ಬಹುನಿರೀಕ್ಷಿತ ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

Written By:

ದೇಶದ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಸಂಸ್ಥೆ ಗ್ರಾಹಕರ ಅಚ್ಚುಮೆಚ್ಚಿನ ಟಿಯೊಗೊ ಹ್ಯಾಚ್ ಬ್ಯಾಕ್ ಕಾರಿನ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಮಾದರಿಯನ್ನು ಬಿಡುಗಡೆಗೊಳಿಸಿದೆ.

ಬಹುನಿರೀಕ್ಷಿತ ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ನವೀನ ಮಾದರಿಯ ಟಾಟಾ ಟಿಯಾಗೊ ಎಎಂಟಿ ಕಾರು ಎಕ್ಸ್ ಝೆಡ್ಎ ಎಂಬ ಪೆಟ್ರೋಲ್ ಮಾದರಿ ಬಿಡುಗಡೆಗೊಂಡಿದ್ದು ಇಂದಿನಿಂದಲೇ ಮಾರಾಟಕ್ಕೆ ಲಭ್ಯವಿದೆ ಎಂದು ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ಅತಿ ಹೆಚ್ಚು ಬೇಡಿಕೆ ಹೊಂದಿದ್ದ ಹಿಂದಿನ ಆವೃತಿ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನಂತೆ ಈ ಹೊಸ ಎಎಂಟಿ ಕಾರು ಯಶಸ್ಸು ಸಾಧಿಸಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬಹುನಿರೀಕ್ಷಿತ ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಆಟೋಮ್ಯಾಟಿಕ್, ನ್ಯೂಟ್ರಲ್, ರಿವರ್ಸ ಮತ್ತು ಮಾನ್ಯುಯಲ್ ಎಂಬ ನಾಲ್ಕು ಗೇರ್ ಆಯ್ಕೆಗಳೊಂದಿಗೆ ಕಾರು ಬಿಡುಗಡೆಗೊಂಡಿದೆ.

ಬಹುನಿರೀಕ್ಷಿತ ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಈ ಹೊಸ ಟಾಟಾ ಟಿಯಾಗೊ ಎಎಂಟಿ ಕಾರು ವಿಭಿನ್ನ ರೀತಿಯ ಚಾಲನ ಅನುಭವ ನೀಡುವ ನಿಟ್ಟಿನಲ್ಲಿ ಕ್ರೀಡಾ ಬಳಕೆ ಮತ್ತು ನಗರ ಬಳಕೆ ಎಂಬ ಎರಡು ವಿಧಗಳಲ್ಲಿ ನಿಮ್ಮ ಮುಂದೆ ಬರುತ್ತಿದೆ.

ಬಹುನಿರೀಕ್ಷಿತ ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಅಂದ ಹಾಗೆ, ಪೆಟ್ರೋಲ್ 1.2 ಲೀಟರ್ ತ್ರಿ ಸಿಲಿಂಡರ್ ಎಂಜಿನ್ ಟಾಟಾ ಟಿಯಾಗೊ ಎಎಂಟಿ ಕಾರು 114 ಎನ್ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿ ಉತ್ಪಾದಿಸುವಷ್ಟು ಶಕ್ತವಾಗಿದೆ.

ಬಹುನಿರೀಕ್ಷಿತ ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಈ ಹೊಸ ಟಿಯಾಗೊ ಕಾರು ಬ್ರೇಕ್ 'ಕ್ರೀಪ್' ಕಾರ್ಯನಿರ್ವಹಣೆಯೊಂದಿಗೆ ಬಿಡುಗಡೆಗೊಳ್ಳುತ್ತಿದ್ದು, ಈ ತಂತ್ರಜ್ಞಾನದಿಂದಾಗಿ ಆಕ್ಸಿಲರೇಟರ್ ಒತ್ತದೆಯೆ ಬ್ರೇಕ್ ಬಿಡುಗಡಗೊಳಿಸಿದ ತಕ್ಷಣ ಕಾರು ಮುಂದಕ್ಕೆ ಚಲಿಸಲಿದ್ದು, ಎತ್ತರದ ಪ್ರದೇಶದಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ.

ಬಹುನಿರೀಕ್ಷಿತ ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಭಾರತದಲ್ಲಿ ಟಾಟಾ ಟಿಯಾಗೊ ಎಎಂಟಿ ಕಾರಿನ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 5.39 ಲಕ್ಷ ರು.ಗಳ ವರೆಗೆ ದರ ವಿಧಿಸಲಾಗಿದೆ.

ಬಹುನಿರೀಕ್ಷಿತ ಟಾಟಾ ಟಿಯಾಗೊ ಎಎಂಟಿ ಕಾರು ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ಪ್ರಯಾಣಿಕ ವಾಹನಗಳ ವ್ಯವಹಾರಗಳ ಅಧ್ಯಕ್ಷ ಮಾಯಾಂಕ್ ಪರೀಕ್ ಮಾತಾನಾಡಿ, "2016 ಎಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ ಪ್ರವೇಶಿಸಿದ್ದ ಟಾಟಾ ಟಿಯಾಗೊ ಅತಿ ಹೆಚ್ಚು ಬೇಡಿಕೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು, ಈಗ ಟಾಟಾ ಮೋಟಾರ್ಸ್ ಸಂಸ್ಥೆಯ ಈ ಎಎಂಟಿ ಕಾರು ಮತ್ತೆ ಹೊಸ ಬದಲಾವಣೆ ಮತ್ತು ವ್ಯವಿಧ್ಯತೆಯಿಂದ ಹೆಚ್ಚು ಜನರನ್ನು ತನ್ನತ್ತ ಆಕರ್ಷಿಸಲಿದೆ" ಎಂದರು.

ಅತಿ ಹೆಚ್ಚು ಮಾರಾಟವಾದ ಮತ್ತು ಈಗಲೂ ಬೇಡಿಕೆ ಹೊಂದಿರುವ ಟಾಟಾ ಮೋಟರ್ಸ್ ಟಿಯಾಗೊ ಹ್ಯಾಚ್ ಬ್ಯಾಕ್ ಕಾರಿನ ಚಿತ್ರಗಳನ್ನು ಈಗಲೇ ವೀಕ್ಷಿಸಿ.

English summary
The Tata Tiago AMT has been launched in India, making the Tiago AMT one of most affordable automatic hatchbacks in India.
Please Wait while comments are loading...

Latest Photos