ಟಾಟಾ ನೆಕ್ಸನ್ v/s ಮಾರುತಿ ಸುಜುಕಿ ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ನೆಕ್ಸನ್ ಆಯ್ಕೆಗೂ ಮುನ್ನ ಗ್ರಾಹಕರ ಮುಂದೆ ಹಲವು ಆಯ್ಕೆಗಳಿದ್ದು, ಈ ಹಿನ್ನೆಲೆ ಪ್ರತಿಸ್ಪರ್ಧಿ ಆವೃತ್ತಿಯಾದ ಮಾರುತಿ ಸುಜುಕಿ ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

By Praveen

ಕಳೆದ 2 ದಿನಗಳ ಹಿಂದಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸನ್ ಬಿಡುಗಡೆಯಾಗಿದ್ದು, ಕಾರು ಮಾರಾಟದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದೆ. ಆದ್ರೆ ನೆಕ್ಸನ್ ಆಯ್ಕೆಗೂ ಮುನ್ನ ಗ್ರಾಹಕರ ಮುಂದೆ ಹಲವು ಆಯ್ಕೆಗಳಿದ್ದು, ಈ ಹಿನ್ನೆಲೆ ಪ್ರತಿಸ್ಪರ್ಧಿ ಆವೃತ್ತಿಯಾದ ಮಾರುತಿ ಸುಜುಕಿ ವಿಟಾರಾ ಬ್ರಿಝಾಗಿಂತ ಹೇಗೆ ಭಿನ್ನವಾಗಿದೆ ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರ ಎಸ್‌ಯುವಿ ಪ್ರಿಯರನ್ನು ಸೆಳೆಯುತ್ತಿರುವ ಟಾಟಾ ನೆಕ್ಸನ್ ಆವೃತ್ತಿಯು ಕೈಗೆಟುಕುವ ದರಗಳಲ್ಲಿ ಲಭ್ಯವಾಗಿದ್ದು, ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಫೋರ್ಡ್ ಇಕೋ ಸ್ಪೋರ್ಟ್ ಮತ್ತು ಮಹೀಂದ್ರಾ ಟಿಯುವಿ 300 ಮಾದರಿಗಳಿಗೆ ತೀವ್ರಸ್ಪರ್ಧೆ ಒಡ್ಡುವ ಮೂಲಕ ಗ್ರಾಹಕರನ್ನು ಸೆಳೆಯಲು ಎದರು ನೋಡುತ್ತಿದೆ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಇನ್ನು ತಾಂತ್ರಿಕ ವೈಶಿಷ್ಟ್ಯತೆಗಳು, ಬೆಲೆಗಳು ಮತ್ತು ವಿನ್ಯಾಸಗಳ ವಿಚಾರದಲ್ಲಿ ಉಳಿದ ಕಾರು ಮಾದರಿಗಳಿಂತ ವಿಟಾರಾ ಬ್ರಿಝಾ ಜೊತೆ ಹೆಚ್ಚು ಪೈಪೋಟಿ ನಡೆಸಬೇಕಿರುವ ಟಾಟಾ ನೆಕ್ಸನ್, ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸುತ್ತಾ ಎಂಬುವುದೇ ಪ್ರಶ್ನೆಯಾಗಿದೆ. ಹಾಗಾದ್ರೆ ಖರೀದಿಗೆ ಯಾವುದು ಕಾರು ಉತ್ತಮ ಎಂಬವುದಕ್ಕೆ ಉತ್ತರ ಇಲ್ಲಿದೆ ನೋಡಿ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಹೊಚ್ಚ ಹೊಸ ಟಾಟಾ ನೆಕ್ಸನ್ ಕಾರು ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಪೆಟ್ರೋಲ್ ಆವೃತ್ತಿಯ ಆರಂಭಿಕ ಬೆಲೆ ರೂ. 5.85 ಲಕ್ಷಕ್ಕೆ ಮತ್ತು ಡೀಸೆಲ್ ಆವೃತ್ತಿಯ ಆರಂಭಿಕ ಬೆಲೆ ರೂ. 6.85 ಲಕ್ಷಕ್ಕೆ (ದೆಹಲಿ ಎಕ್ಸ್‌ಶೋರಂ) ಖರೀದಿಸಬಹುದಾಗಿದೆ. ಆದ್ರೆ ವಿಟಾರಾ ಬ್ರಿಝಾ ಮಾದರಿಯನ್ನು ಡಿಸೇಲ್ ಎಂಜಿನ್‌ನಲ್ಲಿ ಮಾತ್ರ ಆಯ್ಕೆ ಮಾಡುವ ಅವಕಾಶವಿದೆ.

Recommended Video

Tata Nexon Price And Features Variant-wise - DriveSpark
ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಸಬ್ ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳನ್ನು ಹೊಂದಿರುವ ಟಾಟಾ ನೆಕ್ಸನ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳಲ್ಲೇ XE, XM, XT ಮತ್ತು XZ+ ಎಂಬ ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದ್ದು, ಗ್ರಾಹಕರು ತಮಗಿಷ್ಟವಾದ ಮಾದರಿಯನ್ನು ಆಯ್ದುಕೊಳ್ಳಬಹುದಾಗಿದೆ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಕಾರು ಮಾದರಿಗಳು ಬೆಲೆಗಳು

ಎಕ್ಸ್ಇ -ರೂ. 5.85 ಲಕ್ಷ

ಎಕ್ಸ್ಇ(ಡೀಸೆಲ್) - ರೂ.6.85 ಲಕ್ಷ

ಎಕ್ಸ್ಎಂ - ರೂ.6.49 ಲಕ್ಷ

ಎಕ್ಸ್ಎಂ(ಡೀಸೆಲ್) - ರೂ.7.39 ಲಕ್ಷ

ಎಕ್ಸ್‌ಟಿ - ರೂ.7.29 ಲಕ್ಷ

ಎಕ್ಸ್‌ಟಿ(ಡೀಸೆಲ್) - ರೂ. 8.14 ಲಕ್ಷ

ಎಕ್ಸ್‌ಝೆಡ್ ಪ್ಲಸ್ - ರೂ. 8.44 ಲಕ್ಷ

ಎಕ್ಸ್‌ಝೆಡ್ ಪ್ಲಸ್ ಡೀಸೆಲ್ - ರೂ. 9.29 ಲಕ್ಷ

ಎಕ್ಸ್‌ಝೆಡ್ ಪ್ಲಸ್ ಡ್ಯುಯಲ್ ಟೋನ್ - ರೂ.8.59 ಲಕ್ಷ

ಎಕ್ಸ್‌ಝೆಡ್ ಪ್ಲಸ್ ಡೀಸೆಲ್ ಡ್ಯುಯಲ್ ಟೋನ್ - ರೂ. 9.44 ಲಕ್ಷ

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಇನ್ನು ವಿಟಾರಾ ಬ್ರಿಝಾ ಕೂಡಾ ವಿವಿಧ 7 ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಕಾರಿನ ಬೆಲೆಯು ರೂ.7.38 ಲಕ್ಷಕ್ಕೆ ಹಾಗೂ ಉನ್ನತ ಕಾರು ಮಾದರಿಯು ರೂ. 9. 92 ಲಕ್ಷಕ್ಕೆ ಖರೀದಿ ಮಾಡಬಹುದಾಗಿದೆ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಎಂಜಿನ್

ಹೊಸದಾಗಿ ಬಿಡುಗಡೆಯಾದ ಟಾಟಾ ನೆಕ್ಸನ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದೆ. ಈ ಎಂಜಿನ್‌ಗಳು 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಅನಾವರಣವಾಗಿವೆ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಅದೇ ರೀತಿಯಾಗಿ ವಿಟಾರಾ ಬ್ರಿಝಾ ಕೂಡಾ 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಅಗತ್ಯ ಸುರಕ್ಷಾ ಕ್ರಮಗಳಲ್ಲಿ ನೆಕ್ಸನ್‌ಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಮೈಲೇಜ್

ನೆಕ್ಸನ್ ಮಾದರಿಯೂ ಪ್ರತಿ ಲೀಟರ್‌ಗೆ 21 ಕಿಮಿ ಮೈಲೇಜ್ ನೀಡಿದ್ದಲ್ಲಿ ವಿರಾಟಾ ಬ್ರಿಝಾ ಆವೃತ್ತಿಯು ಪ್ರತಿ ಲೀಟರ್‌ಗೆ 24.5 ಕಿ.ಮಿ ಮೈಲೇಜ್ ಸಾಮರ್ಥ್ಯ ಪಡೆದುಕೊಂಡಿದ್ದು, ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಟಾಟಾ ನೆಕ್ಸನ್ ಡೀಸೆಲ್ ಮತ್ತು ಪೆಟ್ರೋಲ್ ಎರಡೂ ರೂಪಾಂತರಗಳಲ್ಲೂ ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮೂರು ರೀತಿಯ ಮಲ್ಟಿ-ಡ್ರೈವ್ ಮೂಡ್‌ ಸೌಲಭ್ಯಗಳನ್ನು ಇರಿಸಲಾಗಿದ್ದು, ಇಂಪ್ಯಾಕ್ಟ್ ಡಿಸೈನ್ ಫಿಲಾಸಫಿ ತಂತ್ರಜ್ಞಾನ ಪಡೆದುಕೊಂಡಿದೆ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಇದಲ್ಲದೇ ನೆಕ್ಸನ್ ಮಾದರಿಯ ಮತ್ತಷ್ಟು ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಕಾರು ರಿವರ್ಸ್ ಕ್ಯಾಮೆರಾ, 6.5 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಎಚ್‌ಡಿ ಡಿಸ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸೌಲಭ್ಯಗಳನ್ನು ಹೊಂದಿದೆ.ಈ ಕಾರಿನಲ್ಲಿ ಹೆಚ್ಚು ಸುರಕ್ಷತೆ ಆಯ್ಕೆಗಳನ್ನು ನೀಡಲಾಗಿದ್ದು, ಡ್ಯುಯಲ್-ಫ್ರಂಟ್ ಏರ್ ಬ್ಯಾಗ್ ಮತ್ತು ಆಬಿಎಸ್ ಜೊತೆ ಇಬಿಡಿ ಸ್ಟ್ಯಾಂಡರ್ಡ್ ವ್ಯವಸ್ಥೆಯನ್ನು ಹೊಂದಿದೆ.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ವಿಟಾರಾ ಬ್ರಿಝಾ ಕೂಡಾ ನೆಕ್ಸನ್‌ಗಿಂತ ಉತ್ತಮ ಎಂಜಿನ್ ಆಯ್ಕೆ, ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಮೈಲೇಜ್ ವಿಚಾರವಾಗಿ ಆಯ್ಕೆ ಉತ್ತಮ ಎನ್ನಬಹುದು. ಆದರೂ ಪೆಟ್ರೋಲ್ ಆಯ್ಕೆ ಮತ್ತು ಕಡಿಮೆ ಬಜೆಟ್ ಜೊತೆಗೆ ಉತ್ತಮ ವಿನ್ಯಾಸಗಳನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಟಾಟಾ ನೆಕ್ಸನ್ ಖರೀದಿ ಉತ್ತಮ ಎನ್ನಬಹುದು.

ನೆಕ್ಸನ್ v/s ವಿಟಾರಾ ಬ್ರಿಝಾ- ಯಾವುದು ಉತ್ತಮ ಆಯ್ಕೆ?

ಹಾಗಾದ್ರೆ ವಿಟಾರಾ ಬ್ರಿಝಾ ಮತ್ತು ನೆಕ್ಸನ್ ಆಯ್ಕೆಯಲ್ಲಿ ಯಾವುದು ಉತ್ತಮ? ನಿಮ್ಮ ಅಭಿಪ್ರಾಯಗಳನ್ನು ಕೆಳಗಿನ ಕಮೆಂಟ್ ಬಾಕ್ಸ್‌ನಲ್ಲಿ ತಪ್ಪದೇ ಹಂಚಿಕೊಳ್ಳಿ.

Most Read Articles

Kannada
English summary
Read in Kannada about Is Nexon's choice correct when compared to Maruti Vitara Briza?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X