ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಟಿಗೋರ್ ಎಎಂಟಿ ಕಾರು ಬಿಡುಗಡೆ

Written By:

ಟಾಟಾ ಮೋಟಾರ್ಸ್ ನಿರ್ಮಾಣದ ಬಹುಬೇಡಿಕೆಯ ಕಂಪ್ಯಾಕ್ಟ್ ಸೆಡಾನ್ ಆವೃತ್ತಿಯಾದ ಟಿಗೋರ್ ಎಎಂಟಿ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ 5.75 ಲಕ್ಷಕ್ಕೆ ನಿಗದಿಗೊಳಿಸಲಾಗಿದೆ.

ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಟಿಗೋರ್ ಎಎಂಟಿ ಕಾರು ಬಿಡುಗಡೆ

ಈ ಹಿಂದೆ ಮ್ಯಾನುವಲ್ ಟಾಟಾ ಟಿಗೋರ್ ಎಡಿಷನ್ ಬಿಡುಗಡೆಗೊಳಿಸಿ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೀಗ ಆಟೋಮ್ಯಾಟಿಕ್ ಗೇರ್‌ಬಾಕ್ಸ್(ಎಎಂಟಿ) ಆವೃತ್ತಿಯನ್ನು ಹೊರ ತಂದಿದ್ದು, ಇಕೊ ಮತ್ತು ಸಿಟಿ ಜತೆಗೆ ಸ್ಪೋರ್ಟ್ ಡ್ರೈವ್ ಮೋಡ್‌ಗಳನ್ನು ಪರಿಚಯಿಸಿದೆ.

ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಟಿಗೋರ್ ಎಎಂಟಿ ಕಾರು ಬಿಡುಗಡೆ

ಈ ಮೂಲಕ ತನ್ನ ಜನಪ್ರಿಯ ಕಾಂಪಾಕ್ಟ್ ಸೆಡಾನ್ ಕಾರಾಗಿರುವ ಟಿಗೋರ್ ಸಾನಿಧ್ಯವನ್ನು ಮತ್ತಷ್ಟು ವೃದ್ಧಿಸಿಕೊಂಡಿರುವ ಟಾಟಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಟಿಎ, ಎಕ್ಸ್‌ಝಡ್ಎ ಆವೃತ್ತಿಗಳನ್ನು ಸಿದ್ಧಗೊಳಿಸಿದೆ.

Recommended Video - Watch Now!
[Kannada] Tata Tiago XTA AMT Launched In India - DriveSpark
ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಕಾರಿನ ಮಾದರಿಗಳು - ಬೆಲೆಗಳು

ಎಕ್ಸ್‌ಟಿಎ - 5.75 ಲಕ್ಷ

ಎಕ್ಸ್‌ಝಡ್ಎ - 6.22 ಲಕ್ಷ

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಇದರೊಂದಿಗೆ ಟಾಟಾ ಟಿಗೋರ್ ಕಾರು ಎಕ್ಸ್‌ಟಿಎ, ಎಲ್ಇಡಿ ಟರ್ನ್ ಇಂಡಿಕೇಟರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಸಂಪೂರ್ಣ ವೀಲ್ ಕವರ್ ಕಪ್ಪು ಬಿ ಪಿಲ್ಲರ್, ರಿಯರ್ ಪವರ್ ಔಟ್ಲೆಟ್, ಹರ್ಮನ್ ಕನೆಕ್ಟ್ ನೆಕ್ಸ್ಟ್ ಇನ್ಪೋಟೈನ್ಮೆಂಟ್ ಸಿಸ್ಟಂ ಹೊಂದಿದೆ.

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಜೊತೆಗೆ ನಾಲ್ಕು ಸ್ಪೀಕರ್, ನೇವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಸ್ಟೀರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್ ಮತ್ತು ಎಲ್‌ಇಡಿ ತಾಪಮಾನ ಗೇಜ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, 1.2 ಲೀಟರ್ ರೆವೆಟ್ರಾನ್ ಪೆಟ್ರೋಲ್ ಎಂಜಿನ್‌ಗಳಲ್ಲಿ ಟಾಪ್ ಎಂಡ್ ಎಕ್ಸ್‌ಟಿಎ ಮತ್ತು ಎಕ್ಸ್‌ಝಡ್ಎ ವೆರಿಯಂಟ್‌ಗಳಲ್ಲಿ ಇದು ಲಭ್ಯವಾಗಲಿದೆ.

ತಪ್ಪದೇ ಓದಿ-ಡಿಜಿ ಲಾಕರ್ ಬಳಸಿದ್ದೇ ತಪ್ಪಾಯ್ತಾ? ಬೈಕ್ ಸವಾರನಿಗೆ 5 ಸಾವಿರ ದಂಡ ಹಾಕಿದ ಟ್ರಾಫಿಕ್ ಪೊಲೀಸರು..!!

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಹೀಗಾಗಿ ಟಾಟಾ ಟಿಗೋರ್ ಪೆಟ್ರೋಲ್ ಆವೃತ್ತಿಯು 84-ಬಿಎಚ್‌ಪಿ ಹಾಗೂ 114-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ಶಕ್ತಿಯನ್ನು ಹೊಂದಿದ್ದು, ಸುರಕ್ಷಾ ಕ್ರಮಗಳಾದ ಫ್ರಂಟ್ ಫಾಗ್ ಲ್ಯಾಂಪ್, ಸ್ಪೀಡ್ ಅವಲಂಬಿಸಿ ಆಟೋ ಡೋರ್ ಲಾಕ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಸಿಸ್ಟಂ ಮತ್ತು ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ.

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಇನ್ನು ಎಕ್ಸ್‌ಝಡ್‌ಎ ವೆರಿಯಂಟ್ ಮಾದರಿಯು ರೂ. 6.22 ಲಕ್ಷ ರೂ.ಗಳಷ್ಟು ದುಬಾರಿಯೆನಿಸಲಿದ್ದು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಅಲಾಯ್ ವೀಲ್ಸ್, ಕ್ರೋಮ್ ಫಿನಿಶ್, ಐದು ಇಂಚುಗಳ ಟಚ್ ಸ್ಕ್ರೀನ್, ಎಲೆಕ್ಟ್ರಿಕ್ ಬೂಟ್ ಓಪನಿಂಗ್, ರಿಯರ್ ಡಿಫಾಗರ್, ಸೀಟು ಬೆಲ್ಟ್ ಜತೆ ಪ್ರಿ ಟೆನ್ಷನರ್, ಲೋಡ್ ಲಿಮಿಟರ್, ಚಾಲಕ ಮತ್ತು ಸಹ ಚಾಲಕ ಏರ್ ಬ್ಯಾಗ್ ವ್ಯವಸ್ಥೆಗಳು ಲಭ್ಯವಾಗಲಿವೆ.

ಟಾಟಾ ಬಹುನೀರಿಕ್ಷಿತ ಟಿಯಾಗೊ ವಿಜ್ ಕಾರು ಭಾರತದಲ್ಲಿ ಬಿಡುಗಡೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದಿನ ಮಾದರಿಗಿಂತ ಹೆಚ್ಚಿನ ಸುಧಾರಿತ ಅಂಶಗಳನ್ನು ಹೊಂದಿರುವ ಟಾಟಾ ಟಿಗೋರ್ ಆವೃತ್ತಿಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಡಿಜೈರ್ ಮತ್ತು ಹ್ಯುಂಡೈ ಎಕ್ಸ್‌ಸೆಂಟ್ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡುವ ತವಕದಲ್ಲಿದೆ ಎನ್ನಬಹುದು.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಎಚ್ಚರ... ಇನ್ಮುಂದೆ ಈ ಬೈಕುಗಳು ನೊಂದಣಿಯಾಗೋದಿಲ್ಲ !!

English summary
Read in Kannada about Tata Tigor AMT Launched In India.
Story first published: Thursday, November 2, 2017, 19:44 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark