ನಾಳೆ 'ನಮ್ಮ ಟೈಗರ್' ಕ್ಯಾಬ್ ಆ್ಯಪ್ ಸೇವೆ ಲೋಕಾರ್ಪಣೆ; ಎಚ್‌.ಡಿ.ಕುಮಾರಸ್ವಾಮಿ

Written By:

ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಹೊರಬರುತ್ತಿರುವ ನೂತನ ಕ್ಯಾಬ್ ಸೇವೆ 'ನಮ್ಮ ಟೈಗರ್ ಕ್ಯಾಬ್' ಈ ತಿಂಗಳ 29ಕ್ಕೆ ಬಿಡುಗಡೆಯಾಗುತ್ತಿದೆ.

To Follow DriveSpark On Facebook, Click The Like Button
ನಾಳೆ 'ನಮ್ಮ ಟೈಗರ್' ಕ್ಯಾಬ್ ಆ್ಯಪ್ ಸೇವೆ ಲೋಕಾರ್ಪಣೆ; ಎಚ್‌.ಡಿ.ಕುಮಾರಸ್ವಾಮಿ

ಸದ್ಯ, ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಹಾಗೂ ಉಬರ್ ಸಂಸ್ಥೆಗಳಿಗೆ ಸೆಡ್ಡು ಹೊಡೆದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಆರಂಭಿಸಿರುವ ಹುಲಿ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ‘ನಮ್ಮ ಟೈಗರ್ ಕ್ಯಾಬ್ ಆ್ಯಪ್' ಲೋಕಾರ್ಪಣೆ ಕಾರ್ಯಕ್ರಮ ನ. 29 ರಂದು ನಡೆಯಲಿದೆ.

ನಾಳೆ 'ನಮ್ಮ ಟೈಗರ್' ಕ್ಯಾಬ್ ಆ್ಯಪ್ ಸೇವೆ ಲೋಕಾರ್ಪಣೆ; ಎಚ್‌.ಡಿ.ಕುಮಾರಸ್ವಾಮಿ

29ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಪುರಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೂತನ ಆ್ಯಪ್ ಲೋಕಾರ್ಪಣೆಗೊಳಿಸಲಿದ್ದಾರೆ.

ನಾಳೆ 'ನಮ್ಮ ಟೈಗರ್' ಕ್ಯಾಬ್ ಆ್ಯಪ್ ಸೇವೆ ಲೋಕಾರ್ಪಣೆ; ಎಚ್‌.ಡಿ.ಕುಮಾರಸ್ವಾಮಿ

ನಗರದ ಹೆಣ್ಣೂರು ರಸ್ತೆಯಲ್ಲಿ ಈಗಾಗಲೇ ಕಚೇರಿ ನಿರ್ಮಾಣಕಾರ್ಯ ಮುಗಿದಿದ್ದು, ‘ಹುಲಿ ಟೆಕ್ನಾಲಜೀಸ್‌' ಎಂಬ ಹೊಸ ಕಂಪನಿಯು, ಕ್ಯಾಬ್ ಸೇವೆ ಒದಗಿಸುತ್ತಿರುವ ಓಲಾ ಹಾಗೂ ಉಬರ್‌ ಕಂಪೆನಿಗಳಿಗೆ ಪೈಪೋಟಿ ನೀಡಲು ಮುಂದಾಗಿದೆ.

ನಾಳೆ 'ನಮ್ಮ ಟೈಗರ್' ಕ್ಯಾಬ್ ಆ್ಯಪ್ ಸೇವೆ ಲೋಕಾರ್ಪಣೆ; ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸಂಸ್ಥೆಯ ಲಾಂಛನ ಅನಾವರಣಗೊಳಿಸಲಿದ್ದು, ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರೀಯ ವಕ್ತಾರ ಜಫ್ರುಲ್ಲಾಖಾನ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಡಿಸಿಪಿ ಅಜಯ್ ಹಿಲೊರಿ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನಾಳೆ 'ನಮ್ಮ ಟೈಗರ್' ಕ್ಯಾಬ್ ಆ್ಯಪ್ ಸೇವೆ ಲೋಕಾರ್ಪಣೆ; ಎಚ್‌.ಡಿ.ಕುಮಾರಸ್ವಾಮಿ

ಚಾಲಕರ ನಿತ್ಯದ ದುಡಿಮೆಯಲ್ಲಿ ಶೇ 12ರಷ್ಟು ಕಮಿಷನ್ ಪಡೆಯಲು 'ನಮ್ಮ ಟೈಗರ್' ಆಡಳಿತ ಮಂಡಳಿ ತೀರ್ಮಾನಿಸಿದೆ.'ಚಾಲಕರಿಗೆ ತಲಾ ₹5 ಲಕ್ಷ ಮೊತ್ತದ ವಿಮೆ, ಅಪಘಾತ ವಿಮೆ ಹಾಗೂ ₹2 ಲಕ್ಷ ವೈದ್ಯಕೀಯ ವಿಮೆ ಮಾಡಿಸಲಿದೆ.

ನಾಳೆ 'ನಮ್ಮ ಟೈಗರ್' ಕ್ಯಾಬ್ ಆ್ಯಪ್ ಸೇವೆ ಲೋಕಾರ್ಪಣೆ; ಎಚ್‌.ಡಿ.ಕುಮಾರಸ್ವಾಮಿ

ನಗರದಲ್ಲಿ ಓಲಾ ಹಾಗೂ ಉಬರ್ ಟ್ಯಾಕ್ಸಿ ಸೇವೆ ಆರಂಭಗೊಳ್ಳುತ್ತಿದ್ದಂತೆ ಬಹುತೇಕ ಟ್ಯಾಕ್ಸಿ ಮಾಲೀಕರು ತಮ್ಮ ತಮ್ಮ ಕ್ಯಾಬ್‌ಗಳನ್ನು ಈ ಆ್ಯಪ್ ಆಧಾರಿತ ಸಂಸ್ಥೆಯೊಂದಿಗೆ ಅಟ್ಯಾಚ್ ಮಾಡಿಕೊಂಡಿದ್ದರು. ಆರಂಭದಲ್ಲಿ ಸಂತಸದಿಂದಲೇ ಸೇವೆ ನೀಡುತ್ತಿದ್ದ ಕ್ಯಾಬ್ ಡ್ರೈವರ್‌ಗಳು ಇದೀಗ ಸಂಸ್ಥೆಯ ಆರ್ಥಿಕ ಕಿರುಕುಳದಿಂದ ಬೇಸತ್ತು ಹೊಸ ಸಂಸ‍್ಥೆಯನ್ನೇ ಹುಟ್ಟುಹಾಕಲು ಮುಂದಾಗಿರುವುದು ಮೆಚ್ಚುವಂತ ಸಂಗತಿ.

ನಾಳೆ 'ನಮ್ಮ ಟೈಗರ್' ಕ್ಯಾಬ್ ಆ್ಯಪ್ ಸೇವೆ ಲೋಕಾರ್ಪಣೆ; ಎಚ್‌.ಡಿ.ಕುಮಾರಸ್ವಾಮಿ

ಮೊದಲ ಹಂತವಾಗಿ ಬೆಂಗಳೂರಿನಲ್ಲಿ ಮಾತ್ರ ಈ ಕಂಪನಿ ಕಾರ್ಯ ನಿರ್ವಹಿಸಲಿದ್ದು, ಇಷ್ಟು ಮಾತ್ರವಲ್ಲದೇ ದೇಶದ ಪ್ರಮುಖ ಐಟಿ ನಗರಗಳಲ್ಲಿನ ಸೇವೆ ಬಳಿಕ ತಮ್ಮ ವ್ಯವಹಾರವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಲು ಚಿಂತನೆ ನಡೆಸಿದೆ.

Read more on cab ಕ್ಯಾಬ್
English summary
namma Tiger cab app to be launched tomorrow
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark