ವೊಲ್ವೊ ಎಕ್ಸ್‌ಸಿ 40 ಉತ್ಪಾದನೆ ಪ್ರಾರಂಭ; ಭಾರತಕ್ಕೆ ಯಾವಾಗ ?

By Girish

ಸ್ವೀಡನ್ ದೇಶದ ಕಾರು ತಯಾರಕ ವೊಲ್ವೊ ಕಂಪನಿಯು ಬೆಲ್ಜಿಯಂನಲ್ಲಿ ಎಕ್ಸ್‌ಸಿ 40 ಎಸ್‌ಯುವಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದೆ. ಈ ವಾಹನವನ್ನು ಭಾರತದಲ್ಲಿ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಭಾರತಕ್ಕೆ ಬಿಡುಗಡೆಗೊಳಿಸಿದೆ.

ವೊಲ್ವೊ ಎಕ್ಸ್‌ಸಿ 40 ಉತ್ಪಾದನೆ ಪ್ರಾರಂಭ; ಭಾರತಕ್ಕೆ ಯಾವಾಗ ?

ಎಕ್ಸ್‌ಸಿ 40 ಕಾರು ವೊಲ್ವೊ ಕಂಪನಿಯ ಚಿಕ್ಕ ಎಸ್‌ಯುವಿ ಕಾರು ಎನ್ನಬಹುದು. ಆರಂಭದಲ್ಲಿ ಈ ವಾಹನವನ್ನು ಬೆಲ್ಜಿಯಂನ ಘೆಂಟ್ ನಗರದಲ್ಲಿ ಉತ್ಪಾದಿಸಲಾಗುತ್ತದೆ. ಸದ್ಯ, ವೊಲ್ವೊ ಕಂಪನಿಯು ಈ ಘಟಕದಲ್ಲಿ ವಿ40 ಹ್ಯಾಚ್‌ಬ್ಯಾಕ್, ಎಸ್ 60 ಸೆಡಾನ್ ಮತ್ತು ಎಕ್ಸ್‌ಸಿ 60 ಎಸ್‌ಯುವಿ ಉತ್ಪಾದನೆಯನ್ನು ಮಾಡುತ್ತಿದೆ.

ವೊಲ್ವೊ ಎಕ್ಸ್‌ಸಿ 40 ಉತ್ಪಾದನೆ ಪ್ರಾರಂಭ; ಭಾರತಕ್ಕೆ ಯಾವಾಗ ?

ಚಿಕ್ಕ ಎಸ್‌ಯುವಿ ಎಂಬ ಬ್ಯಾಡ್ಜ್ ಪಡೆದಿರುವ ವೊಲ್ವೊ ಎಕ್ಸ್‌ಸಿ 40 ವಾಹನವು, ಹೊಸ ಕಾಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್ ಪ್ಲ್ಯಾಟ್‌ಫಾರಂ ಆಧರಿಸಿ ನಿರ್ಮಾಣವಾಗಿದೆ. ತನ್ನ ಪೋಷಕ ಕಂಪನಿಯಾದ ಗೇಲಿ ಆಟೊ ಸಹಯೋಗದೊಂದಿಗೆ ಇದನ್ನು ವೊಲ್ವೊ ಅಭಿವೃದ್ಧಿಪಡಿಸಿದ.

ವೊಲ್ವೊ ಎಕ್ಸ್‌ಸಿ 40 ಉತ್ಪಾದನೆ ಪ್ರಾರಂಭ; ಭಾರತಕ್ಕೆ ಯಾವಾಗ ?

ಮುಂಬರುವ ದಿನಗಳಲ್ಲಿ ತನ್ನ ಹೊಸ ವೊಲ್ವೊ 40 ಸರಣಿಯ ಎಲ್ಲಾ ವಾಹನಗಳಲ್ಲಿ ಈ ಪ್ಲ್ಯಾಟ್‌ಫಾರಂ ಇರಿಸಲಿದೆ. ಹೊಸ ಸ್ವೀಡಿಷ್ ವೊಲ್ವೊ ಕಂಪನಿಯ ಟ್ರೇಡ್‌ಮಾರ್ಕ್ ಜೊತೆ ಥಾರ್ಸ್ ಹ್ಯಾಮರ್ ಎಲ್ಇಡಿ ಹೆಡ್ ಲೈಟ್‌ಗಳು, ಲಂಬವಾಗಿ ಜೋಡಿಸಲಾದ ಟೈಲ್ ಲೈಟ್‌ಗಳು ಮತ್ತು ಬೀಫೀ ಬಂಪರ್‌ಗಳನ್ನು ಒಳಗೊಂಡಂತೆ ಹಲವಾರು ಸ್ಟೈಲಿಂಗ್ ಸೂಚನೆಗಳನ್ನು ಪಡೆದುಕೊಳ್ಳುತ್ತದೆ.

ವೊಲ್ವೊ ಎಕ್ಸ್‌ಸಿ 40 ಉತ್ಪಾದನೆ ಪ್ರಾರಂಭ; ಭಾರತಕ್ಕೆ ಯಾವಾಗ ?

ಹೊಸ ವೊಲ್ವೊ ಎಕ್ಸ್‌ಸಿ 40 ವಾಹನವು ಮೊದಲಿಗೆ ಟಿ5 ಪೆಟ್ರೋಲ್ ಅಥವಾ ಡಿ4 ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಇವೆರಡೂ ಕಾರುಗಳು 2.0-ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆ ಪಡೆಯಲಿವೆ.

ವೊಲ್ವೊ ಎಕ್ಸ್‌ಸಿ 40 ಉತ್ಪಾದನೆ ಪ್ರಾರಂಭ; ಭಾರತಕ್ಕೆ ಯಾವಾಗ ?

ಉಳಿದಂತೆ ವೊಲ್ವೊ ಕಂಪನಿಯ ಸ್ಟ್ಯಾಂಡರ್ಡ್ ಸೌಲಭ್ಯಗಳನ್ನು ಪಡೆಯಲಿದೆ ತಂಡವನ್ನು ಅನುಸರಿಸುತ್ತದೆ ಮತ್ತು ಭವಿಷ್ಯದಲ್ಲಿ ಹೈಬ್ರಿಡ್ ಆಯ್ಕೆಯ ಮತ್ತು ಸಂಪೂರ್ಣ ವಿದ್ಯುತ್ ಮಾದರಿಗಳನ್ನು ಹೊರ ತರುವ ಯೋಜನೆಯನ್ನು ಕಂಪನಿ ಹೊಂದಿದೆ.

ವೊಲ್ವೊ ಎಕ್ಸ್‌ಸಿ 40 ಉತ್ಪಾದನೆ ಪ್ರಾರಂಭ; ಭಾರತಕ್ಕೆ ಯಾವಾಗ ?

ಮುಂದಿನ ವರ್ಷ ಆರಂಭದಲ್ಲಿ ವಿತರಕರನ್ನು ತಲುಪುವ ನಿರೀಕ್ಷೆ ಇದ್ದು, ಹೊಸ ಎಸ್‌ಯುವಿ ಗ್ರಾಹಕರಲ್ಲಿ ಹೆಚ್ಚು ನಿರೀಕ್ಷೆ ಉಂಟು ಮಾಡಿದೆ ಎನ್ನಬಹುದು. ತನ್ನ ಸಹೋದರ ವಾಹನಗಳಾದ XC60 ಮತ್ತು XC90 ಭಾರತದಲ್ಲಿ ಈಗಾಗಲೇ ಮೋಡಿ ಮಾಡಿದ್ದು, ಈ ವಾಹನವನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದು ನೋಡೋಣ.

Most Read Articles

Kannada
Read more on volvo ವೊಲ್ವೊ
English summary
Swedish carmaker Volvo has started production of the India-bound XC40 SUV in Belgium and is expected to arrive in India in the second half of 2018.
Story first published: Thursday, November 23, 2017, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X