ಜಿಎಸ್‌ಟಿ ಜಾರಿ ನಂತರ ಟೊಯೊಟಾ ಕಾರುಗಳಿಗೆ ಭಾರೀ ಬೇಡಿಕೆ

Written By:

ಭಾರತೀಯ ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿರುವ ಟೊಯೊಟಾ ಇಂಡಿಯಾ ಸಂಸ್ಥೆಯು, ಜಿಎಸ್‌ಟಿ ನಂತರ ಬೆಲೆಗಳನ್ನು ಗಮರ್ನಾಹ ಇಳಿಕೆ ಮಾಡುವ ಮೂಲಕ ಜುಲೈ ಅವಧಿಯಲ್ಲಿನ ಮಾರಾಟ ಪ್ರಕ್ರಿಯೆಯಲ್ಲಿ ಗಣನೀಯ ಏರಿಕೆ ಕಂಡಿದೆ.

ಜಿಎಸ್‌ಟಿ ಜಾರಿ ನಂತರ ಟೊಯೊಟಾ ಕಾರುಗಳಿಗೆ ಭಾರೀ ಬೇಡಿಕೆ

ಜುಲೈ 1ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಗೊಂಡಿದ್ದು, ಆಟೋ ಉದ್ಯಮದ ಮೇಲೂ ಸಾಕಷ್ಟು ಪರಿಣಾಮ ಬೀರಿದೆ. ಹೈಬ್ರಿಡ್ ಮತ್ತು ಸೂಪರ್ ಕಾರುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾರುಗಳ ಮಾದರಿಗಳ ಬೆಲೆಗಳು ಇಳಿಕೆಯಾಗಿದ್ದು, ಗ್ರಾಹಕರಿಗೆ ಇದು ವರವಾಗಿ ಪರಿಣಮಿಸಿದೆ.

ಜಿಎಸ್‌ಟಿ ಜಾರಿ ನಂತರ ಟೊಯೊಟಾ ಕಾರುಗಳಿಗೆ ಭಾರೀ ಬೇಡಿಕೆ

ಇದಕ್ಕೂ ಮೊದಲು ಜೂನ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಇಳಿಕೆ ಕಂಡಿದ್ದ ಕಾರು ಉತ್ಪಾದನಾ ಸಂಸ್ಥೆಗಳು, ಹೊಸ ತೆರಿಗೆ ಪದ್ಧತಿಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಮಾರಾಟ ಪ್ರಕ್ರಿಯೆಯಲ್ಲಿ ದಾಖಲೆ ಕಾಣುತ್ತಿವೆ.

ಜಿಎಸ್‌ಟಿ ಜಾರಿ ನಂತರ ಟೊಯೊಟಾ ಕಾರುಗಳಿಗೆ ಭಾರೀ ಬೇಡಿಕೆ

ಟೊಯೊಟಾ ಇಂಡಿಯಾ ಕೂಡಾ ಭಾರತದಲ್ಲಿ 17,750 ಕಾರುಗಳನ್ನು ಮಾರಾಟ ಮಾಡುವ ಮೂಲಕ ಶೇ.43ರಷ್ಟು ಪ್ರಗತಿಯನ್ನು ಕಂಡಿದ್ದು, ದೇಶದಲ್ಲೇ ಮೂರನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿದೆ.

ಜಿಎಸ್‌ಟಿ ಜಾರಿ ನಂತರ ಟೊಯೊಟಾ ಕಾರುಗಳಿಗೆ ಭಾರೀ ಬೇಡಿಕೆ

ಜುಲೈನಲ್ಲಿ ಮಾರಾಟಗೊಂಡ 17,750 ಟೊಯೊಟಾ ಕಾರುಗಳಲ್ಲಿ 9,300 ಇನೋವಾ ಕ್ರಿಸ್ಟಾ ಕಾರುಗಳಿದ್ದರೆ, 3,400 ಫಾರ್ಚೂನರ್ ಎಸ್‌ಯುವಿ ಕಾರುಗಳು ಮಾರಾಟವಾಗಿವೆ. ಇದರೊಂದಿಗೆ 5 ಸಾವಿರ ಕಾರುಗಳನ್ನು ವಿದೇಶಿ ಮಾರುಕಟ್ಟೆಗೆ ರಫ್ತು ಕೂಡಾ ಮಾಡಲಾಗಿದೆ.

ಜಿಎಸ್‌ಟಿ ಜಾರಿ ನಂತರ ಟೊಯೊಟಾ ಕಾರುಗಳಿಗೆ ಭಾರೀ ಬೇಡಿಕೆ

ಇದಲ್ಲದೇ 1,344 ಇಟಿಯಾಸ್ ಕಾರು ಸರಣಿಗಳು ಮಾರಾಟಗೊಂಡಿದ್ದು, ದೇಶದಲ್ಲಿ ಜಿಎಸ್‌ಟಿ ಜಾರಿ ನಂತರ ಟೊಯೊಟಾ ಇಂಡಿಯಾ ಕೈಗೊಂಡ ಗ್ರಾಹಕರ ಪರ ವಿಶೇಷ ಯೋಜನೆಗಳು ಮಾರಾಟಕ್ಕೆ ಹೆಚ್ಚಳಕ್ಕೆ ಕಾರಣವಾಗಿವೆ ಎನ್ನಬಹುದು.

ಜಿಎಸ್‌ಟಿ ಜಾರಿ ನಂತರ ಟೊಯೊಟಾ ಕಾರುಗಳಿಗೆ ಭಾರೀ ಬೇಡಿಕೆ

ಈ ಕುರಿತಂತೆ ಅಧಿಕೃತ ಮಾಹಿತಿ ಹೊರಹಾಕಿರುವ ಟೊಯೊಟಾ ಇಂಡಿಯಾ ಹಿರಿಯ ಅಧಿಕಾರಿ ಎನ್.ರಾಜು "ಕೇಂದ್ರ ಸರ್ಕಾರ ಜಾರಿ ಮಾಡಿರುವ ಜಿಎಸ್‌ಟಿಯಿಂದಾಗಿ ಕಾರು ಮಾರಾಟಕ್ಕೆ ಉತ್ತಮ ವಾತಾವರಣ ಕಲ್ಪಿಸಿಕೊಟ್ಟಿದ್ದು, ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸಲು ಸಿದ್ಧರಾಗಿದ್ದೇವೆ" ಎಂದಿದ್ದಾರೆ.

ಜಿಎಸ್‌ಟಿ ಜಾರಿ ನಂತರ ಟೊಯೊಟಾ ಕಾರುಗಳಿಗೆ ಭಾರೀ ಬೇಡಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಾರು ಮಾರಾಟದ ಮೇಲೆ ಜಿಎಸ್‌ಟಿ ಜಾರಿ ಪ್ರತಿಕೂಲಕರ ಪರಿಣಾಮ ಬೀರಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಟೊಯೊಟಾ ಇಂಡಿಯಾ ಸಂಸ್ಥೆಯು ಶೇ.43 ಪ್ರಗತಿ ಸಾಧಿಸಿ ಅತ್ಯುತ್ತಮ ಕಾರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

English summary
Read in Kanada about Toyota India Achieves Best Ever Monthly Sales In July 2017.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark