ್ನದಾಗಿಸಿಕೊಂಡಿದೆ.

10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಒದಿಸುವ ಟೆಂಡರ್ ಪಡೆದ ಟಾಟಾ

ಜಗತ್ತಿನಲ್ಲಿ ಅತಿ ಹೆಚ್ಚು ಮಾಲಿನ್ಯ ಹೊರಸೂಸುವ ರಾಷ್ಟ್ರಗಳಲ್ಲಿ 3 ನೇ ಸ್ಥಾನ ಹೊಂದಿರುವ ಭಾರತವು ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಖರೀದಿಗೆ ವಿಶೇಷ ಗಮನಹರಿಸುತ್ತಿದ್ದು, ಇದಕ್ಕಾಗಿಯೇ ತಳಮಟ್ಟದಿಂದಲೇ ಎಲೆಕ್ಟ್ರಿಕ್ ಕಾರುಗಳಿಗೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ.

10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಒದಿಸುವ ಟೆಂಡರ್ ಪಡೆದ ಟಾಟಾ

ಇದಕ್ಕಾಗಿಯೇ ಸಾರ್ವಜನಿಕ ಜಂಟಿ ಉದ್ಯಮ 'ಎನರ್ಜಿ ಎಫಿಶಿಯನ್ಸಿ ಸರ್ವೀಸಸ್ ಲಿಮಿಟೆಡ್'(ಇಇಎಸ್ಎಲ್) ಸಂಸ್ಥೆಯು 10 ಸಾವಿರ ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಟೆಂಡರ್ ನಡೆಸಲಾಗಿದ್ದು, ಕಲ್ಲಿದ್ದಲು, ಗಣಿ, ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಇಲಾಖೆಗಳ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ಕಾರುಗಳನ್ನೇ ಒದಗಿಸುತ್ತಿದೆ.

Recommended Video

Force Gurkha BS4 Model Launched In India - DriveSpark
10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಒದಿಸುವ ಟೆಂಡರ್ ಪಡೆದ ಟಾಟಾ

ಈ ಹಿನ್ನೆಲೆ ಎಲೆಕ್ಟ್ರಿಕ್ ಕಾರು ಉತ್ಪಾದಿಸುವ ಕಾರು ಉತ್ಪಾದನಾ ಸಂಸ್ಥೆಗಳ ಜೊತೆ ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡಿದ್ದ ಇಇಎಸ್ಎಲ್ ಸಂಸ್ಥೆಯು 1200 ಕೋಟಿ ಮೊತ್ತಕ್ಕೆ ಒಪ್ಪಿಗೆ ಸೂಚಿದ ಟಾಟಾ ಮೋಟಾರ್ಸ್‌ಗೆ ಎಲೆಕ್ಟ್ರಿಕ್ ಕಾರುಗಳ ಒದಗಿಸುವ ಜವಾಬ್ದಾರಿ ನೀಡಿದೆ.

10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಒದಿಸುವ ಟೆಂಡರ್ ಪಡೆದ ಟಾಟಾ

ಹೀಗಾಗಿ ಮೊದಲ ಹಂತದಲ್ಲಿ 500 ಎಲೆಕ್ಟ್ರಿಕ್ ಕಾರುಗಳನ್ನು ಹಾಗೂ ಎರಡನೇ ಹಂತದಲ್ಲಿ 9,500 ಕಾರುಗಳನ್ನು ಒದಗಿಸಲು ಒಪ್ಪಿಗೆ ಪಡೆದಿರುವ ಟಾಟಾ ಮೋಟಾರ್ಸ್, ಇಇಎಸ್ಎಲ್ ಬೇಡಿಕೆಗೆ ಅನುಗುಣವಾಗಿ ಕಾರುಗಳನ್ನು ಒದಗಿಸಲಿದೆ.

10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಒದಿಸುವ ಟೆಂಡರ್ ಪಡೆದ ಟಾಟಾ

ಈ ಬಗ್ಗೆ ಮಾತನಾಡಿರುವ ಇಇಎಸ್ಎಲ್ ಅಧ್ಯಕ್ಷ ಕ್ರೋವವಾರ್ ಕುಮಾರ್, "ಪ್ರಮುಖ ಇಲಾಖೆಗಳ ವಿವಿಧ ಅಧಿಕಾರಿಗಳಿಗೆ ಹಂತ ಹಂತವಾಗಿ 4 ಬಾಗಿಲುವುಳ್ಳ 10 ಸಾವಿರ ಎಲೆಕ್ಟ್ರಿಕ್‌ ಕಾರುಗಳು ಒದಗಿಸಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ" ಎಂದಿದ್ದಾರೆ.

10 ಸಾವಿರ ಎಲೆಕ್ಟ್ರಿಕ್ ಕಾರುಗಳನ್ನು ಒದಿಸುವ ಟೆಂಡರ್ ಪಡೆದ ಟಾಟಾ

ಹೀಗಾಗಿ ಹೊಸ ಯೋಜನೆಗಾಗಿ ಅಗತ್ಯ ಪ್ರಮಾಣದ ಎಲೆಕ್ಟ್ರಿಕ್ ಕಾರುಗಳ ಚಾರ್ಜಿಂಗ್ ಸ್ಟೇಷನ್‌ಗಳ ನಿರ್ಮಾಣ ಮಾಡುವ ಅಗತ್ಯವಿದ್ದು, ಇದಕ್ಕೂ ಕೂಡಾ ಇಇಎಸ್ಎಂ ಸದ್ಯ ದಲ್ಲೇ ಮತ್ತೊಂದು ಟೆಂಡರ್ ಕರೆಯಲು ಸಿದ್ಧತೆ ನಡೆಸಿದೆ.

Most Read Articles

Kannada
English summary
Read in Kannada Tata Motors To Supply 10,000 Electric Vehicles To EESL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X