ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

Written By:

ಭಾರತದ ಬೃಹತ್ ಕಾರು ಉತ್ವಾದನಾ ಸಂಸ್ಥೆ ಟಾಟಾ ಮೋಟಾರ್ಸ್, ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುವ ನೀರಿಕ್ಷೆಯಿದೆ. ಇದಕ್ಕೆ ಕಾರಣ ನೂತನ ತಂತ್ರಜ್ಞಾನ ಅಳವಡಿಸಿಕೊಂಡಿರುವ ಕಂಪ್ಯಾಕ್ಟ್ ಸೆಡಾನ್ ಹಾಗೂ ಹ್ಯಾಚ್‌ಬ್ಯಾಕ್ ಮತ್ತು ಎಸ್‍‌ಯುವಿ ಕಾರುಗಳುನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ.

ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

ಟಾಟಾದ ಬಹುನೀರಿಕ್ಷಿತ ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮೀಷನ್ ಹೊಂದಿರುವ ಟಿಯಾಗೋ ಹ್ಯಾಚ್ ಬ್ಯಾಕ್, ಎಸ್‌ಯುವಿ ಅಡಿಯಲ್ಲಿ ಹೊಸ ಮಾದರಿಯ ನೆಕ್ಸಾನ್ ಮತ್ತು ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಟೈಗೋರ್ ಸದ್ದು ಮಾಡಲಿವೆ.

ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

ಯಶಸ್ಪಿ ತಂತ್ರಜ್ಞಾನದೊಂದಿಗೆ ಮುಂಬುರುವ ಕಾರುಗಳನ್ನು ಅಭಿವೃದ್ಧಿಪಡಿಸಿರುವ ಟಾಟಾ ಮೋಟಾರ್ಸ್, ಸ್ಪರ್ಧಾತ್ಮಕ ಬೆಲೆಗಳನ್ನು ನಿಗದಿ ಮಾಡಿ ತನ್ನ ಉತ್ಪನ್ನಗಳನ್ನು ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ.

ಮುಂಬರುವ ಟಾಟಾ ಕಾರುಗಳು ಮಾಹಿತಿ ಹೀಗಿದೆ

ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

ಟಾಟಾ ಟಿಯಾಗೋ (ಎಎಂಟಿ)

ಟಾಟಾದ ಬಹುನೀರಿಕ್ಷಿತ ಕಾರುಗಳಲ್ಲಿ ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮೀಷನ್ ಹೊಂದಿರುವ ಟಿಯಾಗೋ ಪ್ರಮುಖವಾಗಿದೆ. ಅದ್ದೂರಿ ಒಳಾಂಗಣ ಮತ್ತು ಅತ್ಯುತ್ತಮ ಗುಣಲಕ್ಷಣಗಳನ್ನು ಹೊಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ ಎರಡರಲ್ಲೂ ಲಭ್ಯವಿರಲಿದೆ. ನೂತನ ತಂತ್ರಜ್ಞಾನ ಹೊಂದಿರುವ ಟಾಟಾ ಟಿಯಾಗೋಹ್ಯಾಚ್‌ಬ್ಯಾಕ್ ಮಾದರಿಯಲ್ಲಿರಲಿದೆ.

ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

ಟಾಟಾ ಮೋಟರ್ಸ್ ಟಿಯಾಗೋಆವೃತ್ತಿಯ ಅಭಿವೃದ್ಧಿಯಲ್ಲಿ ಇಟಲಿಯ ಕಾರು ತಯಾರಕ ಕಂಪನಿ ಮ್ಯಾಗ್ನೆಟಿ ಮರೆಲ್ಲಿ ಕೈಜೋಡಿಸಿದೆ . 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಟಾಟಾ ಟಿಯಾಗೋ, 1.05-ಲೀಟರ್ ಡಿಸೇಲ್ ಜೊತೆ ಮೂರು ಸಿಲಿಂಡರ್ ಡೀಸೆಲ್ ಎಂಜಿನ್ ಅಭಿವೃದ್ಧಿಗೊಳಿಸಲಾಗಿದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಇದ್ದು 84ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಬಿಡುಗಡೆಯ ನಿರೀಕ್ಷಿತ ದಿನಾಂಕ: ಮಾರ್ಚ್, 2017

ನಿರೀಕ್ಷಿತ ಬೆಲೆ: ರೂ. 4 ಲಕ್ಷ ಗಳಿಂದ ರೂ. 5 ಲಕ್ಷ

ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

ಟಾಟಾ ಟೈಗೋರ್

ಟಾಟಾ ಮೋಟಾರ್ಸ್ ಕಂಪನಿಯ ಮುಂಬರುವ ಕಾರುಗಳಲ್ಲಿ ಪ್ರಮುಖವಾದ ಮತ್ತೊಂದು ಕಾರು ಟೈಗೋರ್. ಕಾಂಪ್ಯಾಕ್ಟ್ ಸೆಡಾನ್ ರೇಖಾಚಿತ್ರಗಳಲ್ಲಿ ತಿಳಿದಿರುವಂತೆ ಅದ್ಭುತ ರಚನೆ ಹೊಂದಿರುವ ಟೈಗೋರ್, ಅಂತಿಮ ಸ್ವರೂಪ ಪಡೆದುಕೊಳ್ಳುತ್ತಿದೆ.

ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

ನೂತನ ಕಾರಿನಲ್ಲಿ ಬಹುಪಾಲು ಹ್ಯಾಚ್‌ಬ್ಯಾಕ್ ಲಕ್ಷಣಗಳನ್ನು ಹೊಂದಿದ್ದು, ಟೈಗೋರ್ ಶೈಲಿಯನ್ನು ಪ್ರಸಕ್ತ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. 1.2 ಲೀಟರ್ ರಿವೋಟ್ರಾನ್ ಪೆಟ್ರೋಲ್ ಎಂಜಿನ್‌ ಜೊತೆ 1.05 ಲೀಟರ್ ರಿವೋಟಾರ್ಕ್ ಡೀಸೆಲ್ ಎಂಜಿನ್ ಹೊಂದಿದೆ. ಜೊತೆಗೆ 5 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿದೆ.

ಬಿಡುಗಡೆ ನಿರೀಕ್ಷಿತ ದಿನಾಂಕ: 2017

ನಿರೀಕ್ಷಿತ ಬೆಲೆ: ರೂ. 4.5 ಲಕ್ಷ ಗಳಿಂದ ರೂ. 5.5 ಲಕ್ಷ

ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

ಟಾಟಾ ನೆಕ್ಸಾನ್

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಅತ್ಯಂತ ನೀರಿಕ್ಷೆ ಹುಟ್ಟಿಸಿರುವ ಕಾಂಪ್ಯಾಕ್ಟ್ ಎಸ್‌ಯುವಿ ಟಾಟಾ ನೆಕ್ಸಾನ್, ಈ ಹಿಂದೆ 2014ರಲ್ಲಿ ದೆಹಲಿಯಲ್ಲಿ ನಡೆದಿದ್ದ ಆಟೋ ಎಕ್ಸ್‌ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.

ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

ಪ್ರಮುಖ ಅಕರ್ಷಣೆ ಹೊಂದಿರುವ ನೆಕ್ಸಾನ್ ಪ್ರತಿಷ್ಠಿತ ಆಡಿ ಮತ್ತು ಮರ್ಸಿಡಿಸ್ ಬೆಂಝ್ ಐಷಾರಾಮಿ ವಾಹನಗಳ ರೂಪ ಹೊಂದಿದ್ದು, ಜೆಬಿಎಲ್ ಹರ್ಮಾನ್ ಮ್ಯೂಜಿಕ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜೊತೆಗೆ ನೂತನ ಮಾದರಿ ಹೊಂದಿರುವ ಮಾರುತಿ ಬ್ರೇಜಾ ಮತ್ತು ಫೋರ್ಡ್ ಎಕೋಸ್ಪೋರ್ಟ್ಸ್‌ಗೆ ತೀವ್ರ ಪ್ರತಿಸ್ಪರ್ಧಿಯಾಗಲಿದೆ.

ಬಿಡುಗೆಡೆಗೆ ಸಿದ್ಧಗೊಂಡಿವೆ ಟಾಟಾ ವಿನೂತನ ಕಾರುಗಳು

ನೆಕ್ಸಾನ್ ಮಾದರಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿದೆ. 1.5 ಲೀಟರ್ ಡಿಸೇಲ್ ಘಟಕದಲ್ಲಿ 108 ಬಿಎಚ್‌ಪಿ ಮತ್ತು 260ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 1.2-ಲೀಟರ್ ಪೆಟ್ರೋಲ್ ರಿವೋಟ್ರಾನ್ ಎಂಜಿನ್ ಹೊಂದಿದ್ದು, 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.

ಬಿಡುಗಡೆಯ ನಿರೀಕ್ಷಿತ ದಿನಾಂಕ: ಅಕ್ಟೋಬರ್-ನವೆಂಬರ್ 2017

ನಿರೀಕ್ಷಿತ ಬೆಲೆ: ರೂ. 6.5 ಲಕ್ಷಗಳಿಂದ ರೂ. 9.5 ಲಕ್ಷ

ಟಾಟಾ ಮೋಟಾರ್ ಕಾರ್ ಖರೀದಿ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಟಾಟಾ ಎಸ್‌ಯುವಿ, ಹೆಕ್ಸಾ ಫೋಟೋಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Tata Motors will launch the AMT version of the Tiago hatchback, also, launch a new model Tigor under the subcompact sedan segment and the much awaited Tata Nexon subcompact SUV.
Story first published: Monday, February 13, 2017, 18:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark