ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಪ್ರತಿಸ್ಪರ್ಧಿಯಾದ ಟೊಯೊಟಾ ವಿಯೋಸ್ ವಿಶೇಷತೆ ಏನು?

Written By:

ಸೆಡಾನ್ ಆವೃತ್ತಿಗಳಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ‌ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ಟೊಯೊಟೊ ನಿರ್ಮಾಣದ ವಿಯೋಸ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಈ ಹಿನ್ನೆಲೆ ಹೊಸ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

To Follow DriveSpark On Facebook, Click The Like Button
ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಪ್ರತಿಸ್ಪರ್ಧಿಯಾದ ಟೊಯೊಟಾ ವಿಯೋಸ್ ವಿಶೇಷತೆ ಏನು?

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಜನಪ್ರಿಯ ಸಾಧಿಸಿರುವ ಇಟಿಯಾಸ್ ಆವೃತ್ತಿಗಳು ವಾಣಿಜ್ಯ ಬಳಕೆಗೆ ಬೇಡಿಕೆಯಿದೆ. ಆದ್ರೆ ಐಷಾರಾಮಿ ಮಾದರಿಯಾದ ವೆರ್ನಾ ಮತ್ತು ಹೋಂಡಾ ಸಿಟಿಗೆ ಪ್ರಬಲ ಪ್ರತಿಸ್ಪರ್ಧಿಯೊಂದನ್ನು ಟೊಯೊಟಾ ಸಂಸ್ಥೆಯು ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ.

ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಪ್ರತಿಸ್ಪರ್ಧಿಯಾದ ಟೊಯೊಟಾ ವಿಯೋಸ್ ವಿಶೇಷತೆ ಏನು?

ಕರೊಲ್ಲಾ ನಂತರ ವೆರ್ನಾ ಮಾರಾಟದಲ್ಲಿ ದಾಖಲೆ ಕಾಣುತ್ತಿರುವ ಟೊಯೊಟಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಧ್ಯಮ ಗಾತ್ರದ ಸೆಡಾನ್ ಆವೃತ್ತಿಯಾದ ವಿಯೋಸ್ ಕಾರುನ್ನು ದೇಶಿಯ ಮಾರುಕಟ್ಟೆಗೆ ವಿಶೇಷವಾಗಿ ಅಭಿವೃದ್ಧಿಗೊಳಿಸಿದೆ.

ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಪ್ರತಿಸ್ಪರ್ಧಿಯಾದ ಟೊಯೊಟಾ ವಿಯೋಸ್ ವಿಶೇಷತೆ ಏನು?

ಇನ್ನು ಟೊಯೊಟಾ ಪರಿಚಯಿಸಲು ಮುಂದಾಗಿರುವ ವಿಯೋಸ್ ಕಾರುಗಳು ಈಗಾಗಲೇ ಯುರೋಪಿನ್ ಮಾರುಕಟ್ಟೆ ಸೇರಿದಂತೆ ಚೀನಾದಲ್ಲೂ ಮಾರಾಟಕ್ಕೆ ಲಭ್ಯವಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಸೆಡಾನ್ ಕಾರುಗಳ ಬೇಡಿಕೆ ಹಿನ್ನೆಲೆ ಹೊಸ ಕಾರು ಬಿಡುಗಡೆಗೊಳಿಸುವ ಯೋಜನೆ ರೂಪಿಸಲಾಗಿದೆ.

ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಪ್ರತಿಸ್ಪರ್ಧಿಯಾದ ಟೊಯೊಟಾ ವಿಯೋಸ್ ವಿಶೇಷತೆ ಏನು?

ಹೀಗಾಗಿ ವಿಯೋಸ್ ಕಾರುನ್ನು ಸಂಪೂರ್ಣವಾಗಿ ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗುತ್ತಿದ್ದು, ಮುಂಬರುವ 2018ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿ ತದನಂತರವಷ್ಟೇ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.

ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಪ್ರತಿಸ್ಪರ್ಧಿಯಾದ ಟೊಯೊಟಾ ವಿಯೋಸ್ ವಿಶೇಷತೆ ಏನು?

ಎಂಜಿನ್ ಸಾಮರ್ಥ್ಯ

ವರದಿಗಳ ಪ್ರಕಾರ ವಿಯೋಸ್ ಕಾರು ಮಾದರಿಯು 1.5-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೋಂಡಾ ಸಿಟಿಯಂತೆ 4,420 ಎಂಎಂ ಉದ್ದವನ್ನು ಹೊಂದಿದೆ.

ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಪ್ರತಿಸ್ಪರ್ಧಿಯಾದ ಟೊಯೊಟಾ ವಿಯೋಸ್ ವಿಶೇಷತೆ ಏನು?

ಜೊತೆಗೆ ಸುಧಾರಿತ ಮಾದರಿಯ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಪಾರ್ಕಿಂಗ್ ರಿರ್ ಕ್ಯಾಮೆರಾ, ಎಬಿಎಸ್, ಇಬಿಡಿ, ದೊಡ್ಡದಾದ ಬೂಟ್ ಸ್ಪೆಸ್ ಮತ್ತು ಲೆದರ್ ಕೊಟಿಂಗ್ ಸೀಟುಗಳನ್ನು ಒದಗಿಸಲಾಗಿದೆ.

English summary
Autocar India reveals that the Toyota is working hard to launch the sedan by Diwali 2018.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark