ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿರುವ ಟೊಯೊಟೊ ನಿರ್ಮಾಣದ ವಿಯೋಸ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಸದ್ಯ ಏಷಿಯನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದೆ.

By Praveen

ಸೆಡಾನ್ ಆವೃತ್ತಿಗಳಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ‌ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿರುವ ಟೊಯೊಟೊ ನಿರ್ಮಾಣದ ವಿಯೋಸ್ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಸದ್ಯ ಏಷಿಯನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದೆ.

ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ಪ್ರಥಮ ಬಾರಿಗೆ ಅಭಿವೃದ್ದಿಗೊಂಡ ಕಾರು ಮಾದರಿಗಳ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಏಷಿಯನ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಟೊಯೊಟಾ ವಿಯೋಸ್ ಆವೃತ್ತಿಯು 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದ್ದು, ಹೊಸ ಕಾರಿನ ಸುರಕ್ಷಾ ವೈಶಿಷ್ಟ್ಯತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ಅಪಘಾತಗಳ ಸಂದರ್ಭಗಳಲ್ಲಿ ಹೊಸ ಕಾರುಗಳಲ್ಲಿ ಒದಗಿಸಲಾಗಿರುವ ಏರ್‌ಬ್ಯಾಗ್ ಸೌಲಭ್ಯವು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಎಂಬುವುದರ ಮೇಲೆ ಕ್ರ್ಯಾಶ್ ಟೆಸ್ಟ್ ರೇಟಿಂಗ್ ನೀಡಲಾಗುತ್ತದೆ. ಇದರಲ್ಲಿ ಟೊಯೊಟಾ ವಿಯೋಸ್ ಆವೃತ್ತಿಯು ಪೂರ್ಣ ಪ್ರಮಾಣದ ಅಂಕಗಳನ್ನು ತನ್ನದಾಗಿಸಿಕೊಂಡಿದೆ.

Recommended Video

Honda CR-V Crashes Into A Wall
ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ಇದಲ್ಲದೇ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ಹೀಗಾಗಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಫುಲ್ ಮಾರ್ಕ್ಸ್ ತನ್ನದಾಗಿಸಿಕೊಂಡಿರುವ ಟೊಯೊಟಾ ವಿಯೋಸ್, ಅಪಘಾತ ಸಂದರ್ಭಗಳಲ್ಲಿ ಕಾರಿನಲ್ಲಿರುವ ಸವಾರರಿಗೆ ಹೆಚ್ಚಿನ ಸುರಕ್ಷತೆ ನೀಡುವಲ್ಲಿ ಶಕ್ತವಾಗಿದೆ ಎಂಬುವುದನ್ನು ಸಾಬೀತುಪಡಿಸಿದೆ.

ತಪ್ಪದೇ ಓದಿ-ನಿಷೇಧಿತ ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಹಾಕಿದ್ರೆ ದಂಡ ಎಷ್ಟು ಗೊತ್ತಾ?

ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ಇನ್ನು ಟೊಯೊಟಾ ಪರಿಚಯಿಸಲು ಮುಂದಾಗಿರುವ ವಿಯೋಸ್ ಕಾರುಗಳು ಈಗಾಗಲೇ ಯುರೋಪಿನ್ ಮಾರುಕಟ್ಟೆ ಸೇರಿದಂತೆ ಚೀನಾದಲ್ಲೂ ಮಾರಾಟಕ್ಕೆ ಲಭ್ಯವಿದ್ದು, ದೇಶಿಯ ಮಾರುಕಟ್ಟೆಯಲ್ಲಿನ ಸೆಡಾನ್ ಕಾರುಗಳ ಬೇಡಿಕೆ ಹೆಚ್ಚಿರುವ ಹಿನ್ನೆಲೆ ಹೊಸದೊಂದು ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಟೊಯೊಟೊ ಬೃಹತ್ ಯೋಜನೆ ರೂಪಿಸಲಾಗಿದೆ.

ಬಿಡುಗಡೆಗೂ ಮುನ್ನವೇ ಸೆಡಾನ್ ಪ್ರಿಯರಿಗೆ ಸಿಹಿಸುದ್ದಿ ನೀಡಿದ ಟೊಯೊಟಾ ವಿಯೋಸ್

ವಿಯೋಸ್ ಕಾರುನ್ನು ಸಂಪೂರ್ಣವಾಗಿ ಭಾರತೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗುತ್ತಿದ್ದು, ಫೆಬ್ರುವರಿಯಲ್ಲಿ ನಡೆಯಲಿರುವ 2018ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿ ತದನಂತರವಷ್ಟೇ ಹೊಸ ಕಾರು ಬಿಡುಗಡೆಗೊಳಿಸುವ ಬಗ್ಗೆ ಟೊಯೊಟಾ ಸುಳಿವು ನೀಡಿದೆ.

ವಿಯೋಸ್ ಸುರಕ್ಷತೆ ಕುರಿತು ಏಷಿಯನ್ಎಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟಿಂಗ್‌ ವಿಡಿಯೋ ಇಲ್ಲಿದೆ ವೀಕ್ಷಿಸಿ.

ತಪ್ಪದೇ ಓದಿ-ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್‌ ಬೆಲೆಗಿಂತಲೂ ಅಗ್ಗ ಕಣ್ರಿ..!!

Most Read Articles

Kannada
English summary
Read in Kannada about India-Bound Toyota Vios Gets Full Marks In ASEAN NCAP Crash Test.
Story first published: Friday, December 22, 2017, 16:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X