ಟೊಯೊಟಾ ಫಾರ್ಚುನರ್ ಕ್ರೀಡಾ ಆವೃತ್ತಿ ಭಾರತದಲ್ಲಿ ಬಿಡುಗಡೆ

Written By:

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ತನ್ನ ಎಸ್‌ಯುವಿ ಫಾರ್ಚುನರ್ ಕ್ರೀಡಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಕಾರು ರೂ. 31,01,500 ಲಕ್ಷ(ಎಕ್ಸ್ ಶೋ ರೂಂ ದೆಹಲಿ) ಬೆಲೆ ಹೊಂದಿದೆ.

To Follow DriveSpark On Facebook, Click The Like Button
ಟೊಯೊಟಾ ಫಾರ್ಚುನರ್ ಕ್ರೀಡಾ ಆವೃತ್ತಿ ಭಾರತದಲ್ಲಿ ಬಿಡುಗಡೆ

ಹೊಸ ಆವೃತ್ತಿಯ ಫಾರ್ಚುನರ್ ಟಿಆರ್‌ಡಿ ಸ್ಪೋರ್ಟಿವೊ ಕಾರನ್ನು ಟೊಯೊಟಾ ರೇಸಿಂಗ್ ಡೆವಲಪ್ಮೆಂಟ್(ಟಿ ಆರ್ ಡಿ) ವಿಭಾಗವು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದು, 4 × 2 ಎಟಿ - ಪರ್ಲ್ ಬಿಳಿ ಬಣ್ಣದಲ್ಲಿ ಲಭ್ಯವಿದೆ ಹಾಗು ಭಾರತದಾದ್ಯಂತ ಇರುವಂತಹ ವಿತರಕರಲ್ಲಿ ಫಾರ್ಚುನರ್ ಟಿಆರ್‌ಡಿ ಸ್ಪೋರ್ಟಿವೊ ಕಾರಿನ ಬುಕಿಂಗ್ ಜೊತೆ ವಾಹನ ಪ್ರದರ್ಶನ ಸಹ ಮಾಡಲಾಗುತ್ತದೆ.

ಟೊಯೊಟಾ ಫಾರ್ಚುನರ್ ಕ್ರೀಡಾ ಆವೃತ್ತಿ ಭಾರತದಲ್ಲಿ ಬಿಡುಗಡೆ

ದೆಹಲಿ ಎನ್‌ಸಿಆರ್, ಮುಂಬೈ, ಬೆಂಗಳೂರು, ಹೈದರಾಬಾದ್, ಜೈಪುರ, ಜಲಂಧರ್, ಅಹಮದಾಬಾದ್, ಪುಣೆ, ಚಂಡೀಗಢ, ಲುಧಿಯಾನ ಮತ್ತು ಲಕ್ನೌ ನಗರಗಳಲ್ಲಿ ಟೊಯೊಟಾ ಕಂಪನಿ ತನ್ನ ವಿತರಕರನ್ನು ಹೊಂದಿದೆ.

ಟೊಯೊಟಾ ಫಾರ್ಚುನರ್ ಕ್ರೀಡಾ ಆವೃತ್ತಿ ಭಾರತದಲ್ಲಿ ಬಿಡುಗಡೆ

ಹೊಸ ಎಸ್‌ಯುವಿ ಕಾರು 2.8 ಲೀಟರ್ ಡೀಸೆಲ್ ಎಂಜಿನ್ ಅಳವಡಿಕೆಗೊಂಡಿದ್ದು, ಈ ಎಂಜಿನ್‌ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಬಿಡುಗಡೆಯಾಗಿದೆ.

ಟೊಯೊಟಾ ಫಾರ್ಚುನರ್ ಕ್ರೀಡಾ ಆವೃತ್ತಿ ಭಾರತದಲ್ಲಿ ಬಿಡುಗಡೆ

ಈ ಕಾರಿನ ಸುರಕ್ಷತಾ ವಿಭಾಗದ ಬಗ್ಗೆ ಕಂಪನಿ ಹೆಚ್ಚು ಗಮನ ನೀಡಿದ್ದು, 7 SRS ಏರ್ ಬ್ಯಾಗ್‌ಗಳು, ವಾಹನ ಸ್ಥಿರತೆ ನಿಯಂತ್ರಣ (VSC) ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ (HAC)ಸೌಲಭ್ಯಗಳನ್ನು ಒಳಗೊಂಡಿದೆ.

ಟೊಯೊಟಾ ಫಾರ್ಚುನರ್ ಕ್ರೀಡಾ ಆವೃತ್ತಿ ಭಾರತದಲ್ಲಿ ಬಿಡುಗಡೆ

ಹೊಸ ಕಾರು ನವೀನ ಮಾದರಿಯ ಸ್ಪೋರ್ಟಿ ಫ್ರಂಟ್ ಮತ್ತು ಹಿಂಭಾಗದ ಬಂಪರ್ ಸ್ಪಾಯ್ಲರ್, ಆರ್18 ಟಿಆರ್‌ಡಿ ಅಲಾಯ್ ಚಕ್ರಗಳು, ಟಿಆರ್‌ಡಿ ರೇಡಿಯೇಟರ್ ಗ್ರಿಲ್, ಲೋ ಗ್ರಿಲ್ ಕವರ್, ಟಿಆರ್‌ಡಿ ಸ್ಫೂರ್ತಿಯ ಹೊರಭಾಗದ ಅಕ್ಸೆಂಟ್, ಟಿಆರ್‌ಡಿ ಸ್ಪೋರ್ಟಿವೊ ಬ್ಯಾಡ್ಜ್ ಮತ್ತು ಒಳಭಾಗದಲ್ಲಿ ಕೆಂಪು ಬಣ್ಣದ ಹೊಲಿಗೆ ಪಡೆದುಕೊಂಡಿದೆ.

ಟೊಯೊಟಾ ಫಾರ್ಚುನರ್ ಕ್ರೀಡಾ ಆವೃತ್ತಿ ಭಾರತದಲ್ಲಿ ಬಿಡುಗಡೆ

ಕಾರಿನ ಒಳಭಾಗದಲ್ಲಿ 7 ಇಂಚಿನ ಟ್ಯಾಬ್ಲೆಟ್‌ನಿಂದ ಸ್ಫೂರ್ತಿ ಪಡೆದ ಟಚ್‌ಸ್ಕ್ರೀನ್ ನ್ಯಾವಿಗೇಷನ್ ಜೊತೆ ಇನ್ಫೋಟೈನ್ಮೆಂಟ್, ಪಾರ್ಕ್ ಸಹಾಯ, ಹಿಂಭಾಗದ ಮಾನಿಟರ್ ಮತ್ತು ಸಂವೇದಕ, ದೊಡ್ಡ ಟಿಎಫ್‌ಟಿ ಮಲ್ಟಿ-ಇನ್ಫಾರ್ಮಶನ್ ಡಿಸ್‌ಪ್ಲೇ, ಆಟೋ ಕ್ಲೈಮೇಟ್ ಕಂಟ್ರೋಲ್ [ಡ್ಯೂಯಲ್ ಎಸಿ] ಸೌಕರ್ಯಗಳನ್ನು ಈ ಕಾರಿನಲ್ಲಿ ನೋಡಬಹುದಾಗಿದೆ.

English summary
Toyota Kirloskar Motor has launched the sportier edition of its SUV, the Fortuner. Christened as the Fortuner TRD Sportivo, the new edition will be available in the 4×2 AT – pearl white color.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark