ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ದೇಶಿಯ ಮಾರುಕಟ್ಟೆಯಲ್ಲಿ ಎಸ್‍‍ಯುವಿ ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ವಾಹನ ತಯಾರಕ ಸಂಸ್ಥೆಗಳು ಗ್ರಾಹಕರಿಗೆ ಅನುಗುಣವಾಗಿ, ಅವರ ಅಭಿರುಚಿಗೆ ತಕ್ಕ ಹಾಗೆ ಎಸ್‍‍ಯುವಿ ಹಾಗು ಕಾಂಪ್ಯಾಕ್ಟ್ ಎಸ್‍‍ಯುವಿ ಕಾರುಗಳನ್ನು ಬಿಡುಗಡೆ

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ಎಸ್‍‍ಯುವಿ ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ವಾಹನ ತಯಾರಕ ಸಂಸ್ಥೆಗಳು ಗ್ರಾಹಕರಿಗೆ ಅನುಗುಣವಾಗಿ ಅವರ ಅಭಿರುಚಿಗೆ ತಕ್ಕ ಹಾಗೆ ವಿವಿಧ ಮಾದರಿ ಎಸ್‍‍ಯುವಿ ಹಾಗು ಕಾಂಪ್ಯಾಕ್ಟ್ ಎಸ್‍‍ಯುವಿ ಕಾರುಗಳನ್ನು ಬಿಡುಗಡೆ ಮಾಡುತ್ತಿರುವುದರಿಂದ ಗ್ರಾಹಕರನ್ನು ಯಾವ ಕಾರು ಖರೀದಿ ಮಾಡಿದ್ರೆ ಉತ್ತಮ ಎಂಬ ಗೊಂದಲಕ್ಕೆ ಬೀಳುತ್ತಿದ್ದಾರೆ. ಹೀಗಾಗಿ ಯಾವ ಖರೀದಿ ಮಾಡಿದ್ರೆ ಉತ್ತಮ ಎನ್ನುವ ಕುರಿತು ಇಲ್ಲಿ ನೋಡಿ ಸಂಪೂರ್ಣ ಮಾಹಿತಿ..

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಈಗಾಗಲೇ ಎಸ್‍‍ಯುವಿ ಕಾರುಗಳ ಸರಣಿಯಲ್ಲಿ ಮಿಂಚುತ್ತಿರುವ ಹ್ಯುಂಡೈ ಕ್ರೆಟಾ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡಲು ಶೀಘ್ರವೇ ವಾಹನ ತಯಾರಕ ಸಂಸ್ಥೆಗಳು ತಮ್ಮ ಎಸ್‍‍ಯುವಿ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿವೆ. ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಎಸ್‍‍ಯುವಿ ಕಾರುಗಳ ಬಗ್ಗೆ ಮಾಹಿತಿ ನಾವಿಂದು ನೀಡಲಿದ್ದೇವೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಹೋಂಡಾ ಹೆಚ್‍ಆರ್-ವಿ

ಜಪಾನ್ ಮೂಲದ ಹೋಂಡಾ ಕಾರ್ಸ್ ಸಂಸ್ಥೆಯು ಈ ಹಿಂದೆಯೇ 2017ರಲ್ಲಿ ತಮ್ಮ ಹೊಸ ಆರ್ ಕಾರುಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿಕೊಂಡಿದ್ದು, ಅದರಲ್ಲಿ ಹೆಚ್ಚ್‍ಆರ್-ವಿ ಕಾರು ಕೂಡಾ ಒಂದು. ಹೋಂಡಾ ಹೆಚ್‍ಆರ್-ವಿ ಕಾರು ಸಂಸ್ಥೆಯಲ್ಲಿಮ ಬಿಆರ್‍-ವಿ ಮತ್ತು ಸಿಆರ್-ವಿ ಕಾರಿನ ನಡುವಲ್ಲಿ ಸ್ಥಾನವನ್ನು ಪಡೆಯಲಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಹೋಂಡಾ ಜಾಝ್ ಕಾರಿನ ಫ್ಲಾಟ್‍‍ಫಾರ್ಮ್ ಅನ್ನು ಹೆಚ್‍ಆರ್‍-ವಿ ಕಾರಿನಲ್ಲಿಯು ಬಳಸಲಾಗಿದೆ. ವಿದೇಶಗಳಲ್ಲಿ ಈ ಕಾರು 1.8 ಲೀಟರ್ ಪೆಟ್ರೋಲ್ ಮಾದರಿಯಲ್ಲಿ ಮಾರಾಟಗೊಳ್ಳುತ್ತಿದ್ದು, ಭಾತರಕ್ಕೆ ಬರಲಿರುವ ಹೆಚ್‍ಆರ್-ವಿ ಕಾರುಗಳ್ಳಿ 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಸ್ಕೋಡಾ ಕರೋಕ್

ಐಷಾರಾಮಿ ವಾಹನ ತಯಾರಕ್ ಸಂಸ್ಥೆಯ ಸ್ಕೋಡಾ ತಮ್ಮ ಕರೋಕ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಲಿದ್ದು, ಈ ಕಾರು ಭಾರತದಲ್ಲಿ ನಿಶ್ಕ್ರಿಯಗೊಳಿಸಲಾದ ಸ್ಕೋಡಾ ಯೆಟಿ ಕಾರಿನ ಸ್ಥಾನವನ್ನು ಭರ್ತಿ ಮಾಡಲಿದೆ. ಈಗಾಗಲೆ ಭಾರತೀಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಈ ಕಾರು ಯೆಟಿ ಕಾರಿಗಿಂಗ ದೊಡ್ಡ ಆಕಾರವನ್ನು ಪಡೆದುಕೊಂಡಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಭಾರತಕ್ಕೆ ಬರಲಿರುವ ಸ್ಕೋಡಾ ಕರೋಕ್ ಎಸ್‍‍ಯುವಿ ಕಾರು 2.0 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದ್ದು, ಇದಲ್ಲದೇ 1.8 ಲೀಟರ್ ಟಿಎಸ್ಐ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಒದಗಿಸಲಾಗಿದೆ ಎನ್ನಲಾಗಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ನಿಸ್ಸಾನ್ ಕಿಕ್ಸ್

ನಿಸ್ಸಾನ್ ಕಿಕ್ಸ್ ಮೊದಲ ಬಾರಿಗೆ 2016ರಲ್ಲಿ ಬ್ರೆಜಿಲ್‍‍ನಲ್ಲಿ ಅನಾವರಣಗೊಂಡಿದ್ದು ಸಂಸ್ಥೆಯ ಬಿ-ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಕಿಕ್ಸ್ ಕಾರು ಸಂಸ್ಥೆಯಿಂದ ಲಭ್ಯವಾಗಲಿರುವ ಎರಡನೆಯ ಎಸ್‍‍ಯುವಿ ಕಾರು ಎಂದು ಹೇಳಬಹುದು. ಆಕರ್ಷಕ ವಿನ್ಯಾಸವನ್ನು ಪಡೆದ ಈ ಕಾರು ಹಲವಾರು ವೈಶಿಷ್ಟ್ಯತೆಗಳನ್ನು ಕೂಡಾ ಪಡೆದುಕೊಂಡಿರಲಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಭಾರತಕ್ಕೆ ಬರಲಿರುವ ನಿಸ್ಸಾನ್ ಕಿಕ್ಸ್ ಕಾರು ರೆನಾಲ್ಟ್ ಕ್ಯಾಪ್ಚುರ್ ಕಾರಿನಲ್ಲಿ ಬಳಸಿರುವ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದೆ. ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂಗಿದೆ ಜೋಡಿಸಲಾಗಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಟಾಟಾ ಹ್ಯಾರಿಯರ್

ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹಲವು ಬಗೆಯ ಗೇಮ್ ಚೇಂಜರ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದ್ದು, ಇದರಲ್ಲಿ ಹ್ಯಾರಿಯರ್ ಹೆಸರಿನ ವಿನೂತನ ಎಸ್‌ಯುವಿ ಮಾದರಿಯು ಕೂಡಾ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ. ಕಾರಿನ ಎಂಜಿನ್ ವೈಶಿಷ್ಟ್ಯತೆ, ಕಾರಿನ ವಿನ್ಯಾಸಗಳ ಆಧಾರದ ಮೇಲೆ ಟಾಟಾ ಹೊಸ ಕಾರಿಗೆ ಹ್ಯಾರಿಯರ್ ಎಂದು ನಾಮಕರಣ ಮಾಡಲಾಗಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಹ್ಯಾರಿಯರ್ ಎಸ್‌ಯುವಿ ಮಾದರಿಗಳ ಎಂಜಿನ್ ಬಗೆಗೆ ಟಾಟಾ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕೆಲವು ವರದಿಗಳ ಪ್ರಕಾರ 2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಲಿವೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಕಿಯಾ ಎಸ್‍‍ಪಿ ಎಸ್‍‍ಯುವಿ

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಇದಕ್ಕೂ ಮುನ್ನ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿರುವ ಮೊದಲ ಎಸ್‌ಯುವಿ ಕಾರು ಮಾದರಿಯನ್ನು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಅನಾವರಣಗೊಳಿಸಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಕಿಯಾ ಹೊಸ ಎಸ್‌ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಡೀಸೆಲ್ ಆವೃತ್ತಿಯು 1.6-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಹ್ಯುಂಡೈ ಟಕ್ಸನ್ ಫೇಸ್‍‍ಲಿಫ್ಟ್

ಹುಂಡೈ ಸಂಸ್ಥೆಯು ಹೊಸ ಟಕ್ಸನ್ ಎಸ್‍‍ಯುವಿ ಕಾರನ್ನು ತಯಾರು ಮಾಡುವ ಕಾರ್ಯದಲಿದ್ದು, ಮುಂಬರುವ ಮಾದರಿ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ಹೊಸ ಎಸ್‍‍ಯುವಿ ಕಾರು ಗುರುತರ ಬದಲಾವಣೆಗಳನ್ನು ಪಡೆಯಲಿದ್ದು, ಇದು ಹೊಸ ಗ್ರಿಲ್, ಹೆಡ್‍‍ಲ್ಯಾಂಪ್‍‍ಗಳು, ಟೈಲ್ ಲ್ಯಾಂಪ್ಸ್ ಮತ್ತು ಇತರ ದೇಹದ ಫಲಕಗಳೊಂದಿಗೆ ಕಾಣುವ ರೀತಿಯಲ್ಲಿ ಬದಲಾವಣೆಗಳನ್ನು ಪಡೆಯಲಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಈ ಕಾರಿನ ಎಂಜಿನ್ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲವಾದರೂ 2.0 ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 1.6 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಇಂಜಿನ್ ಅನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಹೊರಸೂಸುವಿಕೆಯ ಮಾನದಂಡಗಳೊಂದಿಗೆ ಇರಿಸಿಕೊಳ್ಳಲು ಡೀಸೆಲ್ ಎಂಜಿನ್ ಅನ್ನು ನವೀಕರಿಸಲಾಗುತ್ತದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಟೊಯೊಟಾ ಸಿ-ಹೆಚ್‍ಆರ್

ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಕಾರುಗಳು ಈಗಾಗಲೇ ಭಾರೀ ಬೇಡಿಕೆಯೊಂದಿಗೆ ಮುನ್ನಡೆ ಸಾಧಿಸುತ್ತಿದೆ. ಸದ್ಯದಲ್ಲೇ ಮತ್ತೆರಡು ವಿನೂತನ ಎಸ್‌ಯುವಿ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಟೊಯೊಟಾ ಶೀಘ್ರದಲ್ಲೆ ತಮ್ಮ ಸಿ-ಹೆಚ್‍ಆರ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಲಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಇದರಿಂದ ಹೊಸ ಸಿ-ಹೆಚ್‌ಆರ್ ಕಾರುಗಳು 1.5-ಲೀಟರ್ ಡೀಸೆಲ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ರೂ. 12 ರಿಂದ ರೂ. 15 ಲಕ್ಷದ ತನಕ ಬೆಲೆ ನಿಗದಿಗೊಳಿಸಿ ಮಾರುಕಟ್ಟೆಗೆ ಕಾಲಿಡಲಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಎಮ್‍‍‍ಜಿ ಝೆಡ್‍ಎಸ್

ಚೀನಾ ಮೂಲದ ಸೈಕ್ ಸಂಸ್ಥೆಯ ಅಧೀನದಲ್ಲಿರುವ ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆಯು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಯ ಪ್ರವೇಶ ಪಡೆಯುತ್ತಿದ್ದು, ಮೊದಲ ಹಂತದಲ್ಲೇ ಜನಪ್ರಿಯ ಹ್ಯುಂಡೈ ಕ್ರೇಟಾ ಹಿಂದಿಕ್ಕಬಲ್ಲ ಝೆಡ್ಎಸ್ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.

ಶೀಘ್ರವೇ ಬಿಡುಗಡೆಗೊಳ್ಳಲಿರುವ ಹೊಸ ಎಸ್‍‍ಯುವಿ ಕಾರುಗಳಿವು..

ಸದ್ಯ ಯುಕೆನಲ್ಲಿ ಮಾರಾಟವಾಗುತ್ತಿರುವ ಝೆಡ್ಎಸ್ ಆವೃತ್ತಿಗಳು ಪೆಟ್ರೋಲ್ ಎಂಜಿನ್‌ನಲ್ಲೇ ಎರಡು ಆಯ್ಕೆಗಳನ್ನು ಹೊಂದಿದ್ದು, 1.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ನ್ಯಾಚುರಲ್ ಆಸ್ಪರೆಟೆಡ್ ಪೆಟ್ರೋಲ್ ಎಂಜಿನ್ ಅಳವಡಿಕೆ ಇದ್ದು, 1.0 -ಲೀಟರ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 1.5-ಲೀಟರ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿರಲಿವೆ.

Most Read Articles

Kannada
English summary
8 upcoming Jeep Compass & Hyundai Creta SUV rivals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X