ಮುಂದಿನ ವರ್ಷ ಬಿಡುಗಡೆಗೊಳ್ಳಲಿ ವೋಲ್ವೊ ಎಸ್60 ಮತ್ತು ವಿ60 ಪೋಲ್‌ಸ್ಟಾರ್

Written By:

ಸ್ವೀಡಿಷ್ ಕಾರು ತಯಾರಕ ಸಂಸ್ಥೆಯಾದ ವೋಲ್ವೋ ಮುಂಬರುವ ವರ್ಷದಲ್ಲಿ ಬಿಡುಗಡೆಗೊಳ್ಳುವ ಕಾರುಗಳ ಬಗ್ಗೆ ವಿವರಗಳನ್ನು ಬಿಡುಗಡೆಗೊಳಿಸಿದ್ದು, ಈ ಹೊಸ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ ವೋಲ್ವೋ ಎಸ್60 ಮತ್ತು ವಿ60 ಪೋಲ್‌ಸ್ಟಾರ್

ವೋಲ್ವೋ ಕಂಪನಿಯು ಹೊಸ ಏರೊ ಬಿಟ್ಸ್ ವೈಶಿಷ್ಟ್ಯಗಳನ್ನು ಪಡೆದುಕೊಡಿರುವ ಎಸ್60 ಸೆಡಾನ್ ಮತ್ತು ವಿ60 ವ್ಯಾಗನ್ ಕಾರುಗಳನ್ನು ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ. ಈ ಏರೊ ಸೌಲಭ್ಯವು ಈ ಎರಡೂ ಕಾರುಗಳ ವೇಗವನ್ನು ಪಡೆಯಲು ಸಹಾಯ ಮಾಡುತ್ತದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ ವೋಲ್ವೋ ಎಸ್60 ಮತ್ತು ವಿ60 ಪೋಲ್‌ಸ್ಟಾರ್

ವೋಲ್ವೋ ಸಂಸ್ಥೆಯ ಈ ಎಸ್60 ಮತ್ತು ವಿ60 ಪೋಲೆಸ್ಟಾರ್ ಕಾರುಗಳು, 2.0 ಲೀಟರ್ ಡುಯಲ್ ಚಾರ್ಜ್ಡ್ ಪೆಟ್ರೋಲ್ ಇಂಜಿನ್ ಹೊಂದಿದೆ, ಇದು ಸೂಪರ್‌ಚಾರ್ಜಿಂಗ್ ಮತ್ತು ಟರ್ಬೊಚಾರ್ಜಿಂಗ್ ಒಳಗೊಂಡಿರಲಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ ವೋಲ್ವೋ ಎಸ್60 ಮತ್ತು ವಿ60 ಪೋಲ್‌ಸ್ಟಾರ್

2-ಲೀಟರ್ ಅವಳಿ-ಚಾರ್ಜ್ಡ್ ಇಂಜಿನ್ 470 ಎನ್‌ಎಂ ತಿರುಗುಬಲದಲ್ಲಿ 362 ಬಿಎಚ್‌ಪಿ ಗರಿಷ್ಠ ಟಾರ್ಕ್ ಉತ್ಪಾದನೆ ಮಾಡಲಿದ್ದು, 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಣೆಯೊಂದಿಗೆ ಹೊರಬರಲಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ ವೋಲ್ವೋ ಎಸ್60 ಮತ್ತು ವಿ60 ಪೋಲ್‌ಸ್ಟಾರ್

'ಬಾರ್ಗ್‌ವಾರ್ನೆರ್ ನಾಲ್ಕು ಚಕ್ರ ಚಾಲನಾ ವ್ಯವಸ್ಥೆ'ಯನ್ನು ಪಡೆದುಕೊಂಡಿರುವ ಈ ಕಾರು, ಎಲ್ಲಾ ಚಕ್ರಗಳಿಗೆ ಶಕ್ತಿ ಕಳುಹಿಸುತ್ತದೆ ಹಾಗು ಇದು ಹಿಂದಿನ ಚಕ್ರಗಳಿಗೆ ಹೆಚ್ಚು ಟಾರ್ಕ್ ಕಳುಹಿಸಲು ಪೋಲೆಸ್ಟಾರ್ ಮೂಲಕ ಮಾಪನಾಂಕ ಮಾಡಲಾಗುತ್ತದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ ವೋಲ್ವೋ ಎಸ್60 ಮತ್ತು ವಿ60 ಪೋಲ್‌ಸ್ಟಾರ್

ಈ ಬಲಿಷ್ಠ ಕಾರುಗಳು 4.7 ಸೆಕೆಂಡುಗಳಲ್ಲಿ 100 ಕಿಲೋಮೀಟರ್‌ನಷ್ಟು ವೇಗ ಪಡೆದುಕೊಳ್ಳಲಿದ್ದು, ವೋಲ್ವೋ ಎಸ್60 ಕಾರಿಗೆ ಹೋಲಿಕೆ ಮಾಡಿದರೆ ವಿ60 ಪೋಲೆಸ್ಟಾರ್ ಕೇವಲ 0.1 ಸೆಕೆಂಡ್‌ ಕಡಿಮೆ ವೇಗದಲ್ಲಿ 100 ಕಿಲೋಮೀಟರ್‌ ವೇಗ ಪಡೆದುಕೊಳ್ಳಲಿದೆ. ಎಸ್60 ಮತ್ತು ವಿ60 ಪೋಲೆಸ್ಟಾರ್ ಕಾರುಗಳು 250 ಕಿಲೋಮೀಟರು ಗರಿಷ್ಠ ವೇಗ ಹೊಂದಿವೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ ವೋಲ್ವೋ ಎಸ್60 ಮತ್ತು ವಿ60 ಪೋಲ್‌ಸ್ಟಾರ್

ಹೊಸ ಫ್ರಂಟ್ ಸ್ಪೈಲರ್, ಸೈಡ್ ಸಿಲ್ಸ್ ಮತ್ತು ಹಿಂಭಾಗದ ಸ್ಪಾಯ್ಲರ್ ಎಕ್ಸ್‌ಟೆನ್ಷನ್(S60 ಮಾತ್ರ)ಸೇರಿದಂತೆ ಕಾರ್ಬನ್-ಫೈಬರ್ ಏರೊ ಘಟಕಗಳ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ ವೋಲ್ವೋ ಎಸ್60 ಮತ್ತು ವಿ60 ಪೋಲ್‌ಸ್ಟಾರ್

ಹೊಸ 2018 ವರ್ಷದ ಈ ವೋಲ್ವೊ ಎಸ್60 ಮತ್ತು ವಿ60 ಪೋಲೆಸ್ಟಾರ್ ಕಾರುಗಳು ಕೇವಲ 1,500 ಯೂನಿಟ್‌ಗಳಿಗೆ ಮಾತ್ರ ಸೀಮಿತವಾಗಿರಲಿವೆ.

Read more on ವೋಲ್ವೋ volvo
English summary
Swedish carmaker Volvo has taken the wraps off the facelifted S60 & V60 Polestar for the 2018 Model year.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark