ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಮಾರುತಿ ಎರ್ಟಿಗಾ ಕಾರು..

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ಎರ್ಟಿಗಾ ಎಮ್‍‍ಪಿವಿ ಕಾರನ್ನು ಭಾರತೀತ ಮಾರುಕಟ್ಟೆಗೆ ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಪರಿಚಯಿಸುವ ಯೋಜನೆಯಲ್ಲಿದೆ.

By Rahul Ts

ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ಎರ್ಟಿಗಾ ಎಮ್‍‍ಪಿವಿ ಕಾರನ್ನು ಭಾರತೀತ ಮಾರುಕಟ್ಟೆಗೆ ಇದೇ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಪರಿಚಯಿಸುವ ಯೋಜನೆಯಲ್ಲಿದ್ದು, ಬಿಡುಗಡೆಗು ಮುನ್ನವೆ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ಹೀಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ಎರ್ಟಿಗಾ ಕಾರು ಹೊಸ ಪ್ಲಾಟ್‍‍ಫಾರ್ಮ್ ಮತ್ತು ಹೊಸ ಎಂಜಿನ್ ಅನ್ನು ಪಡೆದಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಮಾರುತಿ ಎರ್ಟಿಗಾ ಕಾರು..

ಈಗಾಗಲೆ ಇಂಡೋನೇಶಿಯಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಮಾರುತಿ ಎರ್ಟಿಗಾ ಎಮ್‍‍‍ಪಿವಿ ಕಾರು, 4,395ಎಮ್ಎಮ್ ಉದ್ದ, 1,735ಎಮ್ಎಮ್ ಅಗಲ ಮತ್ತು 1,690ಎಮ್ಎಮ್ ಎತ್ತರವನ್ನು ಪಡೆದುಕೊಂಡಿದೆ. ಇದಲ್ಲದೆ 180ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಮತ್ತು 153 ಲೀಟರ್‍‍ನ ಲಗೇಜ್ ಸ್ಪೇಸ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಮಾರುತಿ ಎರ್ಟಿಗಾ ಕಾರು..

ಇನ್ನು ಕಾರಿನ ಹೊರಭಾಗದಲ್ಲಿ ನವೀಕರಣವನ್ನು ಪಡೆದುಕೊಂಡಿದ್ದು, ಹೊಸ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್, ಹಿಂಭಾಗದಲ್ಲಿ ಎಲ್ಇಡಿ ಲ್ಯಾಂಪ್ಸ್, ಡ್ಯುಯಲ್ ಟೋನ್ ಬಣ್ಣದಿಂದ ಸಜ್ಜುಗೊಳಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಮಾರುತಿ ಎರ್ಟಿಗಾ ಕಾರು..

ಪ್ರಿಮಿಯಂ ವಿನ್ಯಾಸಗಳೇ ಎರ್ಟಿಗಾ ಫೇಸ್‌ಲಿಫ್ಟ್ ಕಾರಿನ ಪ್ರಮುಖ ಆಕರ್ಷಣೆಯಾಗಿದ್ದು, ವಿಸ್ತರಿತ ಕ್ಯಾಬಿನ್ ಸಹ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣಿಸಬಹುದಾದ ವ್ಯವಸ್ಥೆಯನ್ನು ಹೊಂದಿದೆ ಎನ್ನಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಮಾರುತಿ ಎರ್ಟಿಗಾ ಕಾರು..

ಜೊತೆಗೆ ಪ್ರಿಮಿಯಂ ಗುಣಲಕ್ಷಣಗಳಾದ ಸ್ಪ್ಲಿಟ್ ಎಲ್ ಶೇಪ್ ಟೈಲ್ ಲೈಟ್ ಕ್ಲಸ್ಟರ್, ಎಲ್ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್, ರೀ ಡಿಸೈನ್ ಟೈಲ್‌ಗೇಟ್ ಮತ್ತು ಬಂಪರ್ ಹೊಂದಿರಲಿವೆ. ಅದೇ ರೀತಿಯಾಗಿ ಕಾರಿನ ಒಳಭಾಗದಲ್ಲಿ ಫ್ಲಕ್ಸ್ ವುಡ್‌ನೊಂದಿಗೆ 6.8-ಇಂಚಿನ ಟಚ್ ಸ್ಟ್ರೀನ್ ಇನ್ಪೋಟೈನ್‌ಮೆಂಟ್, ಲೆದರ್ ವ್ಯಾರ್ಪ್ ಇರುವ ಸ್ಟೀರಿಂಗ್ ಮತ್ತು ನ್ಯೂ ಇನ್ಟ್ರುಮೆಂಟಲ್ ಕ್ಲಸ್ಟರ್ ಪಡೆದಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಮಾರುತಿ ಎರ್ಟಿಗಾ ಕಾರು..

ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಎರ್ಟಿಗಾದಲ್ಲಿ ಸುರಕ್ಷಾ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಎಬಿಎಸ್, ಇಬಿಡಿ, ISOFIX ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಮಾರುತಿ ಎರ್ಟಿಗಾ ಕಾರು..

ಬಿಡುಗಡೆಗೊಳ್ಳಲಿರುವ ಹೊಸ ಮಾರುತಿ ಎರ್ಟಿಗಾ ಎಮ್‍‍ಪಿವಿ ಕಾರು 1.5 ಲೀಟರ್ ಕೆ15ಬಿ ಪೆಟ್ರೋಲ್ ಎಂಜಿನ್ ಸಹಾಯದಿಂದ 105ಬಿಹೆಚ್‍‍ಪಿ ಮತ್ತು 198ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹೊಸ ಮಾರುತಿ ಎರ್ಟಿಗಾ ಕಾರು..

ಮಾಹಿತಿಗಳ ಪ್ರಕಾರ ಪ್ರಸ್ಥುತ ತಲೆಮಾರಿನ ಎರ್ಟಿಗಾ ಕಾರುಗಳು ನಿಲ್ಲಿಸಲಾಗುವುದಿಲ್ಲ ಬದಲಾಗಿ ಪ್ರಸ್ಥುತ ತಲೆಮಾರಿನ ಎರ್ಟಿಗಾ ಕಾರನ್ನು ಎರ್ಟಿಗಾ ಟೂರ್ ಎಂಬ ಹೆಸರಿನಲ್ಲಿ ವಿಶೇಷವಾಗಿ ಟ್ಯಾಕ್ಸಿ ಚಾಲಕರಿಗಾಗಿ ಮಾರಾಟ ಮಾಡಲಾಗುತ್ತದೆ ಮತ್ತು ಹೊಸ ತಲೆಮಾರಿನ ಎರ್ಟಿಗಾ ಕಾರನ್ನು ಪ್ರೀಮಿಯಮ್ ನೆಕ್ಸಾ ಡೀಲರ್‍‍ಗಳಲ್ಲಿ ಖರೀದಿಸಬಹುದು.

Most Read Articles

Kannada
English summary
2018 Maruti Ertiga spied ahead of Diwali launch.
Story first published: Monday, July 23, 2018, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X