ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಲು ಬರಲಿವೆ ಫೋಕ್ಸ್‌ವ್ಯಾಗನ್ ನಿರ್ಮಾಣದ ಮತ್ತಷ್ಟು ಹೊಸ ಕಾರುಗಳು

ಫೋಕ್ಸ್‌ವ್ಯಾಗನ್ ಬೃಹತ್ ಯೋಜನೆ ರೂಪಿಸಿದ್ದು, ಮುಂಬರುವ ದಿನಗಳಲ್ಲಿ ಹೊಸ ಹೊಸ ನಮೂನೆಯ ಮಧ್ಯಮ ಗಾತ್ರದ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

By Praveen

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪ್ರಯಾಣಿಕ ಕಾರುಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿರುವ ಮಾರುತಿ ಸುಜುಕಿ ಮತ್ತು ಹ್ಯುಂಡೈ ಇಂಡಿಯಾ ಸಂಸ್ಥೆಯನ್ನು ಹಿಂದಿಕ್ಕಲು ಫೋಕ್ಸ್‌ವ್ಯಾಗನ್ ಬೃಹತ್ ಯೋಜನೆ ರೂಪಿಸಿದ್ದು, ಮುಂಬರುವ ದಿನಗಳಲ್ಲಿ ಹೊಸ ಹೊಸ ನಮೂನೆಯ ಮಧ್ಯಮ ಗಾತ್ರದ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ.

ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಲು ಬರಲಿವೆ ಫೋಕ್ಸ್‌ವ್ಯಾಗನ್ ನಿರ್ಮಾಣ ಮತ್ತಷ್ಟು ಹೊಸ ಕಾರುಗಳು

ದೇಶಿಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಕಾರು ಮಾದರಿಗಳಿಗೆ ಅತಿ ಹೆಚ್ಚು ಬೇಡಿಕೆಯಿದ್ದು, ಈ ವಿಭಾಗದಲ್ಲಿನ ಕಾರು ಮಾರಾಟದಲ್ಲಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಇಂಡಿಯಾ ಸಂಸ್ಥೆಗಳು ಮುನ್ನಡೆ ಸಾಧಿಸುತ್ತಿವೆ. ಇದರಿಂದ ಭಾರತೀಯ ಗ್ರಾಹಕರನ್ನ ತನ್ನತ್ತ ಸೆಳೆಯುವಂತೆ ಮಾಡಲು ಮುಂದಾಗಿರುವ ಫೋರ್ಕ್ಸ್‌ವ್ಯಾಗನ್ ಮಹತ್ವದ ಯೋಜನೆಗಳನ್ನು ರೂಪಿಸಿದೆ.

ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಲು ಬರಲಿವೆ ಫೋಕ್ಸ್‌ವ್ಯಾಗನ್ ನಿರ್ಮಾಣ ಮತ್ತಷ್ಟು ಹೊಸ ಕಾರುಗಳು

ಪ್ರತಿಷ್ಠಿತ ಸುದ್ದಿಸಂಸ್ಥೆಯಾದ ಇಟಿ ಆಟೋ ಜಾಲತಾಣ ಮಾಡಿರುವ ವರದಿ ಪ್ರಕಾರ ಫೋರ್ಕ್ಸ್‌ವ್ಯಾಗನ್ ಸಂಸ್ಥೆಯು ಮುಂದಿನ 5 ವರ್ಷಗಳ ಯೋಜನೆಗಾಗಿ ಬರೋಬ್ಬರಿ 7,600 ಕೋಟಿ ಬೃಹತ್ ಬಂಡವಾಳ ಹೂಡಿಕೆ ಮಾಡುತ್ತಿದ್ದು, ಸಣ್ಣ ಕಾರುಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡುತ್ತಿದೆ.

Recommended Video

Best Cars Of 2017 In India - DriveSpark
ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಲು ಬರಲಿವೆ ಫೋಕ್ಸ್‌ವ್ಯಾಗನ್ ನಿರ್ಮಾಣ ಮತ್ತಷ್ಟು ಹೊಸ ಕಾರುಗಳು

ಹೀಗಾಗಿ ಕಾರು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಪುಣೆ ಬಳಿ ಹೊಸದೊಂದು ಕಾರು ಉತ್ಪಾದನಾ ಘಟಕವನ್ನು ತೆರೆಯುತ್ತಿದ್ದು, ಎಲೆಕ್ಟ್ರಿಕ್ ಕಾರುಗಳ ಜೊತೆ ಜೊತೆಗೆ ಅಗ್ಗದ ಕಾರುಗಳ ಉತ್ಪಾದನೆಯ ಉದ್ದೇಶ ಹೊಂದಿದೆ.

ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಲು ಬರಲಿವೆ ಫೋಕ್ಸ್‌ವ್ಯಾಗನ್ ನಿರ್ಮಾಣ ಮತ್ತಷ್ಟು ಹೊಸ ಕಾರುಗಳು

ಜೊತೆಗೆ ಈ ಹಿಂದೆ ಟಾಟಾ ಮೋಟಾರ್ಸ್ ಜೊತೆಗಿನ ಒಪ್ಪಂದವನ್ನು ಕೈಬಿಟ್ಟಿರುವ ಫೋಕ್ಸ್‌ವ್ಯಾಗನ್ ಇದೀಗ ಸ್ಕೋಡಾ ಇಂಡಿಯಾ ಜೊತೆಗೆ ಕೈಜೋಡಿಸಿದ್ದು, ಸ್ಕೋಡಾ ಜೊತೆಗೂಡಿ ಅಗ್ಗದ ಬೆಲೆಗಳಲ್ಲೇ ಉತ್ತಮ ಕಾರುಗಳ ಉತ್ಪಾದನೆ ಸಹಾಯ ಪಡೆಯಲಿದೆ.

ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಲು ಬರಲಿವೆ ಫೋಕ್ಸ್‌ವ್ಯಾಗನ್ ನಿರ್ಮಾಣ ಮತ್ತಷ್ಟು ಹೊಸ ಕಾರುಗಳು

ಈ ಮೂಲಕ ಭಾರತೀಯ ಗ್ರಾಹಕರು ಇಷ್ಟಪಡುವ ಕಡಿಮೆ ಬೆಲೆಯ ಉತ್ತಮ ಕಾರುಗಳನ್ನು ಅಭಿವೃದ್ದಿಪಡಿಸಿ ಮಾರುತಿ ಸುಜುಕಿ ಮತ್ತು ಹ್ಯುಂಡೈ ಇಂಡಿಯಾ ಸಂಸ್ಥೆಗಳಿಗೆ ತೀವ್ರ ಪೈಪೋಟಿಗಿಳಿಯುವ ಉದ್ದೇಶವಿದ್ದು, ಹೊಸ ಕಾರುಗಳನ್ನು MQB-A0 ಪ್ಲಾಟ್‌ಫಾರ್ಮ್ ಆಧಾರದ ಮೇಲೆ ಉತ್ಪಾದನೆ ಮಾಡಲಿದೆ.

ತಪ್ಪದೇ ಓದಿ-ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ಮಾರುತಿ ಸುಜುಕಿ, ಹ್ಯುಂಡೈ ಹಿಂದಿಕ್ಕಲು ಬರಲಿವೆ ಫೋಕ್ಸ್‌ವ್ಯಾಗನ್ ನಿರ್ಮಾಣ ಮತ್ತಷ್ಟು ಹೊಸ ಕಾರುಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ 15 ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಪ್ರಿಯಮಂ ಕಾರು ಉತ್ಪನ್ನಗಳ ಮೂಲಕ ತನ್ನದೇ ಬೇಡಿಕೆ ಕಾಯ್ದುಕೊಂಡಿರುವ ಫೋಕ್ಸ್‌ವ್ಯಾಗನ್ ಎಂಟ್ರಿ ಲೆವಲ್ ಕಾರುಗಳ ಮಾರಾಟದಲ್ಲಿ ಮುಗ್ಗರಿಸುತ್ತಿದೆ. ಹೀಗಾಗಿ ಆಟೋ ಮಾರುಕಟ್ಟೆಯ ಸನ್ನಿವೇಶಗಳನ್ನು ಅಧ್ಯಯನ ಮಾಡಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸದ್ಯದಲ್ಲೇ ಮಧ್ಯಮ ವರ್ಗಗಳನ್ನು ಸೆಳೆಯಬಲ್ಲ ಹೊಸ ಹೊಸ ನಮೂನೆಯ ಕಾರುಗಳನ್ನು ಬಿಡುಗಡೆ ಮಾಡುವ ತವಕದಲ್ಲಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
English summary
Volkswagen To Launch Affordable Cars In India — To Rival Maruti And Hyundai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X