ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

Written By:

ಡ್ರೈವಿಂಗ್ ಲೈಸೆನ್ಸ್‌ಗಾಗಿ ನೀವು ಅರ್ಜಿ ಸಲ್ಲಿಸಿದ್ರೆ ಸದ್ಯಕ್ಕೆ ಸುಮ್ಮನಾಗುವುದೇ ಒಳಿತು. ಒಂದು ವೇಳೆ ಮಧ್ಯವರ್ತಿಗಳನ್ನು ನಂಬಿ ದುಡ್ಡು ಕೊಟ್ಟಿದ್ದರು ಲೈನೆಸ್ಸ್ ಪಡೆಯುವುದು ಅಷ್ಟು ಸುಲಭದ ಮಾತಲ್ಲಾ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಸಮಸ್ಯೆಗೆ ಕಾರಣವಾದ್ರೂ ಏನು?

ಅಧಿಕಾರಿಗಳು ಮತ್ತು ಗುತ್ತೆಗೆದಾರರ ನಡುವಿನ ಕಿತ್ತಾಟದಿಂದಾಗಿ ಆರ್‌ಟಿಓ ಕಚೇರಿಗೆ ಸ್ಮಾರ್ಟ್ ಕಾರ್ಡ್‌ಗಳೇ ಬಂದಿಲ್ಲ. ಹೀಗಾಗಿ ಅರ್ಜಿ ಹಾಕಿರುವ ಸಾವಿರಾರು ವಾಹನ ಚಾಲಕರು ಹೊಸ ಲೈಸೆನ್ಸ್‌ ಪಡೆಯಲು ಪರದಾಡುವಂತಾಗಿದೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಕೇವಲ ಡಿಎಲ್ ಅಷ್ಟೇ ಅಲ್ಲದೇ ಹೊಸ ವಾಹನಗಳ ರಿಜಿಸ್ಟ್ರೇಷನ್ ಸರ್ಟಿಫಿಕೆಟ್ ಪಡೆಯುವುದು ಕೂಡಾ ಕಷ್ಟವಾಗುತ್ತಿದೆ. ಇದಕ್ಕೆಲ್ಲಾ ಮೂಲ ಕಾರಣ ಸ್ಮಾರ್ಟ್ ಕಾರ್ಡ್‌ಗಳ ಪೂರೈಕೆ ಇಲ್ಲದಿರುವುದು.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಕಳೆದ 2 ತಿಂಗಳಿನಿಂದಲೇ ಈ ಸಮಸ್ಯೆ ಶುರುವಾಗಿದ್ದು, ಅಧಿಕಾರಿಗಳು ಮತ್ತು ಸ್ಮಾರ್ಟ್ ಕಾರ್ಡ್ ಪೂರೈಕೆ ವಿಚಾರವಾಗಿ ಕಿತ್ತಾಟ ನಡೆಯುತ್ತಲೇ ಇದೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಸದ್ಯ ಸ್ಟಾಕ್ ಇದ್ದ ಎಲ್ಲ ಸ್ಮಾರ್ಟ್ ಕಾರ್ಡ್‌ಗಳು ಖಾಲಿಯಾಗಿದ್ದು, ಹೊಸದಾಗಿ ಅರ್ಜಿ ಹಾಕಿದ ವಾಹನ ಸವಾರರು ಇನ್ನು ಕೆಲ ದಿನಗಳವರೆಗೆ ಕಾಯಲೇಬೇಕಾದ ಅನಿರ್ವಾಯತೆ ಉಂಟಾಗಿದೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಬೆಂಗಳೂರು ಸೇರಿದಂತೆ ಮೈಸೂರು, ಹುಬ್ಬಳ್ಳಿ ಮತ್ತು ಕಲಬುರಗಿ ವಿಭಾಗಗಳ ಆರ್‌ಟಿಓ ಕಚೇರಿಗಳಲ್ಲೂ ಇದೇ ಸಮಸ್ಯೆ ಸೃಷ್ಠಿಯಾಗಿದ್ದು, ಹೊಸದಾಗಿ ಡಿಎಲ್ ಪಡೆಯುವರರ ಕಥೆ ಹೇಳತಿರದು.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಬೆಂಗಳೂರು ನಗರ ಪ್ರದೇಶ ಒಂದರಲ್ಲೇ ಪ್ರತಿ ದಿನ ಸಾವಿರದಿಂದ ಒಂದೂವರೆ ಸಾವಿರ ಜನ ಡಿಎಲ್‌ಗಾಗಿ ಅರ್ಜಿ ಸಲ್ಲಿಸುತ್ತಾರೆ. ಇದೀಗ ಸ್ಮಾರ್ಟ್ ಕಾರ್ಡ್ ಇಲ್ಲವಾದ್ದರಿಂದ ದಿನಂಪ್ರತಿ ಸಾವಿರಾರು ಜನ ಡಿಲ್‌ಎಲ್‌ಗಾಗಿ ಅಲೆದಾಡುವಂತಾಗಿದೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಇದಷ್ಟೇ ಅಲ್ಲದೇ ಡಿಎಲ್ ಪಡೆಯಲು ಈಗಾಗಲೇ ಹಲವರು ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿದ್ದರು ಲೈನೆಸ್ಸ್ ಪಡೆಯಲು ಇನ್ನು ಕೆಲ ತಿಂಗಳು ಕಾಯಲೇಬೇಕಿದೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಸದ್ಯಕ್ಕಿಲ್ಲ ಪರಿಹಾರ

ಹೌದು...ಆರ್‌ಟಿಓ ಅಧಿಕಾರಿಗಳು ಮತ್ತು ಸ್ಮಾರ್ಟ್ ಕಾರ್ಡ್ ಪೂರೈಕೆ ಮಾಡುವ ಗುತ್ತಿಗೆದಾರರ ನಡುವಿನ ಆಂತರಿತ ಕಲಹ ಇನ್ನು ಮುಗಿದಿಲ್ಲ. ಹೀಗಾಗಿ ಹೊಸ ಕಾರ್ಡ್ ಪೂರೈಕೆಯಾಗುವ ತನಕ ಈ ಸಮಸ್ಯೆ ತಪ್ಪಿದಲ್ಲ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಇನ್ನು ಸ್ಮಾರ್ಟ್ ಕಾರ್ಡ್ ಸಮಸ್ಯೆ ಕುರಿತಂತೆ ಹಿರಿಯ ಆರ್‌ಟಿಓ ಅಧಿಕಾರಿಗಳನ್ನು ಕೇಳಿದ್ರೆ ಹೇಳೋದೆ ಬೇರೆ, ನಾವು ಈಗಾಗಲೇ ಸಮಸ್ಯೆ ಕುರಿತ ಚರ್ಚೆ ಮಾಡಿದ್ದು, ಇನ್ನು ಕೆಲ ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಲಿದೆ ಎಂದಿದ್ದಾರೆ. ಆದ್ರೆ ಅದು ಯಾವಾಗ ಆಗುತ್ತೋ ದೇವರೇ ಬಲ್ಲ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಆರ್‌ಟಿಓ ಕಚೇರಿಗಳ ಮುಂದೆ ತಪ್ಪದ ಕ್ಯೂ

ಇನ್ನು ಆರ್‌ಟಿಓ ಕಚೇರಿಗಳಲ್ಲಿನ ಆಂಕರಿತ ಸಮಸ್ಯೆ ಜನಸಾಮನ್ಯರಿಗೆ ಗೊತ್ತಾಗುತ್ತಿಲ್ಲಾ. ಈ ನಡುವೆ ಆರ್‌ಟಿಓ ಕಚೇರಿಗಳ ಮುಂದೆ ಡಿಎಲ್‌ಗಾಗಿ ಅರ್ಜಿ ಹಿಡಿದು ನಿಂತಿರುವ ಸಾವಿರಾರು ವಾಹನ ಸವಾರರು, ಮಧ್ಯವರ್ತಿಗಳ ಹಾವಳಿಗೆ ಬೇಸತ್ತು ಹೊಗಿದ್ದಾರೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಈಗಲಾದ್ರೂ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಿರುವ ಹಿರಿಯ ಅಧಿಕಾರಿಗಳು ಆದಷ್ಟೂ ಬೇಗ ಸಮಸ್ಯೆ ಬಗೆಹರಿಸಿ ಡಿಎಲ್ ಸ್ಮಾರ್ಟ್ ಕಾರ್ಡ್‌ಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕಿದೆ. ಜೊತೆಗೆ ಡಿಎಲ್ ಪ್ರಕ್ರಿಯೆಯನ್ನು ಸರಳಗೊಳಿಸಬೇಕಿದೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಇನ್ನು ಡ್ರೈವಿಂಗ್ ಇಲ್ಲದೇ ವಾಹನ ಸವಾರಿ ಮಾಡುವಂತಿಲ್ಲ. ಒಂದು ವೇಳೆ ಡಿಎಲ್ ಇಲ್ಲದೇ ರಸ್ತೆಗಿಳಿದ್ರೆ ನಿಮ್ಮ ಜೇಬಿಗೆ ಕತ್ತರಿ ಬಿಳೋದು ಗ್ಯಾರಂಟಿ. ಹೀಗಿರುವಾಗ ಡಿಎಲ್ ಇಲ್ಲದ ವಾಹನ ಸವಾರರ ಪರಿಸ್ಥಿತಿ ಉಹಿಸಿಕೊಳ್ಳಲು ಸಾಧ್ಯವೇ ನೀವೇ ಹೇಳಿ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಲಂಚ ಕೋಡಬೇಡಿ

ವಾಹನಗಳ ನೋಂದಣಿ ಸಂದರ್ಭದಲ್ಲಿ ಸಾರಿಗೆ ಇಲಾಖೆಯಲ್ಲಿ ನಡೆಯುವ ವ್ಯಾಪಕ ಭ್ರಷ್ಟಾಚಾರವನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಹೀಗಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಇನ್ನು ಸುಲಭದ ಕೆಲಸ ಎಂದರೇ ತಪ್ಪಾಗಲಾರದು.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ವಾಹನ ನೋಂದಣಿ ಹೇಗೆ?

ಕೇಂದ್ರ ಸರ್ಕಾರ ವಾಹನ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದ್ದು, ಇದಕ್ಕಾಗಿ "ವಾಹನ್ 4.0" ಎಂಬ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಮೂಲಕ ನೀವು ಅರ್ಜಿ ಸಲ್ಲಿಸಬಹುದಾಗಿದೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಏನಿದು "ವಾಹನ್ 4.0"..?

ಇದೊಂದು ಮೊಬೈಲ್ ಅಪ್ಲಿಕೇಷನ್ ಆಗಿದ್ದು, ನೀವು ಈ ಮೂಲಕವೇ ವಾಹನ ನೋಂದಣಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬಿಳಲಿದ್ದು, ಅಧಿಕಾರಿಗಳ ಭ್ರಷ್ಟಾಚಾರಕ್ಕೂ ಕಡಿವಾಣ ಬಿಳಲಿದೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಲೈಸೆನ್ಸ್ ಪಡಿಯೋಕೆ "ಸಾರಥಿ 4.0"

ಹೊಸದಾಗಿ ಅಭಿವೃದ್ಧಿಗೊಳ್ಳುತ್ತಿರುವ "ಸಾರಥಿ 4.0" ಆ್ಯಪ್ ಮೂಲಕ ನೀವು ಲೈಸೆನ್ಸ್ ಪಡೆಯಬಹುದಾಗಿದೆ. ಇದರಿಂದಗಾಗಿ ಅನಾವಶ್ಯಕವಾಗಿ ತಿರುಗುವುದು ತಪ್ಪುವುದಲ್ಲದೇ ಮಧ್ಯವರ್ತಿಗಳು ಕೇಳಿದಷ್ಟು ಹಣ ಕೊಡುವುದು ತಪ್ಪಲಿದೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಕರ್ನಾಟಕದಲ್ಲಿ ಈಗಾಗಲೇ ಹಲವು ಕಡೆ ಸಾರಥಿ 4.0 ಆ್ಯಪ್‌ನ್ನು ಆರ್‌ಟಿಓ ಕಚೇರಿಗಳಲ್ಲೇ ಜಾರಿಗೆ ತಂದಿದ್ದು, ಖುದ್ದು ನೀವೇ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಅರ್ಜಿ ಸಲ್ಲಿಸುವ ವೇಳೆ ಯಾವುದೇ ಸಮಸ್ಯೆ ಇರುವುದಿಲ್ಲ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಅನೇಕ ಜನ ವಾಹನಗಳನ್ನು ಅದೇಗೋ ಖರೀದಿ ಮಾಡ್ತಾರೆ. ಆದ್ರೆ ವಾಹನ ನೋಂದಣಿ ಮತ್ತು ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅವರು ಪಡೋ ಕಷ್ಟ ಅಷ್ಟಿಲ್ಲ. ಹೀಗಾಗಿ ಸಾರಾಥಿ 4.0 ಮತ್ತು ವಾಹನ್ 4.0 ಆ್ಯಪ್ ಸಹಾಯವಾಗಲಿವೆ.

ಡ್ರೈವಿಂಗ್ ಲೈಸೆನ್ಸ್‌‌ಗಾಗಿ ಅರ್ಜಿ ಹಾಕಿದ್ದೀರಾ? ಹಾಗಿದ್ರೆ ಸದ್ಯಕ್ಕೆ ಸಿಗೋದಿಲ್ಲ ಬಿಡಿ..!!

ಆದ್ರೆ ಡಿಎಲ್ ಪಡೆಯಲು ಇಷ್ಟೇಲ್ಲಾ ಅನುಕೂಲತೆಗಳಿದ್ದರೂ ಕರ್ನಾಟಕ ಆರ್‌ಟಿಓ ಅಧಿಕಾರಿಗಳು ಮತ್ತು ಸ್ಮಾರ್ಟ್ ಕಾರ್ಡ್ ಗುತ್ತಿಗೆದಾರರ ನಡುವಿನ ಸಂಘರ್ಷ ಹೊಸ ಸಮಸ್ಯೆಗೆ ನಾಂದಿಯಾಗಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಡಿಎಲ್ ವಿತರಣೆಗೆ ಹೊಸ ಮಾರ್ಗ ಕಂಡುಕೊಳ್ಳಬೇಕಿದೆ.

English summary
The Transport Department of Karnataka is facing a shortage of smart cards due to an internal dispute with the service provider.
Please Wait while comments are loading...

Latest Photos