ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

Written By:

ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟಿಂಗ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದ ಟಿಯಾಗೊ ವಿಜ್ ಹ್ಯಾಚ್‌ಬ್ಯಾಕ್ ಕಾರು ಮಾದರಿಯು ಇದೀಗ ಬಿಡುಗಡೆಗೊಂಡಿದ್ದು, ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಖರೀದಿಸಬಹುದಾಗಿದೆ.

To Follow DriveSpark On Facebook, Click The Like Button
ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಭಾರತೀಯ ಮಾರುಕಟ್ಟೆಯಲ್ಲಿ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆ ಟಿಯಾಗೊ ವಿಜ್ ಮಾದರಿಗಳನ್ನು ಬಿಡುಗಡೆ ಮಾಡಿರು ಟಾಟಾ ಮೋಟಾರ್ಸ್ ಸಂಸ್ಥೆಯು ಪೆಟ್ರೋಲ್ ಆವೃತ್ತಿಗಳ ಆರಂಭಿಕ ಬೆಲೆಯನ್ನು ರೂ.4.52ಲಕ್ಷ ಹಾಗೂ ಡೀಸೆಲ್ ಆವೃತ್ತಿಗಳ ಆರಂಭಿಕ ಬೆಲೆಯನ್ನು ರೂ.5.30 ಲಕ್ಷಕ್ಕೆ ನಿಗದಿಗೊಳಿಸಿದೆ.

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ ಹ್ಯಾಚ್‌ಬ್ಯಾಕ್ ಮಾದರಿಗಳು ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾಗಿದ್ದು, ಈ ಹಿನ್ನೆಲೆ ಟಿಯಾಗೊ ವಿಜ್ ಮಾದರಿಯನ್ನು ಸ್ಪೋರ್ಟಿಯರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ.

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಟಿಯಾಗೊ ವಿಜ್ ವಿಶೇಷ ಆವೃತ್ತಿಯಲ್ಲಿ ಒದಗಿಸಲಾಗಿರುವ ಹೊಸ ಸೌಲಭ್ಯಗಳು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯುವಂತಿದ್ದು, ಕಂಟ್ರಾಸ್ಟ್ ಬ್ಯಾಕ್ ರೂಫ್, ಚಕ್ರಗಳಲ್ಲಿ ಕ್ಯಾಪ್‌ಗಳು, ಗ್ರಿಲ್ ಡಿಸೈನ್ ,ಸುಧಾರಿತ ಒಳವಿನ್ಯಾಸಗಳು ಮತ್ತು ಹೊರ ಮೈ ವಿನ್ಯಾಸವನ್ನು ಕೆಂಪು ಬಣ್ಣದೊಂದಿದೆ ಅಭಿವೃದ್ಧಿಗೊಳಿಸಲಾಗಿದೆ.

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಇದಲ್ಲದೇ ಹೆಚ್ಚುವರಿಯಾಗಿ ಟಿಯಾಗೊ ವಿಜ್ ಮಾದರಿಗಳಲ್ಲಿ ಎಕ್ಸ್‌ಟಿ ಆವೃತ್ತಿಗಳ ರೀತಿಯಲ್ಲೇ ಸ್ಟ್ಯಾಂಡರ್ಡ್ ಮಾದರಿಯ ಛಾವಣಿಯ ಹಳಿಗಳು ಹೊಂದಿಸಲಾಗಿದ್ದು, ಇದೇ ಕಾರಣಕ್ಕೆ ಎಕ್ಸ್‌ಟಿಗಳಿಂತಲೂ ರೂ.15 ಸಾವಿರ ಮೌಲ್ಯದ ಕೆಲವು ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಟಿಯಾಗೊ ಯಾಂತ್ರಿಕ ವಿಭಾಗದ ಬಗೆಗೆ ಹೇಳುವುದಾದರೇ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು 1.05-ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, ಪೆಟ್ರೋಲ್ ಆವೃತ್ತಿಯು 84-ಬಿಎಚ್‌ಪಿ, 114-ಎನ್ಎಂ ಟಾರ್ಕ್ ಮತ್ತು ಡೀಸೆಲ್ ಆವೃತ್ತಿಯು 69-ಬಿಎಚ್‌ಪಿ, 140-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿವೆ.

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಇನ್ನು ಟಿಯಾಗೊ ವಿಜ್ ಬಿಡುಗಡೆ ಬಗೆಗೆ ಮಾತನಾಡಿರುವ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ಯುನಿಟ್ ಅಧ್ಯಕ್ಷ ಮಾಯಾಂಕ್ ಪಾರೀಕ್, "ವಿಜ್ ಸೀಮಿತ ಆವೃತ್ತಿಯೊಂದಿಗೆ ನಾವು ಟಿಯಾಗೋದ ಯಶಸ್ಸನ್ನು ಆಚರಿಸಲು ಬಯಸುತ್ತೇವೆ ಮತ್ತು ಹಬ್ಬದ ಋತುವನ್ನು ಸಂಭಾವ್ಯ ಗ್ರಾಹಕರಿಗೆ ವಿಶೇಷವಾದದ್ದನ್ನು ಪ್ರಾರಂಭಿಸಲು ಬಯಸುತ್ತೇವೆ" ಎಂದಿದ್ದಾರೆ.

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಈಗಾಗಲೇ ಟಿಯಾಗೊ ಅತ್ಯುತ್ತಮ ಮಾದರಿಯಾಗಿ ಹೊರಹೊಮ್ಮಿದ್ದು, ಇದೀಗ ವಿಜ್ ವಿಶೇಷ ಆವೃತ್ತಿ ಮೂಲಕ ಗ್ರಾಹಕರಿಗೆ ಮತ್ತೊಂದು ಆಯ್ಕೆ ನೀಡುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಸ್ಟೋರ್ಟಿಯರ್ ವೈಶಿಷ್ಟ್ಯತೆಗಳನ್ನು ಒದಗಿಸಿರುವುದು ಮತ್ತೊಂದು ವಿಶೇಷ ಎನ್ನಬಹುದು.

English summary
Read in Kannada about Tata Tiago Wizz Launched In India.
Please Wait while comments are loading...

Latest Photos