ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್, ತಾವು ಮುಂದಿನ ವರ್ಷ ಬಿಡುಗಡೆಗೊಳಿಸಲಿರುವ ಹೊಸ ವ್ಯಾಗನಾರ್ ಕಾರನ್ನು ಪರೀಕ್ಷಿಸುತ್ತಿರುವ ಕಾರ್ಯದಲ್ಲಿದ್ದು, ಈ ಕಾರು ಹ್ಯುಂಡೈ ಸಂಸ್ಥೆಯು ಅಕ್ಟೋಬರ್ 23ರಂದು ಬಿಡುಗಡೆಗೊಳಿಸಿದ ಹೊಸ ತಲೆಮಾರಿನ ಸ್ಯಾಂಟ್ರೊ ಕಾರುಗಳಿಗೆ ಪೈಪೋಟಿ ನೀಡಲಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ಬಿಡುಗಡೆಗೂ ಮುನ್ನವೆ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ ವ್ಯಾಗನಾರ್ ಕಾರು, ಇದೇ ಮೊದಲ ಬಾರಿಗೆ ಯಾವುದೇ ಮುಸುಕಿಲ್ಲದೆ ಸಂಪೂರ್ಣವಾಗಿ ಬಹಿರಂಗಗೊಂಡಿದೆ. ಈ ನಿಟ್ಟಿನಲ್ಲಿ ಹಿಂದಿನ ತಲೆಮಾರಿನ ವ್ಯಾಗನಾರ್ ಕಾರಿಗಿಂತಲು ಹೊಸ ತಲೆಮಾರಿನ ವ್ಯಾಗನಾರ್ ಕಾರು ಹೇಗಿರಲಿದೆ ಮತ್ತು ಏನೆಲ್ಲಾ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ ಎಂದು ತಿಳಿಯಲು ಮುಂದಕ್ಕೆ ಓದಿರಿ..

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ಇದೀಗ ಫೈನಾನ್ಶಿಯಲ್ ಎಕ್ಸ್ಪ್ರೆಸ್ ವರದಿ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಹೊಸ ತಲೆಮಾರಿನ ವ್ಯಾಗನಾರ್ ಕಾರನ್ನು ಜನವರಿ 23, 2019ರಂದು ಬಿಡುಗಡೆಗೊಳಿಸಲಿದೆ ಎನ್ನಲಾಗಿದ್ದು, ಈಗಾಗಲೆ ಈ ಕಾರು ಹಲವಾರು ಬಾರಿ ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ನಡೆಸುವ ವೇಳೆ ಕಾಣಿಸಿಕೊಂಡಿದೆ. ಹ್ಯಾಚ್‍ಬ್ಯಾಕ್ ಕಾರು ಪ್ರಿಯರಲ್ಲಿ ಮತ್ತೆ ಜನಪ್ರಿಯತೆಯನ್ನು ಪಡೆಯಲಿರುವ ಈ ವ್ಯಾಗನಾರ್ ಕಾರು ಈ ಬಾರಿ ಹೆಚ್ಚಿನ ಗಾತ್ರವನ್ನು ಸಹ ಪಡೆದುಕೊಂಡಿರಲಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ಹೊಸದಾಗಿ ಬಿಡುಗಡೆಗೊಳ್ಳಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಪ್ರಸ್ಥುತ ತಲೆಮಾರಿನ ಸ್ಥಾನವನ್ನು ಭರ್ತಿ ಮಾಡಲಿದೆ. ಈ ಆರು ಇನ್ನಿತರೆ ದೇಶಗಳಲ್ಲಿ ಈಗಾಗಲೆ ಮಾರಾಟಗೊಳ್ಳುತ್ತಿರುವ ಮಾದರಿಯನ್ನು ಆಧರಿಸಲಿದ್ದು, ಸುಜುಕಿ ಸಂಸ್ಥೆಯ ಹಾರ್ಟ್‍‍ಟೆಕ್ಟ್ ಪ್ಲಾಟ್‍‍ಫಾರ್ಮ್ ಅನ್ನು ಬಳಸಲಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟಾಲ್-ಬಾಯ್ ವಿನ್ಯಾವನ್ನು ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ವ್ಯಾಗನಾರ್ ಕಾರು ಕೂಡಾ ಪಡೆದುಕೊಳ್ಳಾಲಿದೆ. ಈ ಕಾರಿನಲ್ಲಿ ಹೊಸ ಹೆಡ್‍ಲ್ಯಾಂಪ್ ಕ್ಲಸ್ಟರ್, ಏರ್ ಇಂಟೇಕ್ಸ್ ನೊಂದಿಗೆ ಮರುವಿನ್ಯಾಸ ಮಾಡಲಾದ ಬಂಪರ್, ಫಾಗ್ ಲ್ಯಾಂಪ್, ದಪ್ಪನೆಯ ಹಾರಿಜಾಂಟಲ್ ಕ್ರೋಮ್ ಮತ್ತು ಮಧ್ಯಭಾಗದಲ್ಲಿ ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ಇದು ಕಾರಿನ ಹೊರ ವಿನ್ಯಾಸವಾದರೆ ಒಳವಿನ್ಯಾಸದಲ್ಲಿ ಪ್ರಸ್ಥುತ ತಲೆಮಾರಿನ ಕಾರಿಗಿಂತಾ ವಿಭಿನ್ನವಾದ ಅಪ್ಡೇಟ್‍ ಅನ್ನು ಪಡೆದುಕೊಳ್ಳಲಿದೆ. ಕಾರಿನ ಒಳಭಾಗದ ಬಹುತೇಕ ಭಾಗಗಳನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಪ್ರೀಮಿಯಮ್ ಅನುಭವವನ್ನು ನೀಡಲು ಡ್ಯಾಶ್‍‍ಬೋರ್ಡ್‍‍ನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸಲಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ಅಷ್ಟೆ ಅಲ್ಲದೆ ಕೀಲೆಸ್ ಎಂಟ್ರಿ, ಟಿಲ್ಟ್ ಟೆಲಿಸ್ಕೋಪಿಕ್ ಅಡ್ಜಸ್ಟಬಲ್ ಸ್ಟೀರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕಂಟ್ರೋಲ್ ಮತ್ತು ಕ್ಯಾಮೆರಾದೊಂದಿಗೆ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಪಡೆದುಕೊಳ್ಳಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‍‍ಗಳನ್ನು ನೀಡಲಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ಎಂಜಿನ್ ಸಾಮರ್ಥ್ಯ

ಬಿಡಗಡೆಗೊಳ್ಳಲಿರುವ ಹೊಸ ಮಾರುತಿ ಸುಜುಕಿ ವ್ಯಾಗನಾರ್ ಕಾರುಗಳು ಪ್ರಸ್ತುತ ತಲೆಮಾರಿನ ಕಾರಿನಲ್ಲಿ ಬಳಸಲಾದ ಎಂಜಿನ್ ಆನ್ನೆ ಅಳಾವಡಿಸಲಾಗಿದ್ದು, 1.0 ಕೆ ಸಿರೀಸ್ ಎಂಜಿನ್ ಸಹಾಯದಿಂದ 67ಬಿಹೆಚ್‍‍ಪಿ ಮತ್ತು 91ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಪ್ರತೀ ಲೀಟರ್‍‍ಗೆ ನಗರ ಪ್ರದೇಶದಲ್ಲಿ 16 ಮತ್ತು ಹೆದ್ದಾರಿಗಳಲ್ಲಿ 22 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಮಾರುತಿ ಸುಜುಕಿ ವ್ಯಾಗನಾರ್ ಕಾರು ಇದೇ...

ಪ್ರಸ್ಥುತ ತಲೆಮಾರಿನ ವ್ಯಾಗನಾರ್ ಕಾರು ರೂ. 4.3 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದ್ದು, ಬಿಡುಗಡೆಗೊಳ್ಳಲಿರುವ ಹೊಸ ಕಾರು ಇನ್ನು ಕೊಂಚ ಅಧಿಕ ಬೆಲೆಯನ್ನು ಪಡೆಯಲಿದೆ ಎನ್ನಲಾಗಿದೆ. ಇನ್ನು ಈ ಕಾರು ಒಮ್ಮೆ ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಟಾಟಾ ಟಿಯಾಗೊ, ರೆನಾಲ್ಟ್ ಕ್ವಿಡ್ ಮತ್ತು ಹೊಸ ಹುಂಡೈ ಸ್ಯಾಂಟ್ರೊ ಕಾರುಗಳಿಗೆ ಪೈಪೋಟಿ ನೀಡಲಿದೆ.

Source: Gaadiwaadi

Most Read Articles

Kannada
English summary
2019 Maruti Wagon R Spied Undisguised Revealing Exterior. Read In Kannada
Story first published: Saturday, December 29, 2018, 10:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X